ಬೆಂಗಳೂರು,ನ.27-ಕೊರೊನಾ ರೂಪಾಂತರ ತಳಿ ಓಮಿ ಕ್ರಾನ್ ವೈರಸ್ ತಡೆ ಹಾಗೂ ಕೋವಿಡ್-19 ನಿಯಂತ್ರಣಕ್ಕಾಗಿ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಗಡಿ ಯಲ್ಲಿ ಕಟ್ಟೆಚ್ಚರ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿ ಗಳಿಗೆ ಸೂಚಿಸಿದ್ದಾರೆ. ಓಮಿಕ್ರಾನ್ ವೈರಸ್ ತಡೆ ಹಾಗೂ ಕೋವಿಡ್-19 ನಿಯಂತ್ರಣ ಸಂಬಂಧ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮೈಸೂರು, ಕೊಡಗು, ಚಾಮರಾಜನಗರ, ಧಾರವಾಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯ ಜಿಲ್ಲಾಧಿಕಾರಿಗಳ ಜೊತೆ ವೀಡಿಯೋ ಸಂವಾದ ಹಾಗೂ ಅಧಿಕಾರಿಗಳ…
ಒಮಿಕ್ರಾನ್ ಭೀತಿ
November 28, 2021ಬೆಂಗಳೂರು, ನ.27(ಕೆಎಂಶಿ)-ಕೋವಿಡ್‍ನ ಹೊಸ ರೂಪಾಂ ತರಿ ಒಮಿಕ್ರಾನ್ ವೈರಾಣುವಿನ ಹರಡುವಿಕೆಗೆ ಸಂಬಂ ಧಿಸಿದಂತೆ ಎಲ್ಲ ಬಗೆಯ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಕೋವಿಡ್ ಲಸಿಕೆಯನ್ನು ಎಲ್ಲರೂ ಪಡೆಯುವುದರೊಂದಿಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ದಕ್ಷಿಣ ಆಫ್ರಿಕಾ, ಬೋಟ್ಸ್ವಾನ, ಇಸ್ರೇಲ್, ಹಾಂಗ್‍ಕಾಂಗ್ ಮೊದಲಾದ ದೇಶಗಳಲ್ಲಿ ಕಳೆದೊಂದು ವಾರದಿಂದ ಕೋವಿಡ್ ಹೊಸ ರೂಪಾಂತರಿ ವೈರಾಣು ಕಾಣಿಸಿದೆ. ಆದರೆ ರಾಜ್ಯದಲ್ಲಿ ಎಲ್ಲೂ ಇದು ಕಂಡು ಬಂದಿಲ್ಲ. ಇದಕ್ಕಾಗಿ ನಿನ್ನೆ…
ಕನಕದಾಸರು ವಿಶ್ವ ಮಾನವ ಕಲ್ಪನೆ ಹೊಂದಿದ್ದರು: ಸಿಎಂ ಗುಣಗಾನ
November 23, 2021ಬೆಂಗಳೂರು, ನ. 22(ಕೆಎಂಶಿ)- ಕನಕದಾಸರ ತ್ರಿಪದಿಗಳು, ಸಾಹಿತ್ಯ, ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡುವ ದಿನವಿದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಸೋಮವಾರ ಶಾಸಕರ ಭವನದ ಆವರಣದ ಬಳಿ ಇರುವ ಸಂತ ಕವಿ ಶ್ರೀ ಕನಕದಾಸರ ಪುತ್ಥಳಿಯ ಬಳಿ ಕನಕದಾಸ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ನಂತರ ಪ್ರತಿಕ್ರಿಯೆ ನೀಡಿದರು. ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ಕನಕದಾಸರು. ಕನ್ನಡ ನಾಡು ಕಂಡ ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ…
ಅಮೆರಿಕದ ಅಧ್ಯಕ್ಷೆಯಾಗಿದ್ದ ಕಮಲಾ ಹ್ಯಾರಿಸ್; ಅದೂ 1 ಗಂಟೆ 25 ನಿಮಿಷ!
