News

ಡಿ.4, 5ರಂದು ಬೆಂಗಳೂರಲ್ಲಿ  ಸಿರಿಧಾನ್ಯ, ಸಾವಯವ ಮೇಳ
News

ಡಿ.4, 5ರಂದು ಬೆಂಗಳೂರಲ್ಲಿ ಸಿರಿಧಾನ್ಯ, ಸಾವಯವ ಮೇಳ

December 3, 2021

ಬೆಂಗಳೂರು, ಡಿ.2(ಕೆಎಂಶಿ)- ಸಾವಯವ ಮತ್ತು ಸಿರಿಧಾನ್ಯ ಉತ್ಪಾದನೆಯೊಂ ದಿಗೆ ಜನರಿಗೆ ಆರೋಗ್ಯದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಕೃಷಿ ಇಲಾಖೆ ಹಲವು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದೀಗ ಅದರ ಮುಂದುವರೆದ ಭಾಗವಾಗಿ ರೈತೋತ್ಪಾದಕರು ಹಾಗೂ ಗ್ರಾಹಕರ ನಡುವೆ ಸಂಪರ್ಕ ಏರ್ಪಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ, ಪ್ರದೇಶ ಕೃಷಿಕ ಸಮಾಜ ಹಾಗೂ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಸಹಯೋಗದೊಂದಿಗೆ ಸಾವಯವ ಹಾಗೂ ಸಿರಿಧಾನ್ಯ ಮೇಳ ಹಮ್ಮಿಕೊಳ್ಳಲಾಗಿದೆ. ಇದೇ ಡಿ.4 ಮತ್ತು 5ರಂದು ಎರಡು ದಿನಗಳ ಕಾಲ ಬೆಂಗಳೂರಿನ…

ರಾಜ್ಯಕ್ಕೆ ಬೂಸ್ಟರ್ ಡೋಸ್: ಕೇಂದ್ರ  ಆರೋಗ್ಯ ಸಚಿವರೊಂದಿಗೆ ಸಿಎಂ ಚರ್ಚೆ
News

ರಾಜ್ಯಕ್ಕೆ ಬೂಸ್ಟರ್ ಡೋಸ್: ಕೇಂದ್ರ ಆರೋಗ್ಯ ಸಚಿವರೊಂದಿಗೆ ಸಿಎಂ ಚರ್ಚೆ

December 3, 2021

ನವದೆಹಲಿ, ಡಿ.2- ಆರೋಗ್ಯ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವ್ಯ ಜೊತೆ ಚರ್ಚಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿ ಸಿದ ಅವರು, ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೋವಿಡ್ ತಜ್ಞರ ಜೊತೆ ಚರ್ಚೆ ನಡೆಸುತ್ತೇವೆ. ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡು ರಾಜ್ಯ ಸರ್ಕಾ ರಗಳಿಗೆ ತಿಳಿಸುತ್ತೇವೆ. ಕೇರಳದಿಂದ ಕೊರೊನಾ ಸೋಂಕು ಹರಡುವ ಬಗ್ಗೆ ರಾಜ್ಯ ಸರ್ಕಾರ ಉತ್ತಮ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿದೆ ಎಂದು ಕೇಂದ್ರ…

ಬೆಂಗಳೂರಿಗೆ ವಕ್ಕರಿಸಿದ `ಒಮಿಕ್ರಾನ್’
News

ಬೆಂಗಳೂರಿಗೆ ವಕ್ಕರಿಸಿದ `ಒಮಿಕ್ರಾನ್’

