ಮೈಸೂರಿನ ಅಮೃತ ಕೃಪ ಆಸ್ಪತ್ರೆಯಲ್ಲಿ 50 ಹಾಸಿಗೆಗಳ  ನೂತನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
ಮೈಸೂರು

ಮೈಸೂರಿನ ಅಮೃತ ಕೃಪ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ನೂತನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

November 18, 2021

ಮೈಸೂರು,ನ.17-ಎಲ್ಲರಿಗೂ ಆರೋಗ್ಯ ಆರೈಕೆ ನೀಡುವ ಉದ್ದೇಶದಿಂದ ಮಾತಾ ಅಮೃತಾನಂದಮಯಿ ಮಠವು ಮೈಸೂರಿನಲ್ಲಿ ರೂಪಾನಗರದಲ್ಲಿರುವ ತನ್ನ ಅಮೃತ ಕೃಪ ಆಸ್ಪತ್ರೆ ಆವರಣದಲ್ಲಿ 50 ಹಾಸಿಗೆಗಳ ಸಮಗ್ರ ಮತ್ತು ಅತ್ಯುತ್ಕøಷ್ಟವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಿದೆ ಎಂದು ಅಮೃತ ಕೃಪ ಆಸ್ಪತ್ರೆಯ ಮುಖ್ಯಸ್ಥ ಡಾ.ವಿಕಾಸ್ ಮೋದಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಮಾಣ ವಾಗುತ್ತಿರುವ ಈ ಹೊಸ ಆಸ್ಪತ್ರೆಯಲ್ಲಿ ವಾರ್ಷಿಕ 36, 000ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದರಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆ ಇದ್ದು, 66,000 ಚದರಡಿ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಅತ್ಯಾಧುನಿಕ ವ್ಯವಸ್ಥೆಗಳು, ರ್ಯಾಂಪ್ ಮತ್ತು ಲಿಫ್ಟ್ ಸೌಲಭ್ಯಗಳಿವೆ. ಜನರಲ್ ಸರ್ಜರಿ, ಜನರಲ್ ಮೆಡಿಸಿನ್, ಇಎನ್‍ಟಿ, ನೇತ್ರ ಚಿಕಿತ್ಸೆ, ಆರ್ಥೋಪಿಡಿಕ್ಸ್ ಮತ್ತು ಕಮ್ಯುನಿಟಿ ಮೆಡಿಸಿನ್, ಪ್ರಸೂತಿ ಮತ್ತು ಸ್ತ್ರೀರೋಗ ಸೇರಿದಂತೆ ಎಲ್ಲಾ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಪ್ಲಾಸ್ಟಿಕ್ ಸರ್ಜರಿ, ಯೊರೋಲಜಿ, ನೆಫ್ರೋಲಜಿ, ನ್ಯೂರೋಸರ್ಜರಿ, ಆಂಕೋಸರ್ಜರಿ ಮತ್ತು ಪ್ರಿವೆಂಟಿವ್ ಕಾರ್ಡಿಯೋಲಜಿ ಸೇರಿದಂತೆ ಇನ್ನಿತರೆ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಗಳು ಇರಲಿವೆ ಎಂದರು.

ಈ ಹೊಸ ಆಸ್ಪತ್ರೆಯಲ್ಲಿ ಆರು ಹೊಸ ಒಪಿಡಿ ಕೊಠಡಿ ಗಳು, ಇವುಗಳಲ್ಲಿ ಪ್ರತ್ಯೇಕ ತುರ್ತು ಚಿಕಿತ್ಸಾ ವಿಭಾಗ, ಪ್ರತ್ಯೇಕ ಐಸಿಯು ಮತ್ತು ಸೋಂಕು ಪೀಡಿತ ರೋಗಗಳು, ಡಯಾ ಲಿಸಿಸ್ ಸೇರಿದಂತೆ ಇನ್ನಿತರೆ ಅತ್ಯಾಧುನಿಕ ಸೇವೆಗಳನ್ನು ಕಲ್ಪಿಸಲಾಗುತ್ತದೆ. ಅಲ್ಲದೇ, ರಿಟ್ರೋವೈರಲ್-ಪಾಸಿಟಿವ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಶಸ್ತ್ರಚಿಕಿತ್ಸಾ ಕೊಠಡಿಗಳು, ಐಸಿಯು, ಫಿಸಿಯೋಥೆರಪಿ ಘಟಕ ಸೇರಿ ಇನ್ನೂ ಅನೇಕ ಚಿಕಿತ್ಸಾ ಸೇವೆಗಳನ್ನು ನೀಡಲಾಗುತ್ತದೆ. ಗಾಯಗಳು ಮತ್ತು ಮೂಳೆ ಮುರಿತ ಕ್ಕೊಳಗಾದ ರೋಗಿಗಳಿಗೆಂದೇ ಪ್ರತ್ಯೇಕ ಚಿಕಿತ್ಸಾ ಸೌಲಭ್ಯವು ಸಹ ಇರಲಿದೆ. ಪಾಲ್ಸಿ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸಾ ಘಟಕ ಮತ್ತು ಆಯುರ್ವೇದ ಸಹಿತ ಸಾಂಪ್ರ ದಾಯಿಕ ಚಿಕಿತ್ಸಾ ವ್ಯವಸ್ಥೆಯನ್ನೂ ಕಲ್ಪಿಸ ಲಾಗುತ್ತದೆ ಎಂದು ತಿಳಿಸಿದರು.
ಎನ್‍ಎಬಿಎಚ್ ಮಾನದಂಡಗಳ ಪ್ರಕಾರ ಈ ಆಸ್ಪತ್ರೆ ಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಆಸ್ಪತ್ರೆಯ ಈಗಿನ ಸಾಮಥ್ರ್ಯವನ್ನು ಹೆಚ್ಚಿಸುವುದು ಮತ್ತು ರೋಗಿಗಳಿಗೆ ಇನ್ನೂ ಹೆಚ್ಚಿನ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತದೆ. ಅಮೃತ ಕೃಪ ಆಸ್ಪತ್ರೆಯು ಕೊಚ್ಚಿಯಲ್ಲಿರುವ ಅಮೃತ ಆಸ್ಪತ್ರೆಯ ಹೆಮ್ಮೆಯ ಅಂಗಸಂಸ್ಥೆಯಾಗಿದೆ. ಈ ಆಸ್ಪತ್ರೆಯನ್ನು ಮೈಸೂ ರಲ್ಲಿ 2011ರಿಂದ 15 ಹಾಸಿಗೆಗಳ ಸೇವೆಯೊಂದಿಗೆ ನಿರ್ವ ಹಣೆ ಮಾಡಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಮೃತಕೃಪ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಸೇವೆ ಗಳ ಮುಖ್ಯಸ್ಥೆ ಡಾ.ಸೌಮ್ಯ ಮತ್ತಿತರರು ಹಾಜರಿದ್ದರು.

Translate »