November 21, 2021ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆಯಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್, ಅಮೆರಿಕದ ಅಧ್ಯಕ್ಷೆಯಾಗಿ ಅಧಿಕಾರ ಚಲಾಯಿಸಿದ್ದಾರೆ. 1 ಗಂಟೆ 25 ನಿಮಿಷ ಅಧ್ಯಕ್ಷೀಯ ಅಧಿಕಾರ ಚಲಾಯಿಸುವ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಅಧಿಕಾರ ಹಸ್ತಾಂತರಿಸಿದ್ದಾರೆ. ಅಧಿಕಾರದ ತಾತ್ಕಾಲಿಕ ಹಸ್ತಾಂತರ ವನ್ನು ಘೋಷಿಸುವ ಅಧಿಕೃತ ಪತ್ರಗಳನ್ನು 10:10ಕ್ಕೆ ಕಳುಹಿಸ ಲಾಗಿದೆ. ಬಳಿಕ 11.35ಕ್ಕೆ ಅವರು ಕೆಲಸಕ್ಕೆ ಮರಳಿದರು. ಈ ವೇಳೆ ಅಧ್ಯಕ್ಷ ಜೋ ಬೈಡನ್ ಅವರಿಗೆ…
ಸಿದ್ದರಾಮಯ್ಯಗೆ ಮತ್ತೆ ಕಾಗೆ ಕಾಟ
November 19, 2021ಬೆಂಗಳೂರು, ನ.18- ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವ ರಿಗೆ ಮತ್ತೆ ಕಾಗೆ ಕಾಟ ಆರಂಭವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಅವರು ಪ್ರಯಾಣಿಸುವ ಕಾರಿನ ಮೇಲೆ ಕಾಗೆ ಕೂತಿತ್ತು. ಆದರೆ ಈಗ ವಿಧಾನಸೌಧದ ಮೂರನೇ ಮಹಡಿ ಯಲ್ಲಿರುವ ವಿಪಕ್ಷ ನಾಯಕರ ಕಚೇರಿಯ ಸಿದ್ದರಾಮಯ್ಯ ನಾಮಫಲಕದ ಮೇಲೆ ಕಾಗೆಯೊಂದು ಕೂತಿದೆ. ಇದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ 2018, ಜೂನ್ 2 ರಂದು ಮುಖ್ಯಮಂತ್ರಿಗಳ ಕಚೇರಿ ಕೃಷ್ಣಾದಲ್ಲಿ, ಇದೇ ರೀತಿ…
ಮನುಷ್ಯನ ಬುದ್ಧಿಶಕ್ತಿ ಸಮರ್ಥ ಬಳಕೆಗೆ ಬೆಂಗಳೂರಲ್ಲಿ ಪೂರಕ ವಾತಾವರಣವಿದೆ
November 18, 2021ಬೆಂಗಳೂರು, ನ.17(ಕೆಎಂಶಿ) -ಮನುಷ್ಯನ ಮೇಧಾ ಶಕ್ತಿಯ ಸಮರ್ಥ ಬಳಕೆಗೆ ಪೂರಕ ವಾತಾವರಣ ಬೆಂಗ ಳೂರಿನಲ್ಲಿದೆ, ಕರ್ನಾಟಕ ರಾಜ್ಯದಲ್ಲಿದೆ. ಆದ್ದರಿಂದ ನಾವೀ ನ್ಯತೆಯನ್ನು ಅನ್ವೇಷಿಸಿ, ಸಾಧನೆಯ ಉತ್ತುಂಗಕ್ಕೇರುವಂತೆ ತಂತ್ರಜ್ಞಾನ ಕ್ಷೇತ್ರದ ಭಾಗೀದಾರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಕ್ತವಾಗಿ ಕರೆ ನೀಡಿದರು. ಬುಧವಾರ ಬೆಂಗಳೂರು ಟೆಕ್ ಸಮ್ಮಿಟ್ ಕಾರ್ಯ ಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನದಲ್ಲಿ ಕರ್ನಾಟಕ ಮುಂಚೂಣಿ ಯಲ್ಲಿರುವ ರಾಜ್ಯ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ನಾಯಕರಿದ್ದಾರೆ. ಕಿರಣ್ ಮಜುಂದಾರ್ ಷಾ ಸೇರಿ ದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧಕರು, ಪ್ರತಿಭಾವಂತರಿದ್ದಾರೆ. ಅಂತರರಾಷ್ಟ್ರೀಯ ಖ್ಯಾತಿಯುಳ್ಳ 300ಕ್ಕೂ…
ಸಿದ್ದರಾಮಯ್ಯ – ಡಿ.ಕೆ.ಶಿವಕುಮಾರ್ ಬೆಂಬಲಿಗರ ರಗಳೆ
