ಮೈಸೂರು: ಯಕ್ಷ ಗಾನ, ಗರುಡ, ಏರೋಪ್ಲೇನ್, ಇಂಡಿಯಾ ಫ್ಲಾಗ್ ಹೀಗೆ ವಿವಿಧ ಆಕೃತಿಯ ಗಾಳಿಪಟ ಮತ್ತು ಎಲ್‍ಇಡಿ ಗಾಳಿಪಟಗಳು ಬಾನಿ ನಲ್ಲಿ ಹಾರಾಟ ನಡೆಸಿ ಬಣ್ಣ-ಬಣ್ಣದ ಚಿತ್ತಾರ ಬಿಡಿಸುವ ಮೂಲಕ 2018ರ ಗಾಳಿಪಟ ಉತ್ಸವಕ್ಕೆ ತೆರೆಬಿದ್ದಿತು. ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಜಿಲ್ಲಾಡ ಳಿತ, ಪ್ರವಾಸೋದ್ಯಮ ಇಲಾಖೆ ವತಿ ಯಿಂದ ನಡೆದ `ಗಾಳಿಪಟ’ ಉತ್ಸವದ ಕೊನೆಯ ದಿನವಾದ ಭಾನುವಾರ ಕಥಕ್ಕಳಿ, ಗರುಡ ಮತ್ತಿತರೆ ಎಲ್‍ಇಡಿ ಗಾಳಿಪಟ ಸೇರಿದಂತೆ ಬಗೆ ಬಗೆಯ ಗಾಳಿಪಟಗಳು ಆಗಸದಲ್ಲಿ ಹಾರಾಟ ನಡೆಸಿ ಪ್ರೇಕ್ಷಕರನ್ನು ತಮ್ಮತ್ತ ಸೆಳೆದವು….
ಬಾನಲ್ಲಿ ಚಿತ್ತಾರ ಮೂಡಿಸಿದ ಬಗೆ ಬಗೆಯ ಗಾಳಿಪಟ
September 30, 2018ಮೈಸೂರು: ಒಂದೆಡೆ ಬಾನಿಂದ ಸೂರ್ಯ ತೆರೆಮರೆಗೆ ಸರಿಯಲು ಅಣಿಯಾಗುತ್ತಿದ್ದಂತೆ ಆಗಸ ದಲ್ಲಿ ಅಸ್ಥಿಪಂಜರ, ಚಾರ್ಲಿಚಾಪ್ಲಿನ್, ಯಕ್ಷಗಾನ, ವೆಲ್ ಕಂ ಟು ಮೈಸೂರು ದಸರಾ, ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಚಿತ್ರಣ ಹೀಗೆ ವಿವಿಧ ಆಕೃತಿಯ ಗಾಳಿಪಟಗಳು ಹಾರಾಟ ನಡೆಸಿದರೆ, ಮತ್ತೊಂದೆಡೆ ಕಾರ್ಮೋಡ ಕವಿದಾಗ ವಿವಿಧ ಚಿತ್ತಾರದ ಎಲ್‍ಇಡಿ ಗಾಳಿಪಟಗಳು ಬಾನಿನಲ್ಲಿ ಹಾರಾಟ ನಡೆಸಿ ಬಣ್ಣ-ಬಣ್ಣದ ಚಿತ್ತಾರ ಬಿಡಿಸುವ ಮೂಲಕ ನೆರೆದ ಭಾರೀ ಪ್ರೇಕ್ಷಕರನ್ನು ಆಕರ್ಷಿಸಿದವು. ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿರುವ ವಿಶ್ವವಿಖ್ಯಾತ…
ದಸರಾ ಗಾಳಿಪಟ ಉತ್ಸವ
September 29, 2018ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಗಾಳಿಪಟ ಉತ್ಸವ ಶನಿವಾರ(ಸೆ.29) ಸಂಜೆ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಆರಂಭವಾಗಲಿದ್ದು, ಎರಡು ದಿನಗಳ ಕಾಲ ಈ ಉತ್ಸವ ಮನರಂಜಿಸಲಿದೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರ ವಾರ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಳೆ ಸಂಜೆ 4 ಗಂಟೆಗೆ ಗಾಳಿಪಟ ಉತ್ಸವವನ್ನು ಪ್ರವಾಸೊಧ್ಯಮ ಸಚಿವ ಸಾ.ರಾ.ಮಹೇಶ್ ಅವರ ಗೈರು ಹಾಜರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾ ಟಿಸಲಿದ್ದಾರೆ. ವೃತ್ತಿನಿರತ ಪಟುಗಳೇ ಈ ಉತ್ಸವ ದಲ್ಲಿ ಪಾಲ್ಗೊಂಡು ಗಾಳಿಪಟಗಳನ್ನು ಹಾರಿಸಲಿದ್ದಾರೆ….



