ಜ.27ರಂದು ಮೈಸೂರಿಗರ ದೈಹಿಕ, ಮಾನಸಿಕ  ಆರೋಗ್ಯಕ್ಕಾಗಿ `ಎಲಿಗ್ಸರ್ ಸೈಕ್ಲೊಥಾನ್-19’
ಮೈಸೂರು

ಜ.27ರಂದು ಮೈಸೂರಿಗರ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ `ಎಲಿಗ್ಸರ್ ಸೈಕ್ಲೊಥಾನ್-19’

January 25, 2019

ಮೈಸೂರು: ಮೈಸೂರಿನ ಜನರ ದೈಹಿಕ ಸದೃಢತೆ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಮೈಸೂರಿನ ಎಲಿಗ್ಸರ್ ಸಂಸ್ಥೆ ಜ.27ರಂದು ಬೆಳಿಗ್ಗೆ ಸೈಕ್ಲೊಥಾನ್-19 ಆಯೋಜಿಸಿದೆ. ಒಂದು ಸಾವಿರಕ್ಕೂ ಹೆಚ್ಚು ಮಂದಿ ಸೈಕಲ್ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೂಲಕ ಮೈಸೂರಿನ ಜನರಿಗೆ ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳುವಂತೆ ಉತ್ತೇಜಿಸಲಿದ್ದಾರೆ ಎಂದು ಎಲಿಗ್ಸರ್ ತಂಡದ ಪರವಾಗಿ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಕಲ್ ಬಳಕೆ ಯಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಿ ಕೊಳ್ಳಬಹುದಾಗಿದೆ. ಹೀಗಾಗಿ ಅಂದು ಬೆಳಿಗ್ಗೆ 6.30 ಗಂಟೆಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡುವ ನಿರೀಕ್ಷೆಯಿದೆ.

ಸೈಕಲ್ ರ್ಯಾಲಿ ದೇವರಾಜ ಅರಸ್ ರಸ್ತೆ, ಜಿಲ್ಲಾಧಿಕಾರಿ ಕಚೇರಿ, ಮೆಟ್ರೊ ಪೋಲ್ ವೃತ್ತ, ಜೆಎಲ್‍ಬಿ ರಸ್ತೆ, ರೈಲ್ವೆ ನಿಲ್ದಾಣ ವೃತ್ತ, ಸಯ್ಯಾಜಿರಾವ್ ರಸ್ತೆ, ಓಲ್ಡ್ ಬ್ಯಾಂಕ್ ರಸ್ತೆ, ಗಾಂಧಿ ಚೌಕ, ಅಶೋಕ ರಸ್ತೆ ಮೂಲಕ ಪುರಭವನ ಮುಖ್ಯ ದ್ವಾರದಲ್ಲಿ ಅಂತ್ಯಗೊಳ್ಳಲಿದೆ. ಇದಕ್ಕಾಗಿ 200 ಟ್ರಿಣ್ ಟ್ರಿಣ್ ಸೈಕಲ್‍ಗಳನ್ನು ಬಳಸಲಾಗುತ್ತಿದ್ದು, ಉಳಿದ ಸವಾರರು ತಮ್ಮ ಸೈಕಲ್‍ಗಳನ್ನು ತರುವಂತೆ ತಿಳಿಸ ಲಾಗಿದೆ ಎಂದು ತಿಳಿಸಿದರು. ರ್ಯಾಲಿಯಲ್ಲಿ ಭಾಗ ವಹಿಸಲು ಯಾವುದೇ ಪ್ರವೇಶ ದರವಿಲ್ಲ, ಬಹು ಮಾನವೂ ಇಲ್ಲ. ಭಾಗವಹಿಸಿದ ಎಲ್ಲರಿಗೂ ಕ್ಯಾಪ್, ಪ್ರಶಸ್ತಿ ಪತ್ರ, ಲಘು ಉಪಹಾರ ಹಾಗೂ ಆರೋಗ್ಯ ತಪಾಸಣಾ ರಿಯಾಯಿತಿ ಪತ್ರ ವಿತರಿಸಲಾಗುವುದು. ಎಕ್ಸೈಡ್ ಲೈಫ್ ಇನ್ಷೂರೆನ್ಸ್, ನಾರಾಯಣ ಹೃದಯಾ ಲಯ ಆಸ್ಪತ್ರೆ ನಮ್ಮೊಂದಿಗೆ ಕೈಜೋಡಿಸಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎಲಿಗ್ಸರ್‍ನ ಸಂಘಟಕ ರಾದ ಸಾಖಿಬ್ ಅಹಮದ್, ಮಹಮದ್ ಶಜೈಬ್, ಅಲಿನಾ, ಫುರ್ಖಾನ್ ಉಪಸ್ಥಿತರಿದ್ದರು.

Translate »