ತೆರಿಗೆ ವಸೂಲಿಯಲ್ಲಿ ಸರ್ಕಾರದ ನಿಯಮಾವಳಿ ಧಿಕ್ಕರಿಸಿ ಮೈಸೂರು ನಗರ ಪಾಲಿಕೆಯಿಂದ ತುಘಲಕ್ ದರ್ಬಾರ್
ಮೈಸೂರು

ತೆರಿಗೆ ವಸೂಲಿಯಲ್ಲಿ ಸರ್ಕಾರದ ನಿಯಮಾವಳಿ ಧಿಕ್ಕರಿಸಿ ಮೈಸೂರು ನಗರ ಪಾಲಿಕೆಯಿಂದ ತುಘಲಕ್ ದರ್ಬಾರ್

November 14, 2021

ರಾಜ್ಯದಲ್ಲಿ ಎಲ್ಲೂ ಇಲ್ಲದ ಸೂಪರ್ ಸ್ಪೆಷಲ್ ಕಮರ್ಷಿಯಲ್ ಟ್ಯಾಕ್ಸ್ ಜಾರಿಯಲ್ಲಿದೆ

ಬೋರ್‌ವೆಲ್ ನೀರು ಬಳಕೆಗೂ ತೆರಿಗೆ ವಿಧಿಸುವುದು ಯಾವ ನ್ಯಾಯ: ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ

ತೆರಿಗೆ ಬಾಕಿ ಇರುವ ಕಟ್ಟಡಗಳ ಮುಂದೆ ಬ್ಯಾನರ್ ಕಟ್ಟಲು ಅಧಿಕಾರ ಕೊಟ್ಟವರಾರು?

ಪರಿಷತ್ ಚುನಾವಣೆಯಲ್ಲಿ ಜಿಟಿಡಿ ಕುಟುಂಬದವರೇ ಸ್ಪರ್ಧಿಸಿದರೆ ಅಚ್ಚರಿ ಇಲ್ಲ ಶಾಸಕ ಸಾ.ರಾ.ಮಹೇಶ್ ಕುತೂಹಲಕಾರಿ ಹೇಳಿಕೆ
ಮೈಸೂರು, ನ.೧೩(ಎಂಟಿವೈ)- ಮೈಸೂರು, ಚಾಮರಾಜನಗರ ಜಿಲ್ಲೆ ಸ್ಥಳೀಯ ಸಂಸ್ಥೆಗಳಿAದ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಶಾಸಕ ಜಿ.ಟಿ.ದೇವೇಗೌಡರ ಕುಟುಂಬದ ಸದಸ್ಯರೊಬ್ಬರು ಸ್ಪರ್ಧಿಸಿದರೆ ಅಚ್ಚರಿ ಪಡಬೇಕಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಮೈಸೂರಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರು-ಚಾಮರಾಜನಗರ ಜಿಲ್ಲೆ ಸ್ಥಳೀಯ ಸಂಸ್ಥೆಗಳಿAದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಾಲ್ವರು ಆಕಾಂಕ್ಷಿಗಳು ಟಿಕೆಟ್ ಕೇಳುತ್ತಿದ್ದಾರೆ. ಮಾಜಿ ಸಚಿವ ಎಸ್.ನಂಜಪ್ಪ ಪುತ್ರ ಬಸಂತ್ ನಂಜಪ್ಪ ಅವರನ್ನು ಕಣಕ್ಕಿಳಿಸಲು ಚಿಂತಿಸಲಾಗಿದೆ. ಅಲ್ಲದೆ ಜೆಎಲ್‌ಆರ್ ಮಾಜಿ ಅಧ್ಯಕ್ಷ ವಿವೇಕಾನಂದ, ವರುಣಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಭಿಷೇಕ್ ಮಣೆಗಾರ್, ಹೆಚ್.ಡಿ.ಕೋಟೆ ಕೃಷ್ಣನಾಯಕ ಆಕಾಂಕ್ಷಿಗಳಾಗಿದ್ದಾರೆ. ಜಿ.ಟಿ.ದೇವೇ ಗೌಡರ ಕುಟುಂಬದವರು ಕಣಕ್ಕಿಳಿದರೂ ಅಚ್ಚರಿಪಡಬೇಕಾಗಿಲ್ಲ. ಈಗಾಗಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಚಾಮುಂಡಿಬೆಟ್ಟದಲ್ಲಿ ಜಿಟಿಡಿ ಪುತ್ರ ಸ್ವಾಗತಿಸಿ, ದೇವಾಲಯಕ್ಕೆ ಕರೆದೊಯ್ದಿರುವುದು ಎಲ್ಲರಿಗೂ ತಿಳಿದ ವಿಚಾರ. ಪಕ್ಷ ಸಂಘಟನೆ ಗಾಗಿ ಜಿ.ಟಿ.ದೇವೇಗೌಡರು ಶ್ರಮಿಸಿದ್ದಾರೆ. ಅವರ ಕುಟುಂಬದ ಸದಸ್ಯರೊಬ್ಬರು ವಿಧಾನ ಪರಿಷತ್ ಸದಸ್ಯರಾದರೆ ನಮಗೂ ಸಂತೋಷ. ಅವರ ಕುಟುಂಬದವರು ಈಗಾಗಲೇ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೇ(ಜಿ.ಟಿ. ದೇವೇಗೌಡ) ತೀರ್ಮಾನ ಮಾಡಿದರೆ ನಾವು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಆದೇಶ ಧಿಕ್ಕರಿಸಿ, ಕರ್ನಾಟಕ ಮುನ್ಸಿಪಲ್ ಕಾಯ್ದೆಯಲ್ಲಿನ ನಿಯಮ ಉಲ್ಲಂಘಿಸಿ, ಮೈಸೂರು ನಗರ ಪಾಲಿಕೆ ಆಡಳಿತ ವರ್ಗ ಮನ ಬಂದAತೆ ತೆರಿಗೆ ವಸೂಲಿ ಮಾಡುತ್ತಿದೆ. ತೆರಿಗೆ ಬಾಕಿ ವಸೂಲಿ ಮಾಡುವುದಾಗಿ ಹೇಳಿ ತೆರಿಗೆ ಬಾಕಿ ಇರುವ ಕಟ್ಟಡಗಳ ಮುಂದೆ ಬ್ಯಾನರ್ ಹಾಕಿ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಸಾ.ರಾ.ಮಹೇಶ್ ಆರೋಪಿಸಿದ್ದಾರೆ.

ಮೈಸೂರಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕರ್ನಾಟಕ ಮುನ್ಸಿಪಲ್ ಆಕ್ಟ್ನಂತೆ ವಾಣ ಜ್ಯ, ವಾಸ ಹಾಗೂ ಖಾಲಿ ನಿವೇಶ ನಕ್ಕೆ ಮಾತ್ರ ತೆರಿಗೆ ವಿಧಿಸಬಹುದಾಗಿದೆ. ಕೇವಲ ಮೂರು ಬಗೆಯ ತೆರಿಗೆ ಸಂಗ್ರಹಕ್ಕೆ ಅವಕಾಶವಿದೆ. ಆದರೆ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇರದ ನಿಯಮ ವನ್ನು ಮೈಸೂರು ನಗರ ಪಾಲಿಕೆ ಅನು ಸರಿಸುತ್ತಿದೆ. ಸರ್ಕಾರದ ಆದೇಶವಿಲ್ಲದಿ ದ್ದರೂ ಕೆಎಂಸಿ ಕಾಯ್ದೆ ಉಲ್ಲಂಘಿಸಿ, ಕಾನೂನುಬಾಹಿರವಾಗಿ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಮುಂದಾಗಿದೆ. ತೆರಿಗೆ ಬಾಕಿ ಇರುವ ಕಟ್ಟಡಗಳು, ಜಾಗದಲ್ಲಿ ಬ್ಯಾನರ್ ಹಾಕು ತ್ತಿರುವ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ಒಂದು ವಾರದೊಳಗೆ ಕಾನೂನುಬಾಹಿರ ಸೂಪರ್ ಸ್ಪೆಷಲ್ ಕಮರ್ಷಿಯಲ್ ಟ್ಯಾಕ್ಸ್ ಪದ್ಧತಿಯನ್ನು ರದ್ದು ಮಾಡದಿದ್ದರೆ ಪಾಲಿಕೆ ಕಚೇರಿ ಮುಂದೆ ಜೆಡಿಎಸ್‌ನ ಪಾಲಿಕೆ ಸದಸ್ಯರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಕಲ್ಯಾಣಮಂಟಪ, ಹೋಟೆಲ್ ಸೇರಿ ದಂತೆ ವಾಣ ಜ್ಯ ಕಟ್ಟಡಗಳ ಮುಂದೆ ಬ್ಯಾನರ್ ಹಾಕುತ್ತಿರುವುದು ಪಾಲಿಕೆಯ ತುಘಲಕ್ ದರ್ಬಾರ್ ತೋರಿಸುತ್ತದೆ. ವಾಣ ಜ್ಯ, ವಾಸದ ಮತ್ತು ಖಾಲಿ ನಿವೇ ಶನದ ತೆರಿಗೆ ಬಿಟ್ಟು ಉಳಿದ ಯಾವುದೇ ಬಗೆಯ ತೆರಿಗೆ ಸಂಗ್ರಹ ಸ್ಥಗಿತಗೊಳಿ ಸಬೇಕು. ಬಿಬಿಎಂಪಿ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಇಲ್ಲದ ನಿಯಮ ವನ್ನು ಮೈಸೂರಲ್ಲಿ ಜಾರಿಗೆ ತರಲು ಅನುಮತಿ ಕೊಟ್ಟಿದ್ದು ಯಾರು?. ಮನಸ್ಸೋ ಇಚ್ಛೆ ತೆರಿಗೆ ಹಾಕಿದರೆ ಸಾರ್ವಜನಿಕರ ಪರಿಸ್ಥಿತಿ ಏನಾಗಬೇಕು ಎನ್ನುವ ಚಿಂತನೆ ಮಾಡುವುದು ಬೇಡವೇ ಎಂದು ಪ್ರಶ್ನಿಸಿದರು.

