ಮೈಸೂರು

ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ

June 4, 2019

ಮೈಸೂರು: ಅತಿಸಾರ ಭೇದಿಯಿಂದ ಐದು ವರ್ಷದೊಳಗಿನ ಮಕ್ಕಳು ಸಾವಿಗೀಡಾಗುವುದನ್ನು ತಡೆ ಗಟ್ಟುವ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಇಂದಿನಿಂದ ಜೂ.17ರವರೆಗೆ ಪ್ರಸಕ್ತ ಸಾಲಿನ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ (ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯ ಕಾರ್ಯಕ್ರಮ) ನಡೆಯಲಿದೆ.

5 ವರ್ಷದೊಳಗಿನ ಮಕ್ಕಳಲ್ಲಿ ಭೇದಿ ಲಕ್ಷಣಗಳು ಕಂಡುಬಂದಲ್ಲಿ ಅಂತಹ ಪ್ರಕ ರಣಗಳನ್ನು ಸಂಶಯಾತ್ಮಕ ಅತಿಸಾರ ಭೇದಿ ಪ್ರಕರಣ ಎಂದು ಪರಿಗಣಿಸಿ, ಅಂತಹ ಮಕ್ಕಳಿಗೆ ವಿಶೇಷ ಆದ್ಯತೆಯ ಮೇರೆಗೆ 14 ದಿನಗಳವರೆವಿಗೂ ಓಆರ್‍ಎಸ್ ದ್ರಾವಣ ಮತ್ತು ಝಿಂಕ್ ಮಾತ್ರೆಗಳನ್ನು ದ್ರ್ರಾವಣ ರೂಪದಲ್ಲಿ ನೀಡಬೇಕಾಗುತ್ತದೆ. ಇದಕ್ಕೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಮಾರ್ಗದರ್ಶನ ಅಗತ್ಯ.

ಒಟ್ಟು 2,41,106 ಮಕ್ಕಳು ಜಿಲ್ಲೆಯ ಲ್ಲಿದ್ದು, 401 ಹೈರಿಸ್ಕ್ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಪಾಕ್ಷಿಕ ಕಾರ್ಯ ಕ್ರಮದ ಅಂಗವಾಗಿ ಅತಿಸಾರ ಭೇದಿ ಕಂಡು ಬರುವ ಮಕ್ಕಳಿಗೆ ಓಆರ್‍ಎಸ್ ದ್ರಾವಣ ಮತ್ತು ಝಿಂಕ್ ಮಾತ್ರೆಗಳನ್ನು ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಓಆರ್ ಎಸ್ ದ್ರಾವಣ ಮತ್ತು ಝಿಂಕ್ ಮಾತ್ರೆ ನೀಡುವ ಕಾರ್ನರ್‍ಗಳನ್ನು ತೆರೆಯ ಲಾಗಿದೆ. ಜೊತೆಗೆ ಆಶಾ ಕಾರ್ಯಕರ್ತೆ ಯರು ಮನೆ ಮನೆಗೆ ಬೇಟಿ ನೀಡಿ ಓಆರ್‍ಎಸ್ ದ್ರಾವಣ ಪ್ಯಾಕೆಟ್ ಮತ್ತು ಝಿಂಕ್ ಮಾತ್ರೆಗಳನ್ನು ವಿತರಿಸಲಿದ್ದಾರೆ. ಅತಿಸಾರ ಭೇದಿ ಸಮಸ್ಯೆ ಇರುವ ಮಕ್ಕ ಳನ್ನು ಗುರುತಿಸಿ ಅವರ ಪೋಷಕರಿಗೆ ಓಆರ್‍ಎಸ್ ದ್ರಾವಣ ಮತ್ತು ಝಿಂಕ್ ಮಾತ್ರೆಗಳನ್ನು ನೀಡುವ ಬಗ್ಗೆ ಆಶಾ ಕಾರ್ಯಕರ್ತೆಯರು ಮಾಹಿತಿ ಸಹ ನೀಡಲಿದ್ದಾರೆ. ನಗರ ಪ್ರದೇಶದ ಹೈರಿಸ್ಕ್ ಪ್ರದೇಶಗಳು ಸೇರಿದಂತೆ ಹಾಡಿ, ಬುಡಕಟ್ಟು ಹಾಗೂ ಇನ್ನಿತರ ಪ್ರದೇಶಗಳು ಕಾರ್ಯಕ್ರಮದಿಂದ ಹೊರಗುಳಿಯದಂತೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಚಾಲನೆ: ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮೈಸೂರು ತಾಲೂಕಿನ ಕೀಳನಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಮ್ ಈ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಿಪಂ ಸದಸ್ಯೆ ಕೆ.ವೈ.ಭಾಗ್ಯ, ತಾಪಂ ಸದಸ್ಯೆ ಹೆಚ್.ಎಸ್.ಅಂಜಲಿ, ಕೀಳನಪುರ ಗ್ರಾಪಂ ಅಧ್ಯಕ್ಷೆ ಸಣ್ಣಮ್ಮ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಎಲ್. ರವಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗ ಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಮ್ಮದ್ ಸಿರಾಜ್ ಅಹಮದ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಸುಮ ಮತ್ತಿತರರು ಹಾಜರಿದ್ದರು.

Translate »