ಸರ್ಕಾರಿ ಕಾಮಗಾರಿಗಳ ಖನಿಜ ಬಳಕೆಗೆ ರಾಜಧನ ಕಡಿತ ಕಡ್ಡಾಯ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ.
ಹಾಸನ

ಸರ್ಕಾರಿ ಕಾಮಗಾರಿಗಳ ಖನಿಜ ಬಳಕೆಗೆ ರಾಜಧನ ಕಡಿತ ಕಡ್ಡಾಯ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ.

January 25, 2019

ಹಾಸನ: ಸರ್ಕಾರಿ ಕಾಮ ಗಾರಿಗಳಿಗೆ ಬಳಸುವ ಮರಳು ಮತ್ತು ಉಪ ಖನಿಜಗಳಿಗೆ ನಿಯಮಾನುಸಾರ ರಾಜಧನ ಮತ್ತು ಜಿಲ್ಲಾ ಖನಿಜ ನಿಧಿ ತೆರಿಗೆಯನ್ನು ಕಡ್ಡಾಯವಾಗಿ ಕಡಿತಗೊಳಿಸಿ ಪಾವತಿಸು ವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿಂದು ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮ ಗಾರಿಗಳು ಹಾಗೂ ಇತರೆ ಸರ್ಕಾರಿ ಕಾಮ ಗಾರಿಗೆ ಅನುಗುಣವಾಗಿ ರಾಜಧನ, ಡಿ.ಎಂ.ಎಫ್ ಹಾಗೂ ಇತರೆ ತೆರಿಗೆಗಳನ್ನು ಕಟಾಯಿಸುತ್ತಿರುವ ಕುರಿತು ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದರು.

ಸರ್ಕಾರಿ ಕಾಮಗಾರಿಗಳಲ್ಲಿ ಹೆಚ್ಚಾಗಿ ಎಂ ಸ್ಯಾಂಡ್ ಬಳಕೆಗೆ ಆದ್ಯತೆ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ರಾಷ್ಟ್ರೀಯ ಹೆದ್ದಾರಿ, ಎತ್ತಿನಹೊಳೆ ಯೋಜನೆ ಸೇರಿದಂತೆ ಸರ್ಕಾರಿ ಕಾಮಗಾರಿಗೆ ಬಳಸ ಲಾಗುತ್ತಿರುವ ಮರಳು ಮತ್ತು ಇತರ ಖನಿಜಗಳಿಗೆ ನಿಖರವಾಗಿ ರಾಜಧನ ಕಡಿತ ಗೊಳಿಸದೇ ಇರುವುದು ಮತ್ತು ಜಿಲ್ಲಾ ಖನಿಜ ನಿಧಿಗೆ ಹಣ ಪಾವತಿ ಮಾಡದೇ ಇರುವು ದನ್ನು ಗಮನಿಸಲಾಗಿದೆ. ಎಲ್ಲಾ ಇಲಾಖೆ ಗಳು ಈ ಬಗ್ಗೆ ಕಡ್ಡಾಯವಾಗಿ ಕ್ರಮ ವಹಿಸ ಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಿರ್ದೇಶನ ನೀಡಿದರು.

ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಯ ಮರಳು ಬಳಸಿ ರಾಜಧನವನ್ನು ಚಿತ್ರ ದುರ್ಗ ಕಚೇರಿಯಲ್ಲಿ ಕಡಿತ ಮಾಡಲಾಗು ತ್ತಿದೆ ಎಂದು ಅಧಿಕಾರಿಗಳು ವರದಿ ನೀಡುತ್ತಿದ್ದಾರೆ. ಆಯಾಯ ಜಿಲ್ಲೆಗೆ ಅದು ಸಂದಾಯ ವಾಗಬೇಕು. ಈ ಬಗ್ಗೆ ಸಂಬಂಧಿಸಿದ ಅಧಿ ಕಾರಿಗಳು ಕ್ರಮ ವಹಿಸಬೇಕೆಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸ್ಥಳೀಯ ಆಡಳಿತದ ಗಮನಕ್ಕೆ ತಾರದೆ, ಸಾಮಗ್ರಿಗಳನ್ನು ಸಂಗ್ರಹಿಸದೆ ನಗರದ ಮಧ್ಯಭಾಗದಲ್ಲಿ ಅಗೆದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿರುವುದು ಸಮರ್ಪಕವಲ್ಲ. ಕೂಡಲೇ ಲೋಪ ಸರಿ ಪಡಿಸಿ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು.

ಸಭೆಯಲ್ಲಿ 2016-17, 2017-18 ಹಾಗೂ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕೈ ಗೊಳ್ಳಲಾಗಿರುವ ಸರ್ಕಾರಿ ಕಾಮಗಾರಿ ಗಳಿಗೆ ಉಪಯೋಗಿಸುತ್ತಿರುವ, ನಿರ್ವಹಿತ್ತಿ ರುವ ಹಾಗೂ ಪ್ರಾರಂಭವಾಗಬೇಕಿರುವ ಸರ್ಕಾರಿ ಕಾಮಗಾರಿಗಳಿಗೆ ಅವಶ್ಯವಿರುವ ಉಪಖನಿಜಗಳ ಕುರಿತು ಚರ್ಚೆ ಮಾಡಲಾಯಿತು.

ಉಪಖನಿಜ ಸಾಗಾಣಿಕಾ ಪರವಾನಗಿ (ಎಂಡಿಪಿ)ಯನ್ನು ಪಡೆಯದೆ ಸರ್ಕಾರಿ ಕಾಮಗಾರಿಗಳಲ್ಲಿ ಬಳಸುವ ಉಪಖನಿಜ ಗಳ ಗಾತ್ರಕ್ಕೆ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ-1994ರ ತಿದ್ದುಪಡಿ ಅಧಿನಿಯಮ 2017ರ ನಿಯಮ 44(4)ರಂತೆ ರಾಜಧನದ ಐದು ಪಟ್ಟು ದಂಡದ ಮೊತ್ತವನ್ನು ಕಟಾಯಿಸಿ ಸರ್ಕಾ ರಕ್ಕೆ ಸಂದಾಯ ಮಾಡುವಂತೆ ಜಿಲ್ಲಾ ಧಿಕಾರಿ ಸೂಚನೆ ನೀಡಿದರು.

ಕೆ.ಎಂ.ಎಂ.ಸಿ.ಆರ್ 1994ರ ತಿದ್ದುಪಡಿ ಆಧಿನಿಯಮ 2016 ನಿಯಮ 36(ಎ)ರಲ್ಲಿ ಕಡ್ಡಾಯವಾಗಿ ಉಪಖನಿಜ (ಮಣ್ಣು/ಮುರ್ರಂ, ಜೆಲ್ಲಿ, ಕಟ್ಟಡಕಲ್ಲು, ಮರಳು, ಇತ್ಯಾದಿ) ಗಳಿಗೆ ಕಡ್ಡಾಯವಾಗಿ ಉಪಖನಿಜ ಸಾಗಾಣಿಕಾ ಪರವಾನಗಿ (ಎಂಡಿಪಿ) ಯನ್ನು ಪಡೆ ಯುವ ಬಗ್ಗೆ ಚರ್ಚೆ ನಡೆಸಲಾಯಿತು.

ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ, ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »