ಕೊಳ್ಳೇಗಾಲ, ಫೆ.2(ಎಸಿಪಿ) ಕಳೆದ 27 ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆ ಮರೆಸಿ ಕೊಂಡಿದ್ದ ನರ ಹಂತಕ ವೀರಪ್ಪನ್ ಸಹಚರನ ಪತ್ನಿ ಯನ್ನು ಶನಿವಾರ ಕೊಳ್ಳೇಗಾಲ ಪೊಲೀ ಸರು ಬಂಧಿಸಿದ್ದಾರೆ. 1992ರಲ್ಲಿ ನಡೆದ ರಾಮಾಪುರ ಪೊಲೀಸ್ ಠಾಣೆ ಮೇಲಿನ ದಾಳಿ ಮತ್ತು 1993ರಲ್ಲಿ ನಡೆದ ಪಾಲಾರ್ ಬಾಂಬ್ ಸ್ಫೋಟ ಪ್ರಕರಣಗಳ ಆರೋಪಿಯಾಗಿ ರುವ ಸ್ಟೆಲ್ಲಾ ಮೇರಿ ವಿರುದ್ಧ ಟಾಡಾ ಪ್ರಕರಣದಡಿ ಕೇಸ್ ದಾಖಲಾಗಿದೆ. ವೀರಪ್ಪನ ಸಹಚರ ಸುಂಡವಲಯನ್ ಎಂಬಾತನ ಪತ್ನಿಯಾದ ಈಕೆ ಪೊಲೀ ಸರಿಗೆ ಸಿಗದೆ ತಲೆ ಮರೆಸಿಕೊಂಡಿ…
ರಾಜ್ಯದ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ
February 3, 2020ಮೈಸೂರು, ಫೆ.2(ಎಸ್‍ಬಿಡಿ)- ಸರಳ ವಿವಾಹ ಉತ್ತೇಜಿ ಸುವ ಉದ್ದೇಶದಿಂದ ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟ, ನಂಜನಗೂಡು ಹಾಗೂ ಮುಡುಕುತೊರೆ ದೇವಾ ಲಯಗಳು ಸೇರಿದಂತೆ ರಾಜ್ಯದ 100 ದೇವಾಲಯಗಳಲ್ಲಿ `ಸಪ್ತಪದಿ’ ಯೋಜನೆಯಡಿ ಸಾಮೂಹಿಕ ವಿವಾಹ ನಡೆಸಲು ರಾಜ್ಯ ಸರ್ಕಾರ ತೀರ್ಮಾ ನಿಸಿದೆ ಎಂದು ಮುಜರಾಯಿ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. `ಸಾಮೂಹಿಕ ವಿವಾಹ’ ಕಾರ್ಯಕ್ರಮ ಅನುಷ್ಠಾನ ಸಂಬಂಧ ಮೈಸೂರು ಡಿಸಿ ಕಚೇರಿ ಸಭಾಂ ಗಣದಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಎಷ್ಟೋ…
ಸೋನಿಯಾಗಾಂಧಿ ಆಸ್ಪತ್ರೆಗೆ ದಾಖಲು
February 3, 2020ನವದೆಹಲಿ, ಫೆ.2-ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ತೀವ್ರ ಅಸ್ವಸ್ಥರಾಗಿದ್ದು, ನವದೆಹಲಿಯ ಸರ್ ಗಂಗಾರಾಂ ಆಸ್ಪತ್ರೆಗೆ ಇಂದು ಸಂಜೆ ದಾಖಲಾದರು. ವೈದ್ಯಕೀಯ ತಪಾಸಣೆಗಾಗಿ ಆಗಿಂದಾಗ್ಗೆ ಅಮೇ ರಿಕಾಗೆ ತೆರಳುತ್ತಿದ್ದ ಸೋನಿಯಾ ಆರೋಗ್ಯದಲ್ಲಿ ಇಂದು ಸಂಜೆ ಏರು ಪೇರಾಗಿದ್ದು, ಆಸ್ಪತ್ರೆಗೆ ದಾಖಲಾದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಅವರ ಆರೋಗ್ಯ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಬಾಲಿವುಡ್ ನಟ ರಿಷಿ ಕಪೂರ್‍ಗೆ ಚಿಕಿತ್ಸೆ
February 3, 2020ನವದೆಹಲಿ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಭಾನು ವಾರ ಆಸ್ಪತ್ರೆಗೆ ದಾಖ ಲಾಗಿದ್ದಾರೆ. ಸೋಂಕು ಸಮಸ್ಯೆಯಿಂದ ಬಳ ಲುತ್ತಿದ್ದ ಅವರನ್ನು ರಾಷ್ಟ್ರ ರಾಜಧಾನಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೊಂದು ಗಂಭೀರವಾದ ಸಮಸ್ಯೆಯಲ್ಲ, ಬಹುಶÀಃ ಮಾಲಿನ್ಯದಿಂದ ಉಂಟಾಗಿರುವ ಸೋಂಕಿನ ಕಾರಣ ಅನಾರೋಗ್ಯಕ್ಕೀ ಡಾಗಿದ್ದೇನೆ ಎಂದು ಹಿರಿಯ ನಟ ರಿಷಿ ಕಪೂರ್ ಹೇಳಿಕೊಂಡಿದ್ದಾರೆ.
