ಕಾನೂನು ಸಾಕ್ಷರತಾ ರಥಕ್ಕೆ ಜೂ.16ರಂದು ಚಾಲನೆ
ಹಾಸನ

ಕಾನೂನು ಸಾಕ್ಷರತಾ ರಥಕ್ಕೆ ಜೂ.16ರಂದು ಚಾಲನೆ

June 13, 2019

ಅರಸೀಕೆರೆ: ರಾಜ್ಯ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಸಂಚರಿಸುತ್ತಿರುವ `ಕಾನೂನು ಸಾಕ್ಷರತಾ ರಥ ಜೂ.16ರಂದು ನಗರಕ್ಕೆ ಬರುತ್ತಿದ್ದು, ಜೂ.20ರವರೆಗೆ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಲಿದೆ ಎಂದು ನಗರದ ಜೆಎಂಎಫ್‍ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾ ಧೀಶರಾದ ಕೆ.ನಿರ್ಮಲಾ ತಿಳಿಸಿದರು.

ನಗರದ ಸಿವಿಲ್ ನ್ಯಾಯಾಲಯದ ಆವ ರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಬುಧ ವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಬ್ಯಾಂಕಿನ ವ್ಯವಸ್ಥಾ ಪಕರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‍ನ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿ ಕಾರಗಳ ನಿರ್ದೇಶನದಂತೆ ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯ ನಿರ್ವ ಹಿಸುತ್ತಿದೆ. ಸರ್ಕಾರಿ ಇಲಾಖೆಗಳು, ಸಂಘ- ಸಂಸ್ಥೆಗಳ ಸಹಕಾರದಲ್ಲಿ ತಾಲೂಕಿನ ಗ್ರಾಮ ಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ವರ್ಷವೂ ಕಾನೂನು ಸಾಕ್ಷರತಾ ರಥ ಜಿಲ್ಲೆಯಲ್ಲಿ ಸಂಚರಿಸು ತ್ತಿದೆ. ಜೂ.16ರ ಬೆಳಿಗ್ಗೆ 10ಕ್ಕೆ ನ್ಯಾಯಾ ಲಯ ಆವರಣದಲ್ಲಿ ರಥ ಯಾತ್ರೆಗೆ ಚಾಲನೆ ನೀಡಲಾಗುತ್ತದೆ. ನಂತರ ತಾಲೂ ಕಿನ ಗೀಜೀಹಳ್ಳಿ ಗ್ರಾಪಂ ಆವರಣದಲ್ಲಿ, ಸಂಜೆ ಹಾರನಹಳ್ಳಿ ಗ್ರಾಪಂ ಆವರಣದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಗುವುದು ಎಂದರು.

ಜೂ.17ರ ಬೆಳಿಗ್ಗೆ ಜಾವಗಲ್ ಹೋಬ ಳಿಯ ಕಲ್ಯಾಡಿ, ಉಂಡಿಗನಾಳು, ಸಂಜೆ ಬಂದೂರು ಗ್ರಾಮ, ಜೂ.18ರ ಬೆಳಿಗ್ಗೆ ಬಾಣಾವರ ಸರ್ಕಾರಿ ಪಿಯು ಕಾಲೇಜು, ನಂತರ ಶಾನೇಗೆರೆ ಗ್ರಾಪಂ ಕಚೇರಿ ಆವ ರಣ, ಸಂಜೆ ಕಣಕಟ್ಟೆ ಗ್ರಾಪಂ ಆವರಣ, ಜೂ.19ರ ಬೆಳಿಗ್ಗೆ ಗಂಡಸಿ ಹೋಬಳಿ ಮುದುಡಿ ಗ್ರಾಪಂ ಮತ್ತು ಗಂಡಸಿ ಗ್ರಾಮದ ಶಂಭುಲಿಂಗೇಶ್ವರ ಪ್ರೌಢಶಾಲೆ, ಸಂಜೆ ಚಿಂದೇನಹಳ್ಳಿ ಗಡಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಜೂ.20ರ ಬೆಳಿಗ್ಗೆ ನಗರದ ತಾಲೂಕು ಕಚೇರಿ ಸಭಾಂ ಗಣ, ನಂತರ ನಗರಸಭೆ ಆವರಣ, ಸಂಜೆ ತಾಪಂ ಆವರಣದಲ್ಲಿ ಕಾರ್ಯಕ್ರಮ ನಡೆ ಸಲು ತೀರ್ಮಾನಿಸಲಾಗಿದೆ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಸಂತೋಷ್ ಶ್ರೀವಾಸ್ತವ, ಅಪರ ಸಿವಿಲ್ ಹೆಚ್ಚುವರಿ ನ್ಯಾಯಾಧೀಶರಾದ ದೀಪಾ ಮತ್ತು ಅಮಿತ್ ಗಟ್ಟಿ, ವಕೀಲರ ಸಂಘದ ಅಧ್ಯಕ್ಷ ಮೂರ್ತಿ, ಕಾರ್ಯದರ್ಶಿ ಕಿರಣ್ ಕುಮಾರ್, ಡಿವೈಎಸ್‍ಪಿ ಸದಾನಂದ ತಿಪ್ಪನವರ್, ಇನ್‍ಸ್ಪೆಕ್ಟರ್ ಸಿದ್ದರಾಮೇಶ್ವರ, ರಂಗಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಗಳ ಅಧಿಕಾರಿಗಳು, ಬ್ಯಾಂಕ್ ವ್ಯವಸ್ಥಾಪ ಕರು, ಹಿರಿಯ ವಕೀಲರು ಸಭೆಯಲ್ಲಿದ್ದರು.

Translate »