ವಿಶ್ವದ ಮೊದಲ ಡಿಎನ್‍ಎ ಆಧಾರಿತ ಲಸಿಕೆ ನಿಜಕ್ಕೂ ಮಹತ್ವದ ಸಾಧನೆ: ಪ್ರಧಾನಿ ಮೋದಿ
News

ವಿಶ್ವದ ಮೊದಲ ಡಿಎನ್‍ಎ ಆಧಾರಿತ ಲಸಿಕೆ ನಿಜಕ್ಕೂ ಮಹತ್ವದ ಸಾಧನೆ: ಪ್ರಧಾನಿ ಮೋದಿ

August 22, 2021

ನವದೆಹಲಿ, ಆ.21- ಜಗತ್ತಿನ ಮೊದಲ ಡಿಎನ್‍ಎ ಆಧಾರಿತ ಕೋವಿಡ್ ಲಸಿಕೆ ಝೈಡಸ್ ಕ್ಯಾಡಿಲಾ ಸಂಸ್ಥೆಯ ಝೈಕೋವ್-ಡಿ ಕೋವಿಡ್ ಲಸಿಕೆಗೆ ತುರ್ತು ಬಳಕೆಯ ಅನು ಮೋದನೆ ನೀಡಿದ ಬೆನ್ನಲ್ಲೇ ಲಸಿಕೆ ತಯಾರಿಕೆಗೆ ಶ್ರಮಿಸಿದ ವಿಜ್ಞಾನಿಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ವಿಶ್ವದ ಮೊದಲ ಡಿಎನ್‍ಎ ಆಧಾರಿತ ಝೈಡಸ್ ಕ್ಯಾಡಿಲಾದ ಝೈಕೋವ್-ಡಿ’ ಲಸಿಕೆಗೆ ಅನುಮೋದನೆ ದೊರೆತ ಬೆನ್ನಲ್ಲೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಭಾರತದ ವಿಜ್ಞಾನಿಗಳ ನವೀನ ಉತ್ಸಾಹಕ್ಕೆ ಇದು ಸಾಕ್ಷಿಯಾಗಿದೆ. ನಿಜಕ್ಕೂ ಮಹತ್ವದ ಸಾಧನೆಯಾಗಿದೆ ಎಂದು ಹೇಳಿದ್ದಾರೆ.

ನೀಡಲ್ ಲೆಸ್ (ಸೂಜಿ ರಹಿತ) ಲಸಿಕೆಯಾಗಿರುವ ಮೂರು ಡೋಸ್ ಪ್ರಮಾಣದ Zಥಿಅov-ಆ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಕೇಂದ್ರ ಆರೋಗ್ಯ ತಜ್ಞರು ಶಿಫಾರಸ್ಸು ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಅದರಂತೆ ಕೊರೊನಾ ಸಾಂಕ್ರಾಮಿಕ (ಅoviಜ-19 Pಚಿಟಿಜemiಛಿ) ವಿರುದ್ಧ ದೇಶಾದ್ಯಂತ ನಡೆಯು ತ್ತಿರುವ ಲಸಿಕಾಕರಣ ಕಾರ್ಯಕ್ರಮಕ್ಕೆ ಇದೀಗ ಮತ್ತೊಂದು ಲಸಿಕೆ ಸೇರ್ಪಡೆಯಾಗಿದ್ದು, ಕೇಂದ್ರ ಸರ್ಕಾರವು ಫಾರ್ಮ ಕಂಪನಿ ಝೈಡಸ್ ಕ್ಯಾಡಿಲಾದ (Zಥಿಜus ಅಚಿಜiಟಚಿ) 3 ಡೋಸ್ ಕೊರೊನಾ ಲಸಿಕೆ Zಥಿಅov-ಆನ ತುರ್ತು ಬಳಕೆಗೆ ಅನುಮೋದನೆ ನೀಡಿದೆ.

ಮೂಲಗಳ ಪ್ರಕಾರ ಭಾರತದ ಔಷಧ ನಿಯಂ ತ್ರಕ ಜನರಲ್‍ನ (ಆಅಉI) ತಜ್ಞರ ಸಮಿತಿಯು ಈ ಲಸಿಕೆಯ ತುರ್ತು ಬಳಕೆಯನ್ನು ಅನು ಮೋದಿಸಿದೆ. ಈ ಲಸಿಕೆಯ 2 ಡೋಸ್‍ಗಳ ಪರಿಣಾಮದ ಕುರಿತು ಸಮಿತಿಯು ಫಾರ್ಮಾ ಕಂಪನಿಯಿಂದ ಹೆಚ್ಚುವರಿ ದತ್ತಾಂಶವನ್ನು ಕೋರಿದೆ ಎನ್ನಲಾಗಿದೆ. ಇನ್ನು ಜೆನೆರಿಕ್ ಫಾರ್ಮಾಸ್ಯುಟಿಕಲ್ ಕಂಪನಿಯಾಗಿರುವ ಕ್ಯಾಡಿಲಾ ಹೆಲ್ತ್‍ಕೇರ್ ಲಿಮಿಟೆಡ್ (ಅಚಿಜiಟಚಿ ಊeಚಿಟಣh ಅಚಿಡಿe ಐimiಣeಜ) ಜುಲೈ 1ರಂದು Zಥಿಅoಗಿ-ಆಯ ತುರ್ತು ಬಳಕೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. 28 ಸಾವಿರ ಸ್ವಯಂಸೇವಕರ ಮೇಲೆ ನಡೆಸಿದ ಕೊನೆಯ ಹಂತದ ಪ್ರಯೋ ಗದ ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಲಸಿಕೆಯ ಪರಿಣಾಮಕಾರಿತ್ವವು ಶೇ. 66.6 ರಷ್ಟಿದೆ ಎಂದು ಈ ವರದಿಯಿಂದ ತಿಳಿದುಬಂದಿತ್ತು. ಈ ಲಸಿಕೆ 12ರಿಂದ 18 ವಯೋಮಾನದವರಿಗೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಅದರ ಪ್ರಾಯೋಗಿಕ ಡೇಟಾ ವನ್ನು ಇನ್ನೂ ಪ್ಯಾರ್ ರಿವ್ಯೂ ಮಾಡಲಾಗಿಲ್ಲ ಎನ್ನಲಾಗಿದೆ.

Translate »