ಅತ್ಯಾಧುನಿಕ ಜಿಯೋ ತಂತ್ರಜ್ಞಾನ ಆಧರಿಸಿ ಚಾಮುಂಡಿಬೆಟ್ಟದ ರಸ್ತೆ ದುರಸ್ತಿ
ಮೈಸೂರು

ಅತ್ಯಾಧುನಿಕ ಜಿಯೋ ತಂತ್ರಜ್ಞಾನ ಆಧರಿಸಿ ಚಾಮುಂಡಿಬೆಟ್ಟದ ರಸ್ತೆ ದುರಸ್ತಿ

November 14, 2021

ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಘೋಷಣೆ

ಭಾರೀ ಮಳೆಯಿಂದ ಭೂಮಿ ನೆನೆದು, ಹಸಿಮಣ್ಣು ಭೂಕುಸಿತ

ಮೈಸೂರು, ನ.೧೩(ಎಂಟಿವೈ)-ಚಾಮುAಡಿಬೆಟ್ಟದಲ್ಲಿ ಕುಸಿದಿ ರುವ ರಸ್ತೆಯನ್ನು ಅತ್ಯಾಧುನಿಕ ಜಿಯೋ ತಂತ್ರಜ್ಞಾನ ಬಳಸಿ ರಿಟೇನಿಂಗ್ ವಾಲ್ ನಿರ್ಮಿಸಿ ಬೆಟ್ಟವನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ನಂದಿ ರಸ್ತೆ ಕುಸಿದ ಸ್ಥಳಕ್ಕೆ ಶನಿವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರು ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಕೆಲವೆಡೆ ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಐತಿಹಾಸಿಕ ಸ್ಥಳವಾದ ಚಾಮುಂಡಿಬೆಟ್ಟಕ್ಕೆ ಹಲವೆಡೆಯಿಂದ ಪ್ರತಿದಿನ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಆಗಮಿಸಲಿ ದ್ದಾರೆ. ನಂದಿ ಮಾರ್ಗದಲ್ಲಿ ಸಾಕಷ್ಟು ಮಂದಿ ಸಂಚರಿಸಲಿದ್ದಾರೆ. ಆದರೆ ಈ ಭೂ ಕುಸಿತದಿಂದಾಗಿ ಆ ಮಾರ್ಗ ಬಂದ್ ಮಾಡ ಲಾಗಿದೆ. ಆದ್ಯತೆ ಮೇರೆಗೆ ಈ ರಸ್ತೆ ದುರಸ್ತಿ ಕಾಮಗಾರಿ ನಡೆಸಿ, ಭಕ್ತರು ಹಾಗೂ ಪ್ರವಾಸಿಗರ ಬಳಕೆಗೆ ಅನುವು ಮಾಡಿಕೊಡ ಲಾಗುತ್ತದೆ ಎಂದರು. ಮಳೆ ಹೆಚ್ಚಾಗಿ ಬಿದ್ದು, ನೀರು ಇಂಗುವಿಕೆ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ತೇವಾಂಶದಿAದ ಸಡಿಲಗೊಂಡಿದ್ದ ಮಣ್ಣು ಕುಸಿದಿದೆ ಎಂದು ತಜ್ಞರು ತಿಳಿಸಿದ್ದಾರೆ. ಐತಿಹಾಸಿಕ ನಗರ, ಭಕ್ತರ ಸಂಚಾರಕ್ಕೆ ಅನುವು ಮಾಡಿಕೊಡಲು ಏನೆಲ್ಲಾ ತುರ್ತು ಕ್ರಮ ಕೈಗೊಳ್ಳಬೇಕೋ ಅದನ್ನೆಲ್ಲಾ ತ್ವರಿತವಾಗಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಗುಡ್ಡಗಾಡು ಪ್ರದೇಶದಲ್ಲಿ ಮಳೆ ಹೆಚ್ಚಾಗಿ ನೀರು ಇಂಗುವಿಕೆ ಪ್ರಮಾಣ ಹೆಚ್ಚಾದಾಗ ಸಡಿಲಗೊಂಡ ಮಣ್ಣು ಕುಸಿಯುವುದು ಸಾಮಾನ್ಯ. ಆ ಸಂದರ್ಭದಲ್ಲಿ ಭಾರೀ ವಾಹನ ಸಂಚರಿಸಿದರೆ, ಸಡಿಲಗೊಂಡ ಮಣ್ಣು ಕುಸಿಯು ತ್ತದೆ. ಕೊಡಗು ಭಾಗದಲ್ಲಿ ಇಂತಹ ಭೂ ಕುಸಿತ ಸಾಮಾನ್ಯ. ನಮ್ಮ ಸರ್ಕಾರಕ್ಕೂ ಕುಸಿತಕ್ಕೂ ಸಂಬAಧವಿದ್ದAತೆ ಕಾಣುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಬಿ.ಎಸ್. ಯಡಿಯೂ ರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಕೊಡಗಲ್ಲಿ ಭೂ ಕುಸಿತವಾಗಿತ್ತು. ಈಗ ಬೊಮ್ಮಾಯಿ ಅವರ ಅಧಿಕಾರದಲ್ಲಿ ಚಾಮುಂಡಿಬೆಟ್ಟದಲ್ಲಿ ಭೂ ಕುಸಿತವಾಗಿದೆ ಎಂಬ ಹಿನ್ನೆಲೆ ಯಲ್ಲಿ ಸಚಿವರು ಈ ವಿಷಯ ಪ್ರಸ್ತಾಪಿಸಿದರು.

ಚಾಮುಂಡಿಬೆಟ್ಟದ ರಕ್ಷಣೆಗಾಗಿ ಬೆಂಗಳೂರಿನ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸ್ ನೀಡಿದ ಸಲಹೆಯನ್ನು ಲೋಕೋಪ ಯೋಗಿ ಇಲಾಖೆ ಸಕಾರಾತ್ಮಕವಾಗಿ ಪರಿಗಣ ಸಿದೆ. ಜಿಯೋ ಟ್ರೇಲ್ ಟೆಕ್ನಾಲಜಿ ಬಳಸಿ ರಿಟೇನಿಂಗ್ ವಾಲ್ ನಿರ್ಮಿಸಲಾಗುತ್ತದೆ. ಈ ತಂತ್ರಜ್ಞಾನದAತೆ ಕಲ್ಲು ಹಾಗೂ ಜಿಯೋ ಮೆಷ್ ಹಾಕಿ ವಾಲ್ ಕಟ್ಟಲಾಗುತ್ತದೆ. ಇದರಿಂದ ಎಷ್ಟೇ ನೀರು ಹರಿದರೂ ರಸ್ತೆ ಸುರಕ್ಷಿತವಾಗಿರುತ್ತದೆ. ಭೂ ಕುಸಿತವೂ ಆಗುವುದಿಲ್ಲ. ಉತ್ತರಖಂಡದ ಚಾರ್ಧಂ ಪ್ರಾಜೆಕ್ಟ್ನಲ್ಲಿ ಜಿಯೋ ಟ್ರೇಲ್ ಟೆಕ್ನಾಲಜಿ ಬಳಸಲಾಗಿದೆ. ಈ ತಂತ್ರಜ್ಞಾನಬಳಸುವುದರಿಂದ ಖರ್ಚು ಕಡಿಮೆಯಾಗಲಿದ್ದು, ಬಾಳಿಕೆ ಹೆಚ್ಚಾಗಲಿದೆ. ಇದಕ್ಕೆ ಪ್ರಾಧಾನ್ಯತೆ ಕೊಟ್ಟು ದುರಸ್ತಿ ಮಾಡಲಾಗುತ್ತದೆ. ಇದರ ಕ್ರಿಯಾಯೋಜನೆಯ ವೆಚ್ಚವನ್ನು ವಿಧಾನಪರಿಷತ್ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದರು. ಚಾಮುಂಡಿಬೆಟ್ಟ, ಕೆ.ಆರ್.ಮಿಲ್ ಸೇರಿದಂತೆ ವಿವಿಧೆಡೆ ಆಗಿರುವ ಹಾನಿಗೆ ಪರಿಹಾರ ಯೋಜನೆ ರೂಪಿಸಲಾಗಿದೆ. ರಾಜ್ಯದ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಆ ಸ್ಥಳಗಳಲ್ಲೆಲ್ಲಾ ದುರಸ್ಥಿ ಕಾರ್ಯ ನಡೆಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.

ಸಿಎಂ ಬದಲಾವಣೆ ಇಲ್ಲ: ನಾನು ಪಕ್ಷದ ಶಿಸ್ತಿನ ಸಿಪಾಯಿ. ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬAಧಿಸಿದAತೆ ಕಾಂಗ್ರೆಸ್ ಸುಳ್ಳು ಆರೋಪ ಮಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಲಾಗುತ್ತದೆ. ತನಿಖೆಯಿಂದ ಸತ್ಯಾಸತ್ಯತೆ ತಿಳಿಯಲಿದೆ. ನಾಯಕತ್ವ ಬದಲಾವಣೆ ಪ್ರಶ್ನೆ ಉದ್ಭವಿಸು ವುದಿಲ್ಲ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಂಸದ ಪ್ರತಾಪ ಸಿಂಹ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸೇರಿದಂತೆ ಇನ್ನಿತರರಿದ್ದರು.

Translate »