ಹಾಸನ: ನಗರದ ವಿವಿಧೆಡೆ 3000 ನಿವೇಶನಗಳಿಗೆ ಜಾಗ ಗುರುತಿಸ ಲಾಗಿದ್ದು, ಹಲವು ವರ್ಷಗಳಿಂದ ಹಾಸನ ನಗರದಲ್ಲಿ ವಾಸವಿರುವ ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ಸದ್ಯದಲ್ಲೇ ವಿತರಣೆಯಾಗಲಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ನಗರಸಭೆ ಅಧಿಕಾರಿ ಗಳಿಗೆ ಶನಿವಾರ ನಿರ್ದೇಶನ ನೀಡಿದರು. ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಹಾಸನ ನಗರದಲ್ಲಿ ಹಲವು ವರ್ಷಗಳಿಂದ ವಾಸವಿದ್ದೂ ಸ್ವಂತ ಮನೆ ಹೊಂದಲಾಗದೇ ಪರಿತಪಿಸುತ್ತಿರುವ ಬಡವರಿಗೆ ನಿವೇಶನ ನೀಡಬೇಕಿದೆ. ಈ ನಿಟ್ಟಿನಲ್ಲಿ ಜೂ.19ರಂದು…
`ಅಮೃತ್ ಯೋಜನೆ’ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ
June 16, 2019ಹಾಸನ: ನಗರಕ್ಕೆ ಕುಡಿ ಯುವ ನೀರು ಪೂರೈಸುವ `ಅಮೃತ್ ಯೋಜನೆ’ ಅನುಷ್ಠಾನವನ್ನು ಕಾಲಮಿತಿ ಯಲ್ಲಿ ಪೂರ್ಣಗೊಳಿಸಿ ಎಂದು ಜಿಲ್ಲಾ ಧಿಕಾರಿ ಅಕ್ರಂ ಪಾಷ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಡಿಸಿ ಕಚೇರಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳ ಬೇಕಿರುವ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು ಕುಡಿಯುವ ನೀರಿನ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡಿ ಕೆಲಸ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೈಪ್‍ಲೈನ್ ಆಳವಡಿಕೆಗೆ ಅರಣ್ಯ ಇಲಾಖೆಯಿಂದ ಇದ್ದ ಅಡ್ಡಿ ನಿವಾರಿಸಲು ಹಿರಿಯ…
ಪೋಷಕರು ಕಾಲಕಾಲಕ್ಕೆ ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಿ
June 16, 2019ಅರಸೀಕೆರೆ: ಪೋಷಕರು ಶಾಲಾ-ಕಾಲೇಜಿಗೆ ಮಕ್ಕಳನ್ನು ಸೇರಿಸಿದರಷ್ಟೇ ಸಾಲದು, ತಿಂಗಳಿಗೊಮ್ಮೆ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಮಕ್ಕಳ ಚಟುವಟಿಕೆ, ವ್ಯಾಸಂಗದ ವೈಖರಿ ಮತ್ತು ಶೈಕ್ಷಣಿಕ ಪ್ರಗತಿಯನ್ನು ಅರಿಯುತ್ತಿರಬೇಕು ಎಂದು ಆದಿಚುಂಚನ ಗಿರಿ ಮಹಾಸಂಸ್ಥಾನದ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹಿತವಚನ ನೀಡಿದರು. ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಶ್ರೀ ಆದಿಚುಂಚನಗಿರಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ವರ್ಷಾರಂಭದಲ್ಲಿ ಶಿಕ್ಷಕ ವೃಂದ ಎಷ್ಟೇ…
ಬೇಲೂರಲ್ಲಿ ಸಸಿ ನೆಟ್ಟ ಸಾಲು ಮರದ ತಿಮ್ಮಕ್ಕ
