ಜನಪದ ಸಂಸ್ಕøತಿ ಉಳಿಸುವ ಹೊಣೆ ಎಲ್ಲರದು
ಹಾಸನ

ಜನಪದ ಸಂಸ್ಕøತಿ ಉಳಿಸುವ ಹೊಣೆ ಎಲ್ಲರದು

June 19, 2019

ಆದಿಚುಂಚನಗಿರಿ ಮಠದಲ್ಲಿ 71ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಗಾಯಕಿ ಅನನ್ಯಾ ಭಟ್
ಹಾಸನ, ಜೂ.18- ಜನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಖ್ಯಾತ ಗಾಯಕಿ ಹಾಗೂ ನಟಿ ಅನನ್ಯಾ ಭಟ್ ಅಭಿಪ್ರಾಯಪಟ್ಟರು.

ನಗರದ ಎಂ.ಜಿ ರಸ್ತೆಯ ಶ್ರೀ ಆದಿ ಚುಂಚನಗಿರಿ ಸಮುದಾಯ ಭವನದಲ್ಲಿ ಸೋಮವಾರ ರಾತ್ರಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 71ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಜನಪದ ಗೀತೆ ಮತ್ತು ಜನಪದರ ಜೀವನಶೈಲಿ ಎಂಬ ವಿಷಯದ ಬಗೆಗೆ ವಿಶೇಷ ಉಪ ನ್ಯಾಸ ನೀಡಿ ಅವರು ಮಾತನಾಡಿದರು.

ಸಾಹಿತ್ಯ, ಸಂಗೀತ, ನೃತ್ಯ, ಆಟ ಎಲ್ಲ ವನ್ನೂ ಒಳಗೊಂಡಿರುವುದೇ ಜನಪದ. ಮನುಷ್ಯನ ಬದುಕಿನೊಂದಿಗೆ ಅವಿನಾ ಭಾವ ಸಂಬಂಧ ಹೊಂದಿ ತಲೆ-ತಲೆ ಮಾರುಗಳಿಂದ ಹರಿದು ಬಂದಿರುವ ಮೌಖಿಕ ಸಂಬಂಧದ ಜ್ಞಾನವು ಕೂಡ ಜನಪದ. ಪರಂಪರಾನುಗತ ಸಾಗಿಬಂದ ಜನಪದ ಗಾಯನ ವಿಶಿಷ್ಟ ಸಂಗೀತ ಪ್ರಕಾರ. ಬದುಕಿನ ಸಾರವನ್ನು ಪೂರ್ವಿ ಕರು ಜನಪದದಲ್ಲಿ ಕಟ್ಟಿಕೊಟ್ಟಿದ್ದಾರೆ. ಯಾವುದೇ ಜನಪದÀ ಪ್ರಕಾರವಿರಲಿ ಅಲ್ಲಿ ಬದುಕಿನ ಪಾಠ ಅಡಗಿದೆ. ಅದನ್ನು ಗುರುತಿಸಿ ನಮ್ಮ ಜೀವನದಲ್ಲಿ ಅ¼ವÀಡಿಸಿ ಕೊಳ್ಳುವ ಗುಣ ಎಲ್ಲರೂ ಬೆಳೆಸಿ ಕೊಳ್ಳಬೇಕು ಎಂದರು.

ಬಾಗಲಕೋಟೆಯ ಶಿರೋಳದ ರಾಮ ರೂಢ ಮಠದ ಶ್ರೀ ಶಂಕರಾರೂಢ ಸ್ವಾಮೀಜಿ ಮಾತನಾಡಿ, ಬದುಕಿನಲ್ಲಿ ಧಾರ್ಮಿಕತೆ ರೂಢಿಸಿಕೊಂಡು ಮುನ್ನಡೆ ದರೆ ಉನ್ನತಿಯೆಡೆಗೆ ಹೆಜ್ಜೆ ಇಡಬಹುದು. ದ್ವೇಷ ರಹಿತ ಜೀವನ ಕಟ್ಟಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನ ಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕಬ್ಬಳಿ ಮಠದ ಶ್ರೀ ಶಿವಪುತ್ರ ಸ್ವಾಮೀಜಿ, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಮದನಗೌಡ, ಮಠದ ವ್ಯವಸ್ಥಾಪಕ ಎಚ್.ಕೆ ಚಂದ್ರಶೇಖರ್ ಉಪಸ್ಥಿತರಿದ್ದರು.

ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿಯವರು ಭಜನೆ ನಡೆಸಿಕೊಟ್ಟರು. ಪ್ರಾಂಶುಪಾಲ ಚಂದ್ರಶೇಖರ್, ಉಪನ್ಯಾಸಕ ರಾದ ಲಕ್ಷ್ಮೀನಾರಾಯಣ, ಮಂಜುನಾಥ್ ಹಾಗೂ ಭಾಗ್ಯಲಕ್ಷ್ಮಿ ಮತ್ತಿತರರಿದ್ದರು.

Translate »