ಬಿಟ್ ಕಾಯಿನ್ ಹಗರಣವೇ ಸುಳ್ಳು
ಮೈಸೂರು

ಬಿಟ್ ಕಾಯಿನ್ ಹಗರಣವೇ ಸುಳ್ಳು

November 14, 2021

ಪೊಲೀಸ್ ಇಲಾಖೆ ಅಧಿಕೃತ ಸ್ಪಷ್ಟೀಕರಣ

ಪಾರದರ್ಶಕ ತನಿಖೆ; ಪ್ರತಿ ಹಂತದಲ್ಲೂ ವಿಡಿಯೋ ಚಿತ್ರೀಕರಣ ನಡೆಸಿದ ಮಾಹಿತಿ

ಯಾವುದೇ ಪ್ರಭಾವಕ್ಕೆ ಒಳಗಾಗಿಲ್ಲ: ಬಿಟ್ ಕಾಯಿನ್ ವರ್ಗಾವಣೆ ಆಧಾರರಹಿತ ಆರೋಪ

ಮುಖ್ಯಮಂತ್ರಿಗಳ ಸಭೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೇಸ್‌ಕೋರ್ಸ್ ರಸ್ತೆಯ ಲ್ಲಿರುವ ತಮ್ಮ ನಿವಾಸದಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳ ಜೊತೆ ಬಿಟ್ ಕಾಯಿನ್ ಕುರಿತು ಸಭೆ ನಡೆಸಿದ ನಂತರ ಈ ಮಾಧ್ಯಮ ಪ್ರಕಟಣೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ ಮತ್ತು ಸಂಜೆ ಎರಡು ಬಾರಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿಗಳು ಬಿಟ್ ಕಾಯಿನ್ ಬಗ್ಗೆ ತಮ್ಮಲ್ಲಿರುವ ಎಲ್ಲಾ ಮಾಹಿತಿಗಳೊಂದಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದ್ದರು. ತಾವೂ ಕೂಡ ಕಾಂಗ್ರೆಸ್ ಪಕ್ಷ ಮಾಡಿರುವ ಆರೋಪಗಳ ಪಟ್ಟಿಯನ್ನು ಹಿಡಿದು ಕುಳಿತು ಈ ಆರೋಪಗಳ ಬಗ್ಗೆ ನಿಮ್ಮ ಉತ್ತರವೇನು ಎಂದು ಪ್ರಶ್ನಿಸಿದರು ಎನ್ನಲಾಗಿದೆ. ಮೊದಲು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘ ವಾಗಿ ಚರ್ಚೆ ನಡೆಸಿದರು. ನಂತರ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಇನ್ನಿತರೆ ಅಧಿಕಾರಿಗಳ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿದರು. ಇವರಿಗೆ ಕೆಲವು ಸಲಹೆ-ಸೂಚನೆ ನೀಡಿದರಲ್ಲದೆ, ತಾವೂ ಕೂಡ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿದರು ಎಂದು ತಿಳಿದುಬಂದಿದೆ.

ದೇಶಾದ್ಯಂತ ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಹಗರಣದ ಬಗ್ಗೆ ಕೊನೆಗೂ ಪೊಲೀಸ್ ಇಲಾಖೆಯಿಂದ ಸ್ಪಷ್ಟೀಕರಣ ಹೊರ ಬಿದ್ದಿದ್ದು, ‘ಬಿಟ್ ಕಾಯಿನ್ ಹಗರಣವೇ ಸುಳ್ಳು’ ಎಂದು ಹೇಳಿ ಪ್ರಕರಣಕ್ಕೆ ತೆರೆ ಎಳೆದಿದೆ.
ಈ ಸಂಬAಧ ಪೊಲೀಸ್ ಆಯುಕ್ತರ ಕಚೇರಿಯಿಂದ ಸ್ಪಷ್ಟನೆ ಹೊರ ಬಿದ್ದಿದ್ದು, ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ. ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗಿ ಪ್ರಕರಣದ ತನಿಖೆ ನಡೆಸಿಲ್ಲ. ಕೆ.ಜಿ.ನಗರ, ಸೈಬರ್ ಕ್ರೆöÊಮ್, ಅಶೋಕನಗರ ಠಾಣೆಗಳಲ್ಲಿ ೩ ಪ್ರಕರಣ ದಾಖಲಾಗಿತ್ತು. ಕೆ.ಜಿ.ನಗರ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಈಗಾಗಲೇ ಚಾರ್ಜ್ಶೀಟ್ ಸಹ ಸಲ್ಲಿಸ ಲಾಗಿದೆ. ಕೆ.ಜಿ.ನಗರದಲ್ಲಿ ದಾಖಲಾದ ದೂರಿನಿಂದ ಬಿಟ್ ಕಾಯಿನ್ ವಿಚಾರ ಬಯಲಾಗಿತ್ತು. ಕಳೆದ ವರ್ಷ ನವೆಂಬರ್ ೪ರಂದು ದೂರು ದಾಖಲಾಗಿತ್ತು.