June 16, 2019ಬೇಲೂರು: ನಾನು ಅಂದು ನೆಟ್ಟ ಸಸಿಗಳು ಇಂದು ದೊಡ್ಡ ಮರ ಗಳಾಗಿ ಬೆಳೆದಿರುವಂತೆ ಇಂದಿನ ಯುವ ಪೀಳಿಗೆ ಮತ್ತು ರೈತ ಮಕ್ಕಳು ಗಿಡ ಮರ ಗಳನ್ನು ಬೆಳೆಸುವ ಮೂಲಕ ನಾಡಿನ ಪರಿಸರಕ್ಕೆ ನೆರಳಾಗಲಿ ಎಂದು ಸಾಲು ಮರದ ತಿಮ್ಮಕ್ಕ ಹಾರೈಸಿದರು. ಬೇಲೂರು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ಸಸಿ ನೆಡುವ ಮೂಲಕವೇ ಆ ಹಿರಿಯ ಜೀವ ನೆರೆದಿದ್ದ ವರಿಗೆ ಪರಿಸರದ ಪಾಠ ಹೇಳಿದರು. ದೇಶಾದ್ಯಂತ ಮಳೆ-ಬೆಳೆ ಸಾಕಷ್ಟು ಪ್ರಮಾಣದಲ್ಲಾಗಲಿ. ರೈತರ ಜೀವನ ಹಸನಾಗಲಿ. ಕನ್ನಡ ನಾಡಿನ ಉನ್ನತೀ…
ಜಿಲ್ಲೆಯಲ್ಲಿ ರಾಜ್ಯ ಹೆದ್ದಾರಿ 27-85 ಅಗಲೀಕರಣಕ್ಕೆ ಮೊದಲ ಹೆಜ್ಜೆ
June 13, 2019* 3 ತಾಲೂಕುಗಳಲ್ಲಿ ರಸ್ತೆ ಅಗಲೀಕರಣಕ್ಕೆ ಮುಂದಾದ ಲೋಕೋಪಯೋಗಿ ಇಲಾಖೆ * ಅರಕಲಗೂಡು, ಸಕಲೇಶಪುರ, ಬೇಲೂರು ತಾಲೂಕುಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಹಾಸನ: ಜಿಲ್ಲೆಯ ವ್ಯಾಪ್ತಿಯ ರಾಜ್ಯ ಹೆದ್ದಾರಿ 27 ಮತ್ತು 85ರಲ್ಲಿ ರಸ್ತೆ ಅಗಲೀಕರಣದ ದಶಕಗಳ ಹಿಂದಿನ ಯೋಜನೆ ಕೊನೆಗೂ ಕಾರ್ಯರೂಪ ಕ್ಕಿಳಿಯುವ ಸೂಚನೆ ಹೊರಬಿದ್ದಿದೆ. ಎರಡೂ ರಾಜ್ಯ ಹೆದ್ದಾರಿಗಳನ್ನು ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ 111 ಕಿ.ಮೀ.ಗಳಷ್ಟು ದೂರ ಅಭಿವೃದ್ಧಿಪಡಿಸಲಿರುವ ರಾಜ್ಯ ಲೋಕೋಪಯೋಗಿ ಇಲಾಖೆಯು ಅರಕಲಗೂಡು, ಬೇಲೂರು ಮತ್ತು ಸಕಲೇಶಪುರ ತಾಲೂಕಿನ ವಿವಿಧೆಡೆ ಭೂಸ್ವಾಧೀನಕ್ಕೆ ಮುಂದಾಗಿದೆ. ಈ…
ಮನೆ ಮಂಜೂರಿಗೆ ಹಣ ಕೇಳುವ ಅಧಿಕಾರಿಗಳು
June 13, 2019ಅರಕಲಗೂಡು ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಟಿಆರ್ ಬೇಸರ ಅರಕಲಗೂಡು: ವಸತಿ ಯೋಜನೆ ಯಡಿ ಮನೆ ಮಂಜೂರು ಮಾಡುವುದಕ್ಕೆ ಫಲಾನು ಭವಿಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಹೀಗಾದರೆ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಜನರಿಗೆ ತಲುಪಿಸುವುದಾದರೂ ಹೇಗೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ ನಾಡಿದ ಅವರು, ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಸರ್ಕಾರದ…
ಮಳೆಗಾಲ: ಮುಂಜಾಗ್ರತಾ ಕ್ರಮ ಕೈಗೊಳ್ಳಿ
June 13, 2019ನಗರ ಪ್ರದಕ್ಷಿಣೆ ವೇಳೆ ಅಧಿಕಾರಿಗಳಿಗೆ ಶಾಸಕ ಪ್ರೀತಂ ಗೌಡ ಸೂಚನೆ ಹಾಸನ: ಮಳೆಗಾಲ ಆರಂಭ ವಾಗಿದ್ದು, ಅಧಿಕಾರಿಗಳು ಸಮಸ್ಯೆಗಳು ಎದು ರಾಗದಂತೆ ಮುಂಜಾಗರೂಕತಾ ಕ್ರಮ ಗಳನ್ನು ಕೈಗೊಳ್ಳಬೇಕು ಎಂದು ಹಾಸನ ಶಾಸಕ ಪ್ರೀತಂ ಗೌಡ ಸೂಚನೆ ನೀಡಿದರು. ಬುಧವಾರ ನಗರದಲ್ಲಿ ವಾರ್ಡ್ ವೀಕ್ಷಣೆ ಮಾಡಿದ ಶಾಸಕರು, ನಗರದಲ್ಲಿ ಮಳೆ ನೀರು ಸುಲಭವಾಗಿ ಹರಿದುಹೋಗಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮಳೆ ಗಾಲದಲ್ಲಿ ಯಾವುದೇ ಸಮಸ್ಯೆ ಬಾರ ದಂತೆ ಮುಂಚಿತವಾಗಿಯೇ ಜಾಗ್ರತೆ ವಹಿಸ ಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ…