November 18, 2021ಬೆಂಗಳೂರು,ನ.17(ಕೆಎಂಶಿ)- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಬೇಗುದಿ ಸ್ಫೋಟಗೊಂಡಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯ, ಪಕ್ಷ ಸಂಘಟನೆಯ ಸಭೆಗಳಲ್ಲಿ ನಾಯಕರ ಬೆಂಬಲಿಗರು ಪರ-ವಿರೋಧ ಘೋಷಣೆ ಮೂಲಕ ರಾದ್ಧಾಂತ ಮಾಡಲಾರಂಭಿಸಿದ್ದಾರೆ. ಎಲ್ಲದಕ್ಕೂ ಮಿಗಿಲಾಗಿ ನಿನ್ನೆ ನಡೆದ ರಾಜ್ಯ ಘಟಕದ ಅಲ್ಪಸಂಖ್ಯಾತರ ಪದಗ್ರಹಣ ಸಮಾರಂಭದಲ್ಲಿ ಉಭಯ ನಾಯಕರ ಬೇಗುದಿ ಮತ್ತೆ ಬಯಲಾಗಿದೆ. ಇತ್ತೀಚಿನ ಸಭೆಗಳಲ್ಲಿ ಸಿದ್ದರಾಮಯ್ಯ ಅವರಿಗೆ ಇರಿಸುಮುರಿ ಸಾಗುವಂತೆ ಶಿವಕುಮಾರ್ ಬೆಂಬಲಿಗರು…
ಆಧುನಿಕ ತಂತ್ರಜ್ಞಾನ, ಸಂಶೋಧನೆ ಕೃಷಿ ಸ್ಥಿತಿ ಸುಧಾರಿಸಬೇಕು
November 18, 2021ಬೆಂಗಳೂರು, ನ.17(ಕೆಎಂಶಿ)-ಆಧು ನಿಕ ತಂತ್ರಜ್ಞಾನ, ನಾವೀನ್ಯತೆ, ಸಂಶೋಧನೆ ಮತ್ತು ಜ್ಞಾನದ ಬೆಳವಣಿಗೆಗಳು ದೇಶದ ಕೃಷಿ ಸ್ಥಿತಿಯ ಸುಧಾರಣೆಗೂ ಹೆಚ್ಚು ಒತ್ತು ಕೊಟ್ಟು ಮುನ್ನಡೆಯಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಇಂದಿಲ್ಲಿ ತಿಳಿಸಿದ್ದಾರೆ. ‘ಭವಿಷ್ಯವನ್ನು ಮುನ್ನಡೆಸು’ ಘೋಷ ವಾಕ್ಯದ 24ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ‘ಐ.ಟಿ. ಮತ್ತು ಬಿ.ಟಿ.’ ಯೊಂದಿಗೆ ಎಲ್ಲರೂ ಕರ್ತವ್ಯಪ್ರಜ್ಞೆಯನ್ನು ಮೈಗೂಡಿಸಿ ಕೊಂಡಾಗ ದೇಶವು ಶಕ್ತಿಶಾಲಿಯಾಗಿ ಹೊರಹೊಮ್ಮು ತ್ತದೆ. ಕೃಷಿಯು ದೇಶದ ಪ್ರಧಾನ ಕಸುಬಾಗಿರುವುದ ರಿಂದ ತಾಂತ್ರಿಕತೆಯು ಇದಕ್ಕೆ…
ಆಸ್ಟ್ರೇಲಿಯಾ ಮುಡಿಗೆ ಟಿ20 ವಿಶ್ವಕಪ್ ಕಿರೀಟ
November 15, 2021ದುಬೈ, ನ.14- ಐಸಿಸಿ ಟಿ20 ವಿಶ್ವಕಪ್‍ನ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಗೆಲುವು ದಾಖಲಿಸುವ ಮೂಲಕ ಆಸ್ಟ್ರೇಲಿಯಾ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಳೆದ 29 ದಿನಗಳಿಂದ ಯುನೈಟೆಡ್ ಅರಬ್ ಎಮಿ ರೇಟ್‍ನಲ್ಲಿ ನಡೆಯುತ್ತಿದ್ದ 2021ನೇ ಸಾಲಿನ 6ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಗೆ ಭಾನುವಾರ ತೆರೆಬಿದ್ದಿದ್ದು, 5 ಬಾರಿಯ ಏಕದಿನ ವಿಶ್ವಕಪ್ ಚಾಂಪಿ ಯನ್ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಕಿರೀಟಕ್ಕೆ ಮುತ್ತಿಟ್ಟಿದೆ. ಇದರೊಂದಿಗೆ ನ್ಯೂಜಿ ಲೆಂಡ್ ವಿಶ್ವಕಪ್ ಕನಸು…
ಯಾರನ್ನೂ ಬಿಡಲ್ಲ, ಬಲಿ ಹಾಕುತ್ತೇವೆ
November 15, 2021ಬೆಂಗಳೂರು,ನ.14-ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಇದ್ದರೂ ಸರಿ, ಅವರನ್ನು ಬಿಡುವುದಿಲ್ಲ, ಬಲಿ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಅವರು ಮಾಡಿದ್ದ ಗಂಭೀರ ಆರೋಪಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಬಿಟ್ ಕಾಯಿನ್ ಕೇಸು 2016ರಿಂದಲೂ ಇದೆ. ಆಗ ರಾಜ್ಯದಲ್ಲಿದ್ದುದ್ದು ಕಾಂಗ್ರೆಸ್ ಸರ್ಕಾರ, ಅವರೇಕೆ ಆಗ ಕ್ರಮ ಕೈಗೊಳ್ಳ ಲಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್‍ನವರು ಪುರಾವೆ ಗಳನ್ನು ಇಟ್ಟುಕೊಂಡು ಮಾತ ನಾಡಬೇಕು. 2018ರಲ್ಲಿ ಶ್ರೀಕಿ ಯನ್ನು ಬಂಧಿಸಿ ಏಕೆ…










