Tag: Chamarajanagar

ಉಚಿತ ಬಸ್‍ಪಾಸ್‍ಗೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ
ಚಾಮರಾಜನಗರ

ಉಚಿತ ಬಸ್‍ಪಾಸ್‍ಗೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

June 10, 2018

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ, ಎಲ್ಲ ಗ್ರಾಮಗಳಿಗೂ ಬಸ್‍ಸೌಲಭ್ಯ ಕಲ್ಪಿಸಲು ಆಗ್ರಹ ಚಾಮರಾಜನಗರ: ರಾಜ್ಯದ ಎಲ್ಲ ವರ್ಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‍ಪಾಸ್ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಶನಿವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಸೇವಾಭಾರತಿ ಕಾಲೇಜು ಹಾಗೂ ವಿದ್ಯಾವಿಕಾಸ ಸ್ವತಂತ್ರ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ-ತಮ್ಮ ಕಾಲೇಜಿನಿಂದ ಮೆರವಣ ಗೆ ಆರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಬಳಿಕ, ಜಿಲ್ಲಾಡಳಿತ ಭವನಕ್ಕೆ ತೆರಳಿ ರಾಜ್ಯ…

ಭೀಮ ಸಂಭ್ರಮ-2018 ಕ್ರೀಡಾಕೂಟಕ್ಕೆ ಚಾಲನೆ
ಚಾಮರಾಜನಗರ

ಭೀಮ ಸಂಭ್ರಮ-2018 ಕ್ರೀಡಾಕೂಟಕ್ಕೆ ಚಾಲನೆ

June 10, 2018

ಚಾಮರಾಜನಗರ:  ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಅಂಬೇಡ್ಕರ್ ಅವರ 127ನೇ ಜನ್ಮದಿನದ ಅಂಗವಾಗಿ ಕರ್ನಾಟಕ ವಿದ್ಯುತ್ ಮಂಡಳಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಭೀಮ ಸಂಭ್ರಮ-2018 ಕ್ರಿಕೆಟ್ ಮತ್ತು ಷಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟಕ್ಕೆ ವಿದ್ಯುತ್ ವಿಭಾಗೀಯ ಕಚೇರಿಯ ಲೆಕ್ಕಾಧಿಕಾರಿ ಭಾಸ್ಕರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಲು ಸಾಧ್ಯವಾಗಿದೆ. ವಿಭಾಗೀಯ ಕಚೇರಿಯ ನೌಕರರಿಗೆ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಎಲ್ಲ ನೌಕರರು ಪಾಲ್ಗೊಳ್ಳಬೇಕು ಎಂದು…

ಸಿ.ಪುಟ್ಟರಂಗಶೆಟ್ಟಿ v/s ಎನ್.ಮಹೇಶ್: ಜಿಲ್ಲೆಯ ಉಸ್ತುವಾರಿ ನೊಗ ಯಾರ ಹೆಗಲಿಗೆ
ಚಾಮರಾಜನಗರ

ಸಿ.ಪುಟ್ಟರಂಗಶೆಟ್ಟಿ v/s ಎನ್.ಮಹೇಶ್: ಜಿಲ್ಲೆಯ ಉಸ್ತುವಾರಿ ನೊಗ ಯಾರ ಹೆಗಲಿಗೆ

June 8, 2018

ಚಾಮರಾಜನಗರ:  ಜಿಲ್ಲೆಯ ಇಬ್ಬರು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಹಾಗೂ ಎನ್.ಮಹೇಶ್ ಅವರಿಗೆ ಸಚಿವ ಸ್ಥಾನ ದೊರಕಿದೆ. ಈ ಇಬ್ಬರ ಪೈಕಿ ಯಾರಿಗೆ ಜಿಲ್ಲಾ ಉಸ್ತುವಾರಿ ಹೊಣೆ ದೊರೆಯಲಿದೆ ಎಂಬ ಚರ್ಚೆ ಜಿಲ್ಲೆ ಯಾದ್ಯಂತ ನಡೆಯುತ್ತಿದೆ. ಜಿಲ್ಲೆಯ ಉಸ್ತುವಾರಿ ಹೊಣೆ ವಹಿಸಿ ಕೊಳ್ಳಲು ಈ ಇಬ್ಬರು ಸಚಿವರು ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಯಾರ ಹೆಗಲಿಗೆ ಜಿಲ್ಲೆಯ ಉಸ್ತು ವಾರಿ ನೊಗ ಬೀಳಲಿದೆ ಎಂಬುದು ರಾಜ ಕೀಯ ಹಾಗೂ ಸಾರ್ವಜನಿಕ ವಲಯ ದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚಾಮರಾಜನಗರ…

ನಿಧಿಗಾಗಿ ದೇಗುಲಕ್ಕೆ ಕನ್ನ
ಚಾಮರಾಜನಗರ

ನಿಧಿಗಾಗಿ ದೇಗುಲಕ್ಕೆ ಕನ್ನ

June 8, 2018

ಚಾಮರಾಜನಗರ:  ಹಣ, ಒಡವೆ ಕದಿ ಯಲು ಮನೆಗಳಿಗೆ ಕನ್ನ ಹಾಕು ವುದನ್ನು ನೋಡಿದ್ದೇವೆ. ಆದರೆ ದೇವ ಸ್ಥಾನದ ಶಿವಲಿಂಗದ ಕೆಳಗಡೆ ನಿಧಿ ಇದೆ ಎಂದು ಶಿವಲಿಂಗಕ್ಕೆ ಕನ್ನ ಹಾಕಿ ರುವ ಘಟನೆ ತಾಲೂಕಿನ ಕೆಂಪನ ಪುರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕೆಂಪನಪುರ ಗ್ರಾಮದ ಹೊರ ವಲಯದಲ್ಲಿ ಪುರಾತನ ಕಾಲದ ಶ್ರೀ ಮುನೇಶ್ವರ ದೇವಸ್ಥಾನ ಇದೆ. ಈ ದೇವಸ್ಥಾನದಲ್ಲಿ ಹೊಯ್ಸಳರ ಕಾಲದ ಬಹಳ ಎತ್ತರದ ಅಪ ರೂಪದ ಶಿವಲಿಂಗ ಇದೆ. ಈ ಶಿವ ಲಿಂಗದ ಕೆಳಗಡೆ…

ಪ್ರಪ್ರಥಮ ಬಾರಿಗೆ ಜಿಲ್ಲೆಗೆ ಡಬಲ್ ಧಮಾಕ: ಚಾ.ನಗರ ಕ್ಷೇತ್ರಕ್ಕೆ ಮೊದಲ ಸಚಿವ ಪಟ್ಟ, ಕೊಳ್ಳೇಗಾಲಕ್ಕೆ ಎರಡನೇ ಸಚಿವ ಸ್ಥಾನ
ಚಾಮರಾಜನಗರ

ಪ್ರಪ್ರಥಮ ಬಾರಿಗೆ ಜಿಲ್ಲೆಗೆ ಡಬಲ್ ಧಮಾಕ: ಚಾ.ನಗರ ಕ್ಷೇತ್ರಕ್ಕೆ ಮೊದಲ ಸಚಿವ ಪಟ್ಟ, ಕೊಳ್ಳೇಗಾಲಕ್ಕೆ ಎರಡನೇ ಸಚಿವ ಸ್ಥಾನ

June 7, 2018

ಚಾಮರಾಜನಗರ:  ಚಾಮರಾಜ ನಗರ ಜಿಲ್ಲೆಯ ಇಬ್ಬರು ಶಾಸಕರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ದೊರೆತಿದೆ. ಚಾಮರಾಜನಗರ ಕ್ಷೇತ್ರದಿಂದ ಮೂರನೇ ಬಾರಿಗೆ ಹ್ಯಾಟ್ರಿಕ್ ಜಯ ಸಾಧಿಸಿದ್ದ ಕಾಂಗ್ರೆ ಸ್‍ನ ಸಿ.ಪುಟ್ಟರಂಗಶೆಟ್ಟಿ ಹಾಗೂ ಕೊಳ್ಳೇ ಗಾಲ ಮೀಸಲು ಕ್ಷೇತ್ರದಿಂದ ಇದೇ ಪ್ರಥಮ ಬಾರಿಗೆ ಗೆಲುವು ಸಾಧಿಸಿದ್ದ ಬಿಎಸ್‍ಪಿ-ಜೆಡಿಎಸ್ ಮೈತ್ರಿಯ ಎನ್.ಮಹೇಶ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಇತಿಹಾಸ ದಲ್ಲೇ ಜಿಲ್ಲೆಯ ಇಬ್ಬರು ಶಾಸಕರಿಗೆ ಸಚಿವ ರಾಗುವ ಯೋಗ ಕೂಡಿ ಬಂದಿರುವುದು ಇದೇ ಮೊದಲು. ಇದಲ್ಲದೇ ಚಾಮರಾಜ…

ಶಾಲಾಂಗಳದಲ್ಲಿ ಚಿಗುರಿದ ‘ಹಸಿರು ಸಿರಿ’: ‘ಪರಿಸರ ಮಿತ್ರ’ ಪ್ರಶಸ್ತಿಗೆ ಪಾತ್ರವಾಗಿರುವ ಹಲಗಾಪುರ ಸರ್ಕಾರಿ ಶಾಲೆ
ಚಾಮರಾಜನಗರ

ಶಾಲಾಂಗಳದಲ್ಲಿ ಚಿಗುರಿದ ‘ಹಸಿರು ಸಿರಿ’: ‘ಪರಿಸರ ಮಿತ್ರ’ ಪ್ರಶಸ್ತಿಗೆ ಪಾತ್ರವಾಗಿರುವ ಹಲಗಾಪುರ ಸರ್ಕಾರಿ ಶಾಲೆ

June 5, 2018

ಚಾಮರಾಜನಗರ:  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎನ್ನುವ ಫಲಕ ನೋಡಿ ಅದರ ಆವರಣದೊಳಗೆ ದೃಷ್ಟಿ ಹಾಯಿಸಿದರೆ ಇದು ಶಾಲೆಯೋ ಅಥವಾ ಕೃಷಿ ಜಮೀನೋ ಅಥವಾ ಉದ್ಯಾನವೋ ಎಂಬ ಅನುಮಾನ ಮೂಡುತ್ತದೆ.ಬಾಳೆ, ತೆಂಗು, ಬೇವಿನ ಮರಗಳ ಜತೆಗೆ, ಹಣ್ಣು-ತರಕಾರಿ ಮತ್ತು ಬಣ್ಣ ಬಣ್ಣದ ಹೂವಿನ ಗಿಡಗಳ ಜಗತ್ತು ಶಾಲೆಯನ್ನು ಪ್ರವೇಶಿಸುತ್ತಿದ್ದಂತೆ ಸ್ವಾಗತಿಸುತ್ತದೆ. ಜತೆಗೆ, ಅಲಂಕಾರಿಕ ಗಿಡಗಳು ಉದ್ಯಾನವನ್ನು ನೆನಪಿ ಸುತ್ತದೆ. ಹೀಗೆ ಶಾಲೆಯ ಆವರಣವನ್ನೇ ಪುಟ್ಟ ತೋಟವನ್ನಾಗಿಸಿರುವುದು ಜಿಲ್ಲೆಯ ಹನೂರು ತಾಲೂಕಿನ ಹಲಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ….

ಸಾಲ ಮನ್ನಾ ಮಾಡದಿದ್ದರೆ ಹೆಚ್‍ಡಿಕೆ ಮತ್ತೊಮ್ಮೆ ವಚನ ಭ್ರಷ್ಟತೆ: ಮಲ್ಲೇಶ್
ಚಾಮರಾಜನಗರ

ಸಾಲ ಮನ್ನಾ ಮಾಡದಿದ್ದರೆ ಹೆಚ್‍ಡಿಕೆ ಮತ್ತೊಮ್ಮೆ ವಚನ ಭ್ರಷ್ಟತೆ: ಮಲ್ಲೇಶ್

June 5, 2018

ಚಾಮರಾಜನಗರ:  ರೈತರ ಎಲ್ಲ ರೀತಿಯ ಸಾಲವನ್ನು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮನ್ನಾ ಮಾಡಬೇಕು. ಇಲ್ಲದಿದ್ದರೆ ಅವರು ಮತ್ತೊಮ್ಮೆ ವಚನ ಭ್ರಷ್ಟರಾಗಲಿದ್ದಾರೆ ಎಂದು ಬಿಜೆಪಿ ರೈತ ಮುಖಂಡ ಅಮ್ಮನ ಪುರ ಮಲ್ಲೇಶ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜೆಡಿಎಸ್ ಚುನಾವಣಾ ಪೂರ್ವದಲ್ಲಿ ರೈತರ ಸಾಲವನ್ನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಇದನ್ನು ಹೆಚ್.ಡಿ. ಕುಮಾರಸ್ವಾಮಿ ಅವರು ಚುನಾವಣೆಯ ಎಲ್ಲ ಸಾರ್ವಜನಿಕ ಸಭೆಗಳಲ್ಲಿ…

ಸೊಳ್ಳೆ, ಬಾವಲಿ, ಕೋಳಿಯಿಂದ ಸಾಂಕ್ರಾಮಿಕ ಕಾಯಿಲೆ ಹರಡಲ್ಲ: ಹೋಮಿಯೋಪತಿ ವೈದ್ಯ ಡಾ.ಖಾದರ್ ಅಭಿಮತ
ಚಾಮರಾಜನಗರ

ಸೊಳ್ಳೆ, ಬಾವಲಿ, ಕೋಳಿಯಿಂದ ಸಾಂಕ್ರಾಮಿಕ ಕಾಯಿಲೆ ಹರಡಲ್ಲ: ಹೋಮಿಯೋಪತಿ ವೈದ್ಯ ಡಾ.ಖಾದರ್ ಅಭಿಮತ

June 5, 2018

ಚಾಮರಾಜನಗರ: ಸೊಳ್ಳೆ, ಬಾವಲಿ, ಕೋಳಿಯಿಂದ ಸಾಂಕ್ರಾ ಮಿಕ ರೋಗಗಳು ಹರಡುವುದಿಲ್ಲ ಎಂದು ಮೈಸೂರು ಹಸಿರು ಹೋಮಿಯೋಪತಿ ಕ್ಲಿನಿಕ್ ವೈದ್ಯ ಡಾ.ಖಾದರ್ ಸ್ಪಷ್ಟಪಡಿಸಿದರು.ನಗರದ ನಂದಿಭವನದಲ್ಲಿ ಸೋಮ ವಾರ ಸುಗಂಧಿನಿ ಟ್ರಸ್ಟ್ ಹಾಗೂ ಮೈಸೂರು ಹಸಿರು ಹೋಮಿಯೊಪತಿ ಕ್ಲಿನಿಕ್ ವತಿಯಿಂದ ಆಯೋಜಿಸಿದ್ದ ಚಾಮರಾಜ ನಗರ ಜಿಲ್ಲೆ ಡೆಂಗ್ಯೂಮುಕ್ತ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಸಾಂಕ್ರಾಮಿಕ ರೋಗಗಳು ಸೊಳ್ಳೆ, ಬಾವಲಿ, ಕೋಳಿಯಿಂದ ಹರಡುತ್ತದೆ ಎಂಬುದು ಕೇವಲ ಊಹಾಪೋಹ ಅಷ್ಟೇ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ದಿನದಿಂದ ದಿನಕ್ಕೆ ಕಡಿಮೆಯಾಗು ತ್ತದೆ….

ಮಳೆ ಅವಘಡ: ಪರಿಹಾರ ಕ್ರಮಗಳಿಗೆ ಸನ್ನದ್ಧರಾಗಲು ಸೂಚನೆ
ಚಾಮರಾಜನಗರ

ಮಳೆ ಅವಘಡ: ಪರಿಹಾರ ಕ್ರಮಗಳಿಗೆ ಸನ್ನದ್ಧರಾಗಲು ಸೂಚನೆ

June 5, 2018

ಚಾಮರಾಜನಗರ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಎದುರಾಗುವ ಯಾವುದೇ ಸಮಸ್ಯೆಯನ್ನು ನಿವಾರಿಸಿ ಪರಿಹಾರ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳಲು ಅಧಿಕಾರಿಗಳು ಸನ್ನದ್ಧರಾಗಿರಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಸುತ್ತೋಲೆ ಹೊರಡಿಸಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಅತಿವೃಷ್ಟಿ ಸಂಭವಿಸಿದ್ದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಹಾರ ಕ್ರಮಕೈಗೊಳ್ಳಬೇಕು. ಸಕಾಲದಲ್ಲಿ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಮುಖ್ಯ ಜವಾಬ್ದಾರಿ ಯಾಗಿದೆ ಎಂದು ತಿಳಿಸಿದ್ದಾರೆ….

ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ
ಚಾಮರಾಜನಗರ

ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ

June 5, 2018

ಚಾಮರಾಜನಗರ:  ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವ ಶಿಕ್ಷಕರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹದೇವಪ್ಪ ಅವರು ಎಚ್ಚರಿಕೆ ನೀಡಿದ್ದಾರೆ. ರಾಮಸಮುದ್ರದ ಸಿಆರ್ ಬಾಲಪಟ್ಟಣ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ಹಲ್ಲೆ ನಡೆಸಿರುವುದು ಇಲಾಖೆ ಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ. ಹಲ್ಲೆ ಮಾಡಿದ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ. ಇಂಥಹ ಪ್ರಕರಣಗಳು ಪುನರಾವರ್ತನೆಯಾಗಬಾರದು. ವಿದ್ಯಾರ್ಥಿಗಳ ಮೇಲೆ ದೈಹಿಕ ಅಥವಾ ಮಾನಸಿಕ ಹಿಂಸೆ, ಹಲ್ಲೆ ಮಾಡುವುದು ಮಕ್ಕಳ ರಕ್ಷಣಾ ಹಕ್ಕು…

1 65 66 67 68 69 74
Translate »