ಕಾನೂನು ಸಾಕ್ಷರತಾ ರಥಕ್ಕೆ ಜೂ.16ರಂದು ಚಾಲನೆ
June 13, 2019ಅರಸೀಕೆರೆ: ರಾಜ್ಯ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಸಂಚರಿಸುತ್ತಿರುವ `ಕಾನೂನು ಸಾಕ್ಷರತಾ ರಥ ಜೂ.16ರಂದು ನಗರಕ್ಕೆ ಬರುತ್ತಿದ್ದು, ಜೂ.20ರವರೆಗೆ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಲಿದೆ ಎಂದು ನಗರದ ಜೆಎಂಎಫ್‍ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾ ಧೀಶರಾದ ಕೆ.ನಿರ್ಮಲಾ ತಿಳಿಸಿದರು. ನಗರದ ಸಿವಿಲ್ ನ್ಯಾಯಾಲಯದ ಆವ ರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಬುಧ ವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಬ್ಯಾಂಕಿನ ವ್ಯವಸ್ಥಾ ಪಕರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ…
ಅರಸೀಕೆರೆ ಗ್ರಾಮಾಂತರ ಪೊಲೀಸರ ಭರ್ಜರಿ ಬೇಟೆ13 ಕಳವು ಪ್ರಕರಣದಲ್ಲಿ ಮೂವರು ಚೋರರ ಸೆರೆ
June 12, 2019* ಅಣ್ಣ-ತಮ್ಮ, ಬಾವಮೈದುನ ಸೇರಿಕೊಂಡು 13 ಕಡೆ ಕಳವು * 176 ಗ್ರಾಂ ಚಿನ್ನಾಭರಣ, 4.62 ಲಕ್ಷ ರೂ. ನಗದು ವಶ * ಕೃತ್ಯಕ್ಕೆ ಬಳಸುತ್ತಿದ್ದ 2 ಬೈಕ್, 1 ಮಿನಿಗೂಡ್ಸ್ ವಾಹನ ಜಪ್ತಿ ಅರಸೀಕೆರೆ: ಅರಸೀಕೆರೆ ತಾಲೂಕು ಸೇರಿದಂತೆ ರಾಜ್ಯದ ವಿವಿಧೆಡೆ ನಡೆದಿದ್ದ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಂದೇ ಕುಟುಂಬದ ಮೂವರು ಆಂಧ್ರಪ್ರದೇಶದ ಚೋರರನ್ನು ಬಂಧಿಸಿರುವ ಅರಸೀಕೆರೆ ಗ್ರಾಮಾಂತರ ಪೊಲೀಸರು ಭರ್ಜರಿ ಬೇಟೆಯನ್ನೇ ಆಡಿದ್ದಾರೆ ಎಂದು ಡಿವೈಎಸ್‍ಪಿ ಸದಾ ನಂದ ತಿಪ್ಪಣ್ಣನವರ್ ಹೇಳಿದರು. ನಗರದಲ್ಲಿ…
ಅಂಬಿಗರ ಚೌಡಯ್ಯ ಮಹಾನ್ ದಾರ್ಶನಿಕ
June 12, 2019ಮಾಡಾಳು ನಿರಂಜನ ಪೀಠ ಕಾರ್ಯಕ್ರಮದಲ್ಲಿ ಶ್ರೀ ರುದ್ರಮುನಿ ಸ್ವಾಮೀಜಿ ಬಣ್ಣನೆ ಅರಸಿ: ಹನ್ನೆರಡನೇ ಶತಮಾನದಲ್ಲಿ ಕಾಯಕ, ದಾಸೋಹ, ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಸಮಾಜ ದಲ್ಲಿ ಜಾಗೃತಿ ಮೂಡಿಸಿದ ಶರಣ ಅಂಬಿ ಗರ ಚೌಡಯ್ಯ ಮಹಾನ್ ದಾರ್ಶನಿಕರು. ಬಸವಣ್ಣನವರ ನಡೆ-ನುಡಿ-ತತ್ವ-ಆದರ್ಶ ಗಳನ್ನು ಪಾಲಿಸಿ ತಮ್ಮದೇ ಆದ ವಚನಗಳ ಮೂಲಕ ಸಮಾಜದ ಅಂಕು-ಡೊಂಕು ಗಳನ್ನು ತಿದ್ದಿದರು. ಜನರಲ್ಲಿ ಸಾಮಾಜಿಕ ಕ್ರಾಂತಿ ಮೂಡಿಸಿದ ಮಹಾಪುರುಷರು ಎಂದು ರುದ್ರಮುನಿ ಸ್ವಾಮೀಜಿ ಬಣ್ಣಿಸಿದರು. ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬ ಳಿಯ ಮಾಡಾಳು ಗ್ರಾಮದ…