ಯಾರನ್ನೂ ಬಿಡಲ್ಲ, ಬಲಿ ಹಾಕುತ್ತೇವೆ
News

ಯಾರನ್ನೂ ಬಿಡಲ್ಲ, ಬಲಿ ಹಾಕುತ್ತೇವೆ

November 15, 2021

ಬೆಂಗಳೂರು,ನ.14-ಬಿಟ್ ಕಾಯಿನ್ ಹಗರಣದಲ್ಲಿ ಯಾರೇ ಇದ್ದರೂ ಸರಿ, ಅವರನ್ನು ಬಿಡುವುದಿಲ್ಲ, ಬಲಿ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಅವರು ಮಾಡಿದ್ದ ಗಂಭೀರ ಆರೋಪಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಬಿಟ್ ಕಾಯಿನ್ ಕೇಸು 2016ರಿಂದಲೂ ಇದೆ. ಆಗ ರಾಜ್ಯದಲ್ಲಿದ್ದುದ್ದು ಕಾಂಗ್ರೆಸ್ ಸರ್ಕಾರ, ಅವರೇಕೆ ಆಗ ಕ್ರಮ ಕೈಗೊಳ್ಳ ಲಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‍ನವರು ಪುರಾವೆ ಗಳನ್ನು ಇಟ್ಟುಕೊಂಡು ಮಾತ ನಾಡಬೇಕು. 2018ರಲ್ಲಿ ಶ್ರೀಕಿ ಯನ್ನು ಬಂಧಿಸಿ ಏಕೆ ಬಿಟ್ಟಿರಿ. ಈ ಪ್ರಕರಣದಲ್ಲಿ ಇಬ್ಬರು ಪ್ರಭಾವಿ ಗಳು ಇದ್ದಾರೆ ಎಂದು ಹೇಳುತ್ತಿದ್ದಾರೆ. ಅವರು ಯಾರು? ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ ಅವರು, ಈ ಕೇಸ್‍ನಲ್ಲಿ ಯಾರೇ ಇದ್ದರೂ ಬಿಡುವುದಿಲ್ಲ. ಅವರನ್ನು ನಮ್ಮ ಸರ್ಕಾರ ಬಲಿ ಹಾಕುತ್ತದೆ. ಶ್ರೀಕಿಯನ್ನು ಬಿಟ್ಟವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದರು.
ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ಕಾಂಗ್ರೆಸ್‍ನವರು ಹಗರಣ ಆಗಿದೆ ಎಂದು ಯಾವ ಆಧಾರವನ್ನಿಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ. ಆಧಾರವಿದ್ದರೆ ಬಹಿರಂಗಪಡಿಸಲಿ, ಪ್ರಕರಣದಲ್ಲಿ ಯಾರೇ ಎಷ್ಟೇ ಪ್ರಭಾವಿಗಳಿದ್ದರೂ ರಕ್ಷಿಸುವುದಿಲ್ಲ ಎಂದು ತಿರುಗೇಟು ನೀಡಿದ್ದಲ್ಲದೇ, ಸುರ್ಜೆವಾಲಾ ಅವರ 6 ಪ್ರಶ್ನೆಗಳಿಗೆ ಪ್ರತ್ಯುತ್ತರ ನೀಡಿದರು. ಕಾಂಗ್ರೆಸ್‍ನವರು ಸಾವಿರ ಸುಳ್ಳುಗಳನ್ನು ಹೇಳಿ ಸತ್ಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಶ್ರೀಕಿ ಬಂಧಿಸಿದ್ದಾಗಲೇ ತನಿಖೆ ಮಾಡಬೇಕಿತ್ತು. ಪ್ರಕರಣ ದೊಡ್ಡದಾದಾಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಹಗರಣ ಬಗ್ಗೆ ನಮ್ಮ ಸರ್ಕಾರ ತನಿಖೆ ನಡೆಸುತ್ತಿದೆ. ಇದನ್ನು ಬಯಲಿಗೆಳೆದಿದ್ದೇ ಬಿಜೆಪಿ ಸರ್ಕಾರ. ಕಾಂಗ್ರೆಸ್ ನವರು ದಾಖಲೆಯಿದ್ದರೆ ನಮಗೆ ಅಥವಾ ಇಡಿಗೆ ಕೊಡಲಿ, ಸುಮ್ಮನೆ ಆರೋಪ ಮಾಡುವುದಲ್ಲ, ಪುರಾವೆಗಳಿದ್ದರೆ ನೀಡಲಿ, ಇದರಲ್ಲಿ ಯಾರನ್ನೂ ಬಿಡುವುದಿಲ್ಲ, ಎಷ್ಟೇ ಪ್ರಭಾವಿಗಳಿದ್ದರೂ ತನಿಖೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾಡಲಾಗುತ್ತಿದೆ. 2020ರಲ್ಲಿ ಶ್ರೀಕಿ ಯನ್ನು ನಾವು ಬಂಧಿಸಿದ್ದು ಡ್ರಗ್ ಕೇಸಿನಲ್ಲಿ, ಆಮೇಲೆ ತನಿಖೆ ಮಾಡಿದಾಗ ಬಿಟ್ ಕಾಯಿನ್ ಹ್ಯಾಕಿಂಗ್ ಕೇಸು ಬಯಲಿಗೆ ಬಂತು. ಹಗರಣ ದೊಡ್ಡದು ಮಾಡಲು ಬಿಟ್ಟವರು ಕಾಂಗ್ರೆಸ್‍ನವರೇ, ಈಗ ನಮ್ಮ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ, ಟ್ವಿಟ್ಟರ್ ಹ್ಯಾಂಡಲ್ ಆಧಾರದ ಮೇಲೆ ಕಾಂಗ್ರೆಸ್ ನಾಯಕ ಸುರ್ಜೆವಾಲಾ ಆರೋಪ ಮಾಡುವುದಾದರೆ ಅವರಿಗೆ ಶೋಭೆ ತರುವಂತದ್ದಲ್ಲ, ಇದು ಸಾಕ್ಷಿಯಾಗುವುದಿಲ್ಲ ಎಂದು ಕೂಡ ಹೇಳಿದರು.

ಕಾಂಗ್ರೆಸ್ ನಾಯಕರಲ್ಲಿ ಹ್ಯಾಕಿಂಗ್ ಬಗ್ಗೆ ಸಾಕ್ಷ್ಯಾಧಾರಗಳಿದ್ದರೆ ನಮ್ಮ ಪೆÇಲೀಸರಿಗೆ ಅಥವಾ ಜಾರಿ ನಿರ್ದೇಶನಾಲಯಕ್ಕೆ ನೀಡಲಿ, ನಾವು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತೇವೆ. ಶ್ರೀಕಿ ಬಿಟ್ ಕಾಯಿನ್ ಅಕೌಂಟ್ ತನ್ನದು ಎಂದು ಹೇಳಿ ಎಕ್ಸ್‍ಚೇಂಜ್ ಅಕೌಂಟ್ ತೋರಿಸಿದ್ದಾನೆ. ಹೀಗಾಗಿ ಸಿಕ್ಕಿರುವ ಹಣದ ಬಗ್ಗೆ ಗೊಂದಲವಾಗಿದೆಯಷ್ಟೆ ಎಂದು ಸಿಎಂ ಬೊಮ್ಮಾಯಿ ಉತ್ತರಿಸಿದ್ದಾರೆ.

Translate »