ಪಾವತಿಯಾಗದ ಕಬ್ಬಿನ ಬಾಕಿ ಹಣ, ತೀರದ ಗೋಳು
ಮಂಡ್ಯ

ಪಾವತಿಯಾಗದ ಕಬ್ಬಿನ ಬಾಕಿ ಹಣ, ತೀರದ ಗೋಳು

June 8, 2018
  • ಸಿಹಿ ಬೆಳೆಯುವ ರೈತರಿಗೆ ಕಹಿ ತಿನ್ನುವ ಪರಿಸ್ಥಿತಿ
  • ನ್ಯಾಯಾಲಯದ ಆದೇಶ ಪಾಲಿಸದ ಕಾರ್ಖಾನ

ಭಾರತೀನಗರ: ಕೃಷ್ಣರಾಜ ಸಾಗರ ಜಲಾಶಯ ನಿರ್ಮಿಸಿದಾಗ ಮಂಡ್ಯ ಜಿಲ್ಲೆಯ ರೈತರ ಬದುಕು ಹಸನಾಗುತ್ತದೆ. ಅನ್ನದಾತರು ಆರ್ಥಿಕ ಬಿಕ್ಕಟ್ಟಿನಿಂದ ಹೊರ ಬಂದು ಅವರ ಬದುಕು ಪ್ರಗತಿದಾಯಕ ವಾಗಬಹುದು ಎಂಬ ದೊಡ್ಡ ಮಟ್ಟದ ನಿರೀಕ್ಷೆ ಇಡಲಾಗಿತ್ತು. ಆದರೆ, ಪ್ರಸ್ತುತದ ದಿನಗಳಲ್ಲಿ ಅದು ಸುಳ್ಳಾಗಿದೆ. ನಾಡಿಗೆ ಸಿಹಿ ಹಂಚುವ ಅನ್ನದಾತ ಇಂದು ಕಹಿ ಉಣ್ಣುವ ಪರಿಸ್ಥಿತಿ ಯಲ್ಲಿದ್ದಾನೆ.

ಹೌದು ವರ್ಷ ಪೂರ್ತಿ ಜಮೀನಿನಲ್ಲಿ ದುಡಿಯುವ ರೈತರಿಗೆ ಅವರ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತಿಲ್ಲ. ಅವರು ಅನುಭವಿ ಸುತ್ತಿರುವ ಸಮಸ್ಯೆಗಳಿಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಜಿಲ್ಲೆಯಲ್ಲಿ ಸಾವಿರಾರು ರೈತರು ಕಬ್ಬು ಬೆಳೆಯುತ್ತಾರೆ. ಆದರೆ, ಅವರು ಕಾರ್ಖಾನೆಗೆ ಸರಬರಾಜು ಮಾಡಿದ ಕಬ್ಬಿನ ಬಾಕಿಯನ್ನು ಸರಿಯಾದ ಸಮಯಕ್ಕೆ ನೀಡದೇ ಕಾರ್ಖಾನೆ ಆಡಳಿತ ಮಂಡಳಿಗಳು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿವೆ.

ಜಿಲ್ಲೆಯ ಚಾಂಷುಗರ್ ಕಾರ್ಖಾನೆ ಬರೋಬರಿ 20ಕೋಟಿ ಕಬ್ಬಿನ ಹಣವನ್ನು ಬಾಕಿ ಉಳಿಸಿಕೊಂಡು, ರೈತರ ಆಕ್ರೋಶಕ್ಕೆ ತುತ್ತಾಗಿದೆ.ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ 14ದಿನಗಳಲ್ಲಿ ಹಣ ಪಾವತಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಕಾರ್ಖಾನೆ ಮಾತ್ರ ಈ ಆದೇಶವನ್ನು ಗಾಳಿಗೆ ತೋರಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ. ಈಗಾಗಲೇ ಚಾಂಷುಗರ್ ಕಾರ್ಖಾನೆ ಕಬ್ಬು ಅರೆಯುವಿಕೆ ಸ್ಥಗಿತಗೊಳಿಸಿ 3 ತಿಂಗಳು ಕಳೆದಿದ್ದರೂ, ರೈತರಿಗೆ ಹಣ ಪಾವತಿಸಿಲ್ಲ. ಪ್ರತಿ ವರ್ಷವೂ ಕಾರ್ಖಾನೆ ರೈತರಿಗೆ ಬಾಕಿ ಹಣ ನೀಡಲು ಅಲೆದಾಡಿಸುತ್ತಿದೆ.

16 ಬ್ಯಾಚ್‍ಗಳ ಬಾಕಿ: ಚಾಂಷುಗರ್ ಕಾರ್ಖಾನೆಯು 2017ರ ಸೆಪ್ಟೆಂಬರ್‍ನಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸಿದ್ದು, ಈವರೆಗೆ 3.85 ಲಕ್ಷ ಟನ್ ಕಬ್ಬು ಅರೆದಿದೆ. ಒಟ್ಟು 30 ಬ್ಯಾಚ್‍ಗಳ ರೈತರು ಕಬ್ಬು ಸರಬರಾಜು ಮಾಡಿದ್ದಾರೆ. ಈ ಪೈಕಿ 14 ಬ್ಯಾಚ್‍ಗಳಿಗೆ ಮಾತ್ರ ಹಣ ಪಾವತಿಸಲಾಗಿದೆ. ಇನ್ನೂ 16 ಬ್ಯಾಚ್‍ಗಳಿಗೆ ಹಣ ಪಾವತಿ ಮಾಡದೆ ರೈತರ ಜೊತೆ ಕಣ್ಣಾಮುಚ್ಚಾಲೆ ಆಟ ವಾಡುತ್ತಿದೆ. ಇದರಿಂದ ರೈತರು ಪ್ರತಿದಿನ ಪ್ರತಿಭಟನೆ, ಹೋರಾಟ ಮಾಡುತ್ತ ಪರಿತ ಪಿಸುತ್ತಿದ್ದಾರೆ.

