ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‍ರಾಜ್‍ಸಿಂಗ್ ಸೂಚನೆ
ಹಾಸನ

ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‍ರಾಜ್‍ಸಿಂಗ್ ಸೂಚನೆ

June 5, 2018

ಹಾಸನ:  ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ರೈತರಿಗೆ ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ನವೀನ್‍ರಾಜ್‍ಸಿಂಗ್ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಜಿಲ್ಲೆಯ ಮಳೆ-ಬೆಳೆ ಪರಿಸ್ಥಿತಿ ಗಳ ಕುರಿತ ಪರಿಶೀಲನಾ ಸಭೆಯಲ್ಲಿ ಮಾತ ನಾಡಿದ ಅವರು, ಈಗಾಗಲೇ ಉತ್ತಮ ಮಳೆಯಾಗುತ್ತಿರುವುದರಿಂದ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಅಗತ್ಯ ಪ್ರಮಾಣದಷ್ಟು ಮೊದಲೇ ದಾಸ್ತಾನು ಮಾಡಿರಿಸಿಕೊಳ್ಳಿ ಎಂದು ನಿರ್ದೇಶನ ನೀಡಿದರು.

ರೈತರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಯೋಜನೆಗಳ ನೆರವು ಒದಗಿಸಿ. ಹೆಚ್ಚು ಆರ್ಥಿಕ ಲಾಭದ ಪರ್ಯಾಯ ಬೆಳೆಗಳ ಬಗ್ಗೆ ಮನವರಿಕೆ ಮಾಡಿಕೊಡಿ. ಆಲೂಗೆಡ್ಡೆ ಬಿತ್ತನೆ ಬೀಜ ವಿತರಣೆ ಹಾಗೂ ಬೇಸಾಯದಲ್ಲಿ ಯಾವುದೇ ಗೊಂದಲ, ತೊಂದರೆಗಳಾಗದಂತೆ ಮುಂಜಾಗ್ರತೆ ವಹಿಸಿ ಎಂದು ಅಧಿಕಾರಿಗಳಿಗೆ ಸಲಹೆ ಅವರು, ನೈಸರ್ಗಿಕ ವಿಕೋಪದಿಂದ ಮೃತಪಟ್ಟ ವರ ಕುಟುಂಬಸ್ಥರಿಗೆ ಕೂಡಲೇ ಪರಿಹಾರ ವಿತರಣೆಯಾಗಬೇಕು. ಮಳೆಯಿಂದ ಉಂಟಾಗಿರುವ ಹಾನಿಗಳನ್ನು ತಕ್ಷಣ ಅಂದಾ ಜಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ. ಕೆರೆಗಳು ಒಡೆದು ಅನಾಹುತ ಉಂಟಾಗದಂತೆ ಮುಂಜಾಗ್ರತೆ ವಹಿಸಿ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬಿತ್ತನೆ ಬೀಜ ರಸಗೊಬ್ಬರ ಹಾಗೂ ಆಲೂಗೆಡ್ಡೆ ಪೂರೈಕೆ ಸಂಬಂಧಿಸಿ ದಂತೆ ಏನಾದರು ಸಮಸ್ಯೆಗಳಿದ್ದಲ್ಲಿ ಕೂಡಲೇ ಅಧಿಕಾರಿಗಳು ತಮ್ಮ ಗಮನಕ್ಕೆ ತರಬೇಕು. ತಾವು ಅದನ್ನು ಸರ್ಕಾರ ಹಂತ ದಲ್ಲಿ ಚರ್ಚಿಸಿ ಸೂಕ್ತ ನೆರವು ಒದಗಿಸಲು ಗಮನ ಹರಿಸುತ್ತೇವೆ ಎಂದ ಅವರು, ಅತಿ ಯಾದ ಮಳೆಯಿಂದ ಒಂದು ವೇಳೆ ಆಲೂಗೆಡ್ಡೆ ಬೆಳೆ ಹಾನಿ ಸಂಭವಿಸಿದರೆ ಸೂಕ್ತ ಪರಿಹಾರ ಕೊಡಿಸಲು ಇಲಾಖಾ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದರು.

ಹೇಮಾವತಿ, ಯಗಚಿ ಮತ್ತು ವಾಟೆ ಹೊಳೆ ನೀರಿನ ಸಂಗ್ರಹಣೆ ಪ್ರಮಾಣದ ಬಗ್ಗೆ ಮಾಹಿತಿ ಪಡೆದ ಅವರು, ಕೃತಕ ಬೆಳೆಗಳಿಗೆ ಯಾವ ಯಾವ ಸಂದರ್ಭದಲ್ಲಿ ನೀರು ಒದಗಿಸಬಹುದು ಎಂಬುದಾಗಿ ಯೋಚಿಸಿ ರೈತರಿಗೆ ಮಾಹಿತಿ ನೀಡಿ ಎಂದರಲ್ಲದೆ, ಜಿಲ್ಲೆಯಲ್ಲಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಕೆಯಾಗುತ್ತಿರುವ ಗ್ರಾಮಗಳ ವಿವರ ಪಡೆದು ಆದಷ್ಟು ಶೀಘ್ರ ವಾಗಿ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳು ವಂತೆ ಜಿಪಂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಇಂಜಿನಿಯರ್ ಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿ ಜಗದೀಶ್ ಮಾತ ನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಸಮಸ್ಯೆಗೆ ಪರಿಹಾರಕ್ಕೆ ಕೈಗೊಂಡಿ ರುವ ಕ್ರಮ ಶಾಶ್ವತ ಪರ್ಯಾಯ ವ್ಯವಸ್ಥೆ ಗಳು, ಅರಸೀಕೆರೆ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಣ ್ಮಾ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯ ವರಿಗೆ ಮಾಹಿತಿ ನೀಡಿದರು.

Translate »