ಡಿ.10ರಿಂದ `ತಾಯಿ’ ಹೆಸರಲ್ಲಿ ರಾಷ್ಟ್ರೀಯ ನಾಟಕೋತ್ಸವ
ಮೈಸೂರು

ಡಿ.10ರಿಂದ `ತಾಯಿ’ ಹೆಸರಲ್ಲಿ ರಾಷ್ಟ್ರೀಯ ನಾಟಕೋತ್ಸವ

November 18, 2021

ಮೈಸೂರು, ನ.17(ಆರ್‍ಕೆಬಿ)- ಮೈಸೂರು ರಂಗಾಯಣದ ಮಹತ್ವದ `ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ ಈ ಬಾರಿ `ತಾಯಿ’ (ಒoಣheಡಿhooಜ) ಶೀರ್ಷಿಕೆಯಡಿ ಡಿ.10ರಿಂದ 19ರವರೆಗೆ ಏರ್ಪಡಿಸಲಾಗಿದೆ. ನೆಲ, ಜಲ, ಪ್ರಕೃತಿ, ಭಾಷೆ, ರಾಜ್ಯ ರಾಷ್ಟ್ರಗಳ ಬಗ್ಗೆ ಅಭಿಮಾನ, ಗೌರವ, ಪ್ರೀತಿ ಮೂಡಿಸುವ ವಿಚಾರದಲ್ಲಿ ಚಿಂತನ ಮಂಥನ ನಡೆಸುವ ಉದ್ದೇಶ ಈ ನಾಟಕೋತ್ಸವ ಹೊಂದಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು.

ಮೈಸೂರು ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಬಗ್ಗೆ ಅವರು ಮಾಹಿತಿ ನೀಡಿದರು. `ಜಮೀನು-ನೆಲ-ಜಂಗಲ್-ಜಾನುವಾರು-ಜನ’ ಈ ಪಂಚಸೂತ್ರದಲ್ಲಿ ತಾಯಿ ಮತ್ತು ತಾಯ್ತನವನ್ನು ನೋಡುವ ಪ್ರಯತ್ನ ಮಾಡಲಾಗಿದೆ. ತಾಯಿ ಬಗ್ಗೆ ವಿಸ್ತøತವಾದ ಚರ್ಚೆಯನ್ನು ಒಳಗೊಂಡ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಸಹ ಏರ್ಪಡಿಸಲಾಗಿದೆ ಎಂದು ಹೇಳಿದರು.

ನಾಟಕೋತ್ಸವದಲ್ಲಿ ವಿವಿಧ ರಾಜ್ಯ, ವಿವಿಧ ಭಾಷೆಗಳ ಶ್ರೇಷ್ಠಮಟ್ಟದ ನಾಟಕ ಗಳು ಪ್ರದರ್ಶನಗೊಳ್ಳುವುದರ ಜೊತೆಗೆ, ಜಾನಪದ ಕಲಾ ಪ್ರದರ್ಶನ, ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವ, ವಿಚಾರ ಸಂಕಿರಣ, ಪುಸ್ತಕ ಪ್ರದರ್ಶನ, ಕರಕುಶಲ ವಸ್ತುಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳು ನಡೆಯಲಿವೆ. ರಂಗಾಯಣದ ರಂಗ ಮಂದಿರಗಳಾದ ಭೂಮಿಗೀತ, ಕಲಾ ಮಂದಿರ, ವನರಂಗ, ಬಿ.ವಿ.ಕಾರಂತ ರಂಗಚಾವಡಿ, ಸಂಪತ್ ರಂಗಮಂದಿರ ಮತ್ತು ಕಿಂದರಿಜೋಗಿ ಜನಪದರಂಗದಲ್ಲಿ ಆಯೋಜಿಸಲಾಗುತ್ತಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ತಾಯಿ ಇದ್ದರೂ ತಾಯ್ತನದ ಕೊರತೆಯಿಂದಾಗಿ ವೃದ್ಧಾ ಶ್ರಮಗಳು ಹೆಚ್ಚುತ್ತಿವೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ತಾಯ್ತನವನ್ನು ನೆನೆಯುತ್ತಾ, ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಲು ಪ್ರೇರಣೆ ನೀಡುವ ಉದ್ದೇಶ ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಘೋಷವಾಕ್ಯ `ತಾಯಿ’ ಎಂದರು. ಪ್ರತಿ ವರ್ಷ ನಾಟಕೋತ್ಸವಕ್ಕೆ 22 ನಾಟಕಗಳಿಗೆ ಸೀಮಿತವಾಗಿರುತ್ತಿತ್ತು. ಆದರೆ ಈ ಬಾರಿ ಯಕ್ಷಗಾನ, ಬಯ ಲಾಟ, ದೊಡ್ಡಾಟ, ಬೊಂಬೆಯಾಟ ಸೇರಿ 37 ನಾಟಕಗಳಿಗೆ ಏರಿದೆ. ಇಡೀ ಭಾರತದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಡೆಯುತ್ತಿರು ವುದು ಇದೇ ಮೊದಲು ಎಂದು ತಿಳಿಸಿದರು.

