ಚಾಮರಾಜನಗರ: ರೈತರ ಎಲ್ಲ ರೀತಿಯ ಸಾಲವನ್ನು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮನ್ನಾ ಮಾಡಬೇಕು. ಇಲ್ಲದಿದ್ದರೆ ಅವರು ಮತ್ತೊಮ್ಮೆ ವಚನ ಭ್ರಷ್ಟರಾಗಲಿದ್ದಾರೆ ಎಂದು ಬಿಜೆಪಿ ರೈತ ಮುಖಂಡ ಅಮ್ಮನ ಪುರ ಮಲ್ಲೇಶ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜೆಡಿಎಸ್ ಚುನಾವಣಾ ಪೂರ್ವದಲ್ಲಿ ರೈತರ ಸಾಲವನ್ನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಇದನ್ನು ಹೆಚ್.ಡಿ. ಕುಮಾರಸ್ವಾಮಿ ಅವರು ಚುನಾವಣೆಯ ಎಲ್ಲ ಸಾರ್ವಜನಿಕ ಸಭೆಗಳಲ್ಲಿ ಹೇಳಿದ್ದರು. ಈಗ ಅವರೇ ಮುಖ್ಯಮಂತ್ರಿ ಆಗಿರುವು ದರಿಂದ ಕೊಟ್ಟ ಭರವಸೆಯಂತೆ ರೈತರ ಎಲ್ಲ ರೀತಿಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಇಲ್ಲದಿದ್ದರೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಪದವಿ ನೀಡದೆ ವಚನ ಭ್ರಷ್ಟರು ಎಂಬ ಅಪಕೀರ್ತಿಗೆ ಪಾತ್ರರಾಗಿರುವ ಎಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ವಚನ ಭ್ರಷ್ಟರು ಎಂದು ರಾಜ್ಯದ ರೈತರ ಕೆಂಗಣ ್ಣಗೆ ಗುರಿಯಾಗಬೇಕಾಗುತ್ತದೆ ಎಂದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ವಯಂ ಘೋಷಿತ ಕೆಲವು ರೈತ ಮುಖಂಡರ ಸಭೆ ಸೇರಿಸಿ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಚರ್ಚಿಸಿರುವುದು ವಿಪರ್ಯಾಸವಾಗಿದೆÀ. ಈ ಸಭೆಯಲ್ಲಿ ರೈತರ ಸಾಲವನ್ನು ಮನ್ನಾ ಮಾಡಲು ಷರತ್ತು ಗಳು ಹಾಗೂ ಒಂದು ಕಾಲಾವಧಿಯನ್ನು ನಿಗದಿಪಡಿಸಿ ಅದಕ್ಕೆ ಒಳಪಡುವ ರೈತರ ಸಾಲ ಮನ್ನಾ ಮಾಡಲು ಚಿಂತಿಸಲಾಗಿರು ವುದು. ಇದಕ್ಕೆ ಕಾಲಾವಕಾಶಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಇದನ್ನು ರೈತರು ಒಪ್ಪಲು ಸಾಧ್ಯವಿಲ್ಲ. ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು. ಇಲ್ಲ ದಿದ್ದರೆ ಬಿಜೆಪಿಯಿಂದ ಚಳವಳಿ ರೂಪಿಸ ಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚಿನ್ನಾಭರಣ ಅಡವಿಟ್ಟಿರುವ ರೈತರ ಸಾಲವನ್ನು ಸಹ ಮನ್ನಾ ಮಾಡಬೇಕು. ಟ್ರ್ಯಾಕ್ಟರ್ ಹಾಗೂ ಟಿಲ್ಲರ್ ಸಾಲ ಪಡೆದಿ ರುವ ರೈತರ ಬಡ್ಡಿ ಮನ್ನಾ ಮಾಡಬೇಕು. ಯಾವೊಬ್ಬ ರೈತರು ಸಾಲಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ರೈತರಿಂದ ಬೆಳೆ ವಿಮಾ ಹಣ ಪಡೆಯುವ ವಿಮಾ ಕಂಪೆನಿಗಳು ಕೂಡಲೇ ರೈತರಿಗೆ ಬೆಳೆ ವಿಮಾ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ಬಸವನ ಪುರ ರಾಜಶೇಖರ, ನಲ್ಲೂರು ಪರಶಿವ ಮೂರ್ತಿ, ನಾಗೇಂದ್ರ, ಬಿಸಲವಾಡಿ ಬಸವರಾಜು, ಕರಿಯನಕಟ್ಟೆ ರಾಜೇಶ್ ಹಾಜರಿದ್ದರು.