Tag: Chamarajanagar

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಮಾನಸಿಕ ಪರಿವರ್ತನೆ ಅಗತ್ಯ
ಚಾಮರಾಜನಗರ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಮಾನಸಿಕ ಪರಿವರ್ತನೆ ಅಗತ್ಯ

June 13, 2018

ಚಾಮರಾಜನಗರ:  ಸಾಮಾ ಜಿಕ ಪಿಡುಗಾಗಿ ಪರಿಣಮಿಸಿರುವ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿ ಯೊಬ್ಬರಲ್ಲೂ ಮಾನಸಿಕ ಪರಿವರ್ತನೆ ಅಗತ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್ ತಿಳಿಸಿದ್ದಾರೆ. ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಸಂಯು ಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ…

ಸಾಲಮನ್ನಾಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ
ಚಾಮರಾಜನಗರ

ಸಾಲಮನ್ನಾಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

June 13, 2018

ಚಾಮರಾಜನಗರ:  ರೈತರ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತದೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಶ್ರೀಚಾಮರಾಜೇಶ್ವರಸ್ವಾಮಿ ದೇವ ಸ್ಥಾನದ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೆ ರೈತರು ಪ್ರತಿಭಟನೆ ನಡೆ ಸಿದರು. ವೃತ್ತದಲ್ಲಿ ಜಮಾಯಿಸಿ ರಾಜ್ಯ ದಲ್ಲಿ ಅಧಿಕಾರದಲ್ಲಿ ಇರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತರ ಎಲ್ಲಾ ರೀತಿಯ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ರೈತರ…

ನಾಳೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಚಾಮರಾಜನಗರ

ನಾಳೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

June 13, 2018

ಚಾಮರಾಜನಗರ : ನಗರದ ಭುವನೇಶ್ವರಿ ವೃತ್ತದಲ್ಲಿ ಇರುವ ಪೇಟೆ ಪ್ರೈಮರಿ ಶಾಲೆ ರಂಗಮಂದಿರದ ಆವರಣದಲ್ಲಿ ಜೂನ್ 14 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ವಿಶ್ವ ಸ್ವಯಂಪ್ರೇರಿತ ರಕ್ತ ದಾನಿಗಳ ದಿನಾಚರಣೆ ಪ್ರಯುಕ್ತ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ” ವನ್ನು ಆಯೋಜಿಸಲಾಗಿದೆ. ನಗರದ ರೋಟರಿ ಸಿಲ್ಕ್‍ಸಿಟಿ, ರಕ್ತನಿಧಿ ಕೇಂದ್ರ ಜಿಲ್ಲಾಸ್ಪತ್ರೆ, ಪ್ರಾಥಮಿಕ ಶಾಲಾ ಶಿಕ್ಷಕರ ಸ್ನೇಹ ಬಳಗ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಜೂನ್ 14 ರಂದು…

ವಂಚನೆ ಆರೋಪ; ಜಿಯೋ ಕಚೇರಿ ಮುಂದೆ ಪ್ರತಿಭಟನೆ
ಚಾಮರಾಜನಗರ

ವಂಚನೆ ಆರೋಪ; ಜಿಯೋ ಕಚೇರಿ ಮುಂದೆ ಪ್ರತಿಭಟನೆ

June 13, 2018

ಚಾಮರಾಜನಗರ: ಮೊಬೈಲ್ ಟವರ್ ನಿರ್ಮಿಸುವುದಾಗಿ ಹೇಳಿ ರೈತರೊಬ್ಬರ ಜಮೀನನ್ನು ಗುಂಡಿ ತೆಗೆದು ಹಾಳು ಮಾಡಲಾಗಿದೆ ಎಂದು ಆರೋಪಿಸಿ ರೈತರು ರಿಲಯನ್ಸ್ ಕಂಪನಿಯ ನಗರದ ಜಿಯೋ ಮುಖ್ಯ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು. ನಗರದ ಅಗ್ರಹಾರ ಬೀದಿಯಲ್ಲಿ ಇರುವ ಜಿಯೋ ಮುಖ್ಯ ಕಚೇರಿ ಮುಂದೆ ಜಮಾಯಿಸಿದ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಹಾಗೂ ರೈತರು, ರಿಲಯನ್ಸ್ ಕಂಪನಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗುಂಡ್ಲುಪೇಟೆ ತಾಲೂಕಿನ ಎಲಚಗಟ್ಟಿ ಮಾದಪ್ಪ ಎಂಬುವರ ಜಮೀನಿನಲ್ಲಿ ಮೊಬೈಲ್ ಟವರ್…

ಗ್ರಾಮ ಪಂಚಾಯಿತಿ ಉಪಚುನಾವಣೆ: ನಾಳೆ ಸಂತೆ, ಜಾತ್ರೆ ನಿಷೇಧ
ಚಾಮರಾಜನಗರ

ಗ್ರಾಮ ಪಂಚಾಯಿತಿ ಉಪಚುನಾವಣೆ: ನಾಳೆ ಸಂತೆ, ಜಾತ್ರೆ ನಿಷೇಧ

June 13, 2018

ಚಾಮರಾಜನಗರ:  ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಜೂನ್ 14ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ತಾಲೂಕಿನ ಬಾಗಳಿ ಹಾಗೂ ಯಳಂದೂರು ತಾಲೂಕಿನ ಯರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪ್ರದೇಶಗಳಲ್ಲಿ ಸಂತೆ ಮತ್ತು ಎಲ್ಲಾ ತರಹದ ಜಾತ್ರೆಗಳನ್ನು ನಿಷೇಧಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಕೆ.ಎಂ. ಗಾಯತ್ರಿ ಆದೇಶ ಹೊರಡಿಸಿದ್ದಾರೆ. ಮತದಾನ ದಿನದಂದು ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಹಾಗೂ ಮತ ಚಲಾಯಿಸಲು ಅನುಕೂಲವಾಗುವಂತೆ ಬಾಗಳಿ ಹಾಗೂ…

ತೋಟಗಾರಿಕೆ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಜಾರಿ
ಚಾಮರಾಜನಗರ

ತೋಟಗಾರಿಕೆ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಜಾರಿ

June 12, 2018

ಚಾಮರಾಜನಗರ: ತೋಟಗಾರಿಕೆ ಇಲಾಖೆಯು 2018ರ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ತಾಲೂಕಿನಲ್ಲಿ ಬೆಳೆಯುವ ಮುಖ್ಯ ತೋಟ ಗಾರಿಕಾ ಬೆಳೆಗಳಿಗೆ ಅನುಷ್ಠಾನಗೊಳಿಸುತ್ತಿದೆ.ಚಾಮರಾಜನಗರ ತಾಲೂಕಿನ ಕಸಬಾ, ಚಂದಕವಾಡಿ ಹೋಬಳಿಗೆ ಈರುಳ್ಳಿ (ನೀರಾ ವರಿ), ಅರಿಶಿನ, ಟೊಮೆಟೊ (ಅನಿರ್ದಿಷ್ಟ), ಹರದನಹಳ್ಳಿ ಹೋಬಳಿಗೆ ಈರುಳ್ಳಿ (ನೀರಾ ವರಿ), ಅರಿಶಿನ, ಆಲೂಗಡ್ಡೆ, ಟೊಮೆಟೊ (ಅನಿರ್ದಿಷ್ಟ), ಹರವೆ ಹಾಗೂ ಸಂತೇಮರ ಹಳ್ಳಿ ಹೋಬಳಿಗೆ ಅರಿಶಿನ, ಟೊಮೆಟೊ (ಅನಿರ್ದಿಷ್ಟ) ಬೆಳೆ ವಿಮೆ ವ್ಯಾಪ್ತಿಗೆ ಒಳಪಡಲಿವೆ. ಗುಂಡ್ಲುಪೇಟೆ ತಾಲೂಕಿನ ಕಸಬಾ, ಬೇಗೂರು, ಹಂಗಳ, ತೆರಕಣಾಂಬಿ…

ಸತ್ಯ ಒಪ್ಪುವ ಮನೋಭಾವ ಬೆಳೆಸಿಕೊಳ್ಳಲು ಸಲಹೆ: ಕರ್ನಾಟಕ ಬುಡಕಟ್ಟು ಮಹಾಕಾವ್ಯಗಳ ನಿರ್ವಾಚನ ಉಪನ್ಯಾಸಗೋಷ್ಠಿ, ಸಾಹಿತ್ಯ ಲೋಕ ಕಾರ್ಯಕ್ರಮ
ಚಾಮರಾಜನಗರ

ಸತ್ಯ ಒಪ್ಪುವ ಮನೋಭಾವ ಬೆಳೆಸಿಕೊಳ್ಳಲು ಸಲಹೆ: ಕರ್ನಾಟಕ ಬುಡಕಟ್ಟು ಮಹಾಕಾವ್ಯಗಳ ನಿರ್ವಾಚನ ಉಪನ್ಯಾಸಗೋಷ್ಠಿ, ಸಾಹಿತ್ಯ ಲೋಕ ಕಾರ್ಯಕ್ರಮ

June 12, 2018

ಚಾಮರಾಜನಗರ: ಸತ್ಯ ಯಾವಾಗಲೂ ಕಹಿ ಆಗಿರುತ್ತದೆ. ಇದನ್ನು ಒಪ್ಪಿಕೊಳ್ಳಲು ನಾವೆಲ್ಲರೂ ಸಿದ್ಧರಾಗ ಬೇಕು ಎಂದು ಸಾಹಿತಿ ಹಾಗೂ ಚಿಂತಕ ಪ್ರೊ.ಕೆ.ಗೋವಿಂದಯ್ಯ ಹೇಳಿದರು.ನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಯಲ್ಲಿ ಸೋಮವಾರ ನವದೆಹಲಿಯ ಸಾಹಿತ್ಯ ಅಕಾಡೆಮಿ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಿಂದ ನಡೆದ ಸಾಹಿತ್ಯ ಲೋಕ ಹಾಗೂ ಕರ್ನಾಟಕ ಬುಡಕಟ್ಟು ಮಹಾಕಾವ್ಯಗಳ ನಿರ್ವಾಚನ ಉಪನ್ಯಾಸ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. 1970ರ ದಶಕದಲ್ಲಿ ಹೊರ ಬಂದ ಮಹದೇಶ್ವರ ಕಾವ್ಯದಲ್ಲಿ ಮಹದೇಶ್ವರರು ಮಾದಿಗರು ಎಂದು ಹೇಳಲಾಗಿದೆ. ಇದು ನಾಡಿನಾದ್ಯಂತ ಭಾರಿ…

ಕೇಂದ್ರ ಸರ್ಕಾರದ ಸಾಧನೆ ತಿಳಿಸಲು ಸಲಹೆ
ಚಾಮರಾಜನಗರ

ಕೇಂದ್ರ ಸರ್ಕಾರದ ಸಾಧನೆ ತಿಳಿಸಲು ಸಲಹೆ

June 11, 2018

ಚಾಮರಾಜನಗರ:  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳಿಂದ ಆಗುತ್ತಿರುವ ಅನು ಕೂಲವನ್ನು ಪಕ್ಷದ ಪ್ರತಿಯೊಬ್ಬ ಮುಖಂ ಡರು ಹಾಗೂ ಕಾರ್ಯಕರ್ತರು ಸಾಮಾನ್ಯ ಜನರಿಗೆ ತಿಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಕರೆ ನೀಡಿದರು. ನಗರದ ಮಹಾವೀರ ಭವನದಲ್ಲಿ ಭಾನು ವಾರ ಬಿಜೆಪಿಯಿಂದ ಆಯೋಜಿಸಿದ್ದ ಕೇಂದ್ರ ಸರ್ಕಾರದ 4 ವರ್ಷಗಳ ಸಾಧ ನೆಯ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು…

ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯ ಕಬ್ಬು ಬೆಳೆಗಾರರ ಸಂಘದಿಂದ ರಸ್ತೆ ತಡೆ, ಪ್ರತಿಭಟನೆ
ಚಾಮರಾಜನಗರ

ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯ ಕಬ್ಬು ಬೆಳೆಗಾರರ ಸಂಘದಿಂದ ರಸ್ತೆ ತಡೆ, ಪ್ರತಿಭಟನೆ

June 11, 2018

ಚಾಮರಾಜನಗರ:  ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿ ನಗರದಲ್ಲಿ ಭಾನುವಾರ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಅಂಚೆ ಕಚೇರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಸಮಾವೇಶ ಗೊಂಡ ರೈತರು ಹಾಗೂ ಕಬ್ಬು ಬೆಳೆ ಗಾರರ ಸಂಘದ ಪದಾಧಿಕಾರಿಗಳು ಹೆದ್ದಾರಿ ತಡೆದು, ಕೇಂದ್ರ ಹಾಗೂ ರಾಜ್ಯ ಸರ್ಕಾ ರದ ವಿರುದ್ಧ ಘೋಷಣೆ ಕೂಗಿದರು. ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ದೇಶದಲ್ಲಿ ರೈತರು ದಿನದಿಂದ ದಿನಕ್ಕೆ ಹಲವು ಸಂಕಷ್ಟಗಳಿಗೆ ತುತ್ತಾಗುತ್ತಿದ್ದು, ಆತ್ಮಹತ್ಯೆ ಹಾದಿ…

ವಿಶ್ವ ಪರಿಸರ ದಿನಾಚರಣೆ: ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಸ್ವಚ್ಛತಾ ಅಭಿಯಾನ
ಚಾಮರಾಜನಗರ

ವಿಶ್ವ ಪರಿಸರ ದಿನಾಚರಣೆ: ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಸ್ವಚ್ಛತಾ ಅಭಿಯಾನ

June 10, 2018

ಅರಣ್ಯ ಇಲಾಖೆ ಹಾಗೂ ಸ್ವಯಂ ಸೇವಕರಿಂದ ಕಸ ಸಂಗ್ರಹ ಪ್ಲಾಸ್ಟಿಕ್ ಬಳಸದಂತೆ ಭಕ್ತರಲ್ಲಿ ಮನವಿ, ವಿದ್ಯಾರ್ಥಿಗಳು- ಅರಣ್ಯ ಇಲಾಖೆಯಿಂದ ಜಾಗೃತಿ ಜಾಥಾ ಮಲೆ ಮಹದೇಶ್ವರ ಬೆಟ್ಟ: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ತಾಳುಬೆಟ್ಟದಿಂದ ದೇವಾಲಯದವರೆಗೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಐದು ಲಾರಿ ಪ್ಲಾಸ್ಟಿಕ್ ತ್ಯಾಜ್ಯ ಗಳನ್ನು ಸಂಗ್ರಹಿಸಿ, ಪರಿಸರವನ್ನು ಸ್ವಚ್ಛ ಗೊಳಿಸಿ ಗಮನ ಸೆಳೆದರು. ಅರಣ್ಯ ಇಲಾಖೆಯ ಮಲೆ ಮಹದೇಶ್ವರ…

1 64 65 66 67 68 74
Translate »