ಸರ್ಕಾರಗಳಿಂದ ಬ್ರಾಹ್ಮಣ ಸಮಾಜ ಕಡೆಗಣನೆ: ಆಚಾರ್ಯತ್ರಯರ ಜಯಂತಿಯಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಜಿ.ಎಂ.ಹೆಗಡೆ ವಿಷಾದ
ಚಾಮರಾಜನಗರ

ಸರ್ಕಾರಗಳಿಂದ ಬ್ರಾಹ್ಮಣ ಸಮಾಜ ಕಡೆಗಣನೆ: ಆಚಾರ್ಯತ್ರಯರ ಜಯಂತಿಯಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಜಿ.ಎಂ.ಹೆಗಡೆ ವಿಷಾದ

June 12, 2018

ಗುಂಡ್ಲುಪೇಟೆ:  ‘ಬ್ರಾಹ್ಮಣ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿದ್ದಾರೆ. ಆದರೆ, ಇದುವರೆಗೆ ರಾಜ್ಯವನ್ನು ಆಳಿದ ಸರ್ಕಾರಗಳಿಗೆ ಸಮಾಜದವರು ಕಣ್ಣಿಗೆ ಬೀಳದಿರುವುದು ಶೋಚನೀಯ ಸಂಗತಿಯಾಗಿದೆ’ ಎಂದು ಜಿಲ್ಲಾ ಬ್ರಾಹ್ಮಣ ಸಮಾಜ ಅಧ್ಯಕ್ಷ ಜಿ.ಎಂ.ಹೆಗಡೆ ವಿಷಾದಿಸಿದರು.

ಪಟ್ಟಣದ ಶ್ರೀರಾಮ ಮಂದಿರದಲ್ಲಿ ತಾಲ್ಲೂಕು ಬ್ರಾಹ್ಮಣ ಸಭಾ ಹಾಗೂ ಕೌಂಡಿನ್ಯ ವಿಪ್ರ ಬಳಗದ ವತಿಯಿಂದ ನಡೆದ ಆಚಾರ್ಯತ್ರಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಕಂಠ ಕುಮಾರ್ ಮಾತನಾಡಿ, ಮಹಾಸಭಾದ ಕಾರ್ಯಚಟುವಟಿಕೆ ತಿಳಿಸಿದರು. ಬ್ರಾಹ್ಮಣ ಸಮಾಜದ ಏಳಿಗೆಗೆ ಸಂಘಟನೆ ಅತ್ಯಾವಶ್ಯಕವಾಗಿದ್ದು, ಸಮಾಜದವರು ಹೆಚ್ಚಿನ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಕರೆ ನೀಡಿದರು.

ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಕೆ.ವಿ.ಗೋಪಾಲ ಕೃಷ್ಣಭಟ್, ಮೈಸೂರಿನ ಮಹರ್ಷಿ ಪದವಿ ಪೂರ್ವ ಕಾಲೇಜಿನ ಸಂಸ್ಕøತ ಉಪನ್ಯಾಸಕ ವಿದ್ವಾನ್ ನಾರಾಯಣ ದೇಸಾಯಿ ಮಾತನಾಡಿ ದರು. ಈ ವೇಳೆ ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್. ನಾಗರಾಜು ಅವರನ್ನು ಅಭಿನಂದಿಸಲಾಯಿತು.

ಶೋಭಾಯಾತ್ರೆ: ಪಟ್ಟಣದ ಶ್ರೀರಾಮೇಶ್ವರ ದೇವಸ್ಥಾನದಿಂದ ಆಚಾರ್ಯತ್ರಯರ ಭಾವಚಿತ್ರದೊಂದಿಗೆ ಶೋಭಾಯಾತ್ರೆ ಪ್ರಾರಂಭವಾಗಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿತು.

ಕಾರ್ಯಕ್ರಮದಲ್ಲಿ ಕೌಂಡಿನ್ಯ ವಿಪ್ರ ಬಳಗದ ಅಧ್ಯಕ್ಷ ಆನಂದ್ ಹಾಗೂ ಬ್ರಾಹ್ಮಣ ಸಮಾಜ ಉಪಾಧ್ಯಕ್ಷ ಕೆ.ಮಂಜುನಾಥ್, ಎಚ್.ಎಸ್. ರಮೇಶ್, ಪಿ.ಎಸ್.ಶ್ರೀನಿವಾಸ ಮೂರ್ತಿ, ವಕೀಲ ರವಿಕಾಂತ್, ಬಾಲ ಸುಬ್ರಹ್ಮಣ್ಯಂ, ಅಶ್ವತ್ಥ್, ಶಿವಕುಮಾರ್, ಅನಂತ್, ಶಂಕರನಾರಾಯಣ ಜೋಯಿಸ್, ಅರ್ಚಕರಾದ ರವಿಕುಮಾರ್, ಕೆ.ವಿ.ಸುರೇಶ್, ಶ್ರೀಕಂಠ ಮೂರ್ತಿ, ನಾಗರಾಜ ಶರ್ಮನ್, ಸತೀಶ್, ವಿಶ್ವನಾಥ ಭಾರಧ್ವಜ್, ಬಿ.ಎಸ್.ಚೇತನ್, ರಾಜೇಶ್‍ಭಟ್ಟ, ರವಿ, ಜೋಯಿಸ್ ಆರ್. ಅರುಣ್ ಕುಮಾರ್, ಶೇಷಾದ್ರಿ, ನರಸಿಂಹಯ್ಯ, ನಾಗೇಶ್ ಹಾಜರಿದ್ದರು.

Translate »