ವಿಶ್ವ ಪರಿಸರ ದಿನಾಚರಣೆ: ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಸ್ವಚ್ಛತಾ ಅಭಿಯಾನ
ಚಾಮರಾಜನಗರ

ವಿಶ್ವ ಪರಿಸರ ದಿನಾಚರಣೆ: ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಸ್ವಚ್ಛತಾ ಅಭಿಯಾನ

June 10, 2018
  • ಅರಣ್ಯ ಇಲಾಖೆ ಹಾಗೂ ಸ್ವಯಂ ಸೇವಕರಿಂದ ಕಸ ಸಂಗ್ರಹ
  • ಪ್ಲಾಸ್ಟಿಕ್ ಬಳಸದಂತೆ ಭಕ್ತರಲ್ಲಿ ಮನವಿ, ವಿದ್ಯಾರ್ಥಿಗಳು- ಅರಣ್ಯ ಇಲಾಖೆಯಿಂದ ಜಾಗೃತಿ ಜಾಥಾ

ಮಲೆ ಮಹದೇಶ್ವರ ಬೆಟ್ಟ: ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ತಾಳುಬೆಟ್ಟದಿಂದ ದೇವಾಲಯದವರೆಗೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಐದು ಲಾರಿ ಪ್ಲಾಸ್ಟಿಕ್ ತ್ಯಾಜ್ಯ ಗಳನ್ನು ಸಂಗ್ರಹಿಸಿ, ಪರಿಸರವನ್ನು ಸ್ವಚ್ಛ ಗೊಳಿಸಿ ಗಮನ ಸೆಳೆದರು.

ಅರಣ್ಯ ಇಲಾಖೆಯ ಮಲೆ ಮಹದೇಶ್ವರ ಬೆಟ್ಟ ವಿಭಾಗದ ವತಿಯಿಂದ ನಡೆದ ಕಾರ್ಯ ಕ್ರಮದಲ್ಲಿ ಮೊದಲು ಬೆಟ್ಟದ ಮೇಲಿರುವ ಶ್ರೀಮಹದೇಶ್ವರ ಪ್ರೌಢಶಾಲಾ ಆವರಣ ದಿಂದ ಜಾಗೃತಿ ಜಾಥಾ ನಡೆಸಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿಗಳು, ಅಧಿ ಕಾರಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆ ಗಳ ಕಾರ್ಯಕರ್ತರು ಪ್ಲಾಸ್ಟಿಕ್ ಬಳಕೆ ಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ವಿವರಿಸುವ ಘೋಷಣಾ ಫಲಕ ಹಿಡಿದು ಬೆಟ್ಟದ ಎಲ್ಲ ರಸ್ತೆ, ದೇವಾ ಲಯದ ಸುತ್ತ, ಅಂಗಡಿ-ಮುಂಗಟ್ಟು ಗಳಿರುವ ಬೀದಿಗಳಲ್ಲಿ ಸಂಚರಿಸಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅರಿವು ಮೂಡಿಸಿದರು.

ಮಲೆಮಹದೇಶ್ವರ ಬೆಟ್ಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಜಾಥಾ ನಡೆಸಿದರು.

ಬಳಿಕ ಬೆಟ್ಟದ ವಿವಿಧೆಡೆ ಗಿಡ ನೆಟ್ಟು ಪರಿಸರ ದಿನವನ್ನು ಆಚರಿಸಿದರು. ಕಾರ್ಯ ಕ್ರಮದ ಸಾನಿಧ್ಯವನ್ನು ಸಾಲೂರು ಮಠದ ಸ್ವಾಮೀಜಿ ವಹಿಸಿದರು. ಗಿಡಕ್ಕೆ ನೀರೆರೆಯುವ ಮೂಲಕ ಪರಿಸರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಸ ಸಂಗ್ರಹ: ಬೆಟ್ಟದ ಮೇಲೆ ಜಾಗೃತಿ ಜಾಥಾ ಹಾಗೂ ಸಭಾ ಕಾರ್ಯಕ್ರಮ ಮುಗಿದ ನಂತರ ಅರಣ್ಯ ಇಲಾಖೆಯ ಸಿಬ್ಬಂದಿ, ಬಿಳಿಗಿರಿ ರಂಗನಬೆಟ್ಟ ಹುಲಿ ಯೋಜನೆಯ ಸ್ವಯಂ ಸೇವಕರು, ನೇಚರ್ ಕನ್ಸರ್‍ವೇಷನ್ ಫೌಂಡೇಷನ್, ಮೈರಾಡ ಸಂಸ್ಥೆಯ ಸದ ಸ್ಯರೊಂದಿಗೆ ಮಲೆ ಮಹದೇಶ್ವರಬೆಟ್ಟದಿಂದ ತಾಳು ಬೆಟ್ಟದವರೆಗೆ ರಸ್ತೆಯ ಎರಡು ಬದಿಯಲ್ಲಿ ಪ್ಲಾಸ್ಟಿಕ್ ಪೇಪರ್, ನಿರುಪ ಯುಕ್ತ ವಸ್ತುಗಳು, ಪ್ಲಾಸ್ಟಿಕ್ ಬಾಟಲ್ ಸೇರಿ ದಂತೆ ವಿವಿಧ ವಸ್ತುಗಳನ್ನು ಸಂಗ್ರಹಿಸಿದರು.

