ಸಾಲಬಾಧೆ: ರೈತ ಆತ್ಮಹತ್ಯೆ
ಹಾಸನ

ಸಾಲಬಾಧೆ: ರೈತ ಆತ್ಮಹತ್ಯೆ

August 30, 2018

ಬೇಲೂರು:  ಸಾಲಬಾಧೆ ತಾಳದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಪ್ರಸಾದಿಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಅಣ್ಣೇಗೌಡ (65) ಆತ್ಮಹತ್ಯೆ ಮಾಡಿ ಕೊಂಡವರು. ದೀರ್ಘಕಾಲದ ಅನಾರೋಗ್ಯ ಪೀಡಿತೆ ಪತ್ನಿಯನ್ನು ಮಂಗಳವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮನೆಗೆ ವಾಪಸ್ಸಾಗಿ ನೇಣುಬಿಗಿದುಕೊಂಡಿದ್ದಾರೆ. ಮೃತರು ತಮ್ಮ ಒಂದೂವರೆ ಎಕರೆ ಜಮೀನು ಜೋಳ ಹಾಗೂ ಶುಂಠಿ ಬಿತ್ತನೆ ಮಾಡಿದ್ದರು. ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿ ಆತಂಕದಲ್ಲಿದ್ದರು. ಬ್ಯಾಂಕಿ ನಲ್ಲಿ 2 ಲಕ್ಷ ರೂ., 4 ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ಮೃತರ ಪುತ್ರ ಸತೀಶ್ ಉಜಿರೆಯಲ್ಲಿನ ಪೆಟ್ರೋಲ್‍ಬಂಕ್‍ವೊಂದರಲ್ಲಿ ಕೆಲಸದಲ್ಲಿದ್ದು, ಪುತ್ರಿಯರಿಬ್ಬರಿಗೆ ವಿವಾಹವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನಷ್ಟದಿಂದ ಮನನೊಂದಿದ್ದ ಅಣ್ಣೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. 10 ಗಂಟೆಯಾದರೂ ಜಾನುವಾರುಗಳನ್ನು ಕೊಟ್ಟಿಗೆಗೆ ಕಟ್ಟದೆ ಇದ್ದುದರಿಂದ ಅನುಮಾನಗೊಂಡ ನೆರೆಮನೆಯವರು ಹೋಗಿ ನೋಡಲಾಗಿ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬೇಲೂರು ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »