ಕೆಲಸದಲ್ಲಿ ವಿಳಂಬ-ನಿರ್ಲಕ್ಷ್ಯ ತೋರುವ ಇಂಜಿನಿಯರ್ ವಿರುದ್ಧ ಶಿಸ್ತುಕ್ರಮ: ಸಚಿವ ರೇವಣ್ಣ ಎಚ್ಚರಿಕೆ
ಹಾಸನ, ಜೂ.18- ಜಿಲ್ಲೆಯಲ್ಲಿ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಶಾಸಕರ ನಿಧಿ ಯೋಜನೆಗಳ ಕಾಮಗಾರಿಗಳನ್ನು ತಿಂಗಳೊಳಗೆ ಪೂರ್ಣಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಧಿಕಾರಿ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶಾಸಕರ ನಿಧಿ ಯೋಜನೆ ಗಳ ಅನುಷ್ಠಾನ ಕುರಿತು ಸಭೆ ನಡೆಸಿದ ಅವರು, ಕೆಲಸದಲ್ಲಿ ವಿಳಂಬ ಮತ್ತು ನಿರ್ಲಕ್ಷ್ಯ ತೋರುವ ಇಂಜಿನಿಯರ್‍ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತ್ವರಿತ ಅನುಮೋದನೆ: ಅಧಿಕಾರಿಗಳ ವಿಳಂಬ ಧೋರಣೆಗೆ ಸಿಟ್ಟಾದ ಸಚಿವರು, ಮುಂದಿನ 15 ದಿನಗಳ ಒಳಗೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ತುಂಡು ಗುತ್ತಿಗೆಗೆ ಜಿಲ್ಲಾ ಪಂಚಾಯಿತಿ ಇಂಜಿನಿ ಯರಿಂಗ್ ವಿಭಾಗದಲ್ಲಿ ಅವಕಾಶ ಇಲ್ಲದಿ ದ್ದಲ್ಲಿ ಎಲ್ಲಾ ಕಾಮಗಾರಿಗಳನ್ನು ಲೋಕೋ ಪಯೋಗಿ ಇಲಾಖೆಗೆ ವಹಿಸಬೇಕು. 5 ಲಕ್ಷ ರೂ.ವರೆಗಿನ ಕಾಮಗಾರಿಗಳಿಗೆ ನಾನೇ ತಕ್ಷಣ ಅನುಮೋದನೆ ದೊರಕಿಸಿ ಕೊಡುವೆ ಎಂದರು.
ಜಿಲ್ಲೆಯಲ್ಲಿ ಭೂಮಿ ಮತ್ತು ನಿವೇಶನ ಮಂಜೂರಾತಿ ವೇಳೆ ಬಹಳಷ್ಟು ವ್ಯತ್ಯಾಸ ಗಳಾಗಿವೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಅಲ್ಲದೆ ಬಾಕಿ ಉಳಿದಿರುವ ಹಕ್ಕುಪತ್ರ ವಿತರಣೆ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಬೇಕು. ಮುಜರಾಯಿ ದೇವಸ್ಥಾನಗಳ ದುರಸ್ತಿಗೆ ಅಗತ್ಯವಿರುವ ದಾಖಲೆಗಳನ್ನು ಕಂದಾಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ತಹಸಿಲ್ದಾರರು ತಕ್ಷಣ ನೀಡಬೇಕು. ಗ್ರಾಮೀಣ ವಸತಿ ಯೋಜನೆಗಳನ್ನು ಆದಷ್ಟು ತ್ವರಿತವಾಗಿ ಅನುಷ್ಠಾನಗೊಳಿಸಿ. ಅಗತ್ಯವಿದ್ದರೆ ಹೆಚ್ಚುವರಿ ಗುರಿ ಮಂಜೂರು ಮಾಡಿಸಿ ಕೊಡಲಾಗುವುದು ಎಂದರು.