ಪಾಲಿಕೆಯ ಈ ಅವೈಜ್ಞಾನಿಕ ಕ್ರಮ ದಿಂದಾಗಿ ಮೈಸೂರಲ್ಲಿ ಈಗಾಗಲೇ ಎಂಟು ಚಿತ್ರಮಂದಿರಗಳು ಮುಚ್ಚಿವೆ. ಅನೇಕ ವಾಣ ಜ್ಯ ಕಟ್ಟಡಗಳು ಖಾಲಿ ಇವೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ನಗರಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದೇನೆ. ತೆರಿಗೆ ಕುರಿತು ಚರ್ಚೆ ನಡೆಸಿ ತೀರ್ಮಾನಕ್ಕೆ ಬರುವುದಾಗಿ ಹೇಳಿದ್ದಾರೆ. ಕೆಎಂಸಿ ಆಕ್ಟ್ ಪ್ರಕಾರ ನಮ್ಮ ಕಲ್ಯಾಣ ಮಂಟಪಕ್ಕೆ ೪ ಲಕ್ಷ ರೂ. ತೆರಿಗೆ ಕಟ್ಟ ಬೇಕಾಗಿತ್ತು. ಆದರೆ ಸೂಪರ್ ಸ್ಪೆಷಲ್ ಕಮರ್ಷಿಯಲ್ ಟ್ಯಾಕ್ಸ್ನಿಂದಾಗಿ ೮.೭೫ ಲಕ್ಷ ರೂ. ತೆರಿಗೆ ವಿಧಿಸುತ್ತಿದ್ದಾರೆ. ಯಾವ ನಿಯಮದಡಿ ಮಾಡಿದ್ದೀರಾ? ಎಂದು ಪ್ರಶ್ನಿಸಿದರಲ್ಲದೆ, ಕಲ್ಯಾಣಮಂಟಪಗಳಿಗೆ ವಿಧಿಸುತ್ತಿರುವ ಅವೈಜ್ಞಾನಿಕ ತೆರಿಗೆ ಪದ್ಧತಿ ಪ್ರಶ್ನಿಸಿ ಕಲ್ಯಾಣಮಂಟಪ ಅಸೋಸಿ ಯೇಷನ್‌ನವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಿಯಮದ ಪ್ರಕಾರ ತೆರಿಗೆ ಕಟ್ಟುವುದಕ್ಕೆ ಯಾರ ಆಕ್ಷೇಪವೂ ಇಲ್ಲ. ಸೂಪರ್ ಸ್ಪೆಷಲ್ ಕಮರ್ಷಿಯಲ್ ಟ್ಯಾಕ್ಸ್ ಪ್ರಕಾರ ದುಪ್ಪಟ್ಟು ತೆರಿಗೆ ಕಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ಪಾಲಿಕೆ ಆಡಳಿತ ಇನ್ನಾದರೂ ತನ್ನ ನಡು ವಳಿಕೆಯನ್ನು ಬದಲಾಯಿಸಿಕೊಳ್ಳದಿದ್ದರೆ ಕಲ್ಯಾಣಮಂಟಪಗಳಲ್ಲಿ ಶಾಂತಿಭAಗ, ಕಾನೂನು ಸುವ್ಯವಸ್ಥೆ ಹಾಳಾದರೆ ನಗರ ಪಾಲಿಕೆ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೋರ್‌ವೆಲ್ ಬಳಕೆಗೂ ತೆರಿಗೆ