December 3, 2021

ಬೆಂಗಳೂರು, ಡಿ.2-ವಿದೇಶಗಳಲ್ಲಿ ಕಾಣಿಸಿಕೊಂಡಿರುವ ಕೊರೊನಾ ರೂಪಾಂತರಿ ವೈರಸ್ `ಒಮಿಕ್ರಾನ್’ ಕರ್ನಾಟಕದ ಮೂಲಕ ಭಾರತಕ್ಕೂ ಕಾಲಿಟ್ಟಿದ್ದು, ತೀವ್ರ ಆತಂಕ ಸೃಷ್ಟಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿ ನಲ್ಲಿ ಈ `ಒಮಿಕ್ರಾನ್’ ಸೋಂಕು ಪತ್ತೆಯಾಗಿದ್ದು, ದೇಶದಲ್ಲೇ ಇದು ಮೊದಲ ಪ್ರಕರಣವಾಗಿದೆ. ಎಲ್ಲರ ದೃಷ್ಟಿ ಈಗ ಬೆಂಗಳೂರಿನತ್ತ ನೆಟ್ಟಿದೆ. `ಒಮಿಕ್ರಾನ್’ ಸೋಂಕಿತರು ಮತ್ತು ಅವರ ಜೊತೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಸಹ ಪತ್ತೆ ಹಚ್ಚಲಾಗಿದೆ. ಬೆಂಗಳೂರಿನ 66 ಮತ್ತು 46 ವರ್ಷ ವಯಸ್ಸಿನ ಇಬ್ಬರಲ್ಲಿ ಈ `ಒಮಿಕ್ರಾನ್’ ವೈರಸ್ ಸೋಂಕು ಕಾಣಿಸಿಕೊಂಡಿದೆ…

ಶಾಲಾ-ಕಾಲೇಜು ಮುಚ್ಚುವ ಪರಿಸ್ಥಿತಿ ಎದುರಾಗಿಲ್ಲ: ಸಚಿವ
News

ಶಾಲಾ-ಕಾಲೇಜು ಮುಚ್ಚುವ ಪರಿಸ್ಥಿತಿ ಎದುರಾಗಿಲ್ಲ: ಸಚಿವ

November 30, 2021

ಬೆಂಗಳೂರು,ನ.29(ಕೆಎಂಶಿ)- ಕೋವಿಡ್-19 ಸಂಭಾವ್ಯ ಮೂರನೇ ಅಲೆ ಬಗ್ಗೆ ಆತಂಕ ಬೇಡ, ಶಾಲಾ-ಕಾಲೇಜುಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿಲ್ಲ ಎಂದು ಪ್ರಾಥ ಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ವಸತಿ ಕಾಲೇಜುಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ, ಪ್ರಾಥಮಿಕ ಶಾಲೆ ಗಳ ಮಕ್ಕಳಲ್ಲಿ ಕೊರೊನಾ ಪತ್ತೆಯಾಗಿಲ್ಲ ಎಂದರು. ವಸತಿ ಶಾಲೆಗಳಲ್ಲಿ ಬೇರೆ ಕಡೆಯಿಂದ ವಿದ್ಯಾರ್ಥಿಗಳು ಬಂದಿದ್ದರಿಂದ ಕೊರೊನಾ ಪತ್ತೆಯಾಗಿದ್ದು, ಪೆÇೀಷಕರು ಆತಂಕಪಡುವ ಅವಶ್ಯಕತೆ ಇಲ್ಲ, ಪ್ರತಿ ಅರ್ಧ ಗಂಟೆಗೊಮ್ಮೆ ಶಾಲೆಗಳಿಂದ…

ಲಾಕ್‍ಡೌನ್ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ
News

ಲಾಕ್‍ಡೌನ್ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ

November 30, 2021

ಬೆಂಗಳೂರು,ನ.29(ಕೆಎಂಶಿ)-ಒಮಿಕ್ರಾನ್ ಸೋಂಕು ವೇಗ ವಾಗಿ ಹರಡುತ್ತದೆ. ಆದರೆ ಇದರಿಂದ ಯಾವುದೇ ದೊಡ್ಡ ಪ್ರಮಾಣದ ಹಾನಿ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಲಾಕ್‍ಡೌನ್ ಜಾರಿಗೊಳಿಸುವ ಪರಿಸ್ಥಿತಿ ಎದು ರಾಗಿಲ್ಲ, ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಆರೋಗ್ಯ ಇಲಾಖೆ ಸೋಂಕಿನ ಬಗ್ಗೆ ಇನ್ನೊಂ ದರೆಡು ದಿನಗಳಲ್ಲಿ ಪೂರ್ಣ ಮಾಹಿತಿ ನೀಡಲಿದೆ. ನಂತರ ರಾಜ್ಯ ಸರ್ಕಾರ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದೆ…

ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲ
News

ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲ

November 30, 2021

ಬೆಂಗಳೂರು,ನ.29(ಕೆಎಂಶಿ)-ಒಮಿಕ್ರಾನ್ ಕುರಿತು ಜನತೆ ಭಯಪಡದೆ, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಂದೆ ಲಾಕ್‍ಡೌನ್ ಪ್ರಸ್ತಾವನೆ ಇಲ್ಲ, ಶಾಲಾ-ಕಾಲೇಜುಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದ್ದು, ಅವುಗಳನ್ನು ಮುಚ್ಚಲು ಸೂಚಿಸಿಲ್ಲ ಎಂದು ತಿಳಿಸಿದರು. ರೂಪಾಂತರಿ ವೈರಸ್ ಕಂಡು ಬಂದಿರುವ ದೇಶಗಳಿಂದ ಬಂದಿ ರುವವರ ಮೇಲೆ ನಿಗಾ ಇರಿಸಿದ್ದು, ಅವರ ಸಂಪರ್ಕಿತರ ಪತ್ತೆ ಹಚ್ಚಿ ಪರೀ ಕ್ಷಿಸಲಾಗುತ್ತಿದೆ. ಇದಲ್ಲದೆ ವಿಮಾನ ನಿಲ್ದಾಣದಲ್ಲಿಯೂ ಕಟ್ಟು ನಿಟ್ಟಿನ ಪರೀಕ್ಷೆ ಮಾಡುತ್ತಿದ್ದು, ನೆಗೆಟಿವ್ ಇದ್ದರೆ ಮಾತ್ರ ನಗರ…

ಮೂರು ಕೃಷಿ ತಿದ್ದುಪಡಿ ಕಾಯ್ದೆ ರದ್ದತಿಗೆ  ಸಂಸತ್ ಅಂಗೀಕಾರ
News

ಮೂರು ಕೃಷಿ ತಿದ್ದುಪಡಿ ಕಾಯ್ದೆ ರದ್ದತಿಗೆ ಸಂಸತ್ ಅಂಗೀಕಾರ

November 30, 2021

ನವದೆಹಲಿ, ನ.29- ಚಳಿಗಾಲ ಅಧಿವೇಶನದ ಮೊದಲ ದಿನವಾದ ಸೋಮವಾರ ಸಂಸತ್‍ನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ಭಾರೀ ಗದ್ದಲದ ನಡುವೆಯೇ ವಿವಾದಿತ ಮೂರು ಕೃಷಿ ತಿದ್ದುಪಡಿ ಕಾಯ್ದೆ ಗಳ ರದ್ದತಿಗೆ ಅಂಗೀಕಾರ ಪಡೆಯಲಾಯಿತು. ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ತಿದ್ದುಪಡಿ ಕಾಯ್ದೆಗಳ ರದ್ದತಿ ಕುರಿತು ಪ್ರಸ್ತಾವನೆ ಸಲ್ಲಿಸಿ ದರು. ಈ ವೇಳೆ ಈ ಸಂಬಂಧ ಚರ್ಚೆ ನಡೆಸಬೇಕು ಹಾಗೂ ಸರ್ಕಾರದಿಂದ ವಿವರಣೆ ಬೇಕೆಂದು ಪ್ರತಿಪಕ್ಷಗಳು ತೀವ್ರ ಗದ್ದಲ ಎಬ್ಬಿಸಿದವು….

ಗಡಿಗಳು, ಏರ್‍ಪೆÇೀರ್ಟ್‍ನಲ್ಲಿ ಹೈ ಅಲರ್ಟ್: ಮುಖ್ಯಮಂತ್ರಿ
News

ಗಡಿಗಳು, ಏರ್‍ಪೆÇೀರ್ಟ್‍ನಲ್ಲಿ ಹೈ ಅಲರ್ಟ್: ಮುಖ್ಯಮಂತ್ರಿ

November 29, 2021

ಬೆಂಗಳೂರು,ನ.28-ಕೇರಳದಿಂದ ಬಂದವರಿಂದ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗು ತ್ತಿದ್ದು, ಕ್ಲಸ್ಟರ್ ಆಗಿರುವ ಕಡೆಯಲ್ಲಿ ಕೇರಳದಿಂದ ಪ್ಯಾರಾಮೆಡಿ ಕಲ್ ಸಿಬ್ಬಂದಿಗಳು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಮಡಿಕೇರಿ, ಚಾಮರಾಜನಗರ, ಮೈಸೂರು, ಕೇರಳ ಗಡಿಭಾಗಗಳಲ್ಲಿ ಸಂಪೂರ್ಣ ವಾಗಿ ಎಚ್ಚರಿಕೆ ವಹಿಸಿ, ಕಟ್ಟುನಿಟ್ಟಿನ ಕ್ರಮ ತೆಗೆದು ಕೊಳ್ಳಬೇಕು. ಕಡ್ಡಾಯ ವಾಗಿ ಕೊರೊನಾ ಟೆಸ್ಟ್ ಮಾಡಿ ನೆಗೆಟಿವ್ ಇದ್ದರೆ ಮಾತ್ರ ಬಿಡಬೇಕು. ಲಸಿಕೆಯ ಎರಡೂ ಡೋಸ್ ಪಡೆದಿರಬೇಕು. ಹಗಲು-ರಾತ್ರಿ ನಿಗಾ ಇರಿಸಿ, ಟೆಸ್ಟ್‍ಗಳನ್ನು ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದು…

ದೇಶದಲ್ಲಿ ಒಮಿಕ್ರಾನ್ ಭೀತಿ: ರಾಜ್ಯಗಳಿಗೆ ಕೇಂದ್ರದ ಎಚ್ಚರ
News

ದೇಶದಲ್ಲಿ ಒಮಿಕ್ರಾನ್ ಭೀತಿ: ರಾಜ್ಯಗಳಿಗೆ ಕೇಂದ್ರದ ಎಚ್ಚರ

November 29, 2021

ನವದೆಹಲಿ, ನ.28- ವಿಶ್ವದಾದ್ಯಂತ ಕೋವಿಡ್ ಹೊಸ ತಳಿ ಒಮಿಕ್ರಾನ್ ಹರಡುವ ಭೀತಿ ಸೃಷ್ಟಿಯಾಗಿರುವ ಬೆನ್ನಲ್ಲೇ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಭಾನುವಾರ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಹೆಚ್ಚಿಸುವಂತೆ ಹಾಗೂ ಸೋಂಕು ಹರಡುವಿಕೆ ನಿಯಂತ್ರಣ ಕ್ರಮಗಳನ್ನು ತೀವ್ರಗೊಳಿಸು ವಂತೆ ಸೂಚಿಸಿದ್ದಾರೆ. ಸೋಂಕು ಹರಡು ವಿಕೆ ಕುರಿತು ಸೂಕ್ಷ್ಮ ನಿಗಾ ವಹಿಸು…

ಸೂಕ್ತ ಮುನ್ನೆಚ್ಚರಿಕೆಗೆ ಪ್ರಧಾನಿ ಸೂಚನೆ
News

ಸೂಕ್ತ ಮುನ್ನೆಚ್ಚರಿಕೆಗೆ ಪ್ರಧಾನಿ ಸೂಚನೆ

November 28, 2021

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಓಮಿಕ್ರಾನ್ ಕೊರೊನಾ ರೂಪಾಂತರಿ ತಳಿಯ ಬಗ್ಗೆ ಮಾಹಿತಿ ಪಡೆದಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಜಾಗತಿಕ ಪ್ರಯಾಣ ನಿರ್ಬಂಧ ಸಡಿಲಿಕೆಯನ್ನು ಮರು ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೋವಿಡ್-19 ಪರಿಸ್ಥಿತಿಯ ಪರಿಶೀಲನೆ ವೇಳೆ ಪ್ರಧಾನಿ ಮೋದಿ ಜಾಗತಿಕ ಮಟ್ಟದಲ್ಲಿ ಕೊರೊನಾ ಪ್ರಕರಣಗಳ ಟ್ರೆಂಡ್ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ಅಧಿಕಾರಿಗಳು, ಕೋವಿಡ್-19 ಪ್ರಾರಂಭವಾದಾಗಿ ನಿಂದಲೂ ಜಾಗತಿಕ ಮಟ್ಟದಲ್ಲಿ ಹಲವು ರಾಷ್ಟ್ರಗಳು ಹಲವು ಬಾರಿ ಕೋವಿಡ್-19 ಏರಿಳಿತವನ್ನು ಅನುಭವಿಸಿರುವುದಾಗಿ…

1 51 52 53 54 55 73
Translate »