ವಾರಾಂತ್ಯ ಕಫ್ರ್ಯೂಗೆ ಮೈಸೂರು ವರ್ತಕರಿಂದ  ವ್ಯಾಪಕ ವಿರೋಧ; ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
ಮೈಸೂರು

ವಾರಾಂತ್ಯ ಕಫ್ರ್ಯೂಗೆ ಮೈಸೂರು ವರ್ತಕರಿಂದ ವ್ಯಾಪಕ ವಿರೋಧ; ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

August 22, 2021

ಮೈಸೂರು,ಆ.21(ಪಿಎಂ)- ಮೈಸೂರು ನಗರ ವ್ಯಾಪ್ತಿಯಲ್ಲೂ ವಾರಾಂತ್ಯ ಕಫ್ರ್ಯೂ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಆರಂಭದಲ್ಲೇ ವಿರೋಧಿಸಿದ್ದ ಮೈಸೂರು ವರ್ತಕರು, ಇದೀಗ ಪ್ರತಿಭಟನೆ ನಡೆಸಿ, ತಮ್ಮ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಮೂರನೇ ಅಲೆ ನಿಯಂತ್ರಿ ಸುವ ಹಿನ್ನೆಲೆಯಲ್ಲಿ ಸರ್ಕಾರ ಮೈಸೂರು ನಗರಕ್ಕೆ ವಿಧಿಸಿರುವ ವಾರಾಂತ್ಯ ಕಫ್ರ್ಯೂ (ವೀಕೆಂಡ್ ಕಫ್ರ್ಯೂ) ಅವೈಜ್ಞಾನಿಕ. ಕೂಡಲೇ ಮೈಸೂರು ನಗರ ವ್ಯಾಪ್ತಿಯಲ್ಲಿ ವೀಕೆಂಡ್ ಕಫ್ರ್ಯೂ ತೆರವುಗೊಳಿಸಬೇಕೆಂದು ಆಗ್ರಹಿಸಿ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಮೈಸೂರು ವರ್ತಕರು ಶನಿವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಮೈಸೂರಿನ ದೇವರಾಜ ಅರಸು ರಸ್ತೆ, ಶಿವರಾಂಪೇಟೆಯ ವಿನೋಬಾ ರಸ್ತೆಯಲ್ಲಿ ಎರಡ್ಮೂರು ತಂಡಗಳಾಗಿ ವರ್ತಕರು ಪ್ರತಿ ಭಟನೆ ನಡೆಸಿದರು. ಕಪ್ಪುಪಟ್ಟಿ ಧರಿಸಿ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಡಿ.ದೇವರಾಜ ಅರಸು ರಸ್ತೆಯ ಕೆಲವೆಡೆ ತಮ್ಮ ತಮ್ಮ ಅಂಗಡಿ ಮುಂದೆಯೇ ಕಪ್ಪುಪಟ್ಟಿ ಧರಿಸಿ ಕೆಲವರು ಪ್ರತಿಭಟನೆ ದಾಖಲಿಸಿದರು.

ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಹೊಂದಿರುವ 8 ಜಿಲ್ಲೆಗಳಲ್ಲಿ ವಾರಾಂತ್ಯ ಕಫ್ರ್ಯೂ ವಿಧಿಸಿ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಆ.6ರಂದು ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಮೈಸೂರು ನಗರ ವ್ಯಾಪ್ತಿಯಲ್ಲಿ ವೀಕೆಂಡ್ ಕಫ್ರ್ಯೂ ಅವೈಜ್ಞಾನಿಕ ಎಂದು ಪ್ರತಿಪಾದಿಸಿ ವರ್ತ ಕರು ಮತ್ತು ವಾಣಿಜ್ಯೋದ್ಯಮಿಗಳು ಹೋರಾಟಕ್ಕೆ ಮುಂದಾಗಿದ್ದರು.

ಬಳಿಕ ಕೋವಿಡ್ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಧ್ಯ ಪ್ರವೇ ಶಿಸಿ, ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಕಫ್ರ್ಯೂ ಸಡಿಲಗೊಳಿಸುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಸಮಾಧಾನಗೊಂಡಿದ್ದ ವರ್ತ ಕರು, ಆ.9ರಂದು ಮೈಸೂರಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಸಲ್ಲಿಸಿದ್ದರು. ಆದರೆ ಈವರೆಗೆ ಕಫ್ರ್ಯೂ ಸಡಿಲಿಕೆಯ ಯಾವುದೇ ನಿರ್ಧಾರ ಸರ್ಕಾರದಿಂದ ಬಾರದ ಹಿನ್ನೆಲೆ ಯಲ್ಲಿ ವರ್ತಕರು ಇಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮೈಸೂರು ಟ್ರಾವೆಲ್ಸ್ ಅಸೋಸಿ ಯೇಷನ್ ಅಧ್ಯಕ್ಷ ಮತ್ತು ಒಕ್ಕೂಟದ ನಿರ್ದೇ ಶಕ ಸಿ.ಎ.ಜಯಕುಮಾರ್, ಮೈಸೂರು ನಗರ ದಲ್ಲಿ ವೀಕೆಂಡ್ ಕಫ್ರ್ಯೂ ಅಗತ್ಯವಿಲ್ಲದ ಕಾರಣ ಹಿಂಪಡೆಯಬೇಕೆಂದು ಪ್ರಾರಂಭ ದಲ್ಲೇ ಮನವಿ ಮಾಡಿದ್ದೆವು. ಮುಖ್ಯಮಂತ್ರಿ ಗಳು ಮೈಸೂರಿಗೆ ಭೇಟಿ ನೀಡಿದ್ದಾಗ ಅವ ರನ್ನು ಸಹ ಖುದ್ದು ಭೇಟಿ ಮಾಡಿ ನಮ್ಮ ಒಕ್ಕೂಟದಿಂದ ಮನವಿ ಸಲ್ಲಿಸಲಾಗಿತ್ತು. ಇದಕ್ಕೂ ಮುನ್ನ ಕೋವಿಡ್ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿ ದ್ದರು. ಆದರೆ ಈವರೆಗೆ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ನಮ ಗೊಬ್ಬ ನಾಯಕ ಬೇಕು. ಅಂತಹ ನಾಯಕ ನನ್ನು ಮೈಸೂರು ಕಡೆಯಿಂದ ಕೊಡಿ ಎಂದು ಕೇಳಿದರೂ ಪ್ರಯೋಜನವಾಗಿಲ್ಲ ಎಂದು ಹೇಳುವ ಮೂಲಕ ಮೈಸೂರು ಭಾಗಕ್ಕೆ ಸಚಿವ ಸ್ಥಾನ ಬೇಕೆಂಬ ಬೇಡಿಕೆಗೆ ಸರ್ಕಾರ ಸ್ಪಂದಿ ಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಪ್ರವಾಸೋದ್ಯಮ ಸಚಿವರಿಗೆ ಪ್ರವಾ ಸೋದ್ಯಮದ ಬಗ್ಗೆ ಆಸಕ್ತಿಯೇ ಇಲ್ಲ. ಇದು ದುರಂತವೇ ಸರಿ. ಕೋವಿಡ್ ಕಾರಣಕ್ಕೆ ಪ್ರವಾಸೋದ್ಯಮ ಮೊದಲೇ ನೆಲಕಚ್ಚುತ್ತಿದ್ದು, ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿ ನಮಗೆ ಬೇಕಿದೆ ಎಂದರು.

ಒಕ್ಕೂಟದ ಉಪಾಧ್ಯಕ್ಷ ಸಿ.ನಾರಾಯಣ ಗೌಡ ಮಾತನಾಡಿ, ಮೈಸೂರಿನಲ್ಲಿ ಜನಪ್ರತಿ ನಿಧಿಗಳು ನಮ್ಮ ಕಷ್ಟ ಕೇಳುತ್ತಿಲ್ಲ. ಸರ್ಕಾರ ಕೂಡಲೇ ವೀಕೆಂಡ್ ಕಫ್ರ್ಯೂ ತೆರವು ಗೊಳಿಸಬೇಕು ಎಂದು ಒತ್ತಾಯಿಸಿದರು.

ಯೋಗ ಫೆಡರೇಷನ್ ಆಫ್ ಮೈಸೂರು ಅಧ್ಯಕ್ಷ ಮತ್ತು ಒಕ್ಕೂಟದ ಖಜಾಂಚಿ ಡಿ. ಶ್ರೀಹರಿ ಮಾತನಾಡಿ, ವ್ಯಾಪಾರಸ್ಥರಿಗೆ ವಹಿ ವಾಟು ಇಲ್ಲದೇ ತೆರಿಗೆ ಇರಲಿ, ವಿದ್ಯುತ್ ಶುಲ್ಕ ಕಟ್ಟಲಾಗದ ಪರಿಸ್ಥಿತಿ ಉದ್ಭವಿಸಿದೆ. ಇಂತಹ ಸಂದರ್ಭದಲ್ಲಿ ಅನಗತ್ಯವಾಗಿ ವೀಕೆಂಡ್ ಕಫ್ರ್ಯೂ ಹೇರುವುದು ಎಷ್ಟು ಸರಿ? ಬೆಂಗ ಳೂರು ನಗರದ ಕೆಆರ್ ಮಾರುಕಟ್ಟೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಸೇರಲು ಅವ ಕಾಶ ನೀಡಿದ್ದಾರೆ. ಅಂತಹ ಯಾವುದೇ ಸನ್ನಿವೇಶ ಇಲ್ಲದ ಮೈಸೂರಿನಲ್ಲಿ ಹೀಗೆ ನಿರ್ಬಂಧ ವಿಧಿಸುವುದು ಸೂಕ್ತವಲ್ಲ. ಕೋವಿಡ್ ನಿಯಂತ್ರಣ ಮತ್ತು ಪರಿಹಾರ ಕ್ಕಾಗಿ ಸರ್ಕಾರದೊಂದಿಗೆ ಮೈಸೂರಿನ ಸಂಘ ಸಂಸ್ಥೆಗಳು ಕೈಜೋಡಿಸಿ ಕೆಲಸ ಮಾಡಿವೆ. ಇಂತಹ ಮೈಸೂರಿನ ವರ್ತಕರ ಬಗ್ಗೆ ನಿರ್ಲಕ್ಷ್ಯ ವಹಿಸದೇ ಕೂಡಲೇ ವೀಕೆಂಡ್ ಕಫ್ರ್ಯೂ ಅನ್ನು ಮೈಸೂರಿನಲ್ಲಿ ತೆರವು ಗೊಳಿಸಬೇಕು ಎಂದು ಆಗ್ರಹಿಸಿದರು.

ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷ ಪೈಲ್ವಾನ್ ಎಸ್.ಮಹದೇವ್ ಮಾತನಾಡಿ, ರಾಜಕೀಯ ಪಕ್ಷಗಳ ಕಾರ್ಯ ಕ್ರಮಗಳಿಗೆ ಇಲ್ಲದ ಕೋವಿಡ್ ನಿರ್ಬಂಧ, ವ್ಯಾಪಾರಕ್ಕೆ ಮಾತ್ರವೇಕೆ? ಮೈಸೂರಿನಲ್ಲಿ ಕೋವಿಡ್ ನಿಯಂತ್ರಣದಲ್ಲಿದ್ದರೂ ಸಾಮಾನ್ಯ ಜನತೆ ಮೇಲೆ ಹೀಗೆ ಒತ್ತಾಯ ಪೂರ್ವಕವಾಗಿ ನಿರ್ಬಂಧ ವಿಧಿಸುವುದು ಸರಿಯಲ್ಲ. ವೀಕೆಂಡ್ ಕಫ್ರ್ಯೂ ಹೆಸರಿನಲ್ಲಿ ಸಾಮಾನ್ಯ ವರ್ತಕರ ಮೇಲೆ ಗದಾಪ್ರಹಾರ ಮಾಡದೇ ಕೂಡಲೇ ಕಫ್ರ್ಯೂ ರದ್ದುಗೊಳಿಸ ಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಡಿಸಿಪಿ ಗೀತಾ ಪ್ರಸನ್ನ ಭೇಟಿ ನೀಡಿದ್ದರು. ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಪ್ರಶಾಂತ್, ಖಜಾಂಚಿ ಎಂ.ಆರ್.ರಾಜಾರಾಂ, ಜಂಟಿ ಕಾರ್ಯದರ್ಶಿ ಕೆ.ಆರ್.ಸತ್ಯನಾರಾ ಯಣ, ನಿರ್ದೇಶಕರಾದ ಎಸ್.ಕೆ.ದಿನೇಶ್, ಆರ್.ಎನ್.ರಮೇಶ್, ಮೈಸೂರು ನಗರ ಪಾತ್ರೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ತುಕಾರಾಂ ಸೇರಿದಂತೆ ಮೈಸೂರಿನ ವರ್ತಕರು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »