ಮಂಡ್ಯ: ವಿಶ್ವ ವಿಖ್ಯಾತ ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆ ಯಿಂದ ಅಣೆಕಟ್ಟೆಗೆ ಧಕ್ಕೆಯಾಗಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಗಣಿಗಾರಿಕೆ ನಡೆಸಿ ದರೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಅಧ್ಯಯನ ನಡೆಸಿ ತಾಂತ್ರಿಕ ವರದಿ ನೀಡುವ ಸಲುವಾಗಿ ಪುಣೆಯ ಸಿಡಬ್ಲ್ಯೂಪಿಆರ್‍ಎಸ್ ವಿಜ್ಞಾನಿಗಳ ತಂಡ ನಾಳೆ (ಜ.28) ಗಣಿಗಾರಿಕೆ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ (ಪರೀಕ್ಷಾರ್ಥ ಸ್ಫೋಟ) ನಡೆಸಲಿದೆ. ಆದರೆ ಈ ಟ್ರಯಲ್ ಬ್ಲಾಸ್ಟ್‍ಗೆ ರೈತರು ಮತ್ತು ಪ್ರಗತಿಪರರು ಹಾಗೂ ಕಾವೇರಿ ಹಿತರಕ್ಷಣಾ ಸಮಿತಿಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಸಂಘಟನೆಗಳು ನಾಳೆ ‘ಗೋ…
ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಅಪಾಯವಿಲ್ಲ: ಸ್ಪಷ್ಟನೆ
October 11, 2018ಮಂಡ್ಯ:ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಯಾವುದೇ ಅಪಾಯವಿಲ್ಲ ಎಂದು ಗಣಿ ಮಾಲೀಕರು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಂಡವಪುರ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೃಷ್ಣಪ್ಪ ಅವರು, ಬೇಬಿ ಬೆಟ್ಟದ ಸುತ್ತಲಿನ ಸುಮಾರು 24 ಗಣಿಗಾರಿಕೆಗಳು ಕಾನೂನು ಬದ್ದವಾಗಿಯೇ ನಡೆಯುತ್ತಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಾನದಂಡದಂತೆಯೇ ನಡೆಸಲಾಗುತ್ತಿದೆ. ಆದರೂ, ನಮ್ಮ ಗಣಿಗಾರಿಕೆಗಳನ್ನು ಸ್ಥಗಿತಗೊಳಿಸುವ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ತಿಳಿಸಿದರು. ಕೆಆರ್‌ಎಸ್ ವ್ಯಾಪ್ತಿಯ…
ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆ ಸ್ಥಗಿತ
October 10, 2018ಮಂಡ್ಯ: ಜಿಲ್ಲೆಯ ಜೀವ ನಾಡಿ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯಕಾರಿ ಯಾಗಿದ್ದ ಎಲ್ಲಾ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಡಿಸಿ ಎನ್. ಮಂಜುಶ್ರೀ ಆದೇಶ ಹೊರಡಿಸಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣ ರಾಜಸಾಗರ ಜಲಾಶಯದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಮಂಗಳವಾರ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಅಧಿಕಾರಿಗಳ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಂಜುಶ್ರೀ ಅವರು, ಕೃಷ್ಣರಾಜಸಾಗರ ಜಲಾಶಯದ 20 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಷೇಧಿಸುವಂತೆ ಪ್ರಕೃತಿ ವಿಕೋಪ ಕೇಂದ್ರ…
ಮೈಸೂರು, ಮಂಡ್ಯ ಭಾಗದ ಜನರ ತಲ್ಲಣಗೊಳಿಸಿದ ಭಾರೀ ಸದ್ದು
September 26, 2018ಮೈಸೂರು: ಇತ್ತೀಚೆಗೆ ತಾನೆ ಕೊಡಗಿನಲ್ಲಿ ಉಂಟಾದ ಭೂಕಂಪನ ಹಾಗೂ ಪ್ರವಾಹದ ಭೀಕರತೆಯಿಂದ ಚೇತರಿಸಿಕೊಳ್ಳುವ ಮುನ್ನವೇ ಇಂದು ಮಧ್ಯಾಹ್ನ 2 ಬಾರಿ ಕೇಳಿ ಬಂದ ಭಾರೀ ಸದ್ದಿನಿಂದಾಗಿ ಮೈಸೂರು ಮತ್ತು ಮಂಡ್ಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಕೊಡಗಿನಲ್ಲಿ ಕೂಡ ದುರಂತ ಸಂಭವಿ ಸುವ ಮುನ್ನ ಭಾರೀ ಶಬ್ದ ಕೇಳಿಬಂದಿತ್ತು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮೈಸೂರು ಸುತ್ತಮುತ್ತ ಭೂ ಕಂಪನ ಉಂಟಾಗಿರಬಹುದೆಂದು ಜನರು ಆತಂಕಕ್ಕೊಳಗಾಗಿದ್ದರು. `ಮೈಸೂರು ಮಿತ್ರ’ ಕಾರ್ಯಾಲಯಕ್ಕೆ ಕರೆ ಮಾಡಿದ ಮಂಡ್ಯ ಹಾಗೂ ಮೈಸೂರಿನ ಹಲವರು, ತಮಗೆ ಉಂಟಾದ…
ಸದಾಶಿವ ಸ್ವಾಮೀಜಿಗಳ ಅಂತ್ಯಕ್ರಿಯೆ
July 6, 2018ಪಾಂಡವಪುರ: ತಾಲೂಕಿನ ಬೇಬಿಬೆಟ್ಟದ ಸದಾಶಿವ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬೇಬಿ ಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಆವರಣದಲ್ಲಿ ನಡೆಯಿತು.ರಾಜ್ಯದ ನಾನಾ ಭಾಗಗಳಿಂದ ಆಗಮಿ ಸಿದ್ದ ವಿವಿಧ ಮಠಗಳ ಮಠಾಧೀಶರು, ಮಠದ ಭಕ್ತರು ಹಾಗೂ ಸಾರ್ವಜನಿಕರು ಮಠದ ಆವರಣದಲ್ಲಿ ಇಡಲಾಗಿದ್ದ ಸದಾ ಶಿವ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಬೆಳಿಗ್ಗೆ 11.30ರ ವೇಳೆಗೆ ಸ್ವಾಮೀಜಿ ಅವರ ಮೃತದೇಹವನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮಠದ ಆವರಣದಲ್ಲಿ ಒಂದು ಸುತ್ತು ಮೆರವಣಿಗೆ ನಡೆಸಲಾಯಿತು. ನಂತರ ಮಠದ…
ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ನಿಧನ
July 5, 2018ಬೆಂಗಳೂರಿನ ಭಕ್ತರ ಮನೆಯಲ್ಲಿ ಹೃದಯಾಘಾತ, ಭಕ್ತರು-ಗಣ್ಯರಿಂದ ಸಂತಾಪ ಪಾಂಡವಪುರ: ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀಸದಾಶಿವ ಸ್ವಾಮೀಜಿ(60) ಅವರು ಬುಧವಾರ ಮುಂಜಾನೆ 5.30ರಲ್ಲಿ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಬೆಂಗಳೂರಿನ ಭಕ್ತರ ಮನೆಗೆ ತೆರಳಿದ ಸಂದರ್ಭದಲ್ಲಿ ಸ್ವಾಮೀಜಿ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಭಕ್ತರ ಕುಟುಂಬದ ವಿವಾಹಕ್ಕೆಂದು ತೆರಳಿದ್ದ ಸ್ವಾಮೀಜಿ ವಿವಾಹದಲ್ಲಿ ಪಾಲ್ಗೊಂಡ ಬಳಿಕ ಕಳೆದ ರಾತ್ರಿ ಶಾಂತಕುಮಾರ್ ಎಂಬ ಭಕ್ತರೊಬ್ಬರ ಮನೆಯಲ್ಲಿ ತಂಗಿದ್ದರು. ಭಕ್ತರ ಮನೆಯಲ್ಲಿ ಮಲಗಿದ್ದಾಗ ಬೆಳಿಗ್ಗೆ 5 ಗಂಟೆಗೆ ಪೂಜೆಗೆಂದು ಎದ್ದೇಳಿಸಿದಾಗ ಸ್ವಾಮೀಜಿ ಇಹಲೋಕ…