ಮೈಸೂರು: ಬಗೆ ಬಗೆಯ ತಿಂಡಿ-ತಿನಿಸುಗಳಿಂದ ಘಮ ಘಮಿಸುತ್ತಿದ್ದ ಆ ಸ್ಥಳವೀಗ ದುರ್ವಾಸನೆಗೆ ಸಾಕ್ಷಿಯಾಗಿದೆ. ಹೌದು, ದಸರಾ ಮಹೋ ತ್ಸವದ ಅಂಗವಾಗಿ ಆಹಾರ ಮೇಳ ನಡೆದ ಲಲಿತ ಮಹಲ್ ಹೆಲಿಪ್ಯಾಡ್ನ ಮುಡಾ ಮೈದಾನದ ದುಸ್ಥಿತಿ ಇದು. ಮೈದಾನದಲ್ಲಿ ಪ್ಲಾಸ್ಟಿಕ್ನ ಚಮಚ, ತಟ್ಟೆ, ಲೋಟ, ಚೀಲ ಹೀಗೆ ಹತ್ತು-ಹಲವು ಬಗೆಯ ತ್ಯಾಜ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮೈದಾನಕ್ಕೆ ಹೊಂದಿಕೊಂಡಿರುವ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೌಚಾಲಯಗಳನ್ನು ತೆರವು ಮಾಡಿದ್ದರೂ ಹೊಂಡಗಳನ್ನು ಮುಚ್ಚದೇ ಹಾಗೇ ಬಿಡಲಾಗಿದೆ. ಪರಿಣಾಮ ಹೊಂಡಗಳಲ್ಲಿ ಶೇಖರಣೆಗೊಂಡ ಮಲ-ಮೂತ್ರದ…
ನಾಟಿ ಕೋಳಿ ಸಾರಲ್ಲಿ ಮುದ್ದೆ ಉಣ್ಣುವಲ್ಲಿ ಶ್ರೀರಂಗಪಟ್ಟಣದ ಕೌಶಿಕ್ ತ್ರಿವಿಕ್ರಮ
October 13, 2018ಮೈಸೂರು: ಆಹಾರ ಉಪ ಸಮಿತಿ ವತಿಯಿಂದ ಆಯೋಜಿಸಿದ್ದ ನಾಟಿ ಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಕೌಶಿಕ್ ಪ್ರಥಮ ಬಹುಮಾನ ಪಡೆದುಕೊಂಡರು. ನಗರದ ಸ್ಕೌಟ್ಸ್ ಹಾಗೂ ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಶುಕ್ರವಾರ ಪುರುಷರಿಗಾಗಿ ಆಯೋಜಿಸಿದ್ದ ನಾಟಿಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆ ನಡೆಯಿತು. ಪ್ರತಿ ಸ್ಪರ್ಧಿಗಳಿಗೆ ಒಂದೂವರೆ ಕೆ.ಜಿ ತೂಕದ 4 ಮುದ್ದೆಗಳನ್ನು ನೀಡಲಾಗಿತ್ತು. ಸ್ಪರ್ಧೆ ಆರಂಭವಾಗುತ್ತಿದ್ದಂತೆ ತಮ್ಮ ಮುಂದಿಟ್ಟಿದ್ದ ಮುದ್ದೆಗಳನ್ನು ಬಿರುಸಾಗಿ ನುಂಗಲು ಕೆಲವರು ಪರದಾಡಿದರೆ, ಮತ್ತೆ ಕೆಲವರು ಸರಾಗವಾಗಿ ತಿಂದು ಮುಗಿಸಿದರು. ಈ…
ದಸರಾ ಆಹಾರ ಮೇಳಕ್ಕೆ ಚಾಲನೆ ಕಾದು ಕುಳಿತಿದ್ದ ಭೋಜನ ಪ್ರಿಯರಿಗೆ ಸುಗ್ಗಿ
October 11, 2018ಮೈಸೂರು,: ದಸರಾ ಮಹೋತ್ಸವದಲ್ಲಿ ಆಹಾರ ಪ್ರಿಯರ ಆಕರ್ಷಕ ತಾಣವಾಗುವ ಆಹಾರ ಮೇಳ ಬುಧವಾರ ಚಾಲನೆ ಪಡೆದುಕೊಂಡಿತು. ರಾಜ್ಯದ ನಾನಾ ಭಾಗ ಹಾಗೂ ವಿವಿಧ ರಾಜ್ಯಗಳ ವೈವಿಧ್ಯಮಯ ಆಹಾರಗಳ ಜೊತೆಗೆ ಈ ಬಾರಿ ವಿದೇಶಗಳ ಆಹಾರ ಶೈಲಿಯೂ ಘಮಘಮಿಸಲಿದೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಮೀಪದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಹೆಲಿಪ್ಯಾಡ್ನ ಮುಡಾ ಮೈದಾನದಲ್ಲಿ ಇಂದಿನಿಂದ ಆಹಾರ ಮೇಳ ಚಾಲನೆ ಪಡೆದುಕೊಂಡಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಅ.18ರವರೆಗೆ ಹಾಗೂ ಲಲಿತ ಮಹಲ್ ಹೆಲಿಪ್ಯಾಡ್ನ…