9 ಮಂದಿಗೆ ನಂದಿ ಪ್ರಶಸ್ತಿ ಪ್ರದಾನ
ಮೈಸೂರು

9 ಮಂದಿಗೆ ನಂದಿ ಪ್ರಶಸ್ತಿ ಪ್ರದಾನ

June 10, 2018

ಮೈಸೂರು: ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶನಿವಾರ ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿ ಯಿಂದ 9 ಮಂದಿಗೆ ‘ನಂದಿ ಪ್ರಶಸ್ತಿ’ ಯನ್ನು ಪ್ರದಾನ ಮಾಡಲಾಯಿತು.

ಕ್ರೀಡಾ ಪ್ರೋತ್ಸಹಕ್ಕಾಗಿ ತಿ.ನರಸೀಪುರ ತಾಲೂಕು ಕುರುಬೂರಿನ ವಿದ್ಯಾದರ್ಶಿನಿ ಕಾನ್ವೆಂಟ್ ಸಹಶಿಕ್ಷಕ ಕೆ.ಮಂಜುನಾಥ, ಕ್ರೀಡಾ ವರದಿಗಾರಿಕೆಗಾಗಿ ಕೆ.ನಾಗರತ್ನಾ ಬಾಯಿ, ಕ್ರೀಡಾ ಫೆÇೀಟೋಗ್ರಫಿಗಾಗಿ ಕೆ.ಎಚ್.ಚಂದ್ರು, ಹಾಗೂ 2017-18ನೇ ಸಾಲಿನ ಅತ್ಯುತ್ತಮ ಅಥ್ಲೆಟ್‍ಗಳಾದ ಡಬ್ಲ್ಯೂ.ಆರ್.ಹರ್ಷಿತಾ (ಮಹಿಳಾ ವಿಭಾಗ) ಸಿ.ಜೆ.ಚೇತನ್ (ಪುರು ಷರ ವಿಭಾಗ), ಎಂ.ಆರ್.ಧನುಷಾ (ಜೂನಿ ಯರ್ ಮಹಿಳಾ ವಿಭಾಗ), ಎಸ್.ಎಲ್. ಸಹನಾ (18 ವರ್ಷದೊಳಗಿನ ಬಾಲಕಿಯರು), ಪಿ.ಅಶುತೋಷ್ (18 ವರ್ಷದೊಳಗಿನ ಬಾಲ ಕರು), ಬೃಂದಾ ಎಸ್.ಗೌಡ (14 ವರ್ಷದೊಳ ಗಿನ ಬಾಲಕಿಯರು) ಅವರಿಗೆ `ನಂದಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 6 ಮಂದಿ ಅತ್ಯು ತ್ತಮ ಅಥ್ಲೆಟ್ಸ್‍ಗಳಿಗೆ ಪ್ರಶಸ್ತಿ ಹಾಗೂ ತಲಾ 3 ಸಾವಿರ ರೂ. ಚೆಕ್ ನೀಡಲಾಯಿತು. ನಂತರ ಭಾರತೀಯ ಅಥ್ಲೆಟಿಕ್ ಫೆಡರೇ ಷನ್‍ನ ಕಾರ್ಯಕಾರಿ ಸಮಿತಿ ಸದಸ್ಯ ಎನ್. ಚಂದ್ರಶೇಖರ್ ರೈ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಮಾಜಿ ಶಾಸಕ ವಾಸು, ಮೈಸೂರಿನಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂದು ಒತ್ತಾಯಿಸಿದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದರು. ಯಾವುದೇ ಸರ್ಕಾರವಿರಲಿ ಇದನ್ನು ಕೈಬಿಡದೆ ಕಾರ್ಯಗತಗೊಳಿಸು ವಂತೆ ಕ್ರೀಡಾಪಟುಗಳು ನಿರಂತರ ಒತ್ತಡ ಹೇರಬೇಕು ಎಂದ ಅವರು, ಕುರುಬೂರು ಶಾಲೆಯ ಕೆ.ಮಂಜುನಾಥ್ ಅವರು ಗಣ ತ ಶಿಕ್ಷಕರಾದರೂ ದೈಹಿಕ ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ವಹಿಸಿ ಮಕ್ಕಳು ಕ್ರೀಡಾಚಟುವಟಿಕೆ ಗಳಲ್ಲಿ ತೊಡಗುವಂತೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಧ್ಯಾನ್‍ಚಂದ್ ಪ್ರಶಸ್ತಿ ಪುರ ಸ್ಕøತ ಉದಯ್ ಕೆ.ಪ್ರಭು, ಕರ್ನಾಟಕ ಅಥ್ಲೆ ಟಿಕ್ಸ್ ಅಸೋಸಿಯೆಷನ್‍ನ ಹಿರಿಯ ಉಪಾ ಧ್ಯಕ್ಷ ಹೆಚ್.ಟಿ.ಮಹದೇವ, ಮೈವಿವಿ ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇಶಕ ಡಾ. ಪಿ.ಕೃಷ್ಣಯ್ಯ, ಎಂಡಿಎಎ ಅಧ್ಯಕ್ಷ ಎಸ್. ಸೋಮಶೇಖರ್, ಉಪಾಧ್ಯಕ್ಷ ಅಭಿಲಾಷ್ ನಾಯರ್, ಗೌರವ ಕಾರ್ಯದರ್ಶಿ ಬಿ.ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.

Translate »