ನವದೆಹಲಿ, ಆ.25- ಶನಿವಾರ ನಿಧನರಾದ ಬಿಜೆಪಿ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಕೇಂದ್ರ ಹಣಕಾಸು ಸಚಿವ ಅರುಣ್ ಮಹಾರಾಜ್ ಕಿಶನ್ ಜೇಟ್ಲಿ (66) ಅವರು ಭಾನುವಾರ ಮಧ್ಯಾಹ್ನ ಪಂಚಭೂತಗಳಲ್ಲಿ ಲೀನವಾದರು. ಇಂದು ಮಧ್ಯಾಹ್ನ ದೆಹಲಿಯ ನಿಗಂ ಬೋಧ್ ಘಾಟನ್‍ನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅರುಣ್ ಜೇಟ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಇದಕ್ಕೂ ಮುನ್ನ ಅರುಣ್ ಜೇಟ್ಲಿ ಅವರ ಪಾರ್ಥಿವ ಶರೀರವನ್ನು ಬಿಜೆಪಿ ಪ್ರಧಾನ ಕಚೇರಿಯಿಂದ ನಿಗಂಬೋಧ್‍ವರೆಗೆ ಮೆರ ವಣಿಗೆ ಮೂಲಕ ತರಲಾಯಿತು. ಬಿಜೆಪಿ ರಾಷ್ಟ್ರೀಯ…
ಅರುಣ್ ಜೇಟ್ಲಿ ಸ್ಥಿತಿ ಗಂಭೀರ
August 19, 2019ಹೊಸದಿಲ್ಲಿ, ಆ.18- ಕಳೆದ ಏಳು ದಿನಗಳಿಂದ ಹೊಸದಿಲ್ಲಿಯ ಏಮ್ಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ)ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಹಣಕಾಸು ಸಚಿವ, ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರ ವಾಗಿದೆ ಎಂದು ಮೂಲಗಳು ತಿಳಿಸಿವೆ. ಏಮ್ಸ್ ವೈದ್ಯರು ಆಗಸ್ಟ್ 9ರಂದು ಜೇಟ್ಲಿ ಆರೋಗ್ಯ ಸ್ಥಿರವಾಗಿದೆ ಎಂದು ಪ್ರಕಟಣೆ ನೀಡಿದ್ದರು. ಬಳಿಕ ಅವರ ಆರೋಗ್ಯ ಸ್ಥಿತಿ ಬಗ್ಗೆ ಯಾವುದೇ ವಿಷಯ ಬಹಿರಂಗವಾಗಿರಲಿಲ್ಲ. ಆದರೆ ಮೂಲಗಳ ಪ್ರಕಾರ ಅವರು ಈಗಲೂ ಸಹ ತೀವ್ರ…
200 ಪಾಯಿಂಟ್ ರೋಸ್ಟರ್ ವ್ಯವಸ್ಥೆ ಜಾರಿಗೆ ಸುಗ್ರೀವಾಜ್ಞೆ: ಕೇಂದ್ರ ಸಂಪುಟ ಅನುಮೋದನೆ
March 8, 2019ನವದೆಹಲಿ: ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಬೋಧಕರ ನೇಮಕಾತಿಯಲ್ಲಿ ಮೀಸಲಾತಿಗಾಗಿ 200 ಅಂಶಗಳ ರೋಸ್ಟರ್ ಪದ್ಧತಿಯನ್ನು ಜಾರಿಗೊಳಿಸುವ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ಯಲ್ಲಿ ನಡೆದ ಸಚಿವ ಸಂಪುಟ ಸಭೆ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಉದ್ದೇಶಿತ ಪ್ರಸ್ತಾವನೆ ವಿಶ್ವವಿದ್ಯಾಲಯಗಳಲ್ಲಿ ಬೋಧಕರ ಹುದ್ದೆಗಳ ನೇಮಕಾತಿಯಲ್ಲಿ ದಲಿತರು, ಬುಡಕಟ್ಟು ಸಮುದಾಯ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಖಾತರಿ ಪಡಿಸುತ್ತದೆ. ಕೇಂದ್ರ ಸರ್ಕಾರ…
ಕಾಂಗ್ರೆಸ್ ದೇವೇಗೌಡ, ಐಕೆ ಗುಜ್ರಾಲ್‍ಗೆ ಮಾಡಿದ್ದನ್ನೇ ಕುಮಾರಸ್ವಾಮಿಗೂ ಮಾಡುತ್ತಿದೆ!
July 17, 2018ನವದೆಹಲಿ: “ಮುಖ್ಯಮಂತ್ರಿಯಾದರೂ ಸಂತೋಷ ವಾಗಿಲ್ಲ” ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಕಣ್ಣೀರಿಟ್ಟಿರುವುದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ದೇವೇಗೌಡ, ಐಕೆ ಗುಜ್ರಾಲ್, ಚರಣ್ ಸಿಂಗ್, ಚಂದ್ರಶೇಖರ್ ಅವರಿಗೆ ಮಾಡಿದ್ದನ್ನೇ ಕುಮಾರಸ್ವಾಮಿಗೂ ಮಾಡುತ್ತಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ. ಕಾಂಗ್ರೆಸ್ ಕುಮಾರ ಸ್ವಾಮಿ ಅವರನ್ನು ಖಿನ್ನತೆಗೆ ದೂಡಿದೆ ಎಂದು ಆರೋಪಿಸಿರುವ ಅರುಣ್ ಜೇಟ್ಲಿ, ಕೇವಲ ಮೋದಿಯನ್ನು ಅಧಿಕಾರ ದಿಂದ ದೂರವಿಡುವುದಕ್ಕಾಗಿ ಸೈದ್ಧಾಂತಿಕ ವಿರೋಧಿಗಳೊಂದಿಗೆ ಕಾಂಗ್ರೆಸ್ ಅವಕಾಶವಾದಿತನದ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಜೇಟ್ಲಿ ಫೇಸ್ ಬುಕ್ ಪೋಸ್ಟ್…