ಚನ್ನರಾಯಪಟ್ಟಣ ತಾಲ್ಲೂಕಿಗೆ 280 ಕೋಟಿ ರೂ. ವೆಚ್ಚದ ಜಲಧಾರೆ ಯೋಜನೆ ಸಿದ್ಧವಾಗಿದೆ. ಅದೇ ರೀತಿ ಇvರೆÀ ತಾಲೂಕು ಗಳಲ್ಲಿ ಯೋಜನೆಗಳನ್ನು ಶಾಸಕರೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರ ದಿಂದ ತ್ವರಿತಗತಿಯಲ್ಲಿ ಅನುಮೋದನೆ ಹಾಗೂ ಅನುದಾನ ಒದಗಿಸಿಕೊಡುವು ದಾಗಿ ಸಚಿವರು ಭರವಸೆ ನೀಡಿದರು.
ಬರ ನಿರ್ವಹಣೆ ಸಮರ್ಪಕವಾಗಿ ನಡೆಯಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಶು ಪಾಲನೆ, ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿ ಯಾಗಿ ಪರಿಹಾರ ಕಾರ್ಯ ಕೈಗೊಳ್ಳ ಬೇಕು ಎಂದರು.
ಈ ವರ್ಷ ಮಳೆಗಾಲ ನಿರೀಕ್ಷಿತ ಮಟ್ಟ ದಲ್ಲಿಲ್ಲ. ಮುಂಬರುವ ಗಂಭೀರ ಪರಿಸ್ಥಿತಿ ನಿಭಾಯಿಸಲು ಈಗಿನಿಂದಲೇ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಎ.ಟಿ.ರಾಮಸ್ವಾಮಿ ಗಮನ ಸೆಳೆದರು.
ಇದಕ್ಕೆ ಸ್ಪಂದಿಸಿದ ಸಚಿವರು, ಕುಡಿ ಯುವ ನೀರು, ಜಾನುವಾರುಗಳ ಮೇವು ಮತ್ತಿತರ ಪರಿಹಾರ ಕ್ರಮಗಳಿಗೆ ತಾಲೂ ಕಿಗೆ 5 ಕೋಟಿ ರೂ.ನಂತೆ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಶಾಸಕÀ ಶಿವಲಿಂಗೇಗೌಡ ಮಾತನಾಡಿ, ಎಲ್ಲಾ ಶಾಸಕರು 15 ದಿನಕೊಮ್ಮೆ ಜನ ಸಂಪರ್ಕ ಸಭೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದರÀು. ಇದಕ್ಕೆ ಸಮ್ಮತಿಸಿದ ಸಚಿವರು, ತಾಲೂಕು ಮಟ್ಟದಲ್ಲಿ ತಿಂಗಳಿಗೆ 2 ಬಾರಿ ಜನಸಂಪರ್ಕ ಸಭೆ ನಡೆಸಿ ಎಂದು ಸೂಚಿಸಿದರು.
ಹಾಸ್ಟೆಲ್ ದುರಸ್ತಿ: ಎಲ್ಲಾ ಇಲಾಖೆಗಳು ಮುಖ್ಯವಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಸೂಚಿತ ಜಾತಿ, ಪಂಗಡಗಳ ಅನುದಾನ ಸದ್ಬಳಕೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕಂiÀರ್i ಹಾಗೂ ಶೈಕ್ಷಣಿಕ ಸೌಲಭ್ಯ ಸರಿಯಾಗಿ ಒದಗಿಸ ಬೇಕು. ಅತಿವೃಷ್ಠಿ ಪರಿಹಾರ ಹಣದಲ್ಲಿ ಅರಕಲಗೂಡು, ಸಕಲೇಶಪುರ, ಆಲೂರು, ಹೊಳೆನರಸೀಪುರಗಳಲ್ಲಿ ಹಾನಿಗೀಡಾದ ವಿದ್ಯಾರ್ಥಿನಿಲಯಗಳನ್ನು ದುರಸ್ತಿಪಡಿಸಿ ಎಂದು ಸಚಿವರು ಸೂಚನೆ ನೀಡಿದರು.
