ನಿಧಿಗಾಗಿ ದೇಗುಲಕ್ಕೆ ಕನ್ನ
ಚಾಮರಾಜನಗರ

ನಿಧಿಗಾಗಿ ದೇಗುಲಕ್ಕೆ ಕನ್ನ

June 8, 2018

ಚಾಮರಾಜನಗರ:  ಹಣ, ಒಡವೆ ಕದಿ ಯಲು ಮನೆಗಳಿಗೆ ಕನ್ನ ಹಾಕು ವುದನ್ನು ನೋಡಿದ್ದೇವೆ. ಆದರೆ ದೇವ ಸ್ಥಾನದ ಶಿವಲಿಂಗದ ಕೆಳಗಡೆ ನಿಧಿ ಇದೆ ಎಂದು ಶಿವಲಿಂಗಕ್ಕೆ ಕನ್ನ ಹಾಕಿ ರುವ ಘಟನೆ ತಾಲೂಕಿನ ಕೆಂಪನ ಪುರ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕೆಂಪನಪುರ ಗ್ರಾಮದ ಹೊರ ವಲಯದಲ್ಲಿ ಪುರಾತನ ಕಾಲದ ಶ್ರೀ ಮುನೇಶ್ವರ ದೇವಸ್ಥಾನ ಇದೆ. ಈ ದೇವಸ್ಥಾನದಲ್ಲಿ ಹೊಯ್ಸಳರ ಕಾಲದ ಬಹಳ ಎತ್ತರದ ಅಪ ರೂಪದ ಶಿವಲಿಂಗ ಇದೆ. ಈ ಶಿವ ಲಿಂಗದ ಕೆಳಗಡೆ ಮುತ್ತು ರತ್ನಗಳು, ಚಿನ್ನಾಭರಣ ಇದೆ ಎಂದು ಜನ ಮೊದಲಿನಿಂದಲೂ ನಂಬಿದ್ದಾರೆ. ಈ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ದೇವಸ್ಥಾನಕ್ಕೆ ಕನ್ನ ಹಾಕಿರುವ ದುಷ್ಕ ರ್ಮಿಗಳು, ಶಿವಲಿಂಗದ ಸುತ್ತಲೂ ಹಳ್ಳ ತೋಡಿ ಶಿವಲಿಂಗದ ಕಲ್ಲುಗಳನ್ನು ಬೇರ್ಪಡಿಸಿದ್ದಾರೆ. ದುಷ್ಕರ್ಮಿಗಳಿಗೆ ಚಿನ್ನಾಭರಣ, ಮುತ್ತು ರತ್ನಗಳಿ ಸಿಕ್ಕಿದೆ ಎಂಬುದು ಗೊತ್ತಾಗಿಲ್ಲ.

ಇದೇ ದೇವಸ್ಥಾನಕ್ಕೆ ಕಳೆದ ಮೂರು-ನಾಲ್ಕು ವರ್ಷದ ಹಿಂದೆ ಇದೇ ರೀತಿ ದುಷ್ಕರ್ಮಿಗಳು ಕನ್ನ ಹಾಕಿದ್ದರು. ಈ ವೇಳೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಸರಿ ಮಾಡಿದ್ದರು. ಇದೀಗ ಮತ್ತೆ ಅಂತಹದೇ ಘಟನೆ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕವನ್ನು ತಂದೊಡ್ಡಿದೆ. ಮಂಗಳ ವಾರ ಬೆಳಿಗ್ಗೆ ಗ್ರಾಮಸ್ಥರಿಗೆ ಈ ವಿಷಯ ತಿಳಿಯಿತು. ಈ ಸಂಬಂಧ ಸಂತೇಮರ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Translate »