ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ
ಮೈಸೂರು

ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಚಾಲನೆ

September 24, 2018

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 23ನೇ ವಾರ್ಡ್‍ನಲ್ಲಿ 25 ಲಕ್ಷ ರೂ. ಅಂದಾಜು ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎಲ್.ನಾಗೇಂದ್ರ ಭಾನುವಾರ ಚಾಲನೆ ನೀಡಿದರು.

ದಸರಾ ರಸ್ತೆ ಅಭಿವೃದ್ಧಿ ಯೋಜನೆಯ ಅನುದಾನದಲ್ಲಿ ಜೆಎಲ್‍ಬಿ ರಸ್ತೆ ಮುಡಾ ಜಂಕ್ಷನ್‍ನಿಂದ ರಮಾವಿಲಾಸ ರಸ್ತೆ, ಸಯ್ಯಾಜಿರಾವ್ ರಸ್ತೆವರೆಗಿನ ಸುಮಾರು 1.5 ಕಿ.ಮೀ. ಉದ್ದದ ರಸ್ತೆಗೆ ಡಾಂಬರೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಅಲ್ಲದೆ ಚಾಮರಾಜ ಕ್ಷೇತ್ರದ ವಿವಿಧ ಭಾಗಗಳಲ್ಲಿ ಅಗತ್ಯವಿರುವ ಕಡೆಗಳಲ್ಲಿ ಹಳ್ಳಗಳನ್ನು ಡಾಂಬರು ಹಾಕಿ ಮುಚ್ಚುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಪ್ರಮೀಳಾ ಎಂ.ಭರತ್, 23ನೇ ವಾಡ್ ಬಿಜೆಪಿ ಅಧ್ಯಕ್ಷ ಪ್ರಮೋದ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಶ್ರೀಹರ್ಷ, ಮುಖಂಡರಾದ ಜಗದೀಶ್, ಪರಮೇಶ್‍ಗೌಡ, ಲಕ್ಷ್ಮೀ, ಪಾಲಿಕೆ ಎಇ ನಾಗರಾಜು ಇನ್ನಿತರರು ಭಾಗವಹಿಸಿದ್ದರು.

Translate »