ಪ್ರತಿ ತಾಲೂಕಿಗೆ ಕನಿಷ್ಠ 100 ಎಕರೆ ಮಾದರಿ ಬೇಸಾಯ ತಾಕುಗಳ ಅಭಿವೃದ್ಧಿ ಯೋಜನೆ ರೂಪಿಸಿ ಎಂದು ಕೃಷಿ ಇಲಾಖಾಧಿಕಾರಿಗೆ ನಿರ್ದೇಶನ ನೀಡಿದರು. ಜಲಸಂರಕ್ಷಣೆ ಕಾರ್ಯಗಳು ಹೆಚ್ಚಬೇಕು. ವನ್ಯಜೀವಿ ವಿಭಾಗ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. 108 ಆಂಬುಲೆನ್ಸ್‍ಗಳು ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗಷ್ಟೇ ಕರೆತರಬೇಕು. ಜಿಲ್ಲಾಸ್ಪತ್ರೆ ಯಲ್ಲಿ ಚಿಕಿತ್ಸೆ ಅಸಾಧ್ಯ ಎಂದಾಗ ಮಾತ್ರ ಬೇರೆ ಆಸ್ಪತ್ರೆಗೆ ಕರೆದೊಯ್ಯಬಹುದು. ಇದರಲ್ಲಿ ವ್ಯತ್ಯಯವಾದರೆ ನಿರ್ಧಾಕ್ಷ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಡಿಸಿ ಅಕ್ರಂ ಪಾಷ, ಜಿಪಂ ಸಿಇಒ ವಿಜಯಪ್ರಕಾಶ್, ಎಡಿಸಿ ವೈಶಾಲಿ, ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.
ನಿವೇಶನ ಹಂಚಿ
ಬಡವರಿಗೆ ನಿವೇಶನ ಹಂಚಿಕೆ ವಿಚಾರವಾಗಿ ವಾರ್ಡ್‍ವಾರು ಸಭೆ ನಡೆಸಿ ಜೂ.21ರಿಂದ ಅರ್ಜಿ ಸ್ವೀಕರಿಸ ಬಹುದಾಗಿದೆ. ಇದೇ ರೀತಿ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಜಾಗ ಗುರುತಿಸಿ, ನಿವೇಶನಗಳಿಗೆ ಅರ್ಜಿ ಆಹ್ವಾ ನಿಸಿ ಹಂಚಿಕೆ ಮಾಡಿ ಎಂದು ಸಚಿವರು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಹಳ ನ್ಯೂನತೆ: ಶಾಸಕರ ಬೇಸರ
ಜಿಲ್ಲೆಯಲ್ಲಿ ಬಹಳಷ್ಟು ಕಾಮಗಾರಿಗಳು ಹಲವು ವರ್ಷಗಳಿಂದ ಬಾಕಿ ಉಳಿದಿವೆ. ಅನೇಕ ಕಾಮಗಾರಿಗಳಿಗೆ ಇನ್ನೂ ಕ್ರಿಯಾ ಯೋಜನೆಯನ್ನೇ ತಯಾರಿಸಿಲ್ಲ. ಕ್ರಿಯಾಯೋಜನೆ ಸಿದ್ಧಪಡಿಸಿದವಕ್ಕೆ ಆಡಳಿತಾತ್ಮಕ ಅನುಮೊದನೆಯನ್ನೇ ಪಡೆದಿಲ್ಲ. ಇಂಜಿನಿಯರ್‍ಗಳು ಜಿಲ್ಲೆಯಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡುತ್ತಿಲ್ಲ. ಅನುಷ್ಠಾನ ದಲ್ಲಿರುವ ಕೆಲವು ಯೋಜನೆಗಳ ನಿಯಮಗಳಲ್ಲಿ ಬಹಳಷ್ಟು ನ್ಯೂನತೆಗಳಿವೆ ಎಂದು ಶಾಸಕರಾದ ಎ.ಟಿ.ರಾಮಸ್ವಾಮಿ, ಹೆಚ್.ಕೆ.ಕುಮಾರಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಪ್ರೀತಂ ಜೆ.ಗೌಡ, ಸಿ.ಎನ್.ಬಾಲಕೃಷ್ಣ, ಕೆ.ಎಸ್.ಲಿಂಗೇಶ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ಅವರು ಸಭೆಯಲ್ಲಿ ಸಚಿವ ಹೆಚ್.ಡಿ.ರೇವಣ್ಣ ಅವರ ಗಮನ ಸೆಳೆದರು.