`ಗೋಡ್ಸೆ, ಸಾವರ್ಕರ್ ಚಿಂತನೆಯಲ್ಲಿ ಸರ್ಕಾರ ದೇಶವನ್ನು ಹಿಂದಕ್ಕೆ ತಳ್ಳುತ್ತಿದೆ’
February 3, 2020ಮೈಸೂರಲ್ಲಿ ಬಿವಿಎಸ್ ಆಯೋಜಿಸಿದ್ದ ಸಂವಿಧಾನ ಜಾಗೃತಿ ಸಮಾವೇಶದಲ್ಲಿ ಪ್ರೊ.ಅರವಿಂದ ಮಾಲಗತ್ತಿ ಟೀಕೆ ಮೈಸೂರು, ಫೆ.2(ಪಿಎಂ)- ದೇಶದ ಹಣೆಗೆ ಸಿಎಎ, ಎನ್‍ಆರ್‍ಸಿ ಹಾಗೂ ಎನ್ ಪಿಆರ್ ಹೆಸರಿನಲ್ಲಿ ಮೂರು ನಾಮ ಹಾಕಲು ಕೇಂದ್ರದ ಬಿಜೆಪಿ ಸರ್ಕಾರ ಮುಂದಾಗಿದ್ದು, ಗೋಡ್ಸೆ ಹಾಗೂ ಸಾವರ್ಕರ್ ಚಿಂತನಾ ಕ್ರಮ ದಲ್ಲಿ ದೇಶವನ್ನು ಹಿಂದಕ್ಕೆ ತಳ್ಳುವ ಕೆಲಸ ಮಾಡುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಟೀಕಿಸಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ…
ವಿಜ್ಞಾನ ತಂತ್ರಜ್ಞಾನ ಬಳಸಿಕೊಂಡು ಕೃಷಿ ಕ್ಷೇತ್ರ ಅಭಿವೃದ್ಧಿಪಡಿಸುವಲ್ಲಿ ಸರ್ಕಾರಗಳ ವೈಫಲ್ಯ
February 3, 2020ಬೀಜ ಮಸೂದೆ ವಿಚಾರ ಸಂಕಿರಣದಲ್ಲಿ ವಿಶ್ರಾಂತ ಕುಲಪತಿ ಎಂ. ಮಹಾದೇವಪ್ಪ ವಿಷಾದ ಮೈಸೂರು, ಫೆ.2(ಎಂಟಿವೈ)-ಕೃಷಿ ಕ್ಷೇತ್ರ ದಲ್ಲಿ ಪೂರ್ಣ ಪ್ರಮಾಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾನಿಲ ಯದ ವಿಶ್ರಾಂತ ಕುಲಪತಿ ಡಾ.ಎಂ. ಮಹಾದೇವಪ್ಪ ವಿಷಾದಿಸಿದ್ದಾರೆ. ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವ ರಣದಲ್ಲಿರುವ ರಾಜೇಂದ್ರ ಸಭಾಂಗಣ ದಲ್ಲಿ ರೈತಮಿತ್ರ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂ.ಲಿ., ಬೀಜವೇದಿಕೆ, ರಾಷ್ಟ್ರೀಯ ಬೀಜ ಯೋಜನೆ, ಬೆಂಗಳೂರು ಕೃಷಿ ವಿವಿ,…
ಜಯಪುರದಲ್ಲಿ 70 ವೀರಗಲ್ಲು, ಮಾಸ್ತಿಗಲ್ಲುಗಳ ಸಂರಕ್ಷಣೆ
February 3, 2020ಬೇಲಿಯೊಳಗೆ ಸೇರಿಹೋಗಿದ್ದ ಹೊಯ್ಸಳರ ಕಾಲದ ಸ್ಮಾರಕಗಳನ್ನು ಬೆಳಕಿಗೆ ತಂದ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಮೈಸೂರು, ಫೆ.2- ಹೊಯ್ಸಳರ ಕಾಲದಲ್ಲಿ ಕೆತ್ತನೆ ಮಾಡಿರುವ ಸತಿ ಸಹಗಮನ, ಯುದ್ಧದಲ್ಲಿ ವೀರ ಮರಣವನ್ನಪ್ಪಿದ ವೀರರ ಚಿತ್ರಣ, ಗಜಕಾಳಗದಲ್ಲಿ ಸೆಣ ಸಾಡಿದವರ 70ಕ್ಕೂ ಹೆಚ್ಚು ವೀರಗಲ್ಲು, ಮಾಸ್ತಿ ಗಲ್ಲು ಗಳನ್ನು ಎನ್‍ಎಸ್‍ಎಸ್ ವಿದ್ಯಾರ್ಥಿಗಳು `ಕತ್ತಲೆ’ ಯಿಂದ ಬೆಳಕಿಗೆ ತಂದಿದ್ದಾರೆ. ಮೈಸೂರಿನ ಕುವೆಂಪು ನಗರದ ಪ್ರಥಮ ದರ್ಜೆ ಕಾಲೇಜಿನ 100 ವಿದ್ಯಾರ್ಥಿಗಳು ಮೈಸೂರು ತಾಲೂಕು ಜಯಪುರದಲ್ಲಿ ಜ.28ರಿಂದ ಫೆ.3ರವರೆಗೆ ರಾಷ್ಟ್ರೀಯ ಸೇವಾ (ಎನ್‍ಎಸ್‍ಎಸ್) ಶಿಬಿರ ಹಮ್ಮಿಕೊಂಡಿದ್ದು,…
ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ: ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ
February 3, 2020ಮೈಸೂರು, ಫೆ.2(ಎಂಟಿವೈ)-ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದ ಆವರಣದಲ್ಲಿ ನಗರ-ಗ್ರಾಮಾಂತರ ಕಾಂಗ್ರೆಸ್ ಸಮಿತಿ ಭಾನುವಾರ ಆಯೋಜಿಸಿದ್ದ `ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್’ ಕುರಿತ ರಾಷ್ಟ್ರೀಯ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಅವರು, ಇಂಗ್ಲೆಂಡ್‍ನಲ್ಲಿದ್ದ ಸ್ನೇಹಿತ ಗಲ್ಲು ಶಿಕ್ಷೆಗೆ ಗುರಿಯಾಗಿ ದ್ದನ್ನು ಭಾರತದಲ್ಲಿದ್ದ ಸಾವರ್ಕರ್ ವಿರೋಧಿಸಿದ್ದಕ್ಕೆ ಬ್ರಿಟಿಷರು ಆತನನ್ನು ಜೈಲಿಗೆ ಹಾಕಿದ್ದರೇ ಹೊರತು ಸ್ವಾತಂತ್ರ್ಯ ಹೋರಾಟ ಮಾಡಿದ್ದಕ್ಕಲ್ಲ. ಸಾವರ್ಕರ್ ಜೈಲಿನಲ್ಲಿ ದ್ದಾಗ ಇನ್ನು ಮುಂದೆ ಬ್ರಿಟಿಷ್ ಆಡಳಿತವನ್ನು ವಿರೋ ಧಿಸುವುದಿಲ್ಲ…
30 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಗುದ್ದಲಿಪೂಜೆ
February 3, 2020ಮೈಸೂರು, ಫೆ.2(ಪಿಎಂ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು. ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ ಜಂಕ್ಷನ್‍ನಿಂದ ಕಲಾಮಂದಿರ ಬಳಿಯ ಹುಣಸೂರು ರಸ್ತೆ ಜಂಕ್ಷನ್‍ವರೆಗಿನ (ರಂಗಾಯಣ) ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಎಸ್‍ಎಫ್‍ಸಿ (ರಾಜ್ಯ ಹಣಕಾಸು ಆಯೋಗ) ಅನುದಾನದ 20 ಲಕ್ಷ ರೂ. ವೆಚ್ಚದಲ್ಲಿ 350 ಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಇದಾಗಿದೆ. ಬಳಿಕ ಸರಸ್ವತಿಪುರಂನ ಸಿಗ್ಮಾ…
ನವಜಾತ ಶಿಶು ಕೊಂದಿದ್ದ ತಾಯಿಗೆ ಜೀವಾವಧಿ ಶಿಕ್ಷೆ: ಮೃತದೇಹ ಹಳ್ಳಕ್ಕೆ ಎಸೆದಿದ್ದ ಪ್ರೇಮಿಗೆ 2 ವರ್ಷ ಸೆರೆವಾಸ
February 3, 2020ಮೈಸೂರು, ಫೆ.2(ಎಸ್‍ಬಿಡಿ)- ವಿವಾಹಪೂರ್ವ ಜನಿಸಿದ ಮಗುವನ್ನು ಅಮಾನುಷವಾಗಿ ಕೊಂದ ಮಹಿಳೆಗೆ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನಂಜನಗೂಡು ತಾಲೂಕು ಹೆಡಿಯಾಲ ಗ್ರಾಮದ ಮಂಗಳಗೌರಿಗೆ ಜೀವಾವಧಿ ಹಾಗೂ ಆಕೆಯ ಪ್ರಿಯಕರ ಗೌಡರಹುಂಡಿ ಗ್ರಾಮದ ಬಸವರಾಜುವಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇಬ್ಬರೂ ಪ್ರೇಮಿಗಳಾಗಿದ್ದರು. ಆದರೆ ವಿವಾಹಕ್ಕೆ ಮೊದಲೇ ಗರ್ಭ ಧರಿಸಿದ ಮಂಗಳಗೌರಿ 2017ರ ಮೇ 8ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ತಕ್ಷಣ ಹಾಲುಣಿಸಿ, ಹಸುಗೂಸಿನ ತಲೆಯನ್ನು ಗೋಡೆಗೆ…










