ಟ್ಯಾಂಕರ್ ಚಾಲಕನ ಅತಿವೇಗ : ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಕೊಡಗು

ಟ್ಯಾಂಕರ್ ಚಾಲಕನ ಅತಿವೇಗ : ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

June 5, 2018

ಮಡಿಕೇರಿ:  ಆಯಿಲ್ ಟ್ಯಾಂಕರ್‍ವೊಂದು ಕೆಎಸ್‍ಆರ್‍ಟಿಸಿ ಬಸ್‍ಗೆ ಮುಖಾಮುಖಿ ಡಿಕ್ಕಿಯಾಗುವುದು ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು, ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣ ಕರ ಜೀವ ಉಳಿದಿದೆ.ಮಡಿಕೇರಿ-ಮಂಗಳೂರು ಹೆದ್ದಾರಿಯ ಕೊಯನಾಡು ಬಳಿ ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಮಡಿಕೇರಿ ಗ್ರಾಮಾಂ ತರ ಪೊಲೀಸರು ಟ್ಯಾಂಕರ್ ಚಾಲಕನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಮಂಗಳೂರು, ಸುಬ್ರಹ್ಮಣ್ಯ ಮಾರ್ಗ ವಾಗಿ ಬೆಂಗಳೂರು ತಲುಪಬೇಕಿದ್ದ ಸುಳ್ಯ ಡಿಪೋಗೆ ಸೇರಿದ ಕೆಎಸ್‍ಆರ್‍ಟಿಸಿ ಬಸ್‍ಗೆ ಕೊಯನಾಡು ಹೆದ್ದಾರಿಯಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ಆಯಿಲ್ ಟ್ಯಾಂಕರ್ ಅತಿವೇಗವಾಗಿ ನುಗ್ಗಿದ್ದು, ಸಾರಿಗೆ ಬಸ್‍ಗೆ ಮುಖಾಮುಖಿ ಡಿಕ್ಕಿ ಹೊಡೆ ಯುತ್ತಿತ್ತೆನ್ನಲಾಗಿದೆ. ಈ ಅನಾಹುತವನ್ನು ಕ್ಷಣಾರ್ಧದಲ್ಲೇ ಗ್ರಹಿಸಿದ ಬಸ್ ಚಾಲಕ ಜಗದೀಶ್ ತಕ್ಷಣವೇ ಬಸ್ ಅನ್ನು ರಸ್ತೆ ಬದಿಗಿಳಿಸಲು ಪ್ರಯತ್ನಪಟ್ಟಿದ್ದಾರೆ. ಈ ಸಂದರ್ಭ ಬಸ್‍ನ ಮುಂಬದಿ ಟ್ಯಾಂಕರ್‍ಗೆ ಉಜ್ಜಿಕೊಂಡಿದೆ. ಟ್ಯಾಂಕರ್ ಚಾಲಕ ಬೇರೊಂದು ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಸಂಪೂರ್ಣವಾಗಿ ರಸ್ತೆಯ ಬಲ ಬದಿಗೆ ಬಂದಿದ್ದೇ ಈ ಘಟನೆಗೆ ಕಾರಣ ವಾಗಿದೆ. ರಸ್ತೆ ಬದಿ ಕಂಬಕ್ಕೆ ಬಸ್ ಗುದ್ದಿ ದರೂ ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್‍ನಲ್ಲಿ ಪ್ರಯಾಣ ಸುತ್ತಿದ್ದ ಐವತ್ತಕ್ಕೂ ಹೆಚ್ಚಿನ ಪ್ರಯಾಣ ಕರು ಪಾರಾಗಿದ್ದಾರೆ.

ಮುಖಾಮುಖಿ ಡಿಕ್ಕಿಯಾಗಿದ್ದರೆ ಪಕ್ಕದ್ದಲ್ಲೇ ಇದ್ದ ಕಂದಕಕ್ಕೆ ಬಸ್ ಉರುಳುತ್ತಿತ್ತಲ್ಲದೇ, ಭಾರಿ ಪ್ರಾಣ ಹಾನಿಯಾಗುವ ಸಾಧ್ಯತೆಯು ಇತ್ತು. ಬಸ್‍ನಲ್ಲಿದ್ದ ಪ್ರಯಾಣ ಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಸ್ ಚಾಲಕ ಸೇರಿದಂತೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Translate »