ಗಾಳಿಪಟ ಉತ್ಸವಕ್ಕೆ ವರ್ಣರಂಜಿತ ತೆರೆ
ಮೈಸೂರು

ಗಾಳಿಪಟ ಉತ್ಸವಕ್ಕೆ ವರ್ಣರಂಜಿತ ತೆರೆ

October 1, 2018

ಮೈಸೂರು:  ಯಕ್ಷ ಗಾನ, ಗರುಡ, ಏರೋಪ್ಲೇನ್, ಇಂಡಿಯಾ ಫ್ಲಾಗ್ ಹೀಗೆ ವಿವಿಧ ಆಕೃತಿಯ ಗಾಳಿಪಟ ಮತ್ತು ಎಲ್‍ಇಡಿ ಗಾಳಿಪಟಗಳು ಬಾನಿ ನಲ್ಲಿ ಹಾರಾಟ ನಡೆಸಿ ಬಣ್ಣ-ಬಣ್ಣದ ಚಿತ್ತಾರ ಬಿಡಿಸುವ ಮೂಲಕ 2018ರ ಗಾಳಿಪಟ ಉತ್ಸವಕ್ಕೆ ತೆರೆಬಿದ್ದಿತು.

ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಜಿಲ್ಲಾಡ ಳಿತ, ಪ್ರವಾಸೋದ್ಯಮ ಇಲಾಖೆ ವತಿ ಯಿಂದ ನಡೆದ `ಗಾಳಿಪಟ’ ಉತ್ಸವದ ಕೊನೆಯ ದಿನವಾದ ಭಾನುವಾರ ಕಥಕ್ಕಳಿ, ಗರುಡ ಮತ್ತಿತರೆ ಎಲ್‍ಇಡಿ ಗಾಳಿಪಟ ಸೇರಿದಂತೆ ಬಗೆ ಬಗೆಯ ಗಾಳಿಪಟಗಳು ಆಗಸದಲ್ಲಿ ಹಾರಾಟ ನಡೆಸಿ ಪ್ರೇಕ್ಷಕರನ್ನು ತಮ್ಮತ್ತ ಸೆಳೆದವು.

ಗಾಳಿಪಟ ಸ್ಪರ್ಧೆಯಲ್ಲಿ ಸೂರತ್, ರಾಜ್ ಕೋಟ್, ಮುಂಬೈ, ಹೈದರಾಬಾದ್, ಬೆಂಗಳೂರು, ಮಂಗಳೂರು ಸೇರಿದಂತೆ ಮತ್ತಿತರೆ ಕಡೆಗಳಿಂದ ಆಗಮಿಸಿದ್ದ ವೃತ್ತಿ ನಿರತ ಕೈಟ್ ಪ್ಲೈಯರ್ಸ್‍ಗಳು ಇಂದು ಬೆಳಿಗ್ಗೆ 10 ಗಂಟೆಯಿಂದಲೇ ಆಗಸದಲ್ಲಿ ಚಾರ್ಲಿಚಾಪ್ಲಿನ್, ಯಕ್ಷಗಾನ, ಮೀನು, ರಿಂಗ್, ಹದ್ದು, ಸ್ಪೈಡರ್‍ಮನ್, ಗರುಡ, ನಕ್ಷತ್ರ ಪಟಗಳು, ಏರೋಪ್ಲೇನ್, ಕಥಕ್ಕಳಿ, ಇಂಡಿಯಾ ಪ್ಲಾಗ್, ಹದ್ದು, ಬಾವಲಿ ಸೇರಿದಂತೆ ಹತ್ತಾರು ಬಗೆಯ ಗಾಳಿಪಟ ಗಳು ಹಾರಾಟ ನಡೆಸಿದವು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಗಾಳಿ ಬೀಸದೆ ಇದ್ದುದ ರಿಂದ ಗಾಳಿಪಟಗಳನ್ನು ಹಾರಾಟ ನಡೆಸಲು ಎಷ್ಟೇ ಪ್ರಯತ್ನಿಸಿದರೂ ಮೇಲಕ್ಕೆ ಹಾರಲಿಲ್ಲ. ಸಂಜೆ 7 ಗಂಟೆ ವೇಳೆಗೆ ವಿವಿಧ ಚಿತ್ತಾರದ ಎಲ್‍ಇಡಿ ಗಾಳಿಪಟಗಳು ಹಾರಾಟ ನಡೆಸಿ ಆಗಸದಲ್ಲಿ ಚಿತ್ತಾರ ಮೂಡಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದವು.

Translate »