ಸಿದ್ದರಾಮಯ್ಯ – ಡಿ.ಕೆ.ಶಿವಕುಮಾರ್ ಬೆಂಬಲಿಗರ ರಗಳೆ
News

ಸಿದ್ದರಾಮಯ್ಯ – ಡಿ.ಕೆ.ಶಿವಕುಮಾರ್ ಬೆಂಬಲಿಗರ ರಗಳೆ

November 18, 2021

ಬೆಂಗಳೂರು,ನ.17(ಕೆಎಂಶಿ)- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಬೇಗುದಿ ಸ್ಫೋಟಗೊಂಡಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯ, ಪಕ್ಷ ಸಂಘಟನೆಯ ಸಭೆಗಳಲ್ಲಿ ನಾಯಕರ ಬೆಂಬಲಿಗರು ಪರ-ವಿರೋಧ ಘೋಷಣೆ ಮೂಲಕ ರಾದ್ಧಾಂತ ಮಾಡಲಾರಂಭಿಸಿದ್ದಾರೆ.
ಎಲ್ಲದಕ್ಕೂ ಮಿಗಿಲಾಗಿ ನಿನ್ನೆ ನಡೆದ ರಾಜ್ಯ ಘಟಕದ ಅಲ್ಪಸಂಖ್ಯಾತರ ಪದಗ್ರಹಣ ಸಮಾರಂಭದಲ್ಲಿ ಉಭಯ ನಾಯಕರ ಬೇಗುದಿ ಮತ್ತೆ ಬಯಲಾಗಿದೆ. ಇತ್ತೀಚಿನ ಸಭೆಗಳಲ್ಲಿ ಸಿದ್ದರಾಮಯ್ಯ ಅವರಿಗೆ ಇರಿಸುಮುರಿ ಸಾಗುವಂತೆ ಶಿವಕುಮಾರ್ ಬೆಂಬಲಿಗರು ತಮ್ಮ ನಾಯಕರ ಪರವಾಗಿ ಜೈಕಾರ ಹಾಕುತ್ತಿದ್ದಾರೆ.

ನಿನ್ನೆ ನಡೆದ ಅಲ್ಪ ಸಂಖ್ಯಾ ತರ ಸಭೆಯಲ್ಲೂ ಜಮೀರ್ ಅಹಮದ್ ಖಾನ್ ಹಾಗೂ ಶಾಂತಿನಗರ ಶಾಸಕ ಹ್ಯಾರಿಸ್ ಬೆಂಬಲಿಗರು ಸಿದ್ದರಾಮಯ್ಯ ಭಾಷಣ ಮಾಡುವ ಸಂದರ್ಭದಲ್ಲಿ ಶಿವಕುಮಾರ್‍ಗೆ ಜೈಕಾರ ಹಾಕಿ, ಭಾಷಣಕ್ಕೆ ಅಡ್ಡಿಯುಂಟು ಮಾಡಿದರು.

ಅಷ್ಟೇ ಅಲ್ಲ ಸಿದ್ದರಾಮಯ್ಯ ಅವರು ಭಾಷಣವನ್ನು ಪೂರ್ಣಗೊಳಿಸಲು ಅವಕಾಶ ನೀಡದೇ ಮಧ್ಯದಲ್ಲೇ ಸಭೆಯಿಂದ ನಿರ್ಗಮಿಸುವಂತಹ ಪರಿಸ್ಥಿತಿ ನಿರ್ಮಾಣ ವಾಯಿತು. ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿ ಗಳ ಆಯ್ಕೆ ವಿಚಾರದಲ್ಲೂ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಪ್ರತ್ಯೇಕವಾಗಿ ಸಭೆಗಳನ್ನು ನಡೆಸಿ, ತಮ್ಮ ಬೆಂಬಲಿಗರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ನೆಪ ಮಾತ್ರಕ್ಕೆ ಕೆಪಿಸಿಸಿ ಕಚೇರಿಯಲ್ಲಿ ನಾಯ ಕರ ಸಭೆ ನಡೆಸುವ ಈ ಧುರೀ ಣರು, ನಂತರ ತಮ್ಮ ಕಡೆ ಯುವರು ಯಾರು, ಅವರನ್ನು ಎಲ್ಲಿ ನಿಲ್ಲಿಸುವುದು ಎಂಬು ದರ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಮತ್ತು ಕಾರ್ಯ ಕರ್ತರು ಶಿವಕುಮಾರ್ ಅವರನ್ನು ಕ್ಯಾರೆ ಎನ್ನುತ್ತಿಲ್ಲ. ಅವರಿಗೆ ಸಿದ್ದರಾಮಯ್ಯನವರೇ ನಾಯಕರು ಮತ್ತು ಅವರು ಹೇಳಿದ್ದೇ ವೇದ ವಾಕ್ಯ. ಆ ಭಾಗದ ಜಿಲ್ಲೆಯ ಪ್ರಮುಖ ನಾಯಕರು ಹಾಗೂ ಶಾಸಕರು ಒಟ್ಟಾಗಿ ಬಂದು ಸಿದ್ದರಾಮಯ್ಯ ಅವರಿಗೆ ತಮ್ಮ ಕಡೆಯಿಂದ ಯಾರು ನಿಲ್ಲಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ, ಮಾಹಿತಿ ನೀಡಿ ಹೋಗುತ್ತಿದ್ದಾರೆ.

ಇದು ಶಿವಕುಮಾರ್ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆ ಕೋಪವನ್ನೇ ನಿನ್ನೆ ನಡೆದ ಅಲ್ಪ ಸಂಖ್ಯಾತರ ಸಭೆಯಲ್ಲಿ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ತೀರಿಸಿಕೊಂಡಿದ್ದಾರೆ ಎಂದು ಪಕ್ಷದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಶಿವಕುಮಾರ್ ಪ್ರತಿ ವೇದಿಕೆಯಲ್ಲೂ ನಮ್ಮ ವ್ಯಕ್ತಿ ಪೂಜೆ ಮಾಡಬೇಡಿ, ಪಕ್ಷ ಪೂಜೆ ಮಾಡಿ ಎಂದು ಪದೇ ಪದೆ ಹೇಳುವ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಡುತ್ತಿದ್ದಾರೆ. ಪರಿಷತ್ ಚುನಾವಣಾ ಸಂದರ್ಭದಲ್ಲೇ ಉಭಯ ನಾಯಕರ ಬೇಗುದಿ ಬಹಿರಂಗ ಗೊಂಡು, ಕಾರ್ಯಕರ್ತರ ಬಾಯಿಗೆ ಆಹಾರವಾಗಿದೆ.

Translate »