ಗೀತಾ ಮಂದಿರದ ರಸ್ತೆಯ ಸರ್ಕಾರಿ  ಶಾಲೆ ಮಕ್ಕಳಿಗೆ ಬೆಳಗಿನ ಉಪಹಾರ ಆರಂಭ
ಮೈಸೂರು

ಗೀತಾ ಮಂದಿರದ ರಸ್ತೆಯ ಸರ್ಕಾರಿ  ಶಾಲೆ ಮಕ್ಕಳಿಗೆ ಬೆಳಗಿನ ಉಪಹಾರ ಆರಂಭ

June 8, 2018

ಮೈಸೂರು: ಮೈಸೂರಿನ ಸ್ಥಾನಿಕವಾಸಿ ಜೈನ್ ಯುವ ಸಂಘಟನೆಯು ತಾನು ದತ್ತು ತೆಗೆದುಕೊಂಡಿರುವ ಗೀತಾ ಮಂದಿರ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ಎರಡು ವರ್ಷಗಳ ಕಾಲ ಪ್ರತಿದಿನ ಉಪಹಾರ ವಿತರಿಸುವ ಕಾರ್ಯಕ್ರಮ ಆರಂಭಿಸಿದೆ.

ಸಂಘಟನೆ ಅಧ್ಯಕ್ಷ ರಾಜನ್ ಬಾಗ್‍ಬಾರ್ ಸ್ವಾಗತಿಸಿದರು. ಈ ವೇಳೆ ಸಂಘಟನೆ ಕಾರ್ಯದರ್ಶಿ ರಾಕೇಶ್ ಬಾಂಟಿಯಾ ಬೆಳಗಿನ ಉಪಹಾರದ ಮಹತ್ವದ ಬಗ್ಗೆ ವಿವರಿಸಿದರು. ಮೊದಲನೇ ತಿಂಗಳ ಉಪಹಾರದ ಪ್ರಾಯೋಜಕತ್ವವನ್ನು ಮೋಹನ್‍ಲಾಲ್‍ಜೀ ಸುರೇಶ್ ಕುಮಾರ್‍ಜೀ ಬೋಹ್ರಾ ಕುಟುಂಬದವರು ವಹಿಸಿಕೊಂಡಿದ್ದಾರೆ ಎಂದರು.

ಜಂಟಿ ಕಾರ್ಯದರ್ಶಿ ರಾಜೇಂದ್ರ ದೇಶರಾಲಾ, ಮಾಜಿ ಅಧ್ಯಕ್ಷ ಉಮೇಶ್ ಕೊತಾರಿ, ಉಪಾಧ್ಯಕ್ಷ ಮನೋಹರ್ ಶಂಕ್ಲಾ, ಕಿಶೋರ್ ಲೋಧಾ, ಅರವಿಂದ್ ಸಿಂಘ್ವಿ, ಸುರೇಶ್ ಬೋಹ್ರಾ, ಪ್ರಕಾಶ್ ಗಾಂಧಿ, ವಿಜಯ್ ಬೋಹ್ರಾ, ವಿಮಲ್ ಬಾಗ್‍ಮಾರ್, ಅಭಿಷೇಕ್ ಬಾಗ್‍ಮಾರ್, ಅಖಿಲೇಶ್ ಬಾಗ್‍ಮಾರ್, ರೋಹಿತ್ ನಂಗಾವತ್, ಶಾಂತಿ ಮುತ್ತಾ, ಆನಂದ್ ಭಂಡಾರಿ, ಅರಿಹಂತ್ ಬೋಹ್ರಾ, ಶಾಲಾ ಸಮಿತಿ ಅಧ್ಯಕ್ಷ ಭರತ್ ಪಟ್ವಾ, ಎನ್. ಜನಕ್ ನಂಗಾವತ್ ಮತ್ತಿತರರು ಹಾಜರಿದ್ದರು.

Translate »