ಮೈಸೂರಿಗೆ ಮುಂಗಾರು ತಡವಾದರೇನು ಕವಿಗಳು ಸುರಿಸಿದರು ಮುಂಗಾರು ಮಳೆಯನ್ನ
ಮೈಸೂರು

ಮೈಸೂರಿಗೆ ಮುಂಗಾರು ತಡವಾದರೇನು ಕವಿಗಳು ಸುರಿಸಿದರು ಮುಂಗಾರು ಮಳೆಯನ್ನ

June 19, 2019

ಮೈಸೂರು:  ವಾಯು ಭಾರ ಕುಸಿತದಿಂದ ಮೈಸೂರಿಗೆ ಮುಂಗಾರು ಅಗಮನ ತಡವಾದರೂ, ಕವಿಗಳು ಮಾತ್ರ ಇಂದು ತಮ್ಮ ಕವಿತೆಗಳ ಮೂಲಕ ಮುಂಗಾರು ಮಳೆಯಲ್ಲಿ ಕವನ ಪ್ರಿಯರನ್ನು ತೋಯ್ಸಿದರು. `ಮುಂಗಾರು ಕಾಲಿಟ್ಟು ಮುಗಿಲು ದಟ್ಟೈಸಿದವು…, ಮಳೈ ಮಳೈ ಪರ್ವ ಮಳೈ ಎಂಬಿತ್ಯಾದಿ ಕವನಗಳು ಸಭಿಕರನ್ನು ಮುಂಗಾರು ಮಳೆಯಲ್ಲಿ ತೇಲುವಂತೆ ಮಾಡಿದವು.

ಮೈಸೂರಿನ ವಿಜಯನಗರ 1ನೇ ಹಂತ ದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಕಲ್ಯಾಣೋತ್ಸವ ಭವನದಲ್ಲಿ ಮಂಗಳವಾರ ವೆಂಕಟಗಿರಿ ಪ್ರಕಾಶನ ಆಯೋಜಿಸಿದ್ದ ಬಹುಭಾಷಾ ಮುಂಗಾರು ಕವಿ ಸಮ್ಮೇಳನದಲ್ಲಿ ಕವಿಗಳು ತಮ್ಮ ಕವಿತೆಗಳ ಮೂಲಕ ರಂಜಿಸಿದರು.

ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್  `ಮುಂಗಾರು’ ಶೀರ್ಷಿಕೆಯಡಿ `ಮುಂಗಾರು ಕಾಲಿಟ್ಟು ಮುಗಿಲು ದಟ್ಟೈಸಿದವು.. ಮಳೆ ಯಾಗಿ ಮಳೆ ಇಳಿದು ಇಳೆಗೆಲ್ಲ ಮೈಪುಳಕ.. ಜಳಕ, ಏನೆಂಥ ಸೊಗ ಜಗಕೆ…’ ಕವನ ವಾಚಿಸಿದರು. ದಿಗಿಲುಟ್ಟಿಸುವಂಥ ಗುಡುಗು -ಸಿಡಿಲು, ಮಳೆಯಾಗಿ ಇಳೆ ಹಸಿರನ್ನು ಹೊದ್ದು ಬೆಳೆ ನೀಡಲು ಸಿದ್ಧವಾಗುತ್ತಿದ್ದಾಳೆ ಎಂದು ಮುಂಗಾರನ್ನು  ಬರ ಮಾಡಿಕೊಂಡರು.

ವಿದ್ವಾನ್ ಟಿ.ವಿ.ಸತ್ಯನಾರಾಯಣ ಅವರು, ಆದ್ಯಾವೃಷ್ಟಿ ಶೀರ್ಷಿಕೆಯಡಿ, `ಆದ್ಯಾವೃಷ್ಟಿ ಸ್ಯರ್ವ ಲೋಕಷ್ಯ ತುಷ್ಟೈ.. ಪುಷ್ಟೈ ಭೂಮೇಃ ಪ್ರಾಣಿನಾಂ ತೋಷಕಾಯ.. ನದ್ಯಾಃ ಪೂತ್ರ್ಯೆ ಕಷಕ ಕ್ಷೇಮಕಾಯೈ.. ಜಾತಾ ಲೋಕ ಸಸ್ಯ ಸಂಪೋಷಣಾ..’ ಎಂಬ ಸಂಸ್ಕøತ ಕವಿತೆ ವಾಚಿಸಿದರು.

ಅದರ ಕನ್ನಡ ಅನುವಾದವನ್ನು ವಾಚಿ ಸಿದ ಅವರು, `ಲೋಕದ ಜನರನ್ನು ಸಂತೋಷಗೊಳಿಸುತ್ತಾ, ವಿಶ್ವದ ಜೀವಿಗಳ ಸಂತೋಷಗೊಳಿಸುತ್ತಾ, ಮುಂಗಾರು ಮಳೆಯು ಬಂದೀತು ನೋಡ.. ನದಿಗಳ ನೀರನ್ನು ಮೈದುಂಬಿ ಹರಿಸುತ್ತಾ, ರೈತಾಪಿ ಜನರ ಸಂತೋಷ, ಸುಖಕ್ಕಾಗಿ, ಮರ, ಗಿಡಗಳ ಬೆಳವಣಿಗೆಗಾಗಿ, ಮುಂಗಾರು ಮಳೆಯು ಬಂದೀತು ನೋಡ’ ಎಂದರು.

ರಂಗನಾಥ್ ಮೈಸೂರು ಅವರು, `ಕಾಣೆಯಾಗಿದೆ ಕವಿತೆ; ಶೀರ್ಷಿಕೆಯಡಿ ಸಾಮಾಜಿಕ ಸಮಸ್ಯೆಗಳ ಸಂದಿಗ್ಧತೆಯ ನಡುವೆ ಕವಿತೆ ಕಾಣದಾಗಿದೆ ಎಂದು ಹೇಳಿದರು.

ಸಾಹಿತಿ ಮಳಲಿ ವಸಂತಕುಮಾರ್ ಕವಿ ಎಚ್ಚೆಸ್ಕೆ ಅವರನ್ನು ತಮ್ಮ ಕವಿತೆಗಳ ಮೂಲಕ ಸ್ಮರಿಸಿದರು. ಪ್ರೊ.ವಿ.ಡಿ. ಹೆಗ್ಗಡೆ ಅವರು, `ಚೋಟೆ ಕಿಸಾನ್ ಕಾ ಸ್ವಾಗತ್’, ಕವಿತೆ ವಾಚಿಸಿ ದರೆ, ಕವಯಿತ್ರಿ ಡಾ.ಲತಾರಾಜಶೇಖರ್ `ಮುಂಗಾರು ಮಳೆ’ ನಾಗರಾಜ ಭಟ್ `ಮುಂಗಾರು’ ಕವಿತೆ ಗಳನ್ನು ವಾಚಿಸಿದರು. ಕವಿತಾ ರೈ, ರಾಜಪ್ಪ, ರಂಗಸ್ವಾಮಿ, ನಾಗರತ್ನ ಹೆಮ್ಮಿಗೆ, ಚಂಪಾ ಶಿವಣ್ಣ, ಕೆರೋಡಿ ಲೋಲಾಕ್ಷಿ, ವಿ.ನಾರಾಯಣರಾವ್ ತಮ್ಮ ಕವಿತೆಗಳನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಕವಿಗಳನ್ನು ಗೌರವಿಸಲಾಯಿತು. ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ನಿವೃತ್ತ ಪ್ರಾಂಶುಪಾಲ ನೀ.ಗಿರಿಗೌಡ, ಕಲಾವಿದ ಹ.ರಾ.ಭದ್ರೇಶ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ಬೆಲೆ ಕಟ್ಟಲಾಗದ ಸರಸ್ವತಿ ಜ್ಞಾನ ಭಂಡಾರ 

ಸರಸ್ವತಿಯ ಜ್ಞಾನ ಭಂಡಾರ ಬೆಲೆ ಕಟ್ಟಲಾಗದ್ದು, ಸಾಹಿತ್ಯ ಚರಿತ್ರೆಯ ಪುಟಗಳನ್ನು ತೆರೆದು ನೋಡಿದರೆ ಕೃಷ್ಣದೇವರಾಯನ ಆಸ್ಥಾನದಲ್ಲಿ ಎಲ್ಲಾ ಕವಿಗಳಿಗೂ ಆಶ್ರಯ ನೀಡಲಾ ಗಿತ್ತು. ವಿಜಯನಗರ ಸಾಮ್ರಾಜ್ಯದ ಆಡಳಿತದ ದ್ಯೋತಕವಾದ ಈ ದಿವ್ಯ ಸಾನ್ನಿಧ್ಯದಲ್ಲಿ ಬಹುಭಾಷಾ ಕವಿ ಸಮ್ಮೇಳನ ನಿಜಕ್ಕೂ ಸಂತೋಷದ ವಿಷಯ ಎಂದು ಶ್ರೀ ಯೋಗಾನರ ಸಿಂಹಸ್ವಾಮಿ ದೇವಸ್ಥಾನದ ಡಾ. ಭಾಷ್ಯಂ ಸ್ವಾಮೀಜಿ ತಿಳಿಸಿದರು.

ದೇವಸ್ಥಾನದ ಕಲ್ಯಾಣೋತ್ಸವ ಭವನದಲ್ಲಿ ವೆಂಕಟಗಿರಿ ಪ್ರಕಾಶನ ಆಯೋಜಿಸಿದ್ದ `ಬಹುಭಾಷಾ ಕವಿ ಗೋಷ್ಠಿ’ಗೆ ಚಾಲನೆ ನೀಡಿ ಅವರು ಮಾತನಾಡಿದರು. ಕವಿಗಳು ಮನಸ್ಸಿಗೆ ಸಂತೋಷ ನೀಡುತ್ತಾರೆ. ಆತ್ಮ ನಿವೇ ದನೆಗೆ ಇರುವ ಕವಿಗಳಿಗೆ ಜಾಗ ವಿಲ್ಲದೇ, ಪರಮಾತ್ಮನ ಸಾನ್ನಿಧ್ಯದ ಜೊತೆಗೆ ಆತ್ಮ ತೃಪ್ತಿಗಾಗಿ ಇರುವ ಹವಿ ಸ್ಸನ್ನು ನಿವೇದನೆ ಮಾಡಿದ ಫಲ ದೊರೆ ತಿರುವುದು ಸಂತೋಷ ಎಂದರು.

 

Translate »