ಪ್ರಚಾರ ಆಂದೋಲನ ವಾಹನಕ್ಕೆ ಬೇಲೂರಿನಲ್ಲಿ ಚಾಲನೆ ಬೇಲೂರು: ಕೃಷಿ ಇಲಾಖೆಯ ವಿವಿಧ ಯೋಜನೆಗಳು ಮತ್ತು ತಂತ್ರಜ್ಞಾನದ ಫಲವನ್ನು ರೈತರ ಜಮೀನಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಮುತುವರ್ಜಿ ವಹಿಸಬೇಕು, ಕೃಷಿಕರಿಗೆ ಅಗತ್ಯ ಮಾಹಿತಿ ಒದಗಿಸಬೇಕು ಎಂದು ಬೇಲೂರು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹೇಳಿದರು. ಪಟ್ಟಣದ ನೆಹರು ನಗರದಲ್ಲಿನ ಕೃಷಿ ಇಲಾಖೆ ಕಚೇರಿ ಬಳಿ `ಕೃಷಿ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ’ ಪ್ರಚಾರ ಆಂದೋಲನ ವಾಹನಕ್ಕೆ ಭಾನುವಾರ ಚಾಲನೆ ನೀಡಿದ ಅವರು, ರೈತರು…
ಉದ್ಯಮ ಸಂಸ್ಥೆಗಳ ಪಟ್ಟಿ ಸಿದ್ಧಪಡಿಸಲು ಡಿಸಿ ಸೂಚನೆ
June 24, 2019ಹಾಸನ, ಜೂ.23- ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ, ಸಂಘ ಟಿತ ಮತ್ತು ಅಸಂಘಟಿತ ವಲಯದ, ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಪಟ್ಟಿಯನ್ನು ಶೀಘ್ರ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದ್ದಾರೆ. ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ 7ನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತ ನಾಡಿದ ಅವರು, ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನು ಷ್ಠಾನ ಸಚಿವಾಲಯದ ಮಾರ್ಗದರ್ಶನ ದಡಿ ಈ ಕಾರ್ಯ…
ಹೆಚ್‍ಡಿಕೆ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆಸೆಸ್ಕ್ ಹಾಸನ ವಲಯ ಕಚೇರಿ, ಮಾಪಕ ಪರೀಕ್ಷಾ ವಿಭಾಗ ಉದ್ಘಾಟಿಸಿದ ಸಚಿವ ಹೆಚ್.ಡಿ.ರೇವಣ್ಣ
June 20, 2019ಹಾಸನ, ಜೂ.19- ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ರೈತರ, ಜನಸಾಮಾನ್ಯರ ಶ್ರೇಯೋಭಿವೃದ್ಧಿ ಹಾಗೂ ರಾಜ್ಯದ ಸಮಗ್ರ ಪ್ರಗತಿಗೆ ಪೂರಕವಾಗಿ ಶ್ರಮಿಸುತ್ತಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು. ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ನೂತನ ಹಾಸನ ವಲಯ ಮತ್ತು ಮಾಪಕ ಪರೀಕ್ಷಾ ವಿಭಾಗವನ್ನು ಉದ್ಘಾಟಿಸಿದ ಅವರು, ನಿರಂತರ ವಿದ್ಯುತ್ ಪೂರೈಕೆ ಕೂಡ ಸರ್ಕಾರದ ಆದ್ಯತೆಗಳಲ್ಲೊಂದು ಎಂದರು. ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯ ಮಿತ…
ಅಮ್ಮನಿಂದ ಬೇರ್ಪಟ್ಟು ತಂತಿ ಬೇಲಿಗೆ ಸಿಲುಕಿದ್ದ 2 ಕರಡಿ ಮರಿಗಳ ರಕ್ಷಣೆ
June 20, 2019* ಅರಸೀಕೆರೆ ತಾಲೂಕಿನ ಜಾಜೂರು ಬಳಿ ಘಟನೆ * ತೋಟದಲ್ಲಿ ಹಂದಿ ಹಿಡಿಯಲು ಅಳವಡಿಸಿದ್ದ ಕುಣಿಕೆ ಅರಸೀಕೆರೆ, ಜೂ.19- ಅರಸೀಕೆರೆ ತಾಲೂಕಿನ ಜಾಜೂರು ವ್ಯಾಪ್ತಿಯ ತೋಟ ವೊಂದರ ತಂತಿ ಬೇಲಿಯಲ್ಲಿ ಅಳವಡಿಸಿದ್ದ ಹಿಂದೆ ಬೇಟೆ ಕುಣಿಕೆಗೆ ಸಿಲುಕಿದ 2 ಕರಡಿ ಮರಿಗಳು, ಕುಣಿಕೆಯಿಂದ ಬಿಡಿಸಿಕೊಳ್ಳಲಾಗದೇ ಇಡೀ ರಾತ್ರಿ ನರಳಾಡಿವೆ. ಬುಧವಾರ ಬೆಳಿಗ್ಗೆ ವಿಷಯ ತಿಳಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಎರಡೂ ಕರಡಿಗಳನ್ನು ರಕ್ಷಿಸಿ ಅರಣ್ಯಕ್ಕೆ ಸಾಗಿಸಿದ್ದಾರೆ. ಆಹಾರ ಅರಸುತ್ತಾ ಮಂಗಳವಾರ ರಾತ್ರಿ ಜಾಜೂರು ಕಡೆ ಬಂದ…
ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರಿ ಪಬ್ಲಿಕ್ ಶಾಲೆ: ಬಸವಾಪಟ್ಟಣದಲ್ಲಿ ಶಾಲೆ ಉದ್ಘಾಟಿಸಿದ ಶಾಸಕ ಎಟಿಆರ್
June 20, 2019* ಬಸವಾಪಟ್ಟಣ ಪಬ್ಲಿಕ್ ಶಾಲೆ ನಿರ್ವಹಣೆಗೆ 5 ಲಕ್ಷ ರೂ. * ದುರಸ್ತಿಗಾಗಿ 22 ಲಕ್ಷ ರೂ. ಬಸವಾಪಟ್ಟಣ: ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದಲೇ ರಾಜ್ಯ ಸರ್ಕಾರ 1 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದೆ. ಆ ಮೂಲಕ ಹಳ್ಳಿಗಾಡಿನ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಲು ಸಂಕಲ್ಪ ಮಾಡಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು. ಅರಕಲಗೂಡು ತಾಲೂ ಕಿನ ಬಸವಾಪಟ್ಟಣ ಗ್ರಾಮ ದಲ್ಲಿ ಎಲ್‍ಕೆಜಿ, 1ನೇ ತರಗತಿಯಿಂದ ದ್ವಿತೀಯ ಪಿಯುವರೆಗೂ ಒಂದೇ ನೆಲೆಯಲ್ಲಿ ಶಿಕ್ಷಣ ನೀಡುವ ಕರ್ನಾಟಕ…
ಜೆಸಿ ಪುರದಲ್ಲಿ ಡಿಸಿ, ಸಿಇಒ ಪ್ರಥಮ ಗ್ರಾಮ ವಾಸ್ತವ್ಯ
June 20, 2019ಶಾಸಕರೂ ಭಾಗಿ; ಜನಸಂಪರ್ಕ ಸಭೆಯಲ್ಲಿ ಸಾವಿರಾರು ಅಹವಾಲು ಹಾಸನ, ಜೂ.19- ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎನ್. ವಿಜಯಪ್ರಕಾಶ್ ಅವರು ಅರಸೀಕೆರೆ ತಾಲೂಕಿನ ಜೆ.ಸಿ.ಪುರದಲ್ಲಿ ಜನಸಂಪರ್ಕ ಸಭೆ ನಡೆಸಿ, ಅಧಿಕಾರಿಗಳ ಜತೆಗೂಡಿ ಗ್ರಾಮ ವಾಸ್ತವ್ಯ ನಡೆಸಿದರು. ಜಿಲ್ಲಾಡಳಿತ ಈ ನೂತನ ಪ್ರಯೋಗಕ್ಕೆ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಅವರೂ ಸಾಥ್ ನೀಡಿದ್ದು ಗಮನ ಸೆಳೆಯಿತು. ಜಿಲ್ಲಾಧಿಕಾರಿ ಅಕ್ರಂ ಪಾಷ ಅವರ ನೇತೃತ್ವದಲ್ಲಿ ಸರ್ಕಾರಿ ಬಸ್‍ನಲ್ಲೇ ಗ್ರಾಮಕ್ಕೆ ಬಂದ ಅಧಿಕಾರಿಗಳ ದೊಡ್ಡ ತಂಡಕ್ಕೆ ಜೆ.ಸಿ.ಪುರ…
ಹಳೆಯ, ಬಾಕಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ
June 19, 2019ಕೆಲಸದಲ್ಲಿ ವಿಳಂಬ-ನಿರ್ಲಕ್ಷ್ಯ ತೋರುವ ಇಂಜಿನಿಯರ್ ವಿರುದ್ಧ ಶಿಸ್ತುಕ್ರಮ: ಸಚಿವ ರೇವಣ್ಣ ಎಚ್ಚರಿಕೆ ಹಾಸನ, ಜೂ.18- ಜಿಲ್ಲೆಯಲ್ಲಿ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಶಾಸಕರ ನಿಧಿ ಯೋಜನೆಗಳ ಕಾಮಗಾರಿಗಳನ್ನು ತಿಂಗಳೊಳಗೆ ಪೂರ್ಣಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಧಿಕಾರಿ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶಾಸಕರ ನಿಧಿ ಯೋಜನೆ ಗಳ ಅನುಷ್ಠಾನ ಕುರಿತು ಸಭೆ ನಡೆಸಿದ ಅವರು, ಕೆಲಸದಲ್ಲಿ ವಿಳಂಬ ಮತ್ತು ನಿರ್ಲಕ್ಷ್ಯ ತೋರುವ ಇಂಜಿನಿಯರ್‍ಗಳ ವಿರುದ್ಧ…
ಹಾಸನಕ್ಕಿಂದು ಸಿಎಂ ಹೆಚ್‍ಡಿಕೆ
June 19, 2019* ಸೆಸ್ಕ್ ಹಾಸನ ವಲಯ, ಮಾಪನ ಪರೀಕ್ಷಾ ವಿಭಾಗ ಉದ್ಘಾಟನೆ * ರುದ್ರಪಟ್ಟಣದಲ್ಲಿ 66/11 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಚಾಲನೆ ಹಾಸನ, ಜೂ.18- ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜೂ.19ರ ಬುಧವಾರ ಹಾಸನಕ್ಕೆ ಆಗಮಿಸುತ್ತಿದ್ದು, ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲಿಗೆ ಚಾಮುಂಡೇಶ್ವರಿ ವಿದ್ಯುಚ್ಚಕ್ತಿ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಹಾಸನ ವಲಯವನ್ನು ನಗರದಲ್ಲಿ ಉದ್ಘಾಟಿಸಲಿರುವ ಮುಖ್ಯಮಂತ್ರಿಗಳು, ಅದೇ ವೇಳೆ ಸೆಸ್ಕ್‍ನ ಮಾಪಕ ಪರೀಕ್ಷಾ ವಿಭಾಗವನ್ನೂ ಲೋಕಾರ್ಪಣೆಗೊಳಿಸ ಲಿದ್ದಾರೆ. ಎರಡೂ ಕಾರ್ಯಕ್ರಮಗಳು ಬುಧವಾರ ಬೆಳಿÀಗ್ಗೆ 9.15ಕ್ಕೆ ನಗರದಲ್ಲಿರುವ ಕೆಪಿಟಿಸಿಎಲ್‍ನ ಪ್ರಸರಣಾ…
ಜನಪದ ಸಂಸ್ಕøತಿ ಉಳಿಸುವ ಹೊಣೆ ಎಲ್ಲರದು
June 19, 2019ಆದಿಚುಂಚನಗಿರಿ ಮಠದಲ್ಲಿ 71ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಗಾಯಕಿ ಅನನ್ಯಾ ಭಟ್ ಹಾಸನ, ಜೂ.18- ಜನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಖ್ಯಾತ ಗಾಯಕಿ ಹಾಗೂ ನಟಿ ಅನನ್ಯಾ ಭಟ್ ಅಭಿಪ್ರಾಯಪಟ್ಟರು. ನಗರದ ಎಂ.ಜಿ ರಸ್ತೆಯ ಶ್ರೀ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಸೋಮವಾರ ರಾತ್ರಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 71ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಜನಪದ ಗೀತೆ ಮತ್ತು ಜನಪದರ ಜೀವನಶೈಲಿ ಎಂಬ ವಿಷಯದ ಬಗೆಗೆ ವಿಶೇಷ ಉಪ…
ಅರಸೀಕೆರೆ ಆಸ್ಪತ್ರೆ ಅವ್ಯವಸ್ಥೆ: ಡಿಸಿ ವಾಸ್ತವ್ಯಕ್ಕೆ ಒತ್ತಾಯ
June 19, 2019ಅರಸೀಕೆರೆ: ನಗರದಲ್ಲಿನ ಸರ್ಕಾರಿ ಜೆ.ಸಿ. ಆಸ್ಪತ್ರೆ ಮೂಲಸೌಲಭ್ಯಗಳಿಲ್ಲದೇ ಅಕ್ಷರಶಃ ಮೂಲೆ ಗುಂಪಾಗಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಲು ಜಿಲ್ಲಾಧಿಕಾರಿ ಗಮನ ಹರಿಸಬೇಕಿದೆ. ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳುತ್ತಿರುವ ಜಿಲ್ಲಾಧಿಕಾರಿ ಗಳು, ಈ ಆಸ್ಪತ್ರೆಯಲ್ಲೂ 1 ದಿನ ವಾಸ್ತವ್ಯ ಹೂಡಿದರೆ ನೈಜ ಸಮಸ್ಯೆ ಅವರಿಗೆ ಅರಿವಾಗುತ್ತದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಆಸ್ಪತ್ರೆಯಲ್ಲಿ ಕುಡಿಯುವ ನೀರಿಲ್ಲ, ಸ್ವಚ್ಛತೆ ಇಲ್ಲ, ಶೌಚಾಲಯ ಸರಿ ಇಲ್ಲ, ಜನರೇಟರ್ ದುರಸ್ತಿಯಾಗಿಲ್ಲ. ವಿದ್ಯುತ್ ಇಲ್ಲದಾಗ ವಾರ್ಡ್‍ಗಳು ಕತ್ತಲೆ ಕೂಪವಾಗು ತ್ತವೆ. ಶಾಸಕ, ಆಸ್ಪತ್ರೆಯ ರಕ್ಷಾ ಸಮಿತಿ ಅಧ್ಯಕ್ಷರೂ ಆಗಿರುವ…