ಸೊಳ್ಳೆ, ಬಾವಲಿ, ಕೋಳಿಯಿಂದ ಸಾಂಕ್ರಾಮಿಕ ಕಾಯಿಲೆ ಹರಡಲ್ಲ: ಹೋಮಿಯೋಪತಿ ವೈದ್ಯ ಡಾ.ಖಾದರ್ ಅಭಿಮತ
ಚಾಮರಾಜನಗರ

ಸೊಳ್ಳೆ, ಬಾವಲಿ, ಕೋಳಿಯಿಂದ ಸಾಂಕ್ರಾಮಿಕ ಕಾಯಿಲೆ ಹರಡಲ್ಲ: ಹೋಮಿಯೋಪತಿ ವೈದ್ಯ ಡಾ.ಖಾದರ್ ಅಭಿಮತ

June 5, 2018

ಚಾಮರಾಜನಗರ: ಸೊಳ್ಳೆ, ಬಾವಲಿ, ಕೋಳಿಯಿಂದ ಸಾಂಕ್ರಾ ಮಿಕ ರೋಗಗಳು ಹರಡುವುದಿಲ್ಲ ಎಂದು ಮೈಸೂರು ಹಸಿರು ಹೋಮಿಯೋಪತಿ ಕ್ಲಿನಿಕ್ ವೈದ್ಯ ಡಾ.ಖಾದರ್ ಸ್ಪಷ್ಟಪಡಿಸಿದರು.ನಗರದ ನಂದಿಭವನದಲ್ಲಿ ಸೋಮ ವಾರ ಸುಗಂಧಿನಿ ಟ್ರಸ್ಟ್ ಹಾಗೂ ಮೈಸೂರು ಹಸಿರು ಹೋಮಿಯೊಪತಿ ಕ್ಲಿನಿಕ್ ವತಿಯಿಂದ ಆಯೋಜಿಸಿದ್ದ ಚಾಮರಾಜ ನಗರ ಜಿಲ್ಲೆ ಡೆಂಗ್ಯೂಮುಕ್ತ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಸಾಂಕ್ರಾಮಿಕ ರೋಗಗಳು ಸೊಳ್ಳೆ, ಬಾವಲಿ, ಕೋಳಿಯಿಂದ ಹರಡುತ್ತದೆ ಎಂಬುದು ಕೇವಲ ಊಹಾಪೋಹ ಅಷ್ಟೇ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ದಿನದಿಂದ ದಿನಕ್ಕೆ ಕಡಿಮೆಯಾಗು ತ್ತದೆ. ಈ ಕಾರಣ ಸಾಂಕ್ರಾಮಿಕ ಕಾಯಿಲೆ ಗಳು ಬರುತ್ತದೆ ಎಂದರು. ಇತ್ತೀಚಿನ ದಿನ ಗಳಲ್ಲಿ ನಾವು ಸೇವಿಸುತ್ತಿರುವ ಆಹಾರವು ಕಲುಷಿತವಾಗಿದೆ. ಹಾಗಾಗಿ, ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ ಎಂದ ಅವರು, ಡೆಂಗ್ಯೂ, ಮಲೇರಿಯಾ, ಚಿಕುನ್‍ಗುನ್ಯಾ ದಂತಹ ಸಾಂಕ್ರಾಮಿಕ ರೋಗಗಳಿಂದ ದೂರವಾಗಬೇಕಾದರೆ ಗರಿಕೆ, ಅರಳಿ, ಹೊಂಗೆ, ತುಳಸಿ, ಬಿಲ್ವ್ವಪತ್ರೆ, ಬೇವು, ಅಮೃತ ಬಳ್ಳಿಯಂತಹ ಔಷಧಿ ಗುಣವುಳ್ಳ ಸಸಿ ಗಳನ್ನು ಅರೆದು ಕುದಿಸಿ 100 ಎಂ.ಎಲ್ ಲೋಟದಲ್ಲಿ 4 ದಿನಕ್ಕೊಮ್ಮೆ 28 ದಿನ ಸೇವಿಸಬೇಕು ಎಂದು ಸಲಹೆ ನೀಡಿದರು.

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಮೆ, ನವಣೆ ಸೇರಿದಂತೆ ಸಿರಿಧಾನ್ಯ ದಿಂದ ತಯಾರಾದ ಆಹಾರ ಸೇವಿಸಬೇಕು. ಕಾಫಿ, ಟೀ, ಹಾಲು, ಮಾಂಸ, ಮೊಟ್ಟೆಯಿಂದ ದೂರ ಇರಬೇಕು. ಈ ಮೂಲಕ ನಮ್ಮ ಆಲೋಚನೆ ನಮ್ಮ ಕೈಯಲ್ಲಿ ಎಂಬ ಮಾತಿಗೆ ಬದ್ಧರಾಗಿರಬೇಕು ಎಂದರು. ಕಾರ್ಯ ಕ್ರಮದಲ್ಲಿ ಹಸಿರು ಹೋಮಿಯೋಪತಿ ಕ್ಲಿನಿಕ್ ವೈದ್ಯೆ ಡಾ.ಅತಿರಾ, ಮುಖಂಡ ರಾದ ಮಂಜುನಾಥ್, ಹೆಗ್ಗವಾಡಿಪುರ ಮಹೇಶ್ ಕುಮಾರ್ ಹಾಜರಿದ್ದರು.

Translate »