ಬರದಿಂದ ತತ್ತರಿಸಿದ ರೈತರು: ಜಿಲ್ಲೆಯಲ್ಲಿ ಕಳೆದ 2 ವರ್ಷಗಳಿಂದ ಬರಗಾಲ ಆವರಿಸಿ ರೈತರು ತೀವ್ರ ಸಂಕಷ್ಟದಲ್ಲಿದ್ದರು. ಕೆಆರ್‍ಎಸ್ ನೀರು ಜಿಲ್ಲೆಯ ಎಲ್ಲ ಭಾಗಕ್ಕೂ ತಲುಪದ ಕಾರಣ ಹಲವು ರೈತರು ಕಬ್ಬು ಬಿತ್ತನೆ ಮಾಡಿ ಕೈ ಸುಟ್ಟು ಕೊಂಡಿದ್ದರು. ಇನ್ನೂ ಕೆಲವು ರೈತರು ಸಾಲ ಮಾಡಿ ಕೊಳವೆ ಬಾವಿಗಳನ್ನು ಕೊರೆಸಿ ಪಂಪ್‍ಸೆಟ್ ಅಳವಡಿಸಿಕೊಂಡು ವಿದ್ಯುತ್ ಕಣ್ಣಾಮುಚ್ಚಾಲೆಯ ನಡುವೆಯೂ ಶ್ರಮದಿಂದ ನೀರು ಹಾಯಿಸಿ ಕಬ್ಬು ಬೆಳೆದು ಕಾರ್ಖಾನೆಗೆ ಸರಬರಾಜು ಮಾಡಿದ್ದಾರೆ. ಆದರೆ, ಅವರಿಗೆ ಬಾಕಿ ಹಣವನ್ನು ಕಾರ್ಖಾನೆ ಗಳು ನೀಡದೆ ಚಿಂತೆಗೀಡು ಮಾಡಿದೆ.

ತೀರದ ಗೋಳು: ‘ಕಾರ್ಖಾನೆಯಿಂದ ಹಣ ಪಡೆಯಬೇಕಾದರೆ ಮದುವೆ, ತಿಥಿ ಮಾಡಬೇಕು. ಇಲ್ಲವೇ ಆಸ್ಪತ್ರೆ ಸೇರಿ ದಾಖಲೆ ನೀಡಿ ಹೆಣಗಾಡಿದರೆ ಮಾತ್ರ ಹಣ ಪಡೆ ಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅವರು ಹಣ ಕೊಡುವವರೆಗೆ ಕಾಯ ಬೇಕು. ನಮ್ಮ ಗೋಳನ್ನು ಕೇಳುವವರು ಯಾರೂ ಇಲ್ಲ’ ಎಂದು ರೈತರೊಬ್ಬರು ಸಂಕಷ್ಟ ಹೇಳಿಕೊಂಡರು.
‘ಹÀಣಕ್ಕಾಗಿ ಸಾಮಾನ್ಯ ರೈತರು ಪ್ರತಿನಿತ್ಯ ಪರದಾಡುತ್ತಿದ್ದಾರೆ. ಆದರೆ, ರಾಜಕೀಯ ಬೆಂಬಲವಿರುವವರು ಹಾಗೂ ಬಲಿಷ್ಠರು ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಧ್ವನಿ ಎತ್ತಿ ಕಚೇರಿಗಳಿಗೆ ಬೀಗ ಜಡಿದು ಕೇಳಿದಾಗ ಅವರಿಗೆ ಹಣದ ಚೆಕ್ ಅನ್ನು ಕೂಡಲೇ ನೀಡಲಾಗುತ್ತದೆ. ಸಣ್ಣ ರೈತರನ್ನು ಮಾತ್ರ ಕಡೆಗಣ ಸಲಾಗುತ್ತಿದೆ’ ಎಂಬುದು ರೈತರ ಆರೋಪವಾಗಿದೆ.

1,049 ಕ್ವಿಂಟಾಲ್ ಸಕ್ಕರೆ ವಶ

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರದ ಚಾಂಷುಗರ್ ಕಾರ್ಖಾನೆ ರೈತರ ಬಾಕಿ ಹಣ ಪಾವತಿ ಸದೇ ವಿಳಂಬ ಮಾಡಿದ ಕಾರಣ ಜೂ. 6ರಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ಹಾಗೂ ಮದ್ದೂರು ತಹಶೀಲ್ದಾರ್ ಅವರುಗಳು ಜಂಟಿಯಾಗಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆಯಲ್ಲಿ ದಾಸ್ತಾನಿದ್ದ 1,049 ಕ್ವಿಂಟಾಲ್ ಸಕ್ಕರೆಯನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇ ಶಕ ಶಿವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »