ಬೆಂಗಳೂರು,ಆ.23-ಪೋಷಕರು ಅಥವಾ ಪಾಲಕರು ತ್ಯಜಿಸುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ತನ್ನ ಸುಪರ್ದಿಗೆ ಪಡೆಯುವ ವೇಳೆ ಅನುಸರಿಸಬೇಕಾದ ನಿಯಮ ಗಳನ್ನು ಬಾಲ ನ್ಯಾಯ ಕಾಯ್ದೆಯಡಿ ರೂಪಿಸಬೇ ಕೆಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಮೈಸೂರಿನಲ್ಲಿ ಲೀವಿಂಗ್ ಟು ಗೆದರ್‍ನಲ್ಲಿದ್ದ ಜೋಡಿ ತಮಗೆ ಜನಿಸಿದ ಹೆಣ್ಣು ಮಗುವನ್ನು ಕೇವಲ 12 ದಿನದಲ್ಲೇ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಿದ ಪ್ರಕರಣದ ಬಗ್ಗೆ ಬೆಂಗಳೂರಿನ ‘ಲೆಟ್ಜ್ ಕಿಟ್ ಫೌಂಡೇಶನ್’ ಎಂಬ ಸರ್ಕಾರೇತರ ಸಂಸ್ಥೆ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ…
ಇಂದಿನಿಂದ ಕೇರಳ, ತ.ನಾಡಿಗೆ ಸಾರಿಗೆ ಬಸ್ ಸೇವೆ ಆರಂಭ
August 23, 2021ಬೆಂಗಳೂರು: ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಏರಿಕೆ ಭೀತಿ ನಡುವೆ ಸೋಮವಾರದಿಂದ ಕೇರಳ ಮತ್ತು ತಮಿಳುನಾಡಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸೇವೆ ಪುನಾರಂಭಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕೇರಳ ಮತ್ತು ತಮಿಳುನಾಡಿಗೆ ಸಂಚ ರಿಸುವ ಪ್ರಯಾಣಿಕರು 72 ಗಂಟೆ ಯೊಳಗೆ ನಡೆಸಿದ ಖಖಿ-Pಅಖ ಪರೀಕ್ಷೆಯ ನೆಗೆಟಿವ್ ವರದಿ ಅಥವಾ ಕರ್ನಾಟಕ ಸರ್ಕಾರದ ಮಾರ್ಗಸೂಚಿ ಅನ್ವಯ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದು ಕೊಂಡಿರುವುದು ಕಡ್ಡಾಯವಾಗಿದೆ. ತಮಿಳುನಾಡಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ…
ಶೀಘ್ರದಲ್ಲೇ ಸಂಪುಟ ವಿಸ್ತರಣೆ
August 23, 2021ಕಲಬುರಗಿ: ಪ್ರಾಮಾಣಿಕ ಶಾಸಕರ ಸೇರ್ಪಡೆಗಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾಲ್ಕು ಮಂತ್ರಿಗಳ ಸ್ಥಾನ ಖಾಲಿ ಇರುವುದರಿಂದ, ಕಲಬುರಗಿಯಿಂದ ಚುನಾಯಿತ ಪ್ರತಿನಿಧಿಯೊಬ್ಬ ರಿಗೆ ಸ್ಥಾನ ನೀಡಲು ಮುಖ್ಯಮಂತ್ರಿಗಳು ಚಿಂತನೆ ನಡೆಸುತ್ತಿದ್ದಾ ರೆಂದು ಹೇಳಿದ್ದಾರೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ನಗರ ನಿಗಮಗಳಿಗೆ ಸೆ.3ರಂದು ಚುನಾವಣೆ ನಿಗದಿ ಯಾಗಿದ್ದು, ಈ ಕುರಿತು ಮಾತನಾಡಿರುವ ಅವರು, ಬಿಜೆಪಿ ಜನಪರ ಅಭ್ಯರ್ಥಿಗಳನ್ನು…
ವಿದ್ಯಾರ್ಥಿಗಳು ಒತ್ತಾಯಪೂರ್ವಕವಾಗಿ ಶಾಲೆಗೆ ಬರಬೇಕೆಂದಿಲ್ಲ: ಬಿ.ಸಿ.ನಾಗೇಶ್
August 23, 2021ತುಮಕೂರು: ಸೋಮವಾರದಿಂದ 9ರಿಂದ 12ನೇ ತರಗತಿವರೆಗೆ ತರಗತಿ ಪ್ರಾರಂಭ ವಾಗಲಿದ್ದು, ವಿದ್ಯಾರ್ಥಿಗಳು ಒತ್ತಾಯಪೂರ್ವಕವಾಗಿ ಶಾಲೆಗೆ ಬರಬೇಕೆಂದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಶಾಲೆಗಳ ಸಿದ್ಧತೆ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಎಷ್ಟೇ ಪ್ರಯತ್ನ ಮಾಡಿದರೂ ಆನ್‍ಲೈನ್‍ನಲ್ಲಿ ಒಳ್ಳೆಯ ಶಿಕ್ಷಣ ಕೊಡಲು ಸಾಧ್ಯವಾಗಲಿಲ್ಲ. ಬೇರೆ, ಬೇರೆ ಕಾರಣಗಳಿಂದ ಉತ್ತಮ ಶಿಕ್ಷಣ ಕೊಡಲಾಗಿಲ್ಲ. ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆ ಇರುವುದರಿಂದ ತರಗತಿ ಆರಂಭ ಮಾಡುವಂತೆ ಸಿಎಂ ಘೋಷಣೆ ಮಾಡಿ…
ಕೆಲ ಶಾಲೆಗಳಿಗೆ ಸಿಎಂ, ಶಿಕ್ಷಣ ಸಚಿವರ ಭೇಟಿ
August 23, 2021ಬೆಂಗಳೂರು: ಕೊರೊನಾ ಮುಂಜಾಗ್ರತಾ ಕ್ರಮಗಳೊಂದಿಗೆ ಸೋಮವಾರದಿಂದ ಶಾಲೆಗಳು ಆರಂಭವಾಗುತ್ತಿದ್ದು, ಈ ಸಂದರ್ಭ ದಲ್ಲಿ ಬೆಂಗಳೂರಿನ ಕೆಲವು ಶಾಲೆಗಳಿಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ. ಕೊರೊನಾ 3ನೇ ಅಲೆ ಆತಂಕದ ನಡು ವೆಯೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನಾಳೆಯಿಂದ ಶಾಲೆಗಳು ಆರಂಭವಾಗುತ್ತಿದ್ದು, ಮೊದಲ ಹಂತದಲ್ಲಿ 9ರಿಂದ 12ನೇ ತರಗತಿವರೆಗೆ ಆರಂಭವಾಗಲಿದೆ. ಶಾಲೆಗಳ ಆರಂಭಿಸಲು ಮುಂದಾಗಿರುವ ರಾಜ್ಯ ಸರ್ಕಾರ ಈಗಾಗಲೇ ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿಯನ್ನೂ…
ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಸಂಪೂರ್ಣ ವೆಚ್ಚ ಸರ್ಕಾರವೇ ಭರಿಸಲಿದೆ
