ಸಕಲೇಶಪುರ: ಹೇಮಾವತಿ ನದಿಯಲ್ಲಿ ತೆಪ್ಪ ಮುಳುಗಿ ಮಹಿಳೆ ನೀರು ಪಾಲಾಗಿರುವ ಘಟನೆ ತಾಲೂಕಿನ ಐಗೂರು ಗ್ರಾಮದ ಬಳಿ ಸಂಜೆ ನಡೆದಿದೆ.
ಚಿಕ್ಕಂದೂರು ನಿವಾಸಿ ಸೌಮ್ಯ ಮೃತರು. ಸತತ ಮಳೆ ಪರಿಣಾಮ ಪ್ರವಾಹದಿಂದ ಚಿಕ್ಕಂದೂರು ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದು, ತೆಪ್ಪ ಆಶ್ರಯಿಸಿ ಎಂದಿನಂತೆ ಕೃಷಿ ಕಾರ್ಯಕ್ಕೆ ತೆರಳಿ ಗ್ರಾಮಕ್ಕೆ ವಾಪಸ್ಸಾ ಗುತ್ತಿದ್ದಾಗ ಐಗೂರು ಸಮೀಪ ತೆಪ್ಪ ಮಗುಚಿದೆ. ಪರಿಣಾಮ ಸೌಮ್ಯ ನೀರು ಪಾಲಗಿದ್ದಾರೆ. ಜೊತೆಯಲ್ಲಿದ್ದ ಮೂವರು ಮಹಿಳೆಯರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಿ ಮಿಸಿದ ಯಸಳೂರು ಪೊಲೀಸರು ಸ್ಥಳೀಯ ನೆರವಿನೊಂದಿಗೆ ಮೃತ ದೇಹ ಶೋಧ ಕಾರ್ಯ ಮುಂದುವೆರೆಸಿದ್ದಾರೆ.