ಚಾಮರಾಜನಗರ: ಸತ್ಯ ಯಾವಾಗಲೂ ಕಹಿ ಆಗಿರುತ್ತದೆ. ಇದನ್ನು ಒಪ್ಪಿಕೊಳ್ಳಲು ನಾವೆಲ್ಲರೂ ಸಿದ್ಧರಾಗ ಬೇಕು ಎಂದು ಸಾಹಿತಿ ಹಾಗೂ ಚಿಂತಕ ಪ್ರೊ.ಕೆ.ಗೋವಿಂದಯ್ಯ ಹೇಳಿದರು.ನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಯಲ್ಲಿ ಸೋಮವಾರ ನವದೆಹಲಿಯ ಸಾಹಿತ್ಯ ಅಕಾಡೆಮಿ, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಿಂದ ನಡೆದ ಸಾಹಿತ್ಯ ಲೋಕ ಹಾಗೂ ಕರ್ನಾಟಕ ಬುಡಕಟ್ಟು ಮಹಾಕಾವ್ಯಗಳ ನಿರ್ವಾಚನ ಉಪನ್ಯಾಸ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
1970ರ ದಶಕದಲ್ಲಿ ಹೊರ ಬಂದ ಮಹದೇಶ್ವರ ಕಾವ್ಯದಲ್ಲಿ ಮಹದೇಶ್ವರರು ಮಾದಿಗರು ಎಂದು ಹೇಳಲಾಗಿದೆ. ಇದು ನಾಡಿನಾದ್ಯಂತ ಭಾರಿ ಗೊಂದಲ ಸೃಷ್ಟಿ ಉಂಟಾಗಲು ಕಾರಣವಾಗಿತ್ತು. ಪ್ರಸ್ತುತ ಇಂತಹ ಕಾವ್ಯ ಹೊರ ಬಂದಿಲ್ಲ. ಹಾಗಾಗಿ, ಗೊಂದಲದ ವಾತಾವರಣವಿಲ್ಲ. ಆದರೆ, ಸತ್ಯ ಒಪ್ಪಿಕೊಳ್ಳುವ ಮನೋಭಾವ ಬೆಳೆಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಾಕಾವ್ಯ ಎಂದ ಮೇಲೆ ಅಲ್ಲಿ ಜೀವಂತಿಕೆ ಇರಬೇಕು. ಇದಕ್ಕೂ ಹೆಚ್ಚು ನ್ಯಾಯ ಪರತೆ, ಕಾಲಾತೀತ, ಪರಮ ವೈಚಾರಿಕತೆ ಹಾಗೂ ಸೃಜನಶೀಲಾ ಕಾಲಾವಂತಿಕೆ ಇರ ಬೇಕು. ಇವೆಲ್ಲವೂ ಮಹದೇಶ್ವರ ಕಾವ್ಯ ದಲ್ಲಿ ಇತ್ತು. ಹೀಗಾಗಿ, ಈ ಕಾವ್ಯ ಜಗತ್ ಪ್ರಸಿದ್ಧಿ ಹೊಂದಲು ಕಾರಣವಾಯಿತು. ಇದನ್ನು ಪ್ರತಿಯೊಬ್ಬ ಸಾಹಿತಿ, ಚಿಂತಕರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾ ಧಿಕಾರಿ ರಮೇಶ್ ಮಾತನಾಡಿ, ಪ್ರಸ್ತುತ ದಿನಗಳ ಆಧುನೀಕರಣ ಭರಾಟೆಯಲ್ಲಿ ಪುಸ್ತಕ ವನ್ನು ಓದುವ ಸಂಸ್ಕøತಿಯೇ ಕಣ್ಮರೆ ಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಎಂ. ನಿರ್ಮಲಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಬಿ.ಲೋಕೇಶ್, ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ಮಾರಾಟ ಪ್ರತಿನಿಧಿ ಗೋವಿಂದರಾಜು, ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಉಪನ್ಯಾಸಕ ರಾದ ಜಿ.ಮೋಹನ್‍ಕುಮಾರ್, ನಾಗೇಂದ್ರ ಇತರರು ಹಾಜರಿದ್ದರು.
ವೇದಿಕೆ ಕಾರ್ಯಕ್ರಮದ ಬಳಿಕ, ಕೊಳ್ಳೇಗಾಲ ಶ್ರೀಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಮಹ ದೇವುಪ್ರಭು ಅವರು, ‘ಮಹದೇಶ್ವರ ಕಾವ್ಯ’ ಪರಿಚಯಿಸಿದರು. ನಗರದ ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಎಂ.ಎಸ್.ಬಸವಣ್ಣ ಅವರು, ‘ಮಂಟೆಸ್ವಾಮಿ ಕಾವ್ಯಗಳಲ್ಲಿ ಸಾಂಸ್ಕøತಿಕ ಅನ್ಯನತೆ’ ಕುರಿತು ಹಾಗೂ ಮೈಸೂರಿನ ಮಾನಸ ಗಂಗೋತ್ರಿ ಸಂಶೋಧಕಿ ಡಾ.ಪಿ. ಎನ್.ಹೇಮಲತಾ ಅವರು, ‘ಚೌಡಿಕೆ ಕಾವ್ಯ ಗಳಲ್ಲಿ ಸ್ತ್ರೀ ದರ್ಶನ’À ಬಗ್ಗೆ ಉಪನ್ಯಾಸ ನೀಡಿದರು. ವೆಂಕಟಯ್ಯನ ಛತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ಹರವೆ ಅವರು, ‘ಬಿಳಿಗಿರಿ ರಂಗನ ಕಾವ್ಯ ದಲ್ಲಿ ಬುಡಕಟ್ಟು ಪ್ರಜ್ಞೆ’ ಕುರಿತು ಉಪನ್ಯಾಸ ನೀಡಿದರು.