ಈ ಬಾರಿ ಸ್ಥಳೀಯರಿಗೂ ಎರಡು ನಾಟಕ ನೀಡಲಾಗಿದೆ. ರಂಗಾಯಣದ ನಾಟಕ ಗಳಿಗೆ ರೂ.50, ಉಳಿದ ನಾಟಕಗಳಿಗೆ ರೂ.100 ನಿಗದಪಡಿಸಲಾಗಿದೆ. ಎಲ್ಲಾ ನಾಟಕಗಳನ್ನು ನೋಡುವವರಿಗಾಗಿ ಸೀಜನ್ ಟಿಕೆಟ್ ಮಾಡುವ ಚಿಂತನೆಯೂ ಇದೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದರು. ಒಟ್ಟು 75 ಲಕ್ಷ ರೂ. ಅಂದಾ ಜಿನ ಈ ಬಾರಿಯ ನಾಟಕೋತ್ಸವಕ್ಕೆ ರಾಜ್ಯ ಸರ್ಕಾರ ಈಗಾಗಲೇ 50 ಲಕ್ಷ ರೂ.ಗಳನ್ನು ನೀಡಿದೆ. ಉಳಿದ ಹಣವನ್ನು ರಂಗಾಯಣ ಭರಿಸಲಿದೆ ಎಂದು ಹೇಳಿದರು.

ರಾಷ್ಟ್ರದ ವಿವಿಧ ರಾಜ್ಯಗಳ-ಭಾಷೆಗಳ ನಾಟಕಗಳು: `ಬುಡ್ಡೇನೇ ಕಹ’ (ಹಿಂದಿ), `ಸಹೀದ್ ಉದಮ್ ಸಿಂಗ್ ಆಜಾದ್’ (ಪಂಜಾಬಿ), `ಕಾಜುಮರಮ್’ (ತಮಿಳು), `ಓಲ್ಡ್ ಮ್ಯಾನ್ & ಸೀ’ (ಮಲಯಾಳಂ), `ರುಢಾಲಿ’ (ರಾಜಸ್ಥಾನಿ), `ಲಹೇರೋಂಕ ರಾಜಹಂಸ’ (ಹಿಂದಿ), `ಸೂಜ್ರ್ಯಾಸ್ತ್ರು ಸೂರ್ಜೋದಯ್’ (ಒರಿಯಾ), `ಅಶಾಂತಿ ಪರ್ವ’ (ಮರಾಠಿ), `ಮನಲೋ ಮನಮಾಟ’ (ತೆಲುಗು), `ಆಟಿ ತಿಂಗಳ್ದ ಒಂಜಿ ದಿನ’ (ತುಳು) ನಾಟಕಗಳು ಪ್ರದರ್ಶನಗೊಳ್ಳಲಿವೆ.

ಕನ್ನಡ ಮತ್ತು ಇತರೆ ಭಾಷೆಗಳ ನಾಟಕ ಗಳು: `ವೆಲ್ಕಂ ಜಾನಕಿ ಕಂ ಜಿಂಗಾ ನಿಯಾ’, ನಿರ್ದೇಶನ- ಸುರೇಶ್ ಅನಗಳ್ಳಿ (ಕನ್ನಡ), `ಪ್ರಾಜೆಕ್ಟ್
ನಗ್ನ’, ನಿರ್ದೇಶನ- ಅರ್ಚನಾ ಶ್ಯಾಮ್ (ಕನ್ನಡ), `ನೀನೇ ಬಸಲಿಂಗಿ’ (ಕನ್ನಡ), `ಕಾಮರೂಪಿಗಲ್’, ನಿರ್ದೇಶನ- ಗಣೇಶ ಮಂದಾರ್ತಿ (ಕನ್ನಡ), `ಮತ್ತೆ ಮುಖ್ಯಮಂತ್ರಿ’, ಬಿ.ವಿ.ರಾಜಾರಾಂ (ಕನ್ನಡ), `ಜಾಳಪೆÇೀಳ’, ನಿರ್ದೇಶನ- ಝಾಕೀರ ನದಾಫ್ (ಕನ್ನಡ), `ಉಚ್ಛಿಷ್ಠ’, ಎಸ್.ಎನ್.ಸೇತೂರಾಂ (ಕನ್ನಡ), `ಏಸೂರ ಕೊಟ್ಟರು ಈಸೂರ ಬಿಡೆವು’, ಸಾಸ್ವೇಹಳ್ಳಿ ಸತೀಶ್ (ಕನ್ನಡ), `ಹಕ್ಕಿಕತೆ’, ನಿರ್ದೇಶನ- ಗಣೇಶ್ ಮಂದಾರ್ತಿ, ಶ್ರವಣ್ ಹೆಗ್ಗೋಡು (ಕನ್ನಡ), `ಶಕ್ತಿ 1.0’, ಆಸಿಫ್ ಕ್ಷತ್ರಿಯ (ಕನ್ನಡ), `ಈಡಿಪಸ್’, ಶಶಿಧರ್ ಭಾರಿಘಾಟ್ (ಕನ್ನಡ), `ಲಾಕ್ ಡೌನ್’, ಅಭಿಷೇಕ್ ಅಯ್ಯಂಗಾರ್ (ಕನ್ನಡ), `ಶ್ರೀಕೃಷ್ಣ ರಾಯಭಾರ’, ನಿರ್ದೇಶನ- ಸಿ.ಸಿದ್ದಲಿಂಗೇಗೌಡ (ಕನ್ನಡ), `ಚಾವುಂಡರಾಯ’, ನಿರ್ದೇಶನ- ಶ್ವೇತಾರಾಣಿ (ಕನ್ನಡ), `ಸಾಮ್ರಾಟ್ ಅಶೋಕ್’ ನಿರ್ದೇಶನ- ವೀಣಾಶರ್ಮ (ಕನ್ನಡ), `ಸಂಕ್ರಾಂತಿ’, ದಿನೇಶ್ ಚಮ್ಮಾಳಿಗೆ (ಕನ್ನಡ), `ಏಕ್ಲೋ ಅನೇಕ್ಲೋ – ಕರ್ಮದಿನ್’, ನಿದೇರ್ಶನ- ಕಾಸರಗೋಡು ಚಿನ್ನ (ಕೊಂಕಣಿ), `ದಿ ಸ್ಕ್ವೈರ್ ರೂಟ್ ಆಫ್ ಎ ಸಾನೆಟ್’, ಪ್ರಕಾಶ್ ಬೆಳವಾಡಿ (ಇಂಗ್ಲಿಷ್) ನಾಟಕಗಳು ಪ್ರದರ್ಶನಗೊಳ್ಳಲಿವೆ.

ಇತರೆ ರಂಗಪ್ರಕಾರದ ನಾಟಕಗಳು `ರಾಮ ರಾವಣ ಯುದ್ಧ’ – ಬಯಲಾಟ (ಕಲಬುರ್ಗಿ ರಂಗಾಯಣ ತಂಡ), `ಚಕ್ರವ್ಯೂಹ’ – ಯಕ್ಷಗಾನ (ಬೆಂಗಳೂರಿ ಸಿರಿಕಲಾ ಮೇಳ), `ವೀರ ವಿರಾಗಿ ಬಾಹುಬಲಿ’ – ದೊಡ್ಡಾಟ, `ಗೊಂಬೆಯಾಟ’ (ಕೊಗ್ಗ ಕಾಮತ್, ಮಂಗಳೂರು) ಪ್ರದರ್ಶನವಾಗಲಿದೆ.

ಮೈಸೂರು ರಂಗಾಯಣದ ನಾಟಕಗಳು: ಪರ್ವ (ನಿರ್ದೇಶನ- ಪ್ರಕಾಶ್ ಬೆಳವಾಡಿ), ಮೂಕನ ಮಕ್ಕಳು (ನಿರ್ದೇಶನ- ಬಿ.ವಿ.ಕಾರಂತ), ಸೂತ್ರಧಾರ (ನಿರ್ದೇಶನ- ಮಹೇಶ್ ಕಲ್ಲತ್ತಿ), ಚಂದ್ರಗಿರಿಯ ತೀರದಲ್ಲಿ (ನಿರ್ದೇಶನ- ಎಸ್.ರಾಮು, ಚಿತ್ರಪಟ (ನಿರ್ದೇಶನ- ಜೀವನ್‍ಕುಮಾರ್ ಬಿ.ಹೆಗ್ಗೋಡು) ನಾಟಕಗಳು ಪ್ರದರ್ಶನವಾಗಲಿದೆ.

ಕರ್ನಾಟಕದ ವಿವಿಧ ಜಾನಪದ ಕಲೆಗಳ ಪ್ರದರ್ಶನ: ಜೋಗತಿ ನೃತ್ಯ, ಮಲ್ಲಕಂಬ, ಸಿದ್ಧಿ ಕುಣಿತ, ಚಿಟ್‍ಮೇಳ, ಗೊಂಬೆ ಗಾರುಡಿಗ, ಕಂಸಾಳೆ, ಗೊರವರ ಕುಣಿತ, ಡೊಳ್ಳು ಕುಣಿತ, ಕಂಗೀಲು ನೃತ್ಯ, ಮಂಗಳ ವಾದ್ಯ, ಪೂಜಾ ಕುಣಿತ, ವೀರಗಾಸೆ, ತಮಟೆ, ಉಮತ್ತಾಟ್, ಗೊಂಬೆಯಾಟ, ಚಂಡೆ ಮೇಳ, ಜಡೆ ಕೋಲಾಟ, ಸುಗ್ಗಿ ಕುಣಿತ, ಲಾವಣಿ, ತಾಶೆರಾಮ್ ಡೋಲ್. ನಾಗಪುರ ಮತ್ತು ತಂಜಾವೂರ್ ಸಾಂಸ್ಕøಥತಿಕ ಕೇಂದ್ರಗಳ ಜಾನಪದ ಕಲೆಗಳಾದ ಛತ್ತೀಸ್‍ಘಡದ ಬಾಸ್ಟರ್, ಮಧ್ಯಪ್ರದೇಶದ ಬಾಗೋರಿಯಾ, ಕೇರಳದ ಕಳರಿಪಯಟ್, ಅಸ್ಸಾಂನ ಬಿಹು, ಮಹಾರಾಷ್ಟ್ರ ಢಾಂಗಾಲಿಯಾ, ಮಣಿಪುರದ ಲಾಯ್ ಹರೋಬ ಪ್ರದರ್ಶನಗೊಳ್ಳಲಿದೆ.

ಕಾರಂತ ರಂಗಚಾವಡಿಯಲ್ಲಿ `ತಾಯಿ’ ವಿಚಾರ ಸಂಕಿರಣ, `ತಾಯಿ’ ಕಾವ್ಯವಾಚನ, `ತಾಯ್ತನ ಮಾತುಕತೆ’ ಪ್ರೊ.ಕೃಷ್ಣೇಗೌಡ. ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಪ್ರಧಾನ ಕಾರ್ಯದರ್ಶಿ ಅಂಜು ಸಿಂಗ್, ಹವ್ಯಾಸಿ ಕಲಾವಿದರ ವೇದಿಕೆ ಅಧ್ಯಕ್ಷ ಸುರೇಶ್‍ಬಾಬು ಉಪಸ್ಥಿತರಿದ್ದರು.

Translate »