ಸೋತಿದ್ದರೂ ರಾಜಕೀಯದಿಂದ ನಿವೃತ್ತನಾಗಲ್ಲ: ವಾಸು
ಮೈಸೂರು

ಸೋತಿದ್ದರೂ ರಾಜಕೀಯದಿಂದ ನಿವೃತ್ತನಾಗಲ್ಲ: ವಾಸು

May 27, 2018

ಮೈಸೂರು: ಪಕ್ಷದ ಕೆಲವರು ಮಾಡಿದ ಷಡ್ಯಂತರ ಸೇರಿದಂತೆ ಹಲವು ಕಾರಣದಿಂದ ನನಗೆ ಸೋಲುಂಟಾಗಿದೆ. ಚುನಾವಣೆಯಲ್ಲಿ ಸೋಲನನುಭವಿಸಿದ ಮಾತ್ರಕ್ಕೆ ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ. ಕ್ಷೇತ್ರದ ಜನರೊಂದಿಗೆ ಒಡನಾಟ ಇಟ್ಟುಕೊಂಡು ಸಮಾಜ ಸೇವೆ ಮುಂದುವರೆಸುತ್ತೇನೆ ಎಂದು ಚಾಮರಾಜ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ವಾಸು ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿz್ದÉೀನೆ. ಹಿಂದೆಯೂ ಹಲವು ಬಾರಿ ಸೋತಿz್ದÉೀನೆ. ಆದರೂ ನಿರಂತರವಾಗಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕಳೆದ ಐದು ವರ್ಷದಲ್ಲಿ ಚಾಮರಾಜ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದರೂ, ರಾಜ್ಯ ಸರ್ಕಾರ ಹಲವು ಜನಪರ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದರೂ ಜನರು ಮಾತ್ರ ಚುನಾವಣೆಯಲ್ಲಿ ಬೆಂಬಲಿಸಲಿಲ್ಲ ಎಂದು ವಿಷಾದಿಸಿದರು.

ಕಳೆದ 5 ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಜನತೆ ನನಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ. ಎಷ್ಟೇ ಅಡೆತಡೆಗಳು ಬಂದರೂ, ಅವುಗಳನ್ನು ಸಮರ್ಥವಾಗಿ ನಿರ್ವಹಿಸಿz್ದÉೀನೆ. ಮುಖ್ಯಮಂತ್ರಿಗಳು, ಸಚಿವರಿಂದ ಹಿಡಿದು ಅಧಿಕಾರಿ ವರ್ಗದವರೆಗೆ ಎಲ್ಲರೂ ಸಹಕರಿಸಿದ್ದರಿಂದ ಕ್ಷೇತ್ರದಲ್ಲಿ ಆಸ್ಪತ್ರೆ, ಕಾಲೇಜು ಸೇರಿದಂತೆ ಕಣ ್ಣಗೆ ಕಾಣ ಸುವ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಪಕ್ಷಾತೀತವಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಬೇರೆ ಪಕ್ಷದವರೂ ನನ್ನನ್ನು ಗೌರವದಿಂದ ಕಂಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಬೆಂಗಳೂರಿಗೆ ಹೆಚ್ಚಾಗಿ ಭೇಟಿ ನೀಡದೆ ಪ್ರತಿದಿನ ಬೆಳಗಿನಿಂದ ಸಂಜೆಯವರೆಗೂ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯದ ಕಡೆ ಗಮನ ಹರಿಸುತ್ತಾ ಇದ್ದೆ. ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆಗಳ ಅಭಿವೃದ್ಧಿ, ಮಹಾರಾಣ ಕಾಲೇಜು ನೂತನ ಕಟ್ಟಡ ನಿರ್ಮಾಣ, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ಮಾಣ, ಟ್ರಾಮಾ ಸೆಂಟರ್ ಸೇರಿದಂತೆ ಇನ್ನಿತರೆ ಅಭಿವೃದ್ದಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ಮಹಾರಾಣ ಕಾಲೇಜಿನಲ್ಲಿ ಮಾಡಿರುವ ವ್ಯವಸ್ಥೆ, ವಿದ್ಯಾರ್ಥಿನಿಯರಿಗೆ ಕಲ್ಪಿಸಿರುವ ಮೂಲ ಸೌಲಭ್ಯವನ್ನು ಕಂಡು ಪಕ್ಷಾತೀತವಾಗಿ ಎ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಹೇಳಿದರು.

ಚಾಮರಾಜ ಕ್ಷೇತ್ರದಲ್ಲಿ ನನ್ನ ವಿರುದ್ಧ ಷಡ್ಯಂತರ ನಡೆದಿರುವುದು ನಿಜ. ಆದರೆ, ಅದರಿಂದಲೇ ನಾನು ಸೋತಿಲ್ಲ. ಹಲವಾರು ಕಾರಣಗಳಿಂದ ನಾನು ಸೋತಿದ್ದೇನೆ. ಕಾಂಗ್ರೆಸ್ ಮತಗಳು ಬಿಜೆಪಿಗೆ ಹೋಗಿವೆ. ಪಕ್ಷೇತರ ಅಭ್ಯರ್ಥಿ ಹರೀಶ್‍ಗೌಡರಿಗೂ ಕಾಂಗ್ರೆಸ್‍ನ 3ರಿಂದ 4 ಸಾವಿರ ಮತ ಹೋಗಿವೆ. ನಮ್ಮ ಪಕ್ಷದಲ್ಲಿರುವ ಕೆಲವರ ಷಡ್ಯಂತರದಿಂದ ಮತಗಳು ಕೈತಪ್ಪಿವೆ. ಈ ಸಂಬಂಧ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಕೆಪಿಸಿಸಿಗೆ ದೂರು ನೀಡಿದ್ದಾರೆ. ನನ್ನ ಸೋಲಿಗೆ ಷಡ್ಯಂತರ ಮಾಡಿದ್ದವರನ್ನೇ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಚುನಾವಣೆಯಲ್ಲಿ ಕೆಲಸ ಮಾಡದೆ ಇರುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿದ್ದರೂ ಏನು ಮಾತನಾಡಲಿಲ್ಲ. ಜನರ ನಿರೀಕ್ಷೆಗೆ ಅನುಗುಣವಾಗಿ ನಾವು ನಡೆದುಕೊಂಡಿಲ್ಲ ಎನಿಸುತ್ತದೆ. ಕೇವಲ ಜನಪ್ರಿಯ ಯೋಜನೆಗಳನ್ನು ಮಾತ್ರ ಜನರು ಮೆಚ್ಚಿಕೊಳ್ಳುವುದಿಲ್ಲ. ನಾಯಕರು ಬಳಸುವ ಭಾಷೆ, ಅವರ ವರ್ತನೆ, ನೀಡುವ ಉತ್ತರಗಳನ್ನು ನೋಡುತ್ತಾರೆ. ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯದ ಮತಗಳು ನಿರೀಕ್ಷೆಯಂತೆ ಕಾಂಗ್ರೆಸ್‍ಗೆ ಬರಲಿಲ್ಲ. ಈ ಚುನಾವಣೆಯಲ್ಲಿ ಹಿರಿಯ ಮುಖಂಡರಾದ ರಮಾನಾಥ ರೈ, ಡಾ.ಹೆಚ್.ಸಿ.ಮಹದೇವಪ್ಪ ಸೇರಿದಂತೆ ಹಲವರು ಸೋತಿದ್ದಾರೆ.  – ಮಾಜಿ ಶಾಸಕ ವಾಸು

500 ವಿದ್ಯಾರ್ಥಿಗಳಿರುವ ಕಾಲೇಜಿಗೆ ವಿಶ್ವವಿದ್ಯಾನಿಲಯದ ಮಾನ್ಯತೆ ಸಿಗುತ್ತದೆ. ಆದರೆ, 10 ಸಾವಿರ ಹೆಣ್ಣು ಮಕ್ಕಳಿರುವ ಮಹಾರಾಣ ಕಾಲೇಜನ್ನು ಕ್ಲಸ್ಟರ್ ವಿವಿ ಮಾಡುವ ಅಗತ್ಯವಿದೆ. 38 ವರ್ಷಗಳಿಂದ ವಿವಾದಿತವಾಗಿದ್ದ ಪಡುವಾರಹಳ್ಳಿಯ ಜಾಗದ ವಿವಾದ ಬಗೆಹರಿಸಿ ನೂತನ ಮಹಾರಾಣ ಕಾಲೇಜು ಕಟ್ಟಡ ನಿರ್ಮಿಸಲು ಸರ್ಕಾರದಿಂದ ಕೋಟ್ಯಾಂತರ ರೂ. ಅನುದಾನ ತಂದಿz್ದÉೀನೆ. ಇದಕ್ಕಾಗಿ ಸರ್ಕಾರದಿಂದ 270 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದೆ. ಮುಂದೆ ಇಂತಹ ಅನುದಾನ ಸಿಗುವುದಿಲ್ಲ. 7 ಕೋಟಿ ರೂ. ವೆಚ್ಚದ ಪೀಠೋಪಕರಣಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿz್ದÉೀನೆ. ಕೆ.ಆರ್.ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡಲು ನೆಫ್ರಾಲಜಿ ಘಟಕ ಸ್ಥಾಪಿಸಲಾಗುತ್ತಿದೆ. 23 ಡಯಾಲಿಸಿಸ್ ಯಂತ್ರಗಳಿದ್ದು, ಬಡವರಿಗೆ ಅನುಕೂಲವಾಗಲಿದೆ. 500 ಹಾಸಿಗೆಗಳ ನೂತನ ಜಿಲ್ಲಾ ಆಸ್ಪತ್ರೆ ಕಟ್ಟಡ ಕಾಮಗಾರಿ ಇನ್ನು ಐದಾರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಕ್ಷೇತ್ರದಲ್ಲಿ ಗುಣಮಟ್ಟದಿಂದ ಕೂಡಿದ ರಸ್ತೆ, ಕುಡಿಯುವ ನೀರು, ಒಳಚರಂಡಿ ಕಾಮಗಾರಿ ನಡೆಸಲಾಗಿದೆ. ಉದ್ಯಾನಗಳಲ್ಲಿ ಜಿಮ್ ಪರಿಕರಗಳನ್ನು ಅಳವಡಿಸಲಾಗಿದೆ. 12 ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗುತ್ತಿದೆ. ವಿವಿಧ ನಿಗಮಗಳಿಂದ ದೊರೆಯುವ ಸಾಲ ಸೌಲಭ್ಯವನ್ನು, ಸವಲತ್ತುಗಳನ್ನು ಪಾರದರ್ಶಕವಾಗಿ, ಸ್ವಜನ ಪಕ್ಷಪಾತವಿಲ್ಲದೆ ಫಲಾನುಭವಿಗಳಿಗೆ ವಿತರಿಸಿz್ದÉೀನೆ. ಇದಕ್ಕೆಲ್ಲಾ ಸರ್ಕಾರದಿಂದ ಅನುದಾನ ನೀಡುವ ಮೂಲಕ ಸಹಕರಿಸಲಾಗಿದೆ. ಪಕ್ಷಾತೀತವಾಗಿ ಸ್ಥಳೀಯ ನಗರಪಾಲಿಕೆ ಸದಸ್ಯರೂ ಬೆಂಬಲ ನೀಡಿದ್ದಾರೆ. ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಸೋಲುಂಡಿರುವುದರಿಂದ ನನಗೆ ಯಾರ ಬಗ್ಗೆಯೂ ಆಕ್ರೋಶವಾಗಲೀ, ದ್ವೇಷವಾಗಲೀ ಇಲ್ಲ. ಜನರ ಬಗ್ಗೆ ಬೇಸರವೂ ಇಲ್ಲ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ನಗರಪಾಲಿಕೆ ಸದಸ್ಯರಾದ ಪ್ರಶಾಂತ್ ಗೌಡ, ಶಿವಮಾದು, ಸುಹೆಲ್ ಬೇಗ್, ಮುಖಂಡರಾದ ದಿನೇಶ್, ಸುಂದರ್ ಕುಮಾರ್, ಕವೀಶ್ ಗೌಡ ಇದ್ದರು.

Translate »