ಇಂದಿನಿಂದ ಕೇರಳ, ತ.ನಾಡಿಗೆ ಸಾರಿಗೆ ಬಸ್ ಸೇವೆ ಆರಂಭ
News

ಇಂದಿನಿಂದ ಕೇರಳ, ತ.ನಾಡಿಗೆ ಸಾರಿಗೆ ಬಸ್ ಸೇವೆ ಆರಂಭ

August 23, 2021

ಬೆಂಗಳೂರು: ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಏರಿಕೆ ಭೀತಿ ನಡುವೆ ಸೋಮವಾರದಿಂದ ಕೇರಳ ಮತ್ತು ತಮಿಳುನಾಡಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸೇವೆ ಪುನಾರಂಭಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಕೇರಳ ಮತ್ತು ತಮಿಳುನಾಡಿಗೆ ಸಂಚ ರಿಸುವ ಪ್ರಯಾಣಿಕರು 72 ಗಂಟೆ ಯೊಳಗೆ ನಡೆಸಿದ ಖಖಿ-Pಅಖ ಪರೀಕ್ಷೆಯ ನೆಗೆಟಿವ್ ವರದಿ ಅಥವಾ ಕರ್ನಾಟಕ ಸರ್ಕಾರದ ಮಾರ್ಗಸೂಚಿ ಅನ್ವಯ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದು ಕೊಂಡಿರುವುದು ಕಡ್ಡಾಯವಾಗಿದೆ.
ತಮಿಳುನಾಡಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸೇವೆ ಯನ್ನು ನಾಳೆಯಿಂದ ಪುನಾರಂಭಿಸ ಲಾಗುವುದು. ರಾಜ್ಯದ ವಿವಿಧ ಮಾರ್ಗ ಗಳಲ್ಲಿ 250 ಬಸ್ಸುಗಳು ಸಂಚರಿಸಲಿವೆ ಎಂದು ಕೆಎಸ್‍ಆರ್‍ಟಿಸಿ ಟ್ವೀಟ್ ಮಾಡಿದೆ. ಪ್ರತಿನಿತ್ಯ ಕೇರಳಕ್ಕೆ ಪ್ರಯಾಣಿಸುವ ವಿದ್ಯಾರ್ಥಿಗಳು,
ಉದ್ಯೋಗಿಗಳು ಹಾಗೂ ಇತರರು 15 ದಿನಗಳಿಗೊಮ್ಮೆ ಕೊವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು. ಪ್ರಯಾಣದ ಸಂದರ್ಭದಲ್ಲಿ ಖಖಿ-Pಅಖ ವರದಿಯನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು.

ಕರ್ನಾಟಕದ ಈ ನಿಲ್ದಾಣಗಳಿಂದ ಬಸ್ ಸಂಚಾರ: ಬೆಂಗಳೂರು, ಮೈಸೂರು, ಮಂಗಳೂರು, ಪುತ್ತೂರು ಸೇರಿದಂತೆ ಅಗತ್ಯವಿರುವ ವಿವಿಧ ಪ್ರದೇಶಗಳಿಂದ ನೆರೆ ರಾಜ್ಯಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಸಂಚರಿಸಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಸೇವೆಯನ್ನು ಪುನಾರಂಭಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಕೊವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕಳೆದ ಏಪ್ರಿಲ್ 27ರಂದು ನೆರೆ ರಾಜ್ಯಗಳಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

Translate »