ಮೈಸೂರಿನ ಸುಸ್ಥಿರ, ಯೋಜನಾಬದ್ಧ ಅಭಿವೃದ್ಧಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಆಶಯ
ಮೈಸೂರು

ಮೈಸೂರಿನ ಸುಸ್ಥಿರ, ಯೋಜನಾಬದ್ಧ ಅಭಿವೃದ್ಧಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಆಶಯ

November 14, 2021

ಮೈಸೂರು, ನ. ೧೩(ಆರ್‌ಕೆ)- ಹಸಿರು ಮತ್ತು ಸ್ವಚ್ಛ ನಗರಿ ಖ್ಯಾತಿಯ ಮೈಸೂ ರನ್ನು ಸುಸ್ಥಿರ ಹಾಗೂ ಯೋಜನಾ ಬದ್ಧವಾಗಿ ಅಭಿವೃದ್ಧಿಪಡಿಸಬೇಕಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ (ಮುಡಾ)ದ ಅಧ್ಯಕ್ಷ ಹೆಚ್.ವಿ. ರಾಜೀವ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರದ ಹೌಸಿಂಗ್ ಅಂಡ್ ಅರ್ಬನ್ ಅಫರ‍್ಸ್ ಸಚಿವಾಲಯ, ನರೆಡ್ಕೋ, ಮುಡಾ ಹಾಗೂ ಅನ್-ಹ್ಯಾಬಿಟಟ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಸದರನ್ ಸ್ಟಾರ್ ಹೋಟೆಲ್ ಸಭಾಂಗಣದಲ್ಲಿ ಇಂದು ಏರ್ಪಡಿಸಲಾ ಗಿದ್ದ ‘Sustainable Cities Intigrated Approach Pilot (SCIAP)’ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಮಹಾರಾಜರು ಕುಡಿಯುವ ನೀರು, ಒಳಚರಂಡಿ ಹಾಗೂ ಮಳೆ ನೀರಿನ ಚರಂಡಿಗಳ ಸಂಪರ್ಕ ಜಾಲವನ್ನು ಸದೃಢವಾಗಿ ನಿರ್ಮಿಸಿದ್ದ ರಿಂದ ಈವರೆಗೂ ಅಂತಹ ಸಮಸ್ಯೆಯಾಗ ಲಿಲ್ಲ ಎಂದರು. ರಿಂಗ್ ರಸ್ತೆ ಒಳಗಿರುವ ಮೈಸೂರು ನಗರದ ರಸ್ತೆ, ಒಳಚರಂಡಿ, ಕುಡಿಯುವ ನೀರಿನ ಸಂಪರ್ಕ ಜಾಲ ವನ್ನು ಇದೀಗ ನಗರ ವಿಸ್ತಾರವಾಗಿ ಬೆಳೆ ದಿರುವುದರಿಂದ ರಿಂಗ್ ರಸ್ತೆ ಹೊರಗಿನ ವಸತಿ ಬಡಾವಣೆಗಳಿಗೂ ಮಂದುವರಿಸ ಬೇಕಾಗಿದೆ ಎಂದ ಅವರು, ಸಂಪರ್ಕ ರಸ್ತೆಗಳನ್ನು ಮುಂದುವರೆಸದಿರುವು ದರಿಂದ ನಾಗರಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದರು.

ಖಾಸಗಿ ಡೆವಲಪರ್‌ಗಳು, ಗೃಹ ನಿರ್ಮಾಣ ಸಹಕಾರ ಸಂಘಗಳು ಹಾಗೂ ಇತರರು ಅಭಿವೃದ್ಧಿಪಡಿಸುವ ವಸತಿ ಬಡಾವಣೆ ಗಳಿಗೆ ಸ್ಥಳೀಯ ಪ್ರಾಧಿಕಾರಗಳು ವಿನ್ಯಾಸ ಅನುಮೋದನೆ ಮಾಡಿ ಸುಮ್ಮನಾದರೆ ಸಾಲದು. ಅಲ್ಲಿಗೆ ಕುಡಿಯುವ ನೀರು, ಒಳಚರಂಡಿ ಸಂಪರ್ಕ ಕಲ್ಪಿಸಿದೆಯೇ ಎಂಬುದನ್ನು ಗಮನಿಸಬೇಕು. ರಸ್ತೆ, ವಿದ್ಯುತ್, ಮಳೆ ನೀರು ಚರಂಡಿಯAತಹ ಮೂಲ ಸೌಲಭ್ಯ ಕಲ್ಪಿಸುವಂತೆ ನೋಡಿ ಕೊಂಡರೆ ಮಾತ್ರ ಮೈಸೂರು ನಗರದ ಸುಸ್ಥಿರ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು. ಕೆರೆಯ ಸುತ್ತ ಅಗತ್ಯ ಬಫರ್ ಝೋನ್ ಬಿಡಬೇಕು. ಅಲ್ಲಿ ಭೂ ಮಾಲೀಕರು ಮನೆ ನಿರ್ಮಿಸಿಕೊಂಡರೆ ತೆರವುಗೊಳಿ ಸಲು ತ್ರಾಸ ಪಡಬೇಕಾಗುತ್ತದೆ. ಈಗಿ ನಿಂದಲೇ ಭೂಸ್ವಾಧೀನಪಡಿಸಿ ಕೆರೆಯ ಬಫರ್ ವಲಯ, ರಸ್ತೆ ಅಗಲೀಕರಣ, ಸಾರ್ವಜನಿಕ ಸೌಲಭ್ಯಗಳಿಗಾಗಿ ಅಗತ್ಯ ವಿರುವ ಭೂಮಿಯನ್ನು ಮೀಸಲಿರಿಸಿದರೆ ಮುಂದೆ ಸಂಭವಿಸುವ ಅನಾಹುತಗಳನ್ನು ತಪ್ಪಿಸಬಹುದು ಎಂದು ರಾಜೀವ್ ತಿಳಿಸಿದರು. ಮೈಸೂರು ನಗರಕ್ಕೆ ಬಲ್ಕ್ ಡ್ರಿಂಕಿAಗ್ ವಾಟರ್ ಯೋಜನೆಗಳು ಬರುತ್ತಿರುವುದರಿಂದ ನೆಲಮಟ್ಟದ ಜಲಸಂಗ್ರಹಾಗಾರ ಹಾಗೂ ಓವರ್‌ಹೆಡ್ ವಾಟರ್ ಟ್ಯಾಂಕ್ ನಿರ್ಮಿಸಲೂ ಭೂಮಿ ಯನ್ನು ಮೀಸಲಾಗಿರಿಸಿಕೊಳ್ಳುವ ಅಗತ್ಯ ವಿದೆ. ಇಲ್ಲಿನ ಮೈಸೂರು-ಬೆಂಗಳೂರು ರೈಲ್ವೇ ಮಾರ್ಗ ಮತ್ತು ಹೆದ್ದಾರಿಯನ್ನೂ ಸುವ್ಯವಸ್ಥಿತವಾಗಿ ನಿರ್ವಹಿಸುವ ಜೊತೆಗೆ ವಿಮಾನ ನಿಲ್ದಾಣ ಅಭಿವೃದ್ಧಿಗೂ ಆದ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.ನಂತರ ಮೈಸೂರನ್ನು ಯೋಜನಾ ಬದ್ಧವಾಗಿ ಅಭಿವೃದ್ಧಿಪಡಿಸುವ ಸಂಬAಧ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇ ಶಕ ಆರ್. ಮಂಜುನಾಥ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ನ

ಸುಧೀಂದ್ರ, ಡೆವಲಪರ್‌ಗಳು, ಸಿವಿಲ್ ಇಂಜಿನಿಯರ್‌ಗಳು, ಮುಡಾ ನಗರ ಯೋಜಕ ಸದಸ್ಯ ಜಯಸಿಂಹ ಸೇರಿ ದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಅಭಿಪ್ರಾಯ, ಸಲಹೆಗಳನ್ನು ನೀಡಿದರು.
ಸಸ್ಟೇನಬಲ್ ಸಿಟೀಸ್: ಇಂಟಿಗ್ರೇಟೆಡ್ ಅಪ್ರೋಚ್ ಪೈಲಟ್ ಪ್ರಾಜೆಕ್ಟ್ (SಅIಂP)ಗೆ ಆಯ್ಕೆಯಾಗಿರುವ ದೇಶದ ೫ ನಗರಗಳಲ್ಲಿ ಮೈಸೂರೂ ಒಂದಾಗಿದ್ದು, ಯೋಜನೆ ಅನುಷ್ಠಾನ ಸಂಬAಧ ಪ್ರಶ್ನಾವಳಿಗಳ ಮೂಲಕ ಅಭಿಪ್ರಾಯವನ್ನು ಸಾರ್ವಜನಿಕ ವಲಯದಿಂದ ಪಡೆದ ನಂತರ ಸುಸ್ಥಿರ ಅಭಿವೃದ್ಧಿ ಬಗ್ಗೆ ಸಮಗ್ರ ವರದಿ ಸಿದ್ಧ ಪಡಿಸಲು ಇಂದಿನ ವಿಚಾರ ಸಂಕಿರಣ ದಲ್ಲಿ ನಿರ್ಧರಿಸಲಾಯಿತು. ಮುಡಾ ಆಯುಕ್ತ ಡಾ. ಡಿ.ಬಿ. ನಟೇಶ್, ಯುಎನ್ ಹ್ಯಾಬಿಟಟ್ ಸಿಟಿ ಪ್ಲಾನಿಂಗ್ ಸ್ಪೆಷಲಿಸ್ಟ್ ಮನ್ಸಿ ಸಚ್‌ದೇವ್, ರಿಂಕಿ ಹಲ್ದಾರ್, ನರೆಡ್ಕೋ ಪದಾಧಿಕಾರಿಗಳಾದ ಎಂ. ಸತೀಶ್‌ಕುಮಾರ್, ಎನ್. ದಿವ್ಯೇಶ್, ಡಿಜಿ ಆದಿಶೇಷನ್‌ಗೌಡ, ಟಿ.ಕೆ. ಜಗದೀಶ್ ಈ ಸಂದರ್ಭ ಉಪಸ್ಥಿತರಿದ್ದರು. ಯುನಿಡೋ ಅನುದಾನದಲ್ಲಿ ಸುಸ್ಥಿರ ಅಭಿವೃದ್ಧಿ ಪೈಲಟ್ ಯೋಜನೆಗೆ ಗುಜರಾತ್, ಭೋಪಾಲ್, ಜೈಪುರ, ಮೈಸೂರು ಮತ್ತು ವಿಜಯ ವಾಡ ನಗರಗಳನ್ನು ಆಯ್ಕೆ ಮಾಡಲಾ ಗಿದ್ದು, ಅನುಷ್ಠಾನ ಸಂಬAಧ ಸ್ಥಳೀಯ ಸ್ಟೇಕ್ ಹೋಲ್ಡರ್ ಸಂಸ್ಥೆಗಳ ಸಲಹೆ-ಅಭಿಪ್ರಾಯ ಸಂಗ್ರಹಿಸುವುದು ವಿಚಾರ ಸಂಕಿರಣದ ಮುಖ್ಯ ಉದ್ದೇಶವಾಗಿದೆ.

Translate »