ಮೈಸೂರು

ಸೆ.8, 9ರಂದು ಮೈಸೂರಲ್ಲಿ ರಾಜ್ಯಮಟ್ಟದ  ಮೌಂಟೆನ್ ಸೈಕ್ಲಿಂಗ್ ಚಾಂಪಿಯನ್‍ಶಿಪ್

August 30, 2018

ಸೆ.2ರಂದು ಜಿಲ್ಲಾ ಮಟ್ಟದ ಆಯ್ಕೆಯ ಸೈಕ್ಲಿಂಗ್ ಪಂದ್ಯಾವಳಿ
ಮೈಸೂರು:  ಮೈಸೂರು ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಸೆ.8 ಮತ್ತು 9ರಂದು ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಮೈದಾನ ದಲ್ಲಿ 14ನೇ ರಾಜ್ಯಮಟ್ಟದ ಮೌಂಟೆನ್ ಬೈಕ್ (ಸೈಕ್ಲಿಂಗ್) ಚಾಂಪಿಯನ್‍ಶಿಪ್- 2018-19 ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್‍ನ ಮುಖ್ಯಸ್ಥ ನಾಗರಾಜ್ ವೇಣು ಗೋಪಾಲ್ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಈ ಸೈಕ್ಲಿಂಗ್ ಚಾಂಪಿಯನ್‍ಶಿಪ್ ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ 250ಕ್ಕೂ ಹೆಚ್ಚು ಸೈಕಲ್ ಸವಾರರು ಪಾಲ್ಗೊಳ್ಳಲಿದ್ದಾರೆ. ಇಂಡಿವಿಜ್ಯುಯಲ್ ಟೈಮ್ ಟ್ರೈಯಲ್ (ಐಟಿಟಿ) ಮತ್ತು ಮಾಸ್ ಸ್ಟಾರ್ಟ್ (ಗ್ರೂಪ್ ರೇಸ್) ಎಂಬ ಎರಡು ವಿಭಾಗದ ಸ್ಪರ್ಧೆಗಳಿವೆ.

ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಯಸ್ಸಿನ ಅಂದರೆ, 14, 16, 18 ವಯಸ್ಸಿನೊಳಗಿನ ಅಭ್ಯರ್ಥಿಗಳು ಹಾಗೂ 18 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರಿಗೆ ಭಾಗವಹಿಸುವ ಅವ ಕಾಶವಿದೆ ಎಂದರು. ಸೆ.2ರಂದು ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿಯೇ ಮೈಸೂರು ಜಿಲ್ಲಾ ಮಟ್ಟದ ಆಯ್ಕೆಯ ಸೈಕ್ಲಿಂಗ್ ಪಂದ್ಯಾವಳಿ ನಡೆಸಲಾಗುವುದು. ಇದರಲ್ಲಿ ಪಾಲ್ಗೊಳ್ಳಲು ಮೈಸೂರು ಜಿಲ್ಲೆಯ ಸೈಕಲ್ ಸವಾರರಿಗೆ ಅವಕಾಶವಿದೆ. ಇದರಲ್ಲಿ ಉತ್ತೀರ್ಣರಾದ ಸೈಕಲ್ ಸವಾರರನ್ನು ರಾಜ್ಯಮಟ್ಟದ ಪಂದ್ಯಾವಳಿಗೆ ಅವಕಾಶ ನೀಡ ಲಾಗುವುದು ಎಂದರು. ಆಸಕ್ತ ಸೈಕಲ್ ಸವಾರರು ದೂ- 9880244649, 93792 11117 ಸಂಪರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮನುಗೌಡ, ಕಾರ್ಯದರ್ಶಿ ಸತೀಶ್‍ಬಾಬು, ಜಂಟಿ ಕಾರ್ಯದರ್ಶಿ ಎನ್.ಲೋಕೇಶ್ ಉಪಸ್ಥಿತರಿದ್ದರು.

Translate »