August 23, 2021ವಿಜಯಪುರ: ಬ್ಲ್ಯಾಕ್ ಫಂಗಸ್‍ಗೆ ತುತ್ತಾದವರು ಗುಣ ಮುಖರಾಗುವವರೆಗೂ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಇನ್ನು ಮುಂದೆ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದಿಲ್ಲಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ರುವ ಅವರು, ರಾಜ್ಯದಲ್ಲಿ ಕಪ್ಪು ಶಿಲೀಂ ಧ್ರದ ಪ್ರಕರಣಗಳು ಕಡಿಮೆಯಾಗಿವೆ. ಸೋಂಕಿಗೊಳಗಾದ ಜನರು ಚಿಕಿತ್ಸೆ ಪಡೆದುಕೊಳ್ಳಲು ಕಷ್ಟ ಪಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಏಕೆಂದರೆ ಸೋಂಕಿಗೆ ನೀಡ ಲಾಗುವ ಪ್ರತೀ ಡೋಸ್ ಇಂಜೆಕ್ಷನ್‍ಗೆ ರೂ.10,000ದಿಂದ 12,000 ವೆಚ್ಚವಾಗುತ್ತಿದೆ. ಈ ಇಂಜೆಕ್ಷನ್‍ನ್ನು ಸೋಂಕಿ ಗೊಳಗಾದ ಜನರು ಆಸ್ಪತ್ರೆಯಿಂದ…
ವಿಶ್ವದ ಮೊದಲ ಡಿಎನ್‍ಎ ಆಧಾರಿತ ಲಸಿಕೆ ನಿಜಕ್ಕೂ ಮಹತ್ವದ ಸಾಧನೆ: ಪ್ರಧಾನಿ ಮೋದಿ
August 22, 2021ನವದೆಹಲಿ, ಆ.21- ಜಗತ್ತಿನ ಮೊದಲ ಡಿಎನ್‍ಎ ಆಧಾರಿತ ಕೋವಿಡ್ ಲಸಿಕೆ ಝೈಡಸ್ ಕ್ಯಾಡಿಲಾ ಸಂಸ್ಥೆಯ ಝೈಕೋವ್-ಡಿ ಕೋವಿಡ್ ಲಸಿಕೆಗೆ ತುರ್ತು ಬಳಕೆಯ ಅನು ಮೋದನೆ ನೀಡಿದ ಬೆನ್ನಲ್ಲೇ ಲಸಿಕೆ ತಯಾರಿಕೆಗೆ ಶ್ರಮಿಸಿದ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ವಿಶ್ವದ ಮೊದಲ ಡಿಎನ್‍ಎ ಆಧಾರಿತ ಝೈಡಸ್ ಕ್ಯಾಡಿಲಾದ ಝೈಕೋವ್-ಡಿ’ ಲಸಿಕೆಗೆ ಅನುಮೋದನೆ ದೊರೆತ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಭಾರತದ ವಿಜ್ಞಾನಿಗಳ ನವೀನ ಉತ್ಸಾಹಕ್ಕೆ ಇದು ಸಾಕ್ಷಿಯಾಗಿದೆ. ನಿಜಕ್ಕೂ ಮಹತ್ವದ ಸಾಧನೆಯಾಗಿದೆ ಎಂದು ಹೇಳಿದ್ದಾರೆ. ನೀಡಲ್ ಲೆಸ್…
ರಾಷ್ಟ್ರೀಯ ಶಿಕ್ಷಣ ನೀತಿ ಹಿಂದೆ ಯಾವ ದುರುದ್ದೇಶವೂ ಇಲ್ಲ
August 19, 2021ಬೆಂಗಳೂರು, ಆ.18(ಕೆಎಂಶಿ)- ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹಿಂದೆ ವಿದ್ಯಾರ್ಥಿ ಹಿತಬಿಟ್ಟು ಯಾವುದೇ ದುರುದ್ದೇಶ ಅಥವಾ ಹಿಡೆನ್ ಅಜೆಂಡಾ ಇಲ್ಲವೆಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾ ಯಣ ಇಂದಿಲ್ಲಿ ಸ್ಪÀಷ್ಟಪಡಿಸಿದರು. ಆಗಸ್ಟ್ 23ರಿಂದ ಹೊಸ ಶಿಕ್ಷಣ ನೀತಿ ಯಡಿ ಕಲಿಕೆಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದೆಂದು ಪ್ರಕ ಟಿಸಿದರು. ಬೆಂಗಳೂರು ಉತ್ತರ ವಿಶ್ವವಿದ್ಯಾ ಲಯ ಹಾಗೂ ಕ್ರಿಸ್ತು ಜಯಂತಿ ಕಾಲೇಜು ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ -2020 ಅನುಷ್ಠಾನ ಕುರಿತು ಹಮ್ಮಿಕೊಳ್ಳ ಲಾಗಿದ್ದ ರಾಷ್ಟ್ರೀಯ ವಿಚಾರ…
ಕೈಯ್ಯಿಂದಲೇ ಚರಂಡಿ ಸ್ವಚ್ಛಗೊಳಿಸುವ ಅಮಾನವೀಯ ಕಾರ್ಯಕ್ಕೆ ಅಂತ್ಯ: ಶಾಸಕ ಹರ್ಷವರ್ಧನ್ ಬಗ್ಗೆ ಸಿಎಂ ಬೊಮ್ಮಾಯಿ ಮೆಚ್ಚುಗೆ
August 19, 2021ಬೆಂಗಳೂರು,ಆ.18-ನಂಜನಗೂಡು ಕ್ಷೇತ್ರದ ಶಾಸಕ ರಾದ ಹರ್ಷವರ್ಧನ, ತಮ್ಮ ಕ್ಷೇತ್ರದಲ್ಲಿ ಕೈಗೊಂಡಿ ರುವ ಮಾನವೀಯ ಕಾರ್ಯಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಾಸಕ ಹರ್ಷವರ್ಧನ್, ತಮ್ಮ ಕ್ಷೇತ್ರದ ಕೆಆರ್ ಪುರದಲ್ಲಿ ಜನರು ಕೈಯ್ಯಿಂದಲೇ ಚರಂಡಿಗಳ ಸ್ವಚ್ಛಗೊಳಿಸುವ, ಹೊಲಸು ಹೊತ್ತು ಹಾಕುವ ಅಮಾನ ವೀಯ ಪದ್ಧತಿ ಕೊನೆಗೊಂಡಿರುವ ಕುರಿತು ಮುಖ್ಯ ಮಂತ್ರಿಗಳಿಗೆ ವಿವರಣೆ ನೀಡಿ, ಈ ಕುರಿತು ಮಾಹಿತಿ ಫಲಕವನ್ನು ಅವರಿಗೆ ನೀಡಿದರು. ಈ ವೇಳೆ ಶಾಸಕ ಬಿ.ಹರ್ಷವರ್ಧನ್ ಅವರ ಈ…
ಖ್ಯಾತ ವೈದ್ಯ ಸಾಹಿತಿ ಡಾ.ಎಚ್.ಗಿರಿಜಮ್ಮ ಇನ್ನಿಲ್ಲ
August 18, 2021ದಾವಣಗೆರೆ, ಆ.17- ಖ್ಯಾತ ವೈದ್ಯ ಸಾಹಿತಿ, ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಎಚ್. ಗಿರಿಜಮ್ಮ ದಾವಣಗೆರೆಯಲ್ಲಿಂದು ಹೃದಯಾ ಘಾತದಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಸರಳ ಕನ್ನಡದಲ್ಲಿ ವೈದ್ಯಕೀಯ ಮಾಹಿತಿಯನ್ನು ಒದಗಿಸಬೇಕು ಎನ್ನುವ ಧ್ಯೇಯ ದಿಂದ ಹತ್ತಾರು ಕೃತಿಗಳನ್ನು ರಚಿಸಿದ್ದ ಡಾ.ಗಿರಿ ಜಮ್ಮ ವೈದ್ಯಕೀಯ ಸಾಹಿತಿಯಾಗಿ ಜನಪ್ರಿಯ ರಾಗಿದ್ದರು. ಬೆಂಗಳೂರಿನಲ್ಲಿ 20 ವರ್ಷಗಳ ಸುದೀರ್ಘ ಅವಧಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಜನಪ್ರಿಯ ವೈದ್ಯರಾಗಿದ್ದ ಗಿರಿಜಮ್ಮ ಕೆಲ ಧಾರಾವಾಹಿ ಹಾಗೂ ಕಿರುಚಿತ್ರ ಗಳಲ್ಲೂ ಅಭಿನಯಿಸಿದ್ದರು….