ಮೈಸೂರು,ಅ.2(ಎಂಟಿವೈ)- ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯತು ಮೈದಾನ ಬುಧವಾರ ಭಾರೀ ಜನಸ್ತೋಮಕ್ಕೆ ಸಾಕ್ಷಿಯಾಯಿತು. ಉರಿ ಬಿಸಿಲನ್ನು ಲೆಕ್ಕಿಸದೇ ಜನ ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ಮುಗಿಲು ಮುಟ್ಟಿದ ಹರ್ಷೋದ್ಘಾರ. ಬಾನಂಗಳದಲ್ಲಿ ಜಿಗಿದು ಸಾಹಸ ಪ್ರದರ್ಶಿಸಿದ ಭಾರತೀಯ ಯೋಧರ ಧೈರ್ಯ – ಧೀರತನಕ್ಕೆ ನೆರೆದಿದ್ದ ವರು ಭಾವಪೂರ್ವಕವಾಗಿ ನಮಿಸಿದರು. ದಸರಾ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ `ಏರ್ ಶೋ’ಗೆ ಬೆಳಿಗ್ಗೆ 9 ಗಂಟೆಯಿಂದಲೇ ತಂಡೋಪತಂಡವಾಗಿ ಆಗಮಿಸಿ, ಶೋ ಆರಂಭ ವಾಗುವಷ್ಟರಲ್ಲಿ ಮೈದಾನ ಕಿಕ್ಕಿರಿದು…
ದಸರಾ ಏರ್ ಶೋ ಹೆಲಿಕಾಪ್ಟರ್ ಶ್ರೀರಂಗಪಟ್ಟಣ ಬಳಿ ತುರ್ತು ಭೂ ಸ್ಪರ್ಶ
October 3, 2019ಶ್ರೀರಂಗಪಟ್ಟಣ, ಅ.2(ವಿನಯ್ ಕಾರೇಕುರ)-ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಇಂದು ನಡೆದ ಏರ್ ಶೋನಲ್ಲಿ ಭಾಗವಹಿಸಬೇಕಿದ್ದ ವಾಯುಪಡೆ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ತಾಲೂಕಿನ ಮಹದೇವಪುರ ಚನ್ನಹಳ್ಳಿ ಬೋರೆ ಬಳಿ ತುರ್ತು ಭೂಸ್ಪರ್ಶ ಮಾಡಿತು. ಅದೃಷ್ಟವಶಾತ್ ಅದರಲ್ಲಿದ್ದ ಯೋಧರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಏರ್ ಶೋಗಾಗಿ ಇಂದು ಬೆಳಿಗ್ಗೆ ಬೆಂಗಳೂರು ಯಲಹಂಕ ವಾಯುನೆಲೆಯಿಂದ ಮೈಸೂರಿನತ್ತ ಹೊರಟಿದ್ದ ಹೆಲಿ ಕಾಪ್ಟರ್‍ನಲ್ಲಿ ಇಂಧನ ಸೋರಿಕೆ ಅಪಾಯವರಿತ ಪೈಲಟ್ ಹೆಲಿಕಾಪ್ಟರ್ ಅನ್ನು ಮೊದಲಿಗೆ ಅರೆಕೆರೆ ಬಳಿ ಲ್ಯಾಂಡ್ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ಹೆಲಿ…
ನಾಳೆ ಮೈಸೂರಲ್ಲಿ ದಸರಾ ಏರ್ ಷೋ
October 13, 2018ಮೈಸೂರು: ದಸರಾ ಮಹೋತ್ಸವದ ಆಕರ್ಷಣೆಗಳಲ್ಲೊಂದಾದ ಏರ್ ಷೋ ಭಾನುವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿದೆ. ಭಾರತೀಯ ವಾಯುದಳ (Indian Air Force) ಏರ್ ಷೋ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದು, ನಾಳೆ (ಅ.13) ಬೆಳಿಗ್ಗೆ 11 ಗಂಟೆಗೆ ಬನ್ನಿಮಂಟಪದ ಟಾರ್ಚ್‍ಲೈಟ್ ಪರೇಡ್ ಮೈದಾನದಲ್ಲಿ ಏರ್ ಷೋ ತಾಲೀಮು ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಪೂರ್ಣ ಪ್ರಮಾಣದ ಪ್ರದರ್ಶನದಲ್ಲಿ ಪೆಟಲ್…