ಅರಸೀಕೆರೆ ಆಸ್ಪತ್ರೆ ಅವ್ಯವಸ್ಥೆ: ಡಿಸಿ ವಾಸ್ತವ್ಯಕ್ಕೆ ಒತ್ತಾಯ
ಹಾಸನ

ಅರಸೀಕೆರೆ ಆಸ್ಪತ್ರೆ ಅವ್ಯವಸ್ಥೆ: ಡಿಸಿ ವಾಸ್ತವ್ಯಕ್ಕೆ ಒತ್ತಾಯ

June 19, 2019

ಅರಸೀಕೆರೆ: ನಗರದಲ್ಲಿನ ಸರ್ಕಾರಿ ಜೆ.ಸಿ. ಆಸ್ಪತ್ರೆ ಮೂಲಸೌಲಭ್ಯಗಳಿಲ್ಲದೇ ಅಕ್ಷರಶಃ ಮೂಲೆ ಗುಂಪಾಗಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಲು ಜಿಲ್ಲಾಧಿಕಾರಿ ಗಮನ ಹರಿಸಬೇಕಿದೆ.

ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳುತ್ತಿರುವ ಜಿಲ್ಲಾಧಿಕಾರಿ ಗಳು, ಈ ಆಸ್ಪತ್ರೆಯಲ್ಲೂ 1 ದಿನ ವಾಸ್ತವ್ಯ ಹೂಡಿದರೆ ನೈಜ ಸಮಸ್ಯೆ ಅವರಿಗೆ ಅರಿವಾಗುತ್ತದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಆಸ್ಪತ್ರೆಯಲ್ಲಿ ಕುಡಿಯುವ ನೀರಿಲ್ಲ, ಸ್ವಚ್ಛತೆ ಇಲ್ಲ, ಶೌಚಾಲಯ ಸರಿ ಇಲ್ಲ, ಜನರೇಟರ್ ದುರಸ್ತಿಯಾಗಿಲ್ಲ. ವಿದ್ಯುತ್ ಇಲ್ಲದಾಗ ವಾರ್ಡ್‍ಗಳು ಕತ್ತಲೆ ಕೂಪವಾಗು ತ್ತವೆ. ಶಾಸಕ, ಆಸ್ಪತ್ರೆಯ ರಕ್ಷಾ ಸಮಿತಿ ಅಧ್ಯಕ್ಷರೂ ಆಗಿರುವ ಕೆ.ಎಂ.ಶಿವಲಿಂಗೇಗೌಡ ಮತ್ತು ಸಮಿತಿ ಸದಸ್ಯರು ಪದೇ ಪದೇ ಹೇಳುವ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾತುಗಳಿಗೆ ವ್ಯತಿರಿಕ್ತವಾಗಿದೆ ಈ ಆಸ್ಪತ್ರೆಯ ಸ್ಥಿತಿ.

ಆಸ್ಪತ್ರೆಗೆ ಹೇಮಾವತಿ ನೀರಿನ ನೇರ ಸಂಪರ್ಕ ನೀಡು ತ್ತೇವೆಂಬ ಭರವಸೆ ಹುಸಿಯಾಗಿದೆ. ನೀರು ಸರಬರಾಜು ಮೋಟಾರ್‍ಗಳು ಪದೇ ಪದೇ ಕೆಟ್ಟು ನಿಲ್ಲುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ ಎಂಬ ದೂರುಗಳಿವೆ.

ಮೂತ್ರಪಿಂಡ ಸಮಸ್ಯೆಯ ರೋಗಿಗಳಿಗಾಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ತೆರೆದಿದ್ದರೂ ಆ ಕೇಂದ್ರದಲ್ಲಿ ನೀರು ಮತ್ತು ವಿದ್ಯುತ್ ಸರಬರಾಜಿಲ್ಲದೇ ಘಟಕ ಕೆಲಸ ಮಾಡದಂತಾಗಿದೆ. ಬಡರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಿ ದುಪ್ಪಟ್ಟು ಹಣ ನೀಡುವ ಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಯ ಆಡಳಿತಾಧಿಕಾರಿ, ತಾಲೂಕು ವೈದ್ಯಾಧಿ ಕಾರಿ ಕೇಂದ್ರ ಸ್ಥಾನದಲ್ಲಿ ನೆಲೆಸಿಲ್ಲ. ಪರಿಣಾಮ ತುರ್ತು ಸಂದರ್ಭಗಳಲ್ಲಿ ಅವರ ಸೇವೆ ಅಲಭ್ಯವಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಈ ಆಸ್ಪತ್ರೆಗೆ ಭೇಟಿ ನೀಡಿ ಎಚ್ಚರಿಕೆ ನೀಡಿದರೂ ಪರಿಣಾಮ ಶೂನ್ಯ ಎಂಬಂತಾಗಿದೆ.

ಈ ಎಲ್ಲ ಸಮಸ್ಯೆಗಳು ಪರಿಹಾರವಾಗಬೇಕಾದರೆ ಜಿಲ್ಲಾಧಿ ಕಾರಿ ಆಸ್ಪತ್ರೆಯಲ್ಲೂ ಒಂದು ದಿನದ ವಾಸ್ತವ್ಯ ಹೂಡ ಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Translate »