ಸ್ವಚ್ಛ ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಹೆಚ್ಚು ಸ್ವಯಂ ಸೇವಕರು, ವಿದ್ಯಾರ್ಥಿಗಳು ಪಾಲ್ಗೊಂಡು ಕಸ ಸಂಗ್ರಹಿಸುವ ಕೆಲಸ ಮಾಡಿ ಗಮನ ಸೆಳೆದರಲ್ಲದೆ, ಸುತ್ತಲಿನ ಪರಿಸರವನ್ನು ಅಂದಗೊಳಿಸಿದರು.ಅಭಿಯಾನದಲ್ಲಿ ಮಹದೇಶ್ವರ ಬೆಟ್ಟ ವಲ ಯದ ಎಸಿಎಫ್ ಪ್ರಶಾಂತ್‍ಕುಮಾರ್, ಹನೂರು ವಿಭಾಗದ ಎಸಿಎಫ್ ಮುತ್ತೇಗೌಡ, ಆರ್‍ಎಫ್‍ಒ ಗುರುರಾಜ್ ಸಂಕೇಶ್ವರ್ ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಂಗ್ರಹಗೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ.

18ಕಿ.ಮೀ ಸ್ವಚ್ಛತೆ: ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗ ಡಿಸಿಎಫ್ ವಿ.ಏಡುಕೊಂಡಲು ಮಾತನಾಡಿ, ವಿಶ್ವ ಪರಿಸರ ದಿನದ ಅಂಗ ವಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಸಿದ ಸ್ವಚ್ಛತಾ ಕಾರ್ಯಕ್ರಮದಲ್ಲಿ ತಾಳುಬೆಟ್ಟ (ಪಾದ)ದಿಂದ ಮಹದೇಶ್ವರ ಬೆಟ್ಟದವರೆಗೆ 18 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು ಐದು ಟನ್ ಕಸ ಸಂಗ್ರಹವಾಗಿದೆ. ಕಸವನ್ನು ಒಣ ಕಸ ನಿರ್ವಹಣಾ ಘಟಕಕ್ಕೆ ರವಾನಿಸಲಾಗಿದೆ ಎಂದು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಧಾರ್ಮಿಕ ಹಾಗೂ ಪ್ರವಾಸಿ ತಾಣವೂ ಆಗಿರುವ ಮಹದೇಶ್ವರಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದೆ. ವಿವಿಧ ವಾಹನಗಳಲ್ಲಿ ಬರುವ ಭಕ್ತರು ಮಾರ್ಗ ಮದ್ಯೆ ಪ್ಲಾಸ್ಟಿಕ್ ಪೇಪರ್, ಪ್ಲಾಸ್ಟಿಕ್ ಬಾಟಲ್‍ಗಳನ್ನು ಎಸೆಯುವ ಮೂಲಕ ಪರಿಸರವನ್ನು ಹಾಳು ಮಾಡು ತ್ತಿದ್ದಾರೆ. ಕೇವಲ ಪರಿಸರ ಮಾತ್ರವಲ್ಲದೆ ವನ್ಯ ಜೀವಿಗಳಿಗೂ ಪ್ಲಾಸ್ಟಿಕ್ ಮಾರಕ ವಾಗಿ ಪರಿಣಮಿಸುತ್ತಿದೆ. ಇದನ್ನು ಮನ ಗಂಡು ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲಾಗಿದೆ. ಜನರು ಈ ಕಾರ್ಯ ಕ್ರಮದ ಮಹತ್ವವನ್ನು ಅರಿತುಕೊಂಡು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ, ಪರಿಸರ ಸಂರಕ್ಷಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

Translate »