ಹ್ಯಾಕರ್ ಶ್ರೀಕಿಯ ರಣ ರೋಚಕ ಇತಿಹಾಸ: ೫೦೦ ಗ್ರಾಂ ಹೈಡ್ರೋ ಗಾಂಜಾ ಸಹಿತ ಓರ್ವ ಆರೋಪಿಯನ್ನು ಬಂಧಿಸಲಾಗಿತ್ತು. ಮುಂದುವರಿದ ತನಿಖೆಯಲ್ಲಿ ಬಂಧಿತ ರಾದ ೧೦ ಜನರಲ್ಲಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಸಹ ಓರ್ವ ಆರೋಪಿ. ತನಿಖೆ ಯಲ್ಲಿ ಕ್ರಿಫ್ಟೋ ಕರೆನ್ಸಿ ವೆಬ್‌ಸೈಟ್ ಹ್ಯಾಕಿಂಗ್ ಬಗ್ಗೆ ಬಾಯ್ಬಿಟ್ಟಿದ್ದ. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾಯಿಸಲಾಗಿತ್ತು.

ತನಿಖೆಯ ದೃಷ್ಟಿಯಿಂದ ಬಿಟ್ ಕಾಯಿನ್ ವ್ಯಾಲೆಟ್ ತೆರೆಯುವುದು ಅಗತ್ಯವಾಗಿತ್ತು. ಕೋರ್ಟ್ ಅನುಮತಿ ಪಡೆದು ಸೈಬರ್ ತಜ್ಞರ ಸಮ್ಮುಖದಲ್ಲಿ ವ್ಯಾಲೆಟ್ ತೆರೆದಿದ್ದೆವು. ೩೧.೮ ಬಿಟ್ ಕಾಯಿನ್ ಜಪ್ತಿ ಮಾಡಿ ಪಾಸ್ ವರ್ಡ್ ಸಮೇತ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ಪೊಲೀಸ್ ಸಿಬ್ಬಂದಿ, ನುರಿತ ಸೈಬರ್ ತಜ್ಞರನ್ನು ಒಳಗೊಂಡAತೆ ತನಿಖೆ ನಡೆಸಲಾಗಿದೆ ತನಿಖೆಯ ಪ್ರತೀ ಹಂತದಲ್ಲಿಯೂ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ವೇಲ್ ಅಲರ್ಟ್ನಲ್ಲಿ ೧೪,೬೮೨ ಬಿಟ್ ಕಾಯಿನ್ ವರ್ಗಾವಣೆ ಆಗಿದೆ ಎಂದಿರುವುದು ಆಧಾರರಹಿತ. ಈ ನೆಲದ ಕಾನೂನಿನಂತೆ ನಿಷ್ಪಕ್ಷಪಾತ ತನಿಖೆ ಮಾಡಲಾಗಿದೆ. ನಿರ್ದಿಷ್ಟವಲ್ಲದ, ಸಾಮಾಜಿಕ ಜಾಲತಾಣದ ಆರೋಪಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಬಂಧಿತ ಆರೋಪಿ ಗಳು ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾ ಗುತ್ತಿದ್ದಾರೆ. ಆದರೂ ಯಾವುದೇ ವಿದೇಶಿ, ಅಂತರರಾಷ್ಟಿçÃಯತನಿಖಾ ಸಂಸ್ಥೆ ನಮ್ಮನ್ನು ಸಂಪರ್ಕಿಸಿಲ್ಲ. ಆರೋಪಿ ಹೇಳಿಕೊಂಡಿರುವAತೆ ಹ್ಯಾಕಿಂಗ್ ಆಗಿದೆ ಎನ್ನುವುದನ್ನು ಯಾರೊಬ್ಬರೂ ಖಚಿತಪಡಿಸಿಲ್ಲ. ಬಳಿಕ ಬಿಟ್ ಕಾಯಿನ್ ವರ್ಗಾವಣೆಗಾಗಿ ನ್ಯಾಯಾಲಯದ ಅನುಮತಿ ಪಡೆಯಲಾಯಿತು. ವ್ಯಾಲೆಟ್ ತೆರೆದಾಗ ಪತ್ತೆಯಾಗಿದ್ದು ೧೮೬.೮೧೧ ಬಿಟ್ ಕಾಯಿನ್. ಅಸಲಿಗೆ ಆರೋಪಿ ಶ್ರೀಕೃಷ್ಣನ ಬಳಿ ಸ್ವಂತ ಬಿಟ್ ಕಾಯಿನ್ ವ್ಯಾಲೆಟ್ ಇರಲಿಲ್ಲ. ಆತನಿಂದ ವಶಕ್ಕೆ ಪಡೆದಿದ್ದು ಲೈವ್ ವ್ಯಾಲೆಟ್ ಆಗಿರುತ್ತದೆ. ಆ ಲೈವ್ ವ್ಯಾಲೆಟ್‌ನ ಕೀ ಸಹ ಆರೋಪಿ ಬಳಿ ಪತ್ತೆಯಾಗಿರುವುದಿಲ್ಲ. ಹಾಗಾಗಿ ವಶಪಡಿಸಿಕೊಂಡ ವ್ಯಾಲೆಟ್ ಅನ್ನು ಹಾಗೆಯೇ ಬಿಡಲಾಗಿರುತ್ತದೆ. ಮತ್ತು ಈ ಎಲ್ಲ ವಿವರಣೆಗಳ ಸಹಿತ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇತ್ತೀಚಿನ ಆತನ ಬಂಧನದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೇವೆ. ಆತನ ಬಳಿ ಪತ್ತೆಯಾದ ಮಾದಕದ ಕುರಿತು ತನಿಖೆಗೆ ಕಸ್ಟಡಿಗೆ ಕೇಳಲಾಗಿತ್ತು. ರಕ್ತ ಮತ್ತು ಮೂತ್ರದ ಮಾದರಿ ಪಡೆಯಲು ಅನುಮತಿ ಪಡೆಯಲಾಗಿತ್ತು.

ವಿಕ್ಟೋರಿಯಾದಲ್ಲಿ ಸಾಧ್ಯವಾಗದ ಕಾರಣ ಬೌರಿಂಗ್‌ನಲ್ಲಿ ಪರೀಕ್ಷೆ ನಡೆಸಲಾಗಿದೆ ರಕ್ತ ಮತ್ತು ಮೂತ್ರದ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗಿತ್ತು ಎಫ್‌ಎಸ್‌ಎಲ್ ವರದಿಯಲ್ಲಿ ನೆಗೆಟಿವ್ ಬಂದಿದೆ. ನಂತರ ಆತನ ಬಂಧನದ ವಿಚಾರವಾಗಿ ರಿಟ್ ಅರ್ಜಿ ಹಾಕಲಾಗಿತ್ತು. ಹೀಗೆ ರಿಟ್ ಅರ್ಜಿ ಸಲ್ಲಿಸಿದವರಿಗೆ ೫ ಸಾವಿರ ದಂಡ ವಿಧಿಸಿ ಶ್ರೀಕೃಷ್ಣನ ಬಿಡುಗಡೆಯಾಗಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆಯಲ್ಲಿ ತಿಳಿಸಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈ ಪ್ರಕರಣಕ್ಕೆ ಸಂಬAಧಿಸಿ ವಾಕ್ಸಮರಗಳು ನಡೆಯುತ್ತಲೇ ಇವೆ. ಪೊಲೀಸ್ ವಶದಲ್ಲಿ ಶ್ರೀಕಿ ಇದ್ದಾಗಲೇ ಬಿಟ್ ಕಾಯಿನ್ ವರ್ಗಾವಣೆಯಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿಕೊಂಡು ಬಂದಿದೆ.

Translate »