ಮಡಿಕೇರಿ: ರಾಜ್ಯದಿಂದ ಲೋಕ ಸಭೆ ಮತ್ತು ರಾಜ್ಯಸಭೆಯನ್ನು ಪ್ರತಿನಿಧಿ ಸುವ ಒಟ್ಟು 39 ಸಂಸದರಿದ್ದು, ಇಂದಿನವ ರೆಗೂ ಕೇಂದ್ರ ಸರಕಾರದಿಂದ ನನ್ನಷ್ಟು ಅನುದಾನವನ್ನು ಯಾವ ಸಂಸದರೂ ತರಲಿಲ್ಲ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.
ನಗರದ ಬಾಲ ಭವನದಲ್ಲಿ ಬುಧವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರಕಾರ ಭೂ ಕುಸಿತ ಮತ್ತು ಪ್ರವಾಹ ಪರಿಸ್ಥಿತಿ ನಷ್ಟಕ್ಕೆಂದು 525 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರಕಾರದಿಂದ ಈ ಅನುದಾನವನ್ನು ಪಡೆದುಕೊಳ್ಳಲು ಪ್ರಬಲ ಹೋರಾಟ ನಡೆ ಯಲಿಲ್ಲ ಎಂದು ವಿಷಾದಿಸಿದರು.
ಸಂಸದನಾಗಿ ಆಯ್ಕೆಯಾದ ಬಳಿಕ ಕೊಡಗು ಜಿಲ್ಲೆಯ ಕಡೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡ ಪ್ರತಾಪ್ ಸಿಂಹ, ಹಾಗೆಂದು ಕೊಡಗು ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿಲ್ಲ. ಪ್ರಕೃತಿ ವಿಕೋಪ ಸಂಭವಿಸಿ ಸಂಕಷ್ಟಕ್ಕೆ ಸಿಲುಕಿದ್ದ 3 ಸಾವಿರ ಕುಟುಂಬಗಳಿಗೆ ಆರ್ಥಿಕ ನೆರ ವನ್ನು ಕೇಂದ್ರ ಸರಕಾರದ ಮೂಲಕ ಕೊಡಿ ಸಲಾಗಿದೆ ಎಂದು ಹೇಳಿದರು. ಮೈಸೂರು- ಕುಶಾಲನಗರ-ಮಡಿಕೇರಿ ಚತುಷ್ಪತ ಹೆದ್ದಾರಿ ಕಾಮಗಾರಿ ಆರಂಭಕ್ಕೂ ಕ್ರಮವಹಿಸಲಾ ಗಿದೆ ಎಂದು ತಿಳಿಸಿದ ಪ್ರತಾಪ್ ಸಿಂಹ, ಕೆಲವರು ಹೈಕೋರ್ಟ್‍ನಲ್ಲಿ ಈ ಕುರಿತು ದಾವೆ ಹೂಡಿದ್ದಾರೆ. ಮುಂದಿನ ದಿನಗ ಳಲ್ಲಿ ಈ ಸಮಸ್ಯೆ ಪರಿಹಾರವಾಗಲಿದೆ ಎಂದೂ ಅಭಯ ನೀಡಿದರು.
ಈ ಹಿಂದೆ ಪಂಚಾಯಿತಿಗಳಿಗೆ ಬಿಡು ಗಡೆ ಮಾಡಲಾಗುತ್ತಿದ್ದ ಅನುದಾನಗಳು ಜಿಪಂ ಮೂಲಕ ಹಂಚಿಕೆಯಾಗುತ್ತಿತ್ತು. ಆದರೆ ಈ ಬಗ್ಗೆ ಕೇಂದ್ರ ಸರಕಾರದೊಂ ದಿಗೆ ವ್ಯವಹರಿಸಿ, ನೇರವಾಗಿ ಗ್ರಾಪಂಗಳಿಗೆ ಅನುದಾನ ಬಿಡುಗಡೆಯಾಗುವಂತೆ ಮಾಡಲಾಗಿದೆ. ಇದರಿಂದಾಗಿ ಗ್ರಾಪಂ ಗಳಿಗೆ ವಿವಿಧ ಕಾಮಗಾರಿಗಳನ್ನು ನಿರ್ವ ಹಿಸಲು ಸಾಧ್ಯವಾಗುತ್ತಿದೆ ಎಂದರಲ್ಲದೆ, ಸಂಸದನ ಸೇವೆಯಲ್ಲಿ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಗುತ್ತಿಗೆದಾರರಿಗೆ ಫೋನ್ ಮಾಡಿದೇನೆಯೇ ಹೊರತು ಕಮಿಷನ್ ಗಾಗಿ ಎಂದಿಗೂ ಕರೆ ಮಾಡಲಿಲ್ಲ. ಆ ತೃಪ್ತಿ ನನಗಿದೆ ಎಂದ ಸಂಸದರು, ಕೆಲವು ಕೆಲಸ ದಲ್ಲಿ ಭಿನ್ನಾಭಿಪ್ರಾಯಗಳು ಬರುತ್ತವೆ. ಅವು ಗಳನ್ನು ಕಾರ್ಯಕರ್ತರು ಮನಸ್ಸಿನಲ್ಲಿಟ್ಟುಕೊಳ್ಳ ದಂತೆಯೂ ಸಿಂಹ ಮನವಿ ಮಾಡಿದರು.ದೇವಟ್ಟಿಪರಂಬು, ಟಿಪ್ಪು ಜಯಂತಿ ವಿಚಾ ರಗಳಲ್ಲಿ ಜಿಲ್ಲೆಯ ಪರ ನಿಂತಿದ್ದೇನೆ. ಕೊಡವ ಕೌಟಂಬಿಕ ಹಾಕಿ ಉತ್ಸವಕ್ಕೆ 20 ಲಕ್ಷ ರೂ. ಅನುದಾನವನ್ನೂ ನೀಡಿದ್ದೇನೆ ಎಂದು ಹೇಳಿದರು.
ಹಲವು ವರ್ಷದ ಬಳಿಕ ಕೇಂದ್ರದಲ್ಲಿ ದೇಶ ಪ್ರೇಮಿ ಸರಕಾರ ಅಧಿಕಾರಕ್ಕೆ ಬಂದಿದೆ. ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕೆಂದು ಪ್ರತಾಪ್ ಸಿಂಹ ಕಾರ್ಯಕರ್ತರಿಗೆ ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ರಾಜ್ಯ ಬಿಜೆಪಿ ಮುಖಂಡರು ನೀಡಿರುವ ಸೂಚನೆಯಂತೆ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾ ಗಿದೆ. ಹಲವು ಅಭಿಯಾನಗಳು ಪ್ರಗತಿಯ ಹಂತದಲ್ಲಿದ್ದು, ಬೂತ್ ಮಟ್ಟದಿಂದಲೇ ಚುನಾವಣೆಗೆ ಪಕ್ಷವನ್ನು ಪ್ರಬಲವಾಗಿ ಸಂಘ ಟಿಸಲಾಗುತ್ತಿದೆ. ಕಾರ್ಯಕರ್ತರು ವಿವಿಧ ಮೋರ್ಚಾಗಳ ಪದಾಧಿಕಾರಿಗಳು ತಮಗೆ ವಹಿಸಿದ ಕೆಲಸವನ್ನು ಸಮರ್ಥವಾಗಿ ಮಾಡ ಬೇಕೆಂದು ಭಾರತೀಶ್ ಸಲಹೆ ನೀಡಿದರು.
ಈ ಸಂದರ್ಭ ಶಾಸಕ ಅಪ್ಪಚ್ಚು ರಂಜನ್, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ರಾಜ್ಯ ಸಮಿತಿ ಕಾರ್ಯದರ್ಶಿ ಮನು ಮುತ್ತಪ್ಪ, ಪ್ರಮುಖರಾದ ರೀನಾ ಪ್ರಕಾಶ್, ಕಾಂತಿ ಸತೀಶ್, ತಳೂರು ಕಿಶೋರ್ ಕುಮಾರ್, ಅಭಿಮನ್ಯು ಕುಮಾರ್, ರವಿ ಕುಶಾಲಪ್ಪ, ವಿ.ಕೆ.ಲೋಕೇಶ್, ಬಾಲಚಂದ್ರ ಕಳಗಿ ಮತ್ತಿತರರಿದ್ದರು.ಮಡಿಕೇರಿ, ಮಾ.3- ರಾಜ್ಯದಿಂದ ಲೋಕ ಸಭೆ ಮತ್ತು ರಾಜ್ಯಸಭೆಯನ್ನು ಪ್ರತಿನಿಧಿ ಸುವ ಒಟ್ಟು 39 ಸಂಸದರಿದ್ದು, ಇಂದಿನವ ರೆಗೂ ಕೇಂದ್ರ ಸರಕಾರದಿಂದ ನನ್ನಷ್ಟು ಅನುದಾನವನ್ನು ಯಾವ ಸಂಸದರೂ ತರಲಿಲ್ಲ ಎಂದು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.
ನಗರದ ಬಾಲ ಭವನದಲ್ಲಿ ಬುಧವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆ ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರಕಾರ ಭೂ ಕುಸಿತ ಮತ್ತು ಪ್ರವಾಹ ಪರಿಸ್ಥಿತಿ ನಷ್ಟಕ್ಕೆಂದು 525 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರಕಾರದಿಂದ ಈ ಅನುದಾನವನ್ನು ಪಡೆದುಕೊಳ್ಳಲು ಪ್ರಬಲ ಹೋರಾಟ ನಡೆ ಯಲಿಲ್ಲ ಎಂದು ವಿಷಾದಿಸಿದರು.
ಸಂಸದನಾಗಿ ಆಯ್ಕೆಯಾದ ಬಳಿಕ ಕೊಡಗು ಜಿಲ್ಲೆಯ ಕಡೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡ ಪ್ರತಾಪ್ ಸಿಂಹ, ಹಾಗೆಂದು ಕೊಡಗು ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿಲ್ಲ. ಪ್ರಕೃತಿ ವಿಕೋಪ ಸಂಭವಿಸಿ ಸಂಕಷ್ಟಕ್ಕೆ ಸಿಲುಕಿದ್ದ 3 ಸಾವಿರ ಕುಟುಂಬಗಳಿಗೆ ಆರ್ಥಿಕ ನೆರ ವನ್ನು ಕೇಂದ್ರ ಸರಕಾರದ ಮೂಲಕ ಕೊಡಿ ಸಲಾಗಿದೆ ಎಂದು ಹೇಳಿದರು. ಮೈಸೂರು- ಕುಶಾಲನಗರ-ಮಡಿಕೇರಿ ಚತುಷ್ಪತ ಹೆದ್ದಾರಿ ಕಾಮಗಾರಿ ಆರಂಭಕ್ಕೂ ಕ್ರಮವಹಿಸಲಾ ಗಿದೆ ಎಂದು ತಿಳಿಸಿದ ಪ್ರತಾಪ್ ಸಿಂಹ, ಕೆಲವರು ಹೈಕೋರ್ಟ್‍ನಲ್ಲಿ ಈ ಕುರಿತು ದಾವೆ ಹೂಡಿದ್ದಾರೆ. ಮುಂದಿನ ದಿನಗ ಳಲ್ಲಿ ಈ ಸಮಸ್ಯೆ ಪರಿಹಾರವಾಗಲಿದೆ ಎಂದೂ ಅಭಯ ನೀಡಿದರು.
ಈ ಹಿಂದೆ ಪಂಚಾಯಿತಿಗಳಿಗೆ ಬಿಡು ಗಡೆ ಮಾಡಲಾಗುತ್ತಿದ್ದ ಅನುದಾನಗಳು ಜಿಪಂ ಮೂಲಕ ಹಂಚಿಕೆಯಾಗುತ್ತಿತ್ತು. ಆದರೆ ಈ ಬಗ್ಗೆ ಕೇಂದ್ರ ಸರಕಾರದೊಂ ದಿಗೆ ವ್ಯವಹರಿಸಿ, ನೇರವಾಗಿ ಗ್ರಾಪಂಗಳಿಗೆ ಅನುದಾನ ಬಿಡುಗಡೆಯಾಗುವಂತೆ ಮಾಡಲಾಗಿದೆ. ಇದರಿಂದಾಗಿ ಗ್ರಾಪಂ ಗಳಿಗೆ ವಿವಿಧ ಕಾಮಗಾರಿಗಳನ್ನು ನಿರ್ವ ಹಿಸಲು ಸಾಧ್ಯವಾಗುತ್ತಿದೆ ಎಂದರಲ್ಲದೆ, ಸಂಸದನ ಸೇವೆಯಲ್ಲಿ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಗುತ್ತಿಗೆದಾರರಿಗೆ ಫೋನ್ ಮಾಡಿದೇನೆಯೇ ಹೊರತು ಕಮಿಷನ್ ಗಾಗಿ ಎಂದಿಗೂ ಕರೆ ಮಾಡಲಿಲ್ಲ. ಆ ತೃಪ್ತಿ ನನಗಿದೆ ಎಂದ ಸಂಸದರು, ಕೆಲವು ಕೆಲಸ ದಲ್ಲಿ ಭಿನ್ನಾಭಿಪ್ರಾಯಗಳು ಬರುತ್ತವೆ. ಅವು ಗಳನ್ನು ಕಾರ್ಯಕರ್ತರು ಮನಸ್ಸಿನಲ್ಲಿಟ್ಟುಕೊಳ್ಳ ದಂತೆಯೂ ಸಿಂಹ ಮನವಿ ಮಾಡಿದರು.ದೇವಟ್ಟಿಪರಂಬು, ಟಿಪ್ಪು ಜಯಂತಿ ವಿಚಾ ರಗಳಲ್ಲಿ ಜಿಲ್ಲೆಯ ಪರ ನಿಂತಿದ್ದೇನೆ. ಕೊಡವ ಕೌಟಂಬಿಕ ಹಾಕಿ ಉತ್ಸವಕ್ಕೆ 20 ಲಕ್ಷ ರೂ. ಅನುದಾನವನ್ನೂ ನೀಡಿದ್ದೇನೆ ಎಂದು ಹೇಳಿದರು.
ಹಲವು ವರ್ಷದ ಬಳಿಕ ಕೇಂದ್ರದಲ್ಲಿ ದೇಶ ಪ್ರೇಮಿ ಸರಕಾರ ಅಧಿಕಾರಕ್ಕೆ ಬಂದಿದೆ. ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕೆಂದು ಪ್ರತಾಪ್ ಸಿಂಹ ಕಾರ್ಯಕರ್ತರಿಗೆ ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ರಾಜ್ಯ ಬಿಜೆಪಿ ಮುಖಂಡರು ನೀಡಿರುವ ಸೂಚನೆಯಂತೆ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾ ಗಿದೆ. ಹಲವು ಅಭಿಯಾನಗಳು ಪ್ರಗತಿಯ ಹಂತದಲ್ಲಿದ್ದು, ಬೂತ್ ಮಟ್ಟದಿಂದಲೇ ಚುನಾವಣೆಗೆ ಪಕ್ಷವನ್ನು ಪ್ರಬಲವಾಗಿ ಸಂಘ ಟಿಸಲಾಗುತ್ತಿದೆ. ಕಾರ್ಯಕರ್ತರು ವಿವಿಧ ಮೋರ್ಚಾಗಳ ಪದಾಧಿಕಾರಿಗಳು ತಮಗೆ ವಹಿಸಿದ ಕೆಲಸವನ್ನು ಸಮರ್ಥವಾಗಿ ಮಾಡ ಬೇಕೆಂದು ಭಾರತೀಶ್ ಸಲಹೆ ನೀಡಿದರು.
ಈ ಸಂದರ್ಭ ಶಾಸಕ ಅಪ್ಪಚ್ಚು ರಂಜನ್, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ರಾಜ್ಯ ಸಮಿತಿ ಕಾರ್ಯದರ್ಶಿ ಮನು ಮುತ್ತಪ್ಪ, ಪ್ರಮುಖರಾದ ರೀನಾ ಪ್ರಕಾಶ್, ಕಾಂತಿ ಸತೀಶ್, ತಳೂರು ಕಿಶೋರ್ ಕುಮಾರ್, ಅಭಿಮನ್ಯು ಕುಮಾರ್, ರವಿ ಕುಶಾಲಪ್ಪ, ವಿ.ಕೆ.ಲೋಕೇಶ್, ಬಾಲಚಂದ್ರ ಕಳಗಿ ಮತ್ತಿತರರಿದ್ದರು.