ಪಾಲಿಕೆಯಲ್ಲಿ ಆಡಳಿತ ಹಿಡಿದು ಅಭಿ ವೃದ್ಧಿ ಕಾರ್ಯ ಮಾಡಿ ತೋರಿಸುತ್ತೇ ವೆಂದು ಹೇಳಿದ್ದ ಬಿಜೆಪಿ ಈಗ ತಮ್ಮ ಆಡಳಿತದಲ್ಲಿ ಬೋರ್‌ವೆಲ್ ಉಪಯೋಗಿ ಸುವ ಗ್ರಾಹಕರಿಗೆ ತೆರಿಗೆ ವಿಧಿಸುವ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ. ಕಾವೇರಿ ನೀರನ್ನು ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ಕೊಡಲಾಗುತ್ತಿದೆ. ಗ್ರಾಹಕರಿಗೆ ಅಗತ್ಯವಿರುವಷ್ಟು ನೀರು ಪೂರೈಸದ ಕಾರಣ ಬೋರ್‌ವೆಲ್ ಬಳ ಸುತ್ತಾರೆ. ಆದರೆ, ಬೋರ್‌ವೆಲ್ ಗ್ರಾಹಕ ರಿಗೆ ವಿಶೇಷ ಒಳಚರಂಡಿ ಶುಲ್ಕವೆಂದು ಒಂದೊAದು ವರ್ಗಕ್ಕೂ ಪ್ರತ್ಯೇಕ ಶುಲ್ಕ ನಿಗದಿಪಡಿಸಿರು ವುದು ಕಾನೂನುಬಾಹಿರ ನಿಲುವು. ಹೋಟೆಲ್, ಹಾಸ್ಟೆಲ್-ಪಿಜಿ, ಶಾಪಿಂಗ್ ಮಾಲ್, ಕಲ್ಯಾಣಮಂಟಪ ಹೀಗೆ ಹಲವಾರು ವರ್ಗಕ್ಕೆ ೨ ಸಾವಿರ ದಿಂದ ೨೫ ಸಾವಿರದ ತನಕ ತೆರಿಗೆ ನಿಗದಿಪಡಿಸಿ ದ್ದಾರೆ. ಕೊರೊನಾದಿಂದಾಗಿ ಏಕಪರದೆ ಚಿತ್ರಮಂದಿರಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಿದ್ದರೂ ನಗರ ಪಾಲಿಕೆ ತೆರಿಗೆ ವಸೂಲಿಗೆ ಮುಂದಾ ಗಿರುವುದನ್ನು ನೋಡಿದರೆ ಸರ್ಕಾರದ ಆದೇಶಕ್ಕೆ ಬೆಲೆ ಇಲ್ಲವೇ? ಎಂದು ಕಿಡಿಕಾರಿದರು. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಿಂದ ಬಡವರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಈಗ ಕಾನೂನುಬಾಹಿರ ತೆರಿಗೆ ವಿಧಿಸಿದರೆ ಎಲ್ಲಿಂದ ಹಣ ಹೊಂದಿಸಬೇಕು ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿ ಹರಿಸದಿ ದ್ದಲ್ಲಿ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಲು ನಿರ್ಧರಿಸಿದ್ದೇನೆ. ಬೋರ್ ವೆಲ್ ನೀರು ಬಳಕೆಗೆ ತೆರಿಗೆ ವಿಧಿಸುವ ಪ್ರಸ್ತಾಪಕ್ಕೆ ಕೌನ್ಸಿಲ್ ಸಭೆಯಲ್ಲಿ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಕಲ್ಯಾಣಮಂಟಪಗಳಿಗೆ ಬ್ಯಾನರ್ ಹಾಕುವ ವಿಚಾರವನ್ನು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರ ಗಮನಕ್ಕೆ ತಾರದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದನ್ನು ನೋಡಿ ದರೆ ಬಿಜೆಪಿ-ಕಾಂಗ್ರೆಸ್ ತುಘಲಕ್ ಆಡಳಿತ ನಡೆಸುತ್ತಿದೆ ಎಂಬುದು ಎದ್ದು ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಎಸ್.ಶೋಭಾ ಮೋಹನ್, ಪ್ರತಿಪಕ್ಷದ ನಾಯಕಿ ಅಶ್ವಿನಿ ಅನಂತು, ಮಾಜಿ ಮೇಯರ್ ಆರ್. ಲಿಂಗಪ್ಪ, ಮಾಜಿ ಉಪ ಮೇಯರ್ ವಿ.ಶೈಲೇಂದ್ರ, ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಜಿಪಂ ಮಾಜಿ ಸದಸ್ಯರಾದ ಸಿ.ಜೆ.ದ್ವಾರಕೀಶ್, ಎಂ.ಪಿ.ನಾಗರಾಜು, ಎಂ.ಟಿ.ಕುಮಾರ್, ಮುಖಂಡರಾದ ಸಂತೋಷ್, ತಬ್ರೇಜ್, ರಾಮು ಇನ್ನಿತರರು ಇದ